ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಬಳಿಕ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮೇಲೆ ರೈಡ್ ಮಾಡಲಾಗಿದ್ದು, ಇದರ ಬೆನ್ನಲ್ಲೇ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶುಕ್ರವಾರ ಸಂಜೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಮನೀಶ್ ಸಿಸೋಡಿಯಾ ಅವರೇ ನೋಡಿಕೊಳ್ಳುತ್ತಿದ್ದು ಸಿಬಿಐ ದಾಳಿ ನಡೆಸಿದೆ. ಮದ್ಯದ ನೀತಿ ಉಲ್ಲಂಘನೆಗಳ ಕುರಿತು ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ಹೆಸರುಗಳು ಹೊರಬಿದ್ದ ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಆದೇಶ ಹೊರಡಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ಆರೋಪಿಗಳ ಪಟ್ಟಿಯಲ್ಲಿ ಸಿಸೋಡಿಯಾ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ ಮತ್ತು ನಕಲಿ ಖಾತೆ ಆರೋಪಗಳನ್ನು ಹೊರಿಸಲಾಗಿದೆ.
ದೆಹಲಿಯಲ್ಲಿರುವ ಸಿಸೋಡಿಯಾ ಅವರ ಮನೆಯ ಜೊತೆಗೆ, ಏಳು ರಾಜ್ಯಗಳಾದ್ಯಂತ 31 ಇತರ ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ. 14 ಗಂಟೆಗಳ ದಾಳಿಯ ನಂತರ ಮನೀಶ್ ಸಿಸೋಡಿಯಾ ಅವರ ಕಂಪ್ಯೂಟರ್ ಮತ್ತು ಫೋನ್ ಅನ್ನು ತನಿಖಾ ಸಂಸ್ಥೆ ವಶಪಡಿಸಿಕೊಂಡಿದೆ.
ನವೆಂಬರ್‌ನಲ್ಲಿ ಜಾರಿಗೆ ತಂದ ನೀತಿಯಡಿ ಮದ್ಯದಂಗಡಿ ಪರವಾನಗಿಯನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿದೆ. ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗದಿಂದ ತನಿಖೆಯನ್ನು ಪ್ರಾರಂಭಿಸಿದ ನಂತರ ಜುಲೈ 30 ರಂದು ಸಿಸೋಡಿಯಾ ಅವರು ಪರವಾನಗಿಯನ್ನು ಹಿಂದಕ್ಕೆ ಪಡೆದರು.
ದೆಹಲಿಯಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯಿಲ್ಲದೆ ದೆಹಲಿಯಲ್ಲಿ ಮದ್ಯ ಮಾರಾಟ ಮಾಡಲು ಯಾರಿಗೆ ಅವಕಾಶ ನೀಡಬಹುದು ಎಂಬ ಹೊಸ ನೀತಿಯನ್ನು ಸಿಸೋಡಿಯಾ ಪರಿಚಯಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಸಿಸೋಡಿಯಾ ಅವರ ಸಹವರ್ತಿ ನಿರ್ವಹಿಸುತ್ತಿರುವ ಕಂಪನಿಗೆ ಮದ್ಯದ ವ್ಯಾಪಾರಿಯೊಬ್ಬರು ₹ 1 ಕೋಟಿ ಪಾವತಿಸಿದ್ದಾರೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿದೆ. ಅಬಕಾರಿ ನೀತಿಯ ರಚನೆ, ಅನುಷ್ಠಾನದಲ್ಲಿನ ಅಕ್ರಮಗಳಲ್ಲಿ ಮದ್ಯದ ಕಂಪನಿಗಳು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಇದನ್ನೂ ಓದಿರಿ: ‘ಪೆಯ್ಡ್ ನ್ಯೂಸ್ ಅಲ್ಲ’: ದೆಹಲಿ ಶಾಲೆಗಳ ವರದಿ ಬಗ್ಗೆ ಬಿಜೆಪಿ ಆರೋಪ ತಳ್ಳಿಹಾಕಿದ ನ್ಯೂಯಾರ್ಕ್ ಟೈಮ್ಸ್
ಹೊಸ ಮದ್ಯ ನೀತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಮುಖ್ಯ ಕಾರ್ಯದರ್ಶಿಯವರು ವರದಿ ನೀಡಿದ ನಂತರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.
ಎಎಪಿಯು ಅಬಕಾರಿ ನೀತಿಯನ್ನು ಏಕೈಕ ಗುರಿ ಸಾಧನೆಗೆ ತಂದಿದೆ. ಖಾಸಗಿ ಮದ್ಯದ ಬ್ಯಾರನ್‌ಗಳಿಗೆ ಆರ್ಥಿಕ ಲಾಭ ತಂದುಕೊಡುವುದಕ್ಕಾಗಿ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೀಶ್ ಸಿಸೋಡಿಯಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. “ನಾನು ಯಾವುದೇ ತಪ್ಪನ್ನು ಮಾಡಿಲ್ಲ. ಬಿಜೆಪಿಯು ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ” ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಸೋಡಿಯಾ ಅವರನ್ನು ಬೆಂಬಲಿಸಿದ್ದಾರೆ.



ಕೇಂದ್ರೀಯ ಸಂಸ್ಥೆಗಳು ಸಂವಿಧಾನಕ್ಕೆ ಬದ್ದವೋ ಇಲ್ಲವೇ ಯಾವುದೋ ರಾಜಕೀಯ ಪಕ್ಷಗಳ ಗುಲಾಮರೇ,ಯಾವುದು ಶಾಶ್ವತವಲ್ಲ, ಇಲ್ಲಿ ಕಾರ್ಯವಹಿಸುವ ಎಲ್ಲರೂ ಆನ್ನಾ ತಿನ್ನೋದು ಸಾರ್ವಜನಿಕರ ತೆರಿಗೆ ಹಣದ ಬಿಕ್ಷೆಯಿಂದ ಅನ್ನೋದು ಈ ಸಂಸ್ಥೆಗಳು ,ಗವರ್ನರ್ ಜನರಲ್ ಅನ್ನಿಸಿಕೊಳ್ಳೋ ಕೇಂದ್ರ ಸರ್ಕಾರದ ಗುಲಾಮ,ಕೇಂದ್ರ ಸರ್ಕಾರದ ಪ್ರಧಾನಿಯಿಂದ ಹಿಡಿದು ಎಲ್ಲಾ ಮಂತ್ರಿಗಳಿಗೂ ಅನ್ವಹಿಸತ್ತೆ.