Homeಮುಖಪುಟಹುತಾತ್ಮ ಯೋಧನ ತಾಯಿಗೆ ಚೆಕ್‌ ನೀಡಿ ಪೋಟೋಗೆ ಬಲವಂತ ಮಾಡಿದ ಬಿಜೆಪಿ ನಾಯಕರು

ಹುತಾತ್ಮ ಯೋಧನ ತಾಯಿಗೆ ಚೆಕ್‌ ನೀಡಿ ಪೋಟೋಗೆ ಬಲವಂತ ಮಾಡಿದ ಬಿಜೆಪಿ ನಾಯಕರು

- Advertisement -
- Advertisement -

ರಾಜೌರಿ ಎನ್ಕೌಂಟರ್‌ನಲ್ಲಿ ಹುತಾತ್ಮರಾದ ಯೋಧನ ತಾಯಿಗೆ ಉತ್ತರಪ್ರದೇಶದ ಸಚಿವರು ಮತ್ತು ಬಿಜೆಪಿ ನಾಯಕರು ಪರಿಹಾರ ಚೆಕ್‌ ನೀಡುವ ಕ್ಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗ ವೈರಲ್‌ ಆಗಿದ್ದು, ಭಾರೀ ಟೀಕೆಗೆ ಕಾರಣವಾಗಿದೆ.

ಉತ್ತರಪ್ರದೇಶ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿಎಸ್ ಧರ್ಮೇಶ್ ಅವರು ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಆಗ್ರಾ ನಿವಾಸದಲ್ಲಿ ಚೆಕ್ ಹಸ್ತಾಂತರಿಸುವಾಗ ಅವರ ತಾಯಿಯೊಂದಿಗೆ ತಮ್ಮ ಫೋಟೋ ತೆಗೆಸಿಕೊಂಡಿದ್ದಾರೆ. ಇದಕ್ಕೆ ವಿರೋಧಿಸಿ ಯೋಧನ ತಾಯಿ ಗದ್ಗದಿತರಾಗಿ ಅಳುತ್ತಿರುವುದು ಕಂಡು ಬಂದಿದೆ.

ಈ ಕುರಿತ ವಿಡಿಯೋವನ್ನು ವಿರೋಧ ಪಕ್ಷದ ನಾಯಕರು ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಉತ್ತರಪ್ರದೇಶದ ಕ್ಯಾಬಿನೆಟ್ ಸಚಿವ ಯೋಗೇಂದ್ರ ಉಪಾಧ್ಯಾಯ ಮತ್ತು ಬಿಜೆಪಿ ಶಾಸಕ ಜಿಎಸ್ ಧರ್ಮೇಶ್ ಅವರು ಹುತಾತ್ಮ ಯೋಧ ಕ್ಯಾಪ್ಟನ್ ಗುಪ್ತಾ ಅವರ ತಾಯಿಗೆ ಪರಿಹಾರ ಚೆಕ್ ಹಸ್ತಾಂತರಿಸುವುದು ಮತ್ತು ಫೋಟೋ ತೆಗೆಸಿಕೊಳುವುದು ಕಂಡು ಬಂದಿದೆ. ಈ ವೇಳೆ ಗದ್ಗದಿತಳಾದ ತಾಯಿ ತನ್ನ ಕೈಗಳನ್ನು ಹಿಂದಕ್ಕೆ ಎಳೆದು ಇದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಡಿ. ನನ್ನ ಮಗನನ್ನು ವಾಪಾಸ್ಸು ಕೊಡಿ, ನನಗೆ ಇದೆಲ್ಲವೂ ಬೇಡ ಎಂದು ಹೇಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ ಬಿಜೆಪಿ ನಾಯಕರು ಇದನ್ನು ಕೇಳಿಯೂ ಕೇಳಿಸದ ರೀತಿ ವಿಡಿಯೋವನ್ನು ಮಾಡಿದ್ದಾರೆ. ಪೋಟೋವನ್ನು ತೆಗೆಸಿಕೊಂಡಿದ್ದಾರೆ.

ಯುದ್ಧದಲ್ಲಿ ಹತ್ಯೆಯಾದ ಸೇನಾ ಕ್ಯಾಪ್ಟನ್‌ನ ತಾಯಿಯ ದುಃಖದ ವೇಳೆ ಫೋಟೋ ತೆಗೆಸಿಕೊಂಡಿದ್ದಕ್ಕೆ ಬಿಜೆಪಿ ನಾಯಕರನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ಟೀಕಿಸಿದ್ದಾರೆ. ಕಾಂಗ್ರೆಸ್‌ ಪಕ್ಷವು ಎಕ್ಸ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು ರಣಹದ್ದುಗಳು ಎಂದು ಬರೆದುಕೊಂಡಿದೆ.

ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ನಾಚಿಕೆಗೇಡು. ತಾಯಿ ತನ್ನ ಮಗನ ಶವಕ್ಕಾಗಿ ಕಾಯುತ್ತಿರುವಾಗ, ಪ್ರಚಾರ ಉದ್ದೇಶಗಳಿಗಾಗಿ ಪೋಟೋ ತೆಗೆಯಲು ಸಚಿವರು ಹೆಚ್ಚು ಆಸಕ್ತಿ ವಹಿಸಿದ್ದರು ಎಂದು ಹೇಳಿದ್ದಾರೆ.

ರಾಜೌರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶುಭಂ ಗುಪ್ತಾ ಅವರು ಕರ್ತವ್ಯದಲ್ಲಿದ್ದಾಗಲೇ ಪ್ರಾಣ ತ್ಯಾಗ ಮಾಡಿದರು. ಅವನ ತಾಯಿ ದುಃಖಿಸುತ್ತಿದ್ದಾರೆ ಮತ್ತು ತನ್ನ ಮಗನ ಮೃತದೇಹಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆಕೆಯ ಅಸಹನೀಯ ದುಃಖದ ಮಧ್ಯೆ, ಯುಪಿ ಸರ್ಕಾರದ ಬಿಜೆಪಿ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ತಮ್ಮ ಪ್ರಚಾರಕ್ಕಾಗಿ ಫೋಟೋ ತೆಗೆಸಿಕೊಳ್ಳಲು ನಾಚಿಕೆಯಿಲ್ಲದೆ ಪಟ್ಟುಹಿಡಿದಿದ್ದಾರೆ. ಎಂದು ಚಡ್ಡಾ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಶಿವಸೇನೆ ಉದ್ಧವ್ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ವೀಡಿಯೊವನ್ನು ಪೋಸ್ಟ್ ಮಾಡಿದ್ದು,  ಇದು ನಾಚಿಕೆಗೇಡು ಎಂದು ಬರೆದಿದ್ದಾರೆ.

ಇದನ್ನು ಓದಿ: ಯುದ್ಧ ಒಪ್ಪಂದದಂತೆ ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್, ಇಸ್ರೇಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...