ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಹೊರಗೆ ಬರುತ್ತಿದ್ದಂತೆ ಅವರ ಚಪ್ಪಲಿಯನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಕೈಯಿಂದ ಎತ್ತಿ ಕೊಟ್ಟಿರುವ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಈ ಘಟನೆಯು ಬಿಜೆಪಿಯೊಳಗೆ ಅಸ್ತಿತ್ವದಲ್ಲಿರುವ ಶ್ರೇಣಿಕೃತ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ ಎಂದು ಹೇಳಿವೆ.
ಗೃಹ ಸಚಿವ ಅಮಿತ್ ಶಾ ಅವರು ತಮ್ಮ ರಾಜ್ಯ ಪ್ರವಾಸದ ಭಾಗವಾಗಿ ಹೈದರಾಬಾದ್‌ನ ಉಜ್ಜೆಯಿನಿ ಮಹಾಕಾಳಿ ದೇವಸ್ಥಾನಕ್ಕೆ ಭಾನುವಾರ ಇತರ ರಾಜ್ಯ ನಾಯಕರೊಂದಿಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಅಮಿತ್ ಶಾ ಮತ್ತು ಸಂಜಯ್ ಕುಮಾರ್ ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಂಜಯ್ ಕುಮಾರ್ ಅವರು ತರಾತುರಿಯಲ್ಲಿ ಮುಂದೆ ಸಾಗಿ ಅಮಿತ್ ಶಾ ಅವರ ಚಪ್ಪಲಿಯನ್ನು ಕೈಯಿಂದ ತಂದು ಅವರ ಪಾದದ ಬಳಿ ಇಡುತ್ತಿರುವ ವೈಡಿಯೊ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ರಾಜ್ಯಾಧ್ಯಕ್ಷರ ಈ ನಡೆಯು, ಬಿಜೆಪಿ ನಾಯಕರು ಉನ್ನತ ಅಧಿಕಾರಕ್ಕಾಗಿ ಗುಲಾಮಗಿರಿಯ ಮನಸ್ಥಿತಿಯನ್ನು ಹೊಂದಿರಬೇಕು ಎಂಬುವುದನ್ನು ಸೂಚಿಸುತ್ತದೆ ಎಂದು ರಾಜಕೀಯ ವಲಯದಿಂದ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ‘ಮೊಟ್ಟೆ ಎಸೆದವ ಕಾಂಗ್ರೆಸ್ ಆಗಿದ್ದರೆ ಜೈಲಿಗೆ ಕಳಿಸಿ’: ಬಿಜೆಪಿ ಶಾಸಕನೊಂದಿಗಿನ ಆರೋಪಿಯ ಚಿತ್ರ ಬಿಡುಗಡೆ ಮಾಡಿದ ಸಿದ್ದರಾಮಯ್ಯ
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಟಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣ ಸಚಿವ ಕೆಟಿ ರಾಮರಾವ್, “ದೆಹಲಿಯ ಚಪ್ಪಲಿ ಹೊತ್ತ ಗುಜರಾತಿ ಗುಲಾಮರ ಕೃತ್ಯಗಳನ್ನು ತೆಲಂಗಾಣದ ಜನರು ಗಮನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ఢిల్లీ "చెప్పులు" మోసే గుజరాతీ గులాములను- ఢిల్లీ నాయకులకు చుక్కలు చూపిస్తున్న నాయకున్ని – తెలంగాణ రాష్ట్రం గమనిస్తున్నది.
తెలంగాణ ఆత్మ గౌరవాన్ని కించపరిచే ప్రయత్నాన్ని తిప్పి గొట్టి, తెలంగాణ ఆత్మ గౌరవాన్ని నిలపడానికి తెలంగాణ సబ్బండ వర్ణం సిద్దంగా ఉన్నది.
జై తెలంగాణ! https://t.co/SpFCHAszYe
— KTR (@KTRTRS) August 22, 2022
ಇದನ್ನೂ ಓದಿ: ಮಧ್ಯಪ್ರದೇಶ: ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ; ಪ್ರೀತಂ ಸಿಂಗ್ ಲೋಧಿ ಬಿಜೆಪಿಯಿಂದ ಉಚ್ಚಾಟನೆ
“ತೆಲಂಗಾಣದ ಸ್ವಾಭಿಮಾನವನ್ನು ಅವಹೇಳನ ಮಾಡುವ ಪ್ರಯತ್ನವನ್ನು ಹಿಂದಕ್ಕೆ ತಳ್ಳಲು ಮತ್ತು ರಾಜ್ಯದ ಹೆಮ್ಮೆಯನ್ನು ಎತ್ತಿ ಹಿಡಿಯಲು ತೆಲಂಗಾಣದ ಜನಸಮುದಾಯ ಸಿದ್ಧರಾಗಿದ್ದಾರೆ. ಜೈ ತೆಲಂಗಾಣ” ಎಂದು ಕೆಟಿಆರ್ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಕಾಂಗ್ರೆಸ್ ಮತ್ತು ಇತರ ರಾಜಕೀಯ ನಾಯಕರಯ ಇದು ಬಿಜೆಪಿಯ ‘ಗುಲಾಮಗಿರಿ ಮನಸ್ಥಿತಿ’ಯನ್ನು ಸೂಚಿಸುತ್ತದೆ ಮತ್ತು ಇದರಿಂದ ತೆಲಂಗಾಣದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.
ಬಂಡಿ ಸಂಜಯ್ ಕುಮಾರ್ ಅವರು ತೆಲಂಗಾಣದ ಸ್ವಾಭಿಮಾನವನ್ನು ಈ ಹಿಂದಿನ ‘ತಡಿಪಾರ್’ನ ಪಾದದಲ್ಲಿ ಇರಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಹೇಳಿದೆ.
“ಬಿಜೆಪಿ ತೆಲಂಗಾಣ ನಾಯಕರ ನಡುವಳಿಕೆ ಗುಲಾಮಗಿರಿಯ ಪರಮಾವಧಿ! ಬಿಜೆಪಿಯಲ್ಲಿ ನಿಮ್ಮ ಬದುಕು ಎಷ್ಟೊಂದು ಹೀನಾಯವಾಗಿದೆ! ತೆಲಂಗಾಣ ಬಿಜೆಪಿ ಅಧ್ಯಕ್ಷರೇ ಚಪ್ಪಲಿಯನ್ನು ಹೊತ್ತರೆ, ಉಳಿದವರು ಏನು ಮಾಡಬೇಕು?” ಎಂದು ಕಾಂಗ್ರೆಸ್ ಕೇಳಿದೆ.
ಇದನ್ನೂ ಓದಿ: ಯುಪಿ: ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಬಿಜೆಪಿ ನಾಯಕನ ಪರ ಬೃಹತ್ ಪ್ರತಿಭಟನೆ
ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ತೆಲಂಗಾಣಕ್ಕೆ ಭೇಟಿ ನೀಡಿದ್ದರು.


