Homeಮುಖಪುಟಅವರು ಬ್ರಾಹ್ಮಣರು..: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕ

ಅವರು ಬ್ರಾಹ್ಮಣರು..: ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕ

ಎಲ್ಲದಕ್ಕಿಂತ ಹೆಚ್ಚಾಗಿ ಅವರು ಬ್ರಾಹ್ಮಣರು. ಒಳ್ಳೆಯ ಸಂಸ್ಕಾರವುಳ್ಳವರು. ಹಾಗಾಗಿ ಅವರನ್ನು ಬಿಡುಗಡೆ ಮಾಡಬಹುದು ಎಂದು ಬಿಜೆಪಿ ಶಾಸಕ ಹೇಳಿದ್ದಾರೆ

- Advertisement -
- Advertisement -

“ಅವರು (11 ಜನ ಅತ್ಯಾಚಾರಿಗಳು) ಅಪರಾಧವೆಸಗಿದ್ದಾರೋ ಇಲ್ಲೋ ನಮಗೆ ಗೊತ್ತಿಲ್ಲ. ಆದರೆ ಅವರು ಜೈಲಿನಲ್ಲಿ ಉತ್ತಮವಾಗಿ ನಡೆದುಕೊಂಡರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಬ್ರಾಹ್ಮಣರು. ಒಳ್ಳೆಯ ಸಂಸ್ಕಾರವುಳ್ಳವರು. ಹಾಗಾಗಿ ಅವರನ್ನು ಬಿಡುಗಡೆ ಮಾಡಬಹುದು” ಹೀಗೆ ಹೇಳುವ ಮೂಲಕ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಗುಜರಾತ್‌ನ ಬಿಜೆಪಿ ಶಾಸಕ ಸಿಕೆ ರೌಲ್ಜಿ.

ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗಳ ಬಿಡುಗಡೆ ಕುರಿತು ರಚಿಸಲಾದ ಸಮಿತಿಯಲ್ಲಿದ್ದ ಗೋದ್ರಾ ಕ್ಷೇತ್ರದ ಶಾಸಕ ಅತ್ಯಾಚಾರಿಗಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅಪರಾಧಿಗಳ ಪರ ನಿಂತು ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೊಜೊ ಸ್ಟೋರಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, “ಈ 11 ಜನರ ಕುರಿತು ಅಭಿಪ್ರಾಯಕ್ಕೆ ಬರುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಅದರ ಭಾಗವಾಗಿ ಗುಜರಾತ್ ಸರ್ಕಾರ ರಚಿಸಿದ ಸಮಿತಿಯಲ್ಲಿ ನಾನಿದ್ದೆ. 2002ರಲ್ಲಿ ಏನು ನಡೆಯಿತು ಅದು ನನಗೆ ಗೊತ್ತಿಲ್ಲ. ಆದರೆ ಅವರಿಗೆ ಶಿಕ್ಷೆಯಾದ ನಂತರ ಅವರ ವರ್ತನೆ ಹೇಗಿದೆ? ಜೈಲಿನಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ಜೈಲರ್‌ಗಳ ಬಳಿ ವಿಚಾರಿಸಿದೆವು. ಅವರು ಜೈಲಿನಲ್ಲಿ ಯಾವುದೇ ಗಲಾಟೆ ಮಾಡಿಲ್ಲ ಎಂದು ತಿಳಿದುಬಂತು” ಎಂದು ಹೇಳಿದ್ದಾರೆ.

ಅತ್ಯಾಚಾರ ಮತ್ತು ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲ್ಗೊಂಡವರಿಗೆ ಕ್ಷಮಾದಾನ ನೀಡಬಾರದು ಎಂದು ಗೃಹ ಸಚಿವಾಲಯ ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ “ಅದು ನಮಗೆ ಗೊತ್ತಿಲ್ಲ. ಅವರ ವರ್ತನೆ ಜೈಲಿಗೆ ಹೋಗುವ ಮುಂಚೆ ಹೇಗಿತ್ತು, ಜೈಲಿನಲ್ಲಿ ಹೇಗಿದೆ ಎಂಬುದನ್ನು ಗಮನಿಸಬೇಕು. ಅವರ ಕುಟುಂಬ ಸದಸ್ಯರು ಸಹ ಉತ್ತಮವಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಈ ಪ್ರಕರಣದಲ್ಲಿ ಕೆಲವು ಅಮಾಯಕರು ಸಹ ಸೇರಿಕೊಂಡಿದ್ದಾರೆ. ಕೆಲವರು ಮೊದಲಿಂದಲೂ ಉತ್ತಮವಾಗಿ ನಡೆದುಕೊಳ್ಳುತ್ತಿದ್ದರು. ಇದು ಆಕಸ್ಮಿಕವಾಗಿ ಘಟಿಸಿದಾಗ ಎಲ್ಲರೂ ಸಿಕ್ಕಿಕೊಂಡಿದ್ದಾರೆ. ಅವರನ್ನು ಇನ್ನೂ ಹೆಚ್ಚು ದಿನ ಜೈಲಿನಲ್ಲಿ ಇಡುವ ಅಗತ್ಯವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅವರು ಬ್ರಾಹ್ಮಣರು. ಒಳ್ಳೆಯ ಸಂಸ್ಕಾರವುಳ್ಳವರು. ಅವರನ್ನು ಮೂಲೆಗುಂಪು ಮಾಡುವುದು ಮತ್ತು ಶಿಕ್ಷಿಸುವುದು ಕೆಲವರ ದುರುದ್ದೇಶವೂ ಆಗಿರಬಹುದು,” ಎಂದಿದ್ದಾರೆ.

ಅವರು ಬಿಡುಗಡೆಗೊಂಡಾಗ ಸಿಹಿ ಹಂಚಿ ಸಂಭ್ರಮಿಸಿದ್ದು ಸರಿಯೇ ಎಂಬ ಪ್ರಶ್ನೆಗೆ, “ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ನೋಡುತ್ತಾರೆ. ನ್ಯಾಯಾಲವೇ  ಅವರನ್ನು ಬಿಡುಗಡೆ ಮಾಡಿ ಎಂದು ಹೇಳಿರುವಾಗ ಸಿಹಿ ಹಂಚುವುದರಲ್ಲಿ ತಪ್ಪೇನಿದೆ? ಆದರೆ ಹೂಹಾರ ಹಾಕಿದವರು ನಮ್ಮ ಸಮಿತಿಯವರಲ್ಲ. ಈ ಕುರಿತು ನಾನು ಹೆಚ್ಚು ಹೇಳುವುದಿಲ್ಲ.” ಎಂದು ಉತ್ತರಿಸಿದ್ದಾರೆ.

ಬಿಜೆಪಿ ಸರ್ಕಾರವು ಈ ವಿಷಯದ ಕುರಿತು ರಚಿಸಿದ್ದ ಸಮಿತಿಯಲ್ಲಿ ಬಿಜೆಪಿ ಪಕ್ಷದ ಇಬ್ಬರು ಶಾಸಕರಿದ್ದರು ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಪ್ರಶ್ನಿಸಿದ್ದರು. ಬಿಜೆಪಿಯಿಂದ ಸಿ ಕೆ ರಾಲ್ಜಿ ಮತ್ತು ಸುಮನ್ ಚೌಹಾಣ್ ಇದ್ದರೆ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಮುರಳಿ ಮುಲ್ಚಂದಾನಿ ಅವರು ಸಹ ಸಮಿತಿಯ ಭಾಗವಾಗಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದುದ್ದನ್ನು ಖಂಡಿಸಿದ ಮಾಜಿ ಸಿಎಂ ಯಡಿಯೂರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅತ್ಯಾಚಾರ ಮಾಡುವವರು ಒಳ್ಳೆಯ ಸಂಸ್ಕಾರ ವಂತರು ಹೇಗಾಗುತ್ತಾರೆ ಎಂ ಎಲ್ ಎ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...