Homeಮುಖಪುಟಅತ್ಯಾಚಾರಿಗಳಿಗೆ ಸ್ವಾಗತ ನೀಡುವುದನ್ನು ನೋಡಿದರೆ ರಕ್ತ ಕುದಿಯುತ್ತೆ: ನಿರ್ಭಯಾ ತಾಯಿ ಆಕ್ರೋಶ

ಅತ್ಯಾಚಾರಿಗಳಿಗೆ ಸ್ವಾಗತ ನೀಡುವುದನ್ನು ನೋಡಿದರೆ ರಕ್ತ ಕುದಿಯುತ್ತೆ: ನಿರ್ಭಯಾ ತಾಯಿ ಆಕ್ರೋಶ

ಬಿಲ್ಕಿಸ್ ಬಾನೊ ಅತ್ಯಾಚಾರಿಗಳಿಗೆ ಹೂಮಾಲೆ ಹಾಕಿ, ಸಿಹಿ ಹಂಚಿ ಸ್ವಾಗತಿಸಿದವರನ್ನು ನಿರ್ಭಯಾ ತಾಯಿ ಆಶಾದೇವಿ ಕಟುವಾಗಿ ಟೀಕಿಸಿದ್ದಾರೆ.

- Advertisement -
- Advertisement -

ಬಿಲ್ಕಿಸ್ ಬಾನೊ ಅವರ ಮೇಲೆ ಅತ್ಯಾಚಾರವೆಸಗಿ, ಅವರ ಕುಟುಂಬದ ಏಳು ಜನರನ್ನು ಹತ್ಯೆ ಮಾಡಿದ ಹನ್ನೊಂದು ಮಂದಿ ಅತ್ಯಾಚಾರಿಗಳನ್ನು ಗುಜರಾತ್ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ್ದು, 2012ರ ದೆಹಲಿ ಗ್ಯಾಂಗ್‌ರೇಪ್ ಸಂತ್ರಸ್ತೆ ನಿರ್ಭಯಾ ಅವರ ತಾಯಿ ಆಕ್ರೋಶವನ್ನು ಹೊರಹಾಕಿದ್ದಾರೆ.

‘ಇಂಡಿಯಾ ಟುಡೇ’ ಚಾನೆಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಭಯಾ ಅವರ ತಾಯಿ ಆಶಾ ದೇವಿ, “ಅತ್ಯಾಚಾರಿಗಳಿಗೆ ಆತ್ಮೀಯ ಸ್ವಾಗತ ನೀಡುವುದನ್ನು ನೋಡಿದಾಗ ರಕ್ತ ಕುದಿಯುತ್ತದೆ” ಎಂದಿದ್ದಾರೆ.

ಬಿಲ್ಕಿಸ್ ಬಾನೊ ಅತ್ಯಾಚಾರಿಗಳಿಗೆ ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದವರನ್ನು ನಿರ್ಭಯಾ ತಾಯಿ ಆಶಾದೇವಿ ಕಟುವಾಗಿ ಟೀಕಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅತ್ಯಾಚಾರಿಗಳ ಪರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದವರನ್ನು ಉದ್ದೇಶಿಸಿ ಮಾತನಾಡಿರುವ ಅವರು, “ಸಮಾಜ ಪ್ರತಿಷ್ಟಿತ ವ್ಯಕ್ತಿಯಾಗಿರುವ ನೀವು ನಡೆದುಕೊಳ್ಳುತ್ತಿರುವ ರೀತಿ ಬೇಸರ ತಂದಿದೆ. ಹತ್ತು ವರ್ಷಗಳ ಬಳಿಕ ಅತ್ಯಾಚಾರವೆಸಗಿದ ಅಪರಾಧಿ ಹೊರಗಡೆ ಬಂದಾಗ ಮನೆಯವರು ಬರಮಾಡಿಕೊಳ್ಳುವುದು ಸರಿ. ಆದರೆ ಸಮಾಜದ ಹೊರಗಿನ ವ್ಯಕ್ತಿಯೊಬ್ಬರು ಸ್ವಾಗತಿಸುತ್ತಿರುವುದು ಏಕೆ? ಇದು ನಾಚಿಕೆಗೇಡಿನ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಅತ್ಯಾಚಾರಿಗಳ ಬಗ್ಗೆ ಕೆಲವು ಜನರು ತೋರುತ್ತಿರುವ ಇಂತಹ ವರ್ತನೆಗಳೇ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯಲು ಕಾರಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಭಯಾ ಅವರ ತಾಯಿ ಆಶಾದೇವಿಯವರು ಹೇಳಿದ್ದಿಷ್ಟು:

“ನಮ್ಮ ಮನಸ್ಸಿಗೆ ನೋವಾಗಿದೆ ಅಂತ ನಾವು ಕೊರಗುತ್ತಿದ್ದೇವೆ. ನೋವಾಗಿರುವುದು, ಕೊರಗಿರುವುದು ನಮ್ಮ ಸಮಾಜಕ್ಕೆ ಬೇಕಾಗಿಲ್ಲ. ಆದರೆ ನನಗಂತೂ ರಕ್ತ ಕುದಿಯುತ್ತಿದೆ. ನಮ್ಮ ಸಮಾಜದಲ್ಲಿ ಇದ್ಯಾವ ರೀತಿಯಲ್ಲಿ ಅತ್ಯಾಚಾರಿಗಳನ್ನು ಸನ್ಮಾನಿಸುವ ಉತ್ಸಾಹ ಬಂದುಬಿಟ್ಟಿದೆ?”

“ಒಂದು ಮಗುವಿನ ಪ್ರಕರಣದಲ್ಲಿ (ನಿರ್ಭಯಾ ಪ್ರಕರಣದಲ್ಲಿ) ನ್ಯಾಯವೇನೋ ಸಿಕ್ಕಿತು ಅಷ್ಟೇ. ಆದರೆ ಅದೇ ರೀತಿಯ ಅತ್ಯಾಚಾರ ಘಟನೆಗಳು ಹೆಚ್ಚುತ್ತಿವೆ. ಈಗ ಹನ್ನೊಂದು ಅತ್ಯಾಚಾರಿಗಳು ಬಿಡುಗಡೆಯಾಗಿದ್ದಾರೆ. ಯಾವ ಹೆಣ್ಣಿನ ಮೇಲೂ ಅತ್ಯಾಚಾರ ಆಗುವುದಿಲ್ಲ ಎಂಬ ಭರವಸೆ ಇಡಬೇಕೆ?”

“ಸಮಾಜ ಪ್ರತಿಷ್ಟಿತ ವ್ಯಕ್ತಿಯಾಗಿರುವ ನೀವು ನಡೆದುಕೊಳ್ಳುತ್ತಿರುವ ರೀತಿ ಬೇಸರ ತಂದಿದೆ. ಹತ್ತು ವರ್ಷಗಳ ಬಳಿಕ ಅತ್ಯಾಚಾರವೆಸಗಿದ ಅಪರಾಧಿ ಹೊರಗಡೆ ಬಂದಾಗ ಮನೆಯವರು ಬರಮಾಡಿಕೊಳ್ಳುವುದು ಸರಿ. ಆದರೆ ಸಮಾಜದ ಹೊರಗಿನ ವ್ಯಕ್ತಿಯೊಬ್ಬರು ಸ್ವಾಗತಿಸುತ್ತಿರುವುದು ಏಕೆ? ಇದು ನಾಚಿಕೆಗೇಡಿನ ಸಂಗತಿ.”

“ಅತ್ಯಾಚಾರಗಳಿಗೆ ಹಾರ ಹಾಕಿ, ಸಹಿ ಹಂಚುತ್ತಿರುವುದು ನೋಡಿದರೆ ಏನನಿಸುತ್ತದೆ? ಇವು ಒಪ್ಪಲಾಗದ ಸಂಗತಿ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವಾಗ ರೇಪಿಸ್ಟ್‌ಗಳಿಗೆ ಈ ರೀತಿ ಬೆಂಬಲಿಸಲಾಗುತ್ತಿದೆ. ಬೆಂಬಲಕ್ಕೆ ಉತ್ಸುಕರಾಗಿ ನಿಂತಿದ್ದಾರೆ. ಸಮಾಜದ ಪ್ರತಿಷ್ಟಿತ ವ್ಯಕ್ತಿಯಾಗಿರುವವರು ಈ ರೀತಿಯ ನಡೆಯಿಂದ ಯಾವ ಸಂದೇಶವನ್ನು ನೀಡಲು ಹೊರಟಿದ್ದಿರಿ?”

“ನಿರ್ಭಯ ಪ್ರಕರಣದಲ್ಲಿ ಶಿಕ್ಷೆಯಾದ ಮೇಲೂ ಅತ್ಯಾಚಾರ ಪ್ರಕರಣಗಳು ನಡೆದವು. ಈಗ ಅತ್ಯಾಚಾರಿಗಳು ಬಿಡುಗಡೆಯಾಗಿದ್ದಾರೆ. ಮುಂದೆ ಅತ್ಯಾಚಾರ ಪ್ರಕರಣಗಳು  ನಡೆಯುವುದಿಲ್ಲವೇ? ನ್ಯಾಯ ಸಿಗುವುದೇ? ಸಮಾಜದ ಮಾನಸಿಕ ಸ್ವಾಸ್ಥ್ಯ ಹದಗೆಟ್ಟಿದೆ. ಹಾಗಾಗಿ ನ್ಯಾಯ ಸಿಗದು”

“ಕಾನೂನು ಕೆಲಸ ಮಾಡುತ್ತಿಲ್ಲ ಎನ್ನುತ್ತಾರೆ. ಆದರೆ ಕಾನೂನು ಕೆಲಸ ಮಾಡಲು ಬಿಡುತ್ತಿಲ್ಲ. ಇತ್ತೀಚೆಗೆ ಬಿಹಾರದಲ್ಲಿ ಒದು ಹೆಣ್ಣುಮಗುವಿನ ಹತ್ಯೆಯಾಯಿತು. ನ್ಯಾಯಾಧೀಶರು ಬಹುಶಃ ಒಂದು ವಾರದಲ್ಲಿ ತೀರ್ಪು ನೀಡಲಿದರು. ಗಲ್ಲು ಶಿಕ್ಷೆ ನೀಡುತ್ತಾರೆಂದು ಆ ನ್ಯಾಯಾಧೀಶರನ್ನೇ ವರ್ಗ ಮಾಡಿಸುವ ಪ್ರಯತ್ನ ನಡೆಯಿತು ಎಂಬ ಸುದ್ದಿಯನ್ನು ಓದಿದೆ.”

“ಹನ್ನೊಂದು ಅತ್ಯಾಚಾರಿಗಳನ್ನು ಸ್ವಾಗತಿಸಿ ಮಹಿಳೆಯೊಬ್ಬರು ಸಹಿತಿನಿಸು ನೀಡಿದ್ದನ್ನೂ ನೋಡಿದೆ. ಅವರು ಹೆಣ್ಣುಕುಲಕ್ಕೆ ಕಳಂಕ. ಒಂದು ವೇಳೆ ಅತ್ಯಾಚಾರ ಮಾಡಿದ ವ್ಯಕ್ತಿ ಮನೆಗೆ ಬಂದರೆ ಅವರ ಅಮ್ಮನಾಗಲಿ, ಸಹೋದರಿಯಾಗಲಿ ಆತನನ್ನು ಸ್ವಾಗತಿಸಿದರೆ ಅಂಥವರಿಗೆ ನನ್ನ ಧಿಕ್ಕಾರವಿದೆ.”

ಇದನ್ನೂ ಓದಿರಿ: ಅವರು ಬ್ರಾಹ್ಮಣರು..: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕ

ಮೋದಿ ಭಾಷಣದ ಬಳಿಕ ಬಿಡುಗಡೆ

ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಕೆಲವೇ ಗಂಟೆಗಳ ನಂತರ, ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿತ್ತು.

2002ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ 3 ವರ್ಷದ ಮಗಳು ಸೇರಿದಂತೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಬಿಡುಗಡೆಯಾಗಿರುವ ಹನ್ನೊಂದು ವ್ಯಕ್ತಿಗಳು ಶಿಕ್ಷೆಗೊಳಗಾಗಿದ್ದರು. ಇವರಿಗೆ ಸರ್ಕಾರ ಕ್ಷಮಾದಾನ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಕನಿಷ್ಟ ನೀವಾದರು ಜಾತಿ ಮತ ಭೇದವಿಲ್ಲದೆ ಅ ದರಿದ್ರ ಮಾನಾಮರ್ಯಾದೆ ಇಲ್ಲದ ಪಶುಗಳು ಆಳುತ್ತಿರುವ ಬಿಜೆಪಿ ಸರ್ಕಾರಗಳಿಗೆ ಕ್ಯಾಕರಿಸಿ ಉಗಿದಿದ್ದಿರಾ, ಈ ಘಟನೆಗಳನ್ನು ಸೋಕಾಲ್ಡ್ ಕುಲೀನ ? ಜಾತಿ ಸಮುದಾಯಗಳ ಹೆಂಗಸರ ಬಾಯಿಯಿಂದ ಇದು ಹೆಣ್ಣು ಕುಲಕ್ಕೆ ಮುಖ್ಯ ವಾಗಿ ನಮ್ಮ ಮಹಾನ್ ಸಮಾಜಕ್ಕೆ ಅಮಾನುಷ ಎಂದು ಹೇಳಲು ಸದ್ದೆ ಆಗಲಿಲ್ಲ.

  2. ಅತ್ಯಾಚಾರದ ಅಪರಾಧಿಗಳನ್ನು ಸ್ವಾಗತಿಸುವುದು ಎಂದರೆ, ಅತ್ಯಾಚಾರವನ್ನು ಬೆಂಬಲಿಸಿದಂತೆ. ಆದ್ದರಿಂದ ಯಾರು ಈ ಅತ್ಯಾಚಾರಿಗಳನ್ನು ಸ್ವಾಗತಿಸಿದ್ದಾರೋ, ಮತ್ತು ಅವರನ್ನು ಸನ್ಮಾನಿಸಿದ್ದಾರೋ, ಅವರಿಗೂ ಸಹ ಕಾನೂನಿನ ಪ್ರಕಾರ ಶಿಕ್ಷೆ ಆಗಬೇಕು. ಇವರನ್ನು ಶಿಕ್ಷಿಸಲು ಈಗ ಇರುವ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ, ಹೊಸದಾಗಿ ಕಾನೂನನ್ನು ರೂಪಿಸಬೇಕು, ಇಂತಹ ಕಾನೂನಿಗಾಗಿ ಪ್ರಜ್ಞಾವಂತರು ದನಿ ಎತ್ತಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...