Homeಮುಖಪುಟಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಯುವತಿ

ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಯುವತಿ

ಮೈ ತೋರಿಸಿಕೊಂಡವಳು ಅವಳು ನನ್ನ ಪರ ಇರಲು ಸಾಧ್ಯವೇ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ

- Advertisement -
- Advertisement -

ಕಳೆದೊಂದು ತಿಂಗಳಿನಿಂದ ವಿವಾದ ಹುಟ್ಟು ಹಾಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಲೈಂಗಿಕ ಸಿಡಿ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು, ವಿಡಿಯೋದಲ್ಲಿದ್ದವರು ಎಂದು ಹೇಳಲಾದ ಸಂತ್ರಸ್ತ ಯುವತಿಯು ಇಂದು ಸಚಿವರ ವಿರುದ್ಧ ಕೆಲಸ ನೀಡುವುದಾಗಿ ಲೈಂಗಿಕ ದುರುಪಯೋಗದ ಆರೋಪದಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಸಂತ್ರಸ್ತ ಯುವತಿಯು 29 ಸೆಕೆಂಡ್‌ಗಳ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, “ಎಲ್ಲರ ಬೆಂಬಲದಿಂದ ನಾನು ಇಂದು ಬದುಕುಳಿದಿದ್ದೇನೆ. ಕಳೆದ 24 ದಿನಗಳಿಂದ ಜೀವ ಕೈಯಲ್ಲಿಡಿದು ಬದುಕಿದೆ. ಈಗ ನಿಮ್ಮ ಬೆಂಬಲದಿಂದ ನಾನು ರಮೇಶ್ ಜಾರಕಿಹೊಳಿಯವರ ವಿರುದ್ದ ನಮ್ಮ ವಕೀಲರಾದ ಜಗದೀಶ್ ಅವರ ಮೂಲಕ ಪೊಲೀಸ್ ಕಮಿಷನರ್‌ರವರಿಗೆ ದೂರು ಸಲ್ಲಿಸಿದ್ದೇನೆ” ಎಂದು ತಿಳಿಸಿದ್ದಾರೆ.

ಈ ಬೆನ್ನಲ್ಲೇ ವಕೀಲರಾದ ಜಗದೀಶ್‌ರವರು ಸಹ, “ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡುವುದಾಗಿ ನಾವು ಘೋಷಿಸಿದ್ದೇವೆ. ಅದರಂತೆ ಆಕೆ ನಮ್ಮ ಸಹಾಯ ಕೋರಿ ಪತ್ರ ಬರೆದಿದ್ದಾರೆ. ಸ್ವಂತ ಕೈ ಬರಹದಲ್ಲಿ 2 ಪುಟಗಳ ದೂರು ಸಲ್ಲಿಸಿದ್ದಾಳೆ. ಅದನ್ನು ಈ ಪ್ರಕರಣದ ಎಸ್‌ಐಟಿ ಮುಖ್ಯಸ್ಥರಾದ ನಗರ ಪೊಲೀಸ್ ಕಮಿಷನರ್‌ರವರಿಗೆ ತಲುಪಿಸಿದ್ದೇವೆ” ಎಂದು ಫೇಸ್‌ಬುಕ್ ಮೂಲಕ ತಿಳಿಸಿದ್ದಾರೆ.

ಸಂತ್ರಸ್ತ ಯುವತಿಯು ಎರಡು ದಿನಗಳ ಹಿಂದೆ ತಾನೇ ವಿಡಿಯೋವೊಂದನ್ನು ಬಿಡುಗಡೆ ಮಾಡಿ “ದಯವಿಟ್ಟು ನನ್ನ ತಂದೆ ತಾಯಿಯರಿಗೆ ರಕ್ಷಣೆ ನೀಡಿ. ಅವರು ಸುರಕ್ಷಿತರವಾಗಿದ್ದರೆ ನಾನು ಎಸ್‌ಐಟಿ ಮುಂದೆ ಬಂದು ಹೇಳಿಕೆ ನೀಡುತ್ತೇನೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ರವರು ನನಗೆ ಸಹಾಯ ಮಾಡಬೇಕು” ಎಂದು ಮನವಿ ಮಾಡಿದ್ದರು.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿಯವರು ಉದ್ಯೋಗದ ಭರವಸೆ ನೀಡಿ ತಮ್ಮನ್ನು ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ನಾಳೆ ನಮ್ಮ ಅಸ್ತ್ರ ಪ್ರಯೋಗ ಆಗಲಿದೆ: ರಮೇಶ್ ಜಾರಕಿಹೊಳಿ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಮೇಶ್ ಜಾರಕಿಹೊಳಿ, “ಇಂತಹ ಹತ್ತು ಕಂಪ್ಲೈಂಟ್ ಮತ್ತು ಹತ್ತು ಜನ ಬಂದರೂ ನಾನು ಹೆದರಿಸುತ್ತೇನೆ. ಈ ಕುರಿತು ಏನು ಮಾಡಬೇಕೆಂದು ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ನನ್ನ ತಪ್ಪಿದ್ರೆ ನಾನೇ ಜೈಲಿಗೆ ಹೋಗುತ್ತೇನೆ, ನಾಳೆ ನಮ್ಮ ಅಸ್ತ್ರ ಪ್ರಯೋಗ ಆಗಲಿದೆ” ಎಂದಿದ್ದಾರೆ.

ನಾನು ಸಿಎಂಗೆ, ಗೃಹಸಚಿವರಿಗೆ ಇದರ ಹಿಂದೆ ಯಾರಿದ್ದಾರೆ ಹೇಳಿದ್ದೀನಿ. ಇದೆಲ್ಲ ಷಡ್ಯಂತ್ರ, ಅವರ ಕೊನೆಯ ಅಸ್ತ್ರ ಮುಗಿದಿದೆ. ನನ್ನ ಆಟ ಈಗ ಶುರುವಾಗಿದೆ. ಮೈ ತೋರಿಸಿಕೊಂಡವಳು ಅವಳು ನನ್ನ ಪರ ಇರಲು ಸಾಧ್ಯವೇ? ಸರ್ಕಾರವನ್ನು ತೆಗೆದವನು ನಾನು ಇದಕ್ಕೆ ಹೆದರುತ್ತೇನೆಯೇ? ಎಂದಿದ್ದಾರೆ.


ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ನನಗೆ ರಕ್ಷಣೆ ಕೊಡಿ ಎಂದ ಯುವತಿ – ವೀಡಿಯೋ ವೈರಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...