Homeಮುಖಪುಟಪಾವತಿ ವ್ಯವಸ್ಥೆಗಳ ಮೇಲಿನ ಶುಲ್ಕಕ್ಕೆ RBI ಪ್ರಸ್ತಾಪ; GPay, PhonePe ವಹಿವಾಟುಗಳ ಮೇಲೆ ಪರಿಣಾಮ ಬೀರುವ...

ಪಾವತಿ ವ್ಯವಸ್ಥೆಗಳ ಮೇಲಿನ ಶುಲ್ಕಕ್ಕೆ RBI ಪ್ರಸ್ತಾಪ; GPay, PhonePe ವಹಿವಾಟುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ

- Advertisement -
- Advertisement -

ಭಾರತೀಯ ರಿಸರ್ವ್‌‌ ಬ್ಯಾಂಕ್‌‌‌(ಆರ್‌ಬಿಐ) ಪಾವತಿ ವ್ಯವಸ್ಥೆಗಳ ಮೇಲೆ ಶುಲ್ಕಗಳನ್ನು ಹೇರುವ ಬಗ್ಗೆ ಪ್ರಸ್ತಾಪಿಸಿದೆ. ಇದು ಗೂಗಲ್ ಪೇ, ಫೋನ್‌ ಪೇ ಮಾದರಿಯ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಆಧಾರಿತ ಹಣ ವರ್ಗಾವಣೆ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ. ಈ ಮೂಲಕ ಆರ್‌ಬಿಐ ತನ್ನ ದೊಡ್ಡ ಹೂಡಿಕೆ ಮತ್ತು ಪಾವತಿ ವ್ಯವಸ್ಥೆಗಳಲ್ಲಿನ ಕಾರ್ಯಾಚರಣೆಯ ವೆಚ್ಚವನ್ನು ಮರುಪಡೆಯುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

ವಿನಿಮಯವನ್ನು ನಿಯಂತ್ರಿಸಿ ಡೆಬಿಟ್ ಕಾರ್ಡ್‌ ವಹಿವಾಟುಗಳಿಗೆ ಪ್ರತಿ ವಹಿವಾಟಿನ ಶುಲ್ಕವನ್ನು ಕಡ್ಡಾಯಗೊಳಿಸುವ ಬಗ್ಗೆ ಮತ್ತು UPI ಆಧಾರಿತ ಹಣ ವರ್ಗಾವಣೆ ವಹಿವಾಟುಗಳ ಮೇಲೆ ಶುಲ್ಕಗಳನ್ನು ಹೇರುವ ಬಗ್ಗೆ ಆರ್‌ಬಿಐ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಕ್ಷಣದ ಪಾವತಿ ಸೇವೆ (IMPS), ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿಗಳ ವರ್ಗಾವಣೆ (NEFT) ವ್ಯವಸ್ಥೆ, ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ವ್ಯವಸ್ಥೆ ಮತ್ತು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಗಳು ಈ ಪಾವತಿ ವ್ಯವಸ್ಥೆಗಳಲ್ಲಿ ಸೇರಿವೆ. ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಪ್ರಿಪೇಯ್ಡ್ ಪಾವತಿ ಉಪಕರಣಗಳು (ಪಿಪಿಐಗಳು) ಕೂಡಾ ಇತರ ಪಾವತಿ ಸಾಧನಗಳಲ್ಲಿ ಸೇರಿವೆ.

ಪಾವತಿ ವ್ಯವಸ್ಥೆಗಳಲ್ಲಿ ಆರ್‌ಬಿಐನ ಈ ಉಪಕ್ರಮಗಳ ಗಮನವು ವ್ಯವಸ್ಥಿತ ಕಾರ್ಯವಿಧಾನ ಅಥವಾ ಆದಾಯ-ಸಂಬಂಧಿತ ಸಮಸ್ಯೆಗಳಿಂದ ಉಂಟಾಗಬಹುದಾದ ಘರ್ಷಣೆಗಳನ್ನು ಸರಾಗಗೊಳಿಸುವುದಾಗಿದೆ ಎಂದು ‘ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು’ ಕುರಿತು ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡುವಾಗ ಬ್ಯಾಂಕ್ ಹೇಳಿ ಕೊಂಡಿದೆ.

ಆರ್‌ಬಿಐ ಅಕ್ಟೋಬರ್ 3 ರೊಳಗೆ ಪಾವತಿ ವ್ಯವಸ್ಥೆಗಳಲ್ಲಿನ ಶುಲ್ಕಗಳು ಮತ್ತು ಲೆವಿಗಳಿಗೆ ಸಂಬಂಧಿಸಿದಂತೆ 40 ನಿರ್ದಿಷ್ಟ ಪ್ರಶ್ನೆಗಳಿಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳಿದೆ.

ಇದನ್ನೂ ಓದಿ: ಸಾಲ ನೀಡುವ ಅನಧೀಕೃತ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್‌‌ಬಿಐ

ಪಾವತಿಗಳ ವಹಿವಾಟು ಸರಣಿಯಲ್ಲಿ ಅನೇಕ ಮಧ್ಯವರ್ತಿಗಳಿದ್ದರೂ ಗ್ರಾಹಕರ ದೂರುಗಳು ಸಾಮಾನ್ಯವಾಗಿ ಹೆಚ್ಚಿನ ಮತ್ತು ಪಾರದರ್ಶಕವಲ್ಲದ ಶುಲ್ಕಗಳ ಬಗ್ಗೆ ಇರುತ್ತದೆ. ಪಾವತಿ ಸೇವೆಗಳಿಗೆ ಶುಲ್ಕಗಳು ಸಮಂಜಸವಾಗಿರಬೇಕು ಮತ್ತು ಬಳಕೆದಾರರಿಗೆ ಸ್ಪರ್ಧಾತ್ಮಕವಾಗಿ ನಿರ್ಧರಿಸಬೇಕು ಹಾಗೂ ಮಧ್ಯವರ್ತಿಗಳಿಗೆ ಸೂಕ್ತವಾದ ಆದಾಯವನ್ನು ಒದಗಿಸಬೇಕು ಎಂದು ಆರ್‌ಬಿಐ ಒತ್ತಿಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...