Homeಮುಖಪುಟಸಲ್ಮಾನ್ ರಶ್ದಿ ಮೇಲೆ ದಾಳಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ: IMSD

ಸಲ್ಮಾನ್ ರಶ್ದಿ ಮೇಲೆ ದಾಳಿ ಭಯದ ವಾತಾವರಣ ಸೃಷ್ಟಿಸುವ ಹುನ್ನಾರ: IMSD

ಭಾರತದ ಯಾವುದೆ ಪ್ರಮುಖ ಮುಸ್ಲಿಮ್‌ ಸಂಸ್ಥೆ, ಸಂಘಟನೆಗಳು ಬರಹಗಾರನ ಮೇಲೆ ನಡೆದ ದಾಳಿಯನ್ನು ಖಂಡಿಸಿಲ್ಲ ಎಂದು IMSD ಹೇಳಿದೆ

- Advertisement -
- Advertisement -

ಅಮೆರಿಕದ ನ್ಯೂಯಾರ್ಕ್ ರಾಜ್ಯದಲ್ಲಿ ಬರಹಗಾರ ಸಲ್ಮಾನ್ ರಶ್ದಿಯವರ  ಮೇಲೆ ನಡೆದ ದಾಳಿಯನ್ನು  IMSD (ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರೆಸಿ) ಬಲವಾಗಿ ಖಂಡಿಸಿದೆ. ಇರಾನಿನ ನಾಯಕ ಆಯೊತೊಲ್ಲಾಹ್ ಖೊಮೇನಿ 1989ರಲ್ಲಿ ಹೊರಡಿಸಿದ ಫತ್ವಾವೇ ಆ ದಾಳಿ ನಡೆಯಲು ಕಾರಣ ಎಂದು ಅದು ಒತ್ತಿ ಹೇಳಿದೆ.

ಪ್ರಜಾಸತ್ತೆ, ಸೆಕ್ಯುಲರ್ ಮತ, ಸಾಮಾಜಿಕ ಸಮಾನತೆ ಮತ್ತು ನ್ಯಾಯದಂಥ ಮೌಲ್ಯಗಳಿಗೆ ಬದ್ಧರಾದ ಹಲವು ಭಾರತೀಯ ಮುಸ್ಲಿಮರು ರಚಿಸಿಕೊಂಡಿರುವ ವೇದಿಕೆಯಾಗಿದೆ IMSD. ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸುವ ತನ್ನ ಹೇಳಿಕೆಯಲ್ಲಿ ವೇದಿಕೆಯು “ಇಸ್ಲಾಮ ಮತವನ್ನು ಧಿಕ್ಕರಿಸಿ ತೊರೆದು ನಡೆದ ಪಾಖಂಡಿಯೊಬ್ಬರು ಕ್ಷಮೆ ಕೇಳಿದರೆ ಅದನ್ನು ಮಾನ್ಯಮಾಡಬೇಕು ಎನ್ನುವ ಇಸ್ಲಾಮಿನ ದೈವಶಾಸ್ತ್ರವು, ಅದೇ ಒಬ್ಬರು ಪ್ರವಾದಿ ಮೊಹಮ್ಮದರನ್ನು ನಿಂದಿಸಿದರೆ, ಅವರಿಗೆ ಯಾವ ರೀತಿಯ ದಯೆಯನ್ನೂ ತೋರದೆ, ಅತಿವೇಗದಿಂದ ಅವರ ವಿಚಾರಣೆ ನಡೆಸಬೇಕು, ತಡಮಾಡದೆ ಅವರ ತಲೆದಂಡ ಪಡೆಯಬೇಕು ಎನ್ನುತ್ತದೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ರಶ್ದಿ ಅವರ ಸೆಟಾನಿಕ್ ವರ್ಸಸ್‍ ಕಾದಂಬರಿ ಪ್ರಕಟವಾದಾಗ ಇನ್ನೂ ಹುಟ್ಟಿಯೇ ಇಲ್ಲದಿದ್ದ ಹದಿ ಮತಾರ್ ಎಂಬ ಮುಸಲ್ಮಾನ ತರುಣ ಆ ಫತ್ವಾವನ್ನು ಜಾರಿಗೊಳಿಸಲು ಹೊರಟಿದ್ದು ಆ ಬಗೆಯ ದೈವಶಾಸ್ತ್ರದ ಅಸಾಧಾರಣ ಪ್ರಬಲತೆಯನ್ನು ತೋರುತ್ತದೆ’’ ಎಂದು ವೇದಿಕೆಯ ಹೇಳಿಕೆ.

ಇದನ್ನೂ ಓದಿ: ‘ತಲೆದಂಡ’ ಮತ್ತು ಮಾಸ್ತಿ: ಗಿರೀಶ್ ಕಾರ್ನಾಡ್‍ರವರ ನಾಟಕದ ಕುರಿತು ಪಿ.ಲಂಕೇಶ್ ಬರೆದಿದ್ದು ಹೀಗೆ.

ಭಾರತದ ಪ್ರಮುಖ ಮುಸಲ್ಮಾನ ಸಂಸ್ಥೆ, ಸಂಘಟನೆಗಳಲ್ಲಿ ಯಾವೊಂದೂ ರಶ್ದಿ ಅವರ ಮೇಲೆ ನಡೆದ ದಾಳಿಯನ್ನು ಖಂಡಿಸಿಲ್ಲ ಎಂದು ದೂರಿರುವ ವೇದಿಕೆ, “ಈ ಮೌನವು ಇಸ್ಲಾಂ ದ್ವೇಷಿಗಳಿಗೆ ಬಲ ನೀಡುತ್ತದೆ. ಇದರಿಂದ ಅವರಿಗೆ ಇಸ್ಲಾಮವು ಹಿಂಸಾಚಾರ ಮತ್ತು ಭಯೋತ್ಪಾದಕತೆಯ ಮತ ಎಂದು ಬಣ್ಣಿಸಲು ಸುಲಭವಾಗುತ್ತದೆ’’ ಎಂದು ಹೇಳಿದೆ.

IMSDಯ ಹೇಳಿಕೆಯು, ಈಚೆಗೆ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಎಂಬವರು ಪ್ರವಾದಿಯವರನ್ನು ನಿಂದಿಸಿದರು ಎಂಬ ಆರೋಪದ ಮೇರೆಗೆ ಇಬ್ಬರು ಮುಸಲ್ಮಾನ ಮತಾಂಧರಿಂದ ಭೀಕರವಾಗಿ ಕೊಲೆಯಾದ್ದನ್ನು ನೆನಪಿಸಿದೆ. ಇಂಥದೊಂದು ಘಟನೆ ಭಾರತೀಯ ಮುಸಲ್ಮಾನ ಸಮುದಾಯದ ಮುಂದೆ ಗುರುತರವಾದ ಹಲವು ಪ್ರಶ್ನೆಗಳನ್ನು ಇಟ್ಟು ಪ್ರಾಮಾಣಿಕ ಉತ್ತರ ಬೇಡುತ್ತಿದೆ ಎಂದು ವೇದಿಕೆ ಹೇಳಿದೆ.

“ಎಲ್ಲ ಪ್ರಮುಖ ಮುಸಲ್ಮಾನ ಸಂಘಟನೆಗಳೂ ಆ ಕಗ್ಗೊಲೆಯು ಅನ್ಯಮತೀಯರೊಬ್ಬರ ಬಗೆಗಿನ ದ್ವೇಷದಿಂದಾಗಿ ಆದದ್ದೆಂದು ಖಂಡಿಸಿದವೇ ಹೊರತು, ಅದು ನಡೆದದ್ದು ಕನ್ಹಯ್ಯಾ ಲಾಲರು ಪ್ರವಾದಿಯವರನ್ನು ನಿಂದಿಸಿದರು ಎಂಬ ಆರೋಪದ ಕಾರಣದಿಂದಾಗಿ ಎನ್ನುವುದನ್ನು ಗುರುತಿಸಲು, ಗಟ್ಟಿಯಾಗಿ ಹೇಳಲು ಒಪ್ಪಲಿಲ್ಲ” ಎಂದು ವೇದಿಕೆ ಪ್ರತಿಪಾದಿಸಿದೆ.

ಇದನ್ನೂ ಓದಿ: ಬ್ಲೂಮ್ಸ್‌ಬರಿ, ಬುಕ್‌ಬ್ರಹ್ಮ, ರದ್ದು ಸಂಸ್ಕೃತಿ ಮತ್ತು ರವೀಂದ್ರನಾಥ ಟ್ಯಾಗೋರ್

“ಇದು ಬೂಟಾಟಿಕೆಯಾಗಿದ್ದು, ತನಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯ ಎನ್ನುವಂಥದು. ಇದರಿಂದ ಮುಸಲ್ಮಾನ ಸಮುದಾಯವು ಇನ್ನಷ್ಟು ದುರ್ಬಲಗೊಂಡು ದೇಶದ ಉಳಿದ ಸಮುದಾಯಗಳಿಂದ ಇನ್ನಷ್ಟು ದೂರವಾಗುತ್ತದೆ” ಎಂದು IMSD ಹೇಳಿದೆ.

IMSD ಸಂಘಟನೆಯ ಹೇಳಿಕೆ

ವಿವೇಕ-ವಿವೇಚನಯುಕ್ತವಾದ ಬಾಳಿನತ್ತ ಸಾಗಲಿಚ್ಛಿಸುವ ಎಲ್ಲ ಮುಸಲ್ಮಾನರು ಮತ್ತು ಸೆಕ್ಯುಲರ್ ನಾಗರಿಕ ಸಮಾಜದ ಪ್ರಜ್ಞಾವಂತರೆಲ್ಲರೂ ಸಲ್ಮಾನ್ ರಶ್ದಿ ಅವರ ಮೇಲೆ ನಡೆದಿರುವ ಕರಾಳ ದಾಳಿಯನ್ನು ಖಂಡಿಸುತ್ತಾರೆ!

ಸಲ್ಮಾನ್ ರಶ್ದಿ ಅವರನ್ನು ಕೊಲ್ಲಲು ನಡೆದ ಹಲ್ಲೆಯನ್ನು IMSD ಸಂಘಟನೆ ಅತ್ಯಂತ ಬಲವಾಗಿ ಖಂಡಿಸುತ್ತದೆ. ಲೋಕವಿಖ್ಯಾತರಾದ ಆ ಲೇಖಕರ ಮೇಲೆ ನಡೆದ ಹಲ್ಲೆಗೆ ಕಾರಣ ಅವರು ಇಸ್ಲಾಮಿನ ಪ್ರವಾದಿಯವರನ್ನು ನಿಂದಿಸಿ, ಕೀಳುಗೈದರು ಎಂದು ಆರೋಪಿಸಿ ಇರಾನ್ ದೇಶದ ಮುಖಂಡರು 1989ರಲ್ಲಿ ಹೊರಡಿಸಿದ ಫತ್ವಾ ಎಂಬುವುದು ನಿಸ್ಸಂಶಯವಾಗಿ ಹೇಳಬಹುದು.

‘ಮುಸಲ್ಮಾನರಿಗೆ ಭಾವನಾತ್ಮಕ ನೋವು’ ಉಂಟುಮಾಡಿದ್ದಕ್ಕೆ ರಶ್ದಿ ಅವರು ಕ್ಷಮೆ ಕೇಳಿದ ಮೇಲೆಯೂ, ಅವರ ವಿರುದ್ಧದ ಫತ್ವಾ ಜಾರಿಯಾಗಿಯೇ ಇತ್ತು; ಅವರ ತಲೆದಂಡ ಕೊಂಡವರಿಗೆ ಸಲ್ಲುತ್ತದೆಂದು ಘೋಷಿಸಲಾದ ಇನಾಮಿನ ಮೊತ್ತವು ಎರಡು ಪಟ್ಟಾಯಿತು.

ಇಸ್ಲಾಮಿನ ದೈವಮತಶಾಸ್ತ್ರದ ಪ್ರಕಾರ, ಇಸ್ಲಾಮ ಮತವನ್ನು ಧಿಕ್ಕರಿಸಿ ತೊರೆದು ನಡೆದ ಪಾಖಂಡಿಯೊಬ್ಬರು ಕ್ಷಮೆ ಕೇಳಿದರೆ ಅದನ್ನು ಮಾನ್ಯಮಾಡಬೇಕು ಎನ್ನುತ್ತದೆ, ಆದರೆ ಅದೇ ಒಬ್ಬರು ಪ್ರವಾದಿ ಮೊಹಮ್ಮದರನ್ನು ನಿಂದಿಸಿದರೆ, ಅವರಿಗೆ ಯಾವ ರೀತಿಯ ದಯೆಯನ್ನೂ ತೋರದೆ, ಅತಿತ್ವರೆಯಿಂದ ಅವರ ವಿಚಾರಣೆ ನಡೆಸಬೇಕು, ತಡಮಾಡದೆ ಅವರ ತಲೆದಂಡ ಪಡೆಯಬೇಕು ಎನ್ನುತ್ತದೆ! ರಶ್ದಿ ಅವರ ಸೆಟಾನಿಕ್ ವರ್ಸಸ್‍ ಕಾದಂಬರಿ ಪ್ರಕಟವಾದಾಗ ಇನ್ನೂ ಹುಟ್ಟಿಯೇ ಇಲ್ಲದಿದ್ದ ಹದಿ ಮತಾರ್ ಎಂಬ ಮುಸಲ್ಮಾನ ತರುಣ ಆ ಫತ್ವಾವನ್ನು ಜಾರಿಗೊಳಿಸಲು ಹೊರಟಿದ್ದು ಆ ಬಗೆಯ ದೈವಮತಶಾಸ್ತ್ರದ ಅಸಾಧಾರಣ ಪ್ರಬಲತೆಯನ್ನು ತೋರುತ್ತದೆ.

ಇದನ್ನೂ ಓದಿ: ಅಸಮ್ಮತಿಸುತ್ತಿರುವ ಅಧಿಕಾರಿಗಳು ಮತ್ತು ಸಂವಿಧಾನ

ಇಂಥ ಯಾವುದೇ ಹಲ್ಲೆಯು ಹೆದರಿಕೆಯ ವಾತಾವರಣ ಸೃಷ್ಟಿಸಲು ನಡೆಯುವ ಹುನ್ನಾರವಾಗಿರುತ್ತದೆ. ಸೆಟಾನಿಕ್ ವರ್ಸಸ್ ಕಾದಂಬರಿಯ ಅನುವಾದಕರು ಕೊಲೆಯಾದರು; ಆ ಪುಸ್ತಕ ಕುರಿತ ಚರ್ಚೆಗಳನ್ನು ಹಿಂಸಾಚಾರಗೈದು ಹತ್ತಿಕ್ಕಲಾಯಿತು; ಪುಸ್ತಕದ ಅಂಗಡಿಗಳು ಆ ಕಾದಂಬರಿಯನ್ನು ತಮ್ಮ ಕಪಾಟುಗಳಿಂದ ತೆಗೆದುಹಾಕಲೇ ಬೇಕಾಯಿತು. ಹೆದರಿಕೆ-ಬೆದರಿಕೆಯ ಈ ವಾತಾವರಣದಿಂದಾಗಿ ಸಲ್ಮಾನ್ ರಶ್ದಿ ಅವರ ಜೊತೆ ಕೆಲವೇ ಜನ ನಿಲ್ಲುವಂತಾಯಿತು. ಆದರೆ ಇಸ್ಲಾಮದ್ವೇಷಿಗಳಿಗೆ ಮಾತ್ರ ಆ ಪ್ರಕರಣವೊಂದು ವರದಾನವಾಯಿತು: ‘ಇಸ್ಲಾಂನ ನಿಜಮುಖ’ ಎಂದರೆ ಇಂಥ ದುಂಡಾವರ್ತಿಯೇ ಎಂದು ಸಾರಲು ಅವರಿಗೆ ಅನುಕೂಲವಾಯಿತು.

ಈಗ, ಮೂವತ್ತು ವರ್ಷಗಳ ಬಳಿಕವೂ ಮುಸ್ಲಿಂ ದೇಶಗಳು ಮತ್ತು ಸಂಘಟನೆಗಳಿಂದ ನಮಗೆ ಕೇಳಿ ಬರುತ್ತಿರುವುದು ಮಹಾಮೌನವೇ ಹೊರತು ಬೇರೆಯಲ್ಲ. ಪ್ರಮುಖ ಲೇಖಕರೊಬ್ಬರ ಮೇಲೆ ನಡೆದಿರುವ ಬರ್ಬರ ಆಕ್ರಮಣವನ್ನು ಭಾರತದ ಮುಸಲ್ಮಾನರ ಯಾವ ಪ್ರಮುಖ ಸಂಸ್ಥೆಯಾಗಲಿ, ಸಂಘಟನೆಯಾಗಲಿ ಖಂಡಿಸಿಲ್ಲ. ಇಸ್ಲಾಂ ಹಿಂಸಾಚಾರ ಮತ್ತು ಭಯೋತ್ಪಾದಕತೆಯ ಮತಧರ್ಮ ಎಂದು ಬಣ್ಣಿಸಲು ಇಸ್ಲಾಂ ದ್ವೇಷಿಗಳಿಗೆ ಪುಷ್ಟಿ ನೀಡಿರುವುದು ಇಂಥ ಈ ಮೌನವೇ.

ಈಚೆಗೆ, ಕನ್ಹಯ್ಯಾ ಲಾಲ್ ಎಂಬವರು ತಾವು ಪ್ರವಾದಿಯವರನ್ನು ನಿಂದಿಸಿದರು ಎಂಬ ಆರೋಪಕ್ಕೆ ಒಳಗಾಗಿ ಇಬ್ಬರು ಮುಸಲ್ಮಾನ ಮತಾಂಧರಿಂದ ಕೊಲೆಯಾದರು. ಅದು ಭಾರತೀಯ ಮುಸಲ್ಮಾನ ಸಮುದಾಯದಲ್ಲಿನ ಹಲಕೆಲವರಲ್ಲಿ ಮನೆಮಾಡಿಕೊಂಡಿರುವ ಅಸಹನೆಯನ್ನು ಎತ್ತಿ ತೋರಿಸುತ್ತದೆ. ಇಸ್ಲಾಂನ ಪ್ರಮುಖ ಸಂಸ್ಥೆ, ಸಂಘಟನೆಗಳೆಲ್ಲವೂ ಆ ಕಗ್ಗೊಲೆಯನ್ನು ಖಂಡಿಸಿದವು, ನಿಜ. ಆದರೆ ಅವರು ಹಾಗೆ ಮಾಡಿದ್ದು ಅದು ಮತೀಯ ದ್ವೇಷದಿಂದ ಆದ ಪಾತಕವೆಂದು ಹೇಳಿಯೇ ಹೊರತು ಪ್ರವಾದಿಯವರನ್ನು ನಿಂದಿಸಿದಕ್ಕೆ ಆದ ಕೊಲೆ ಎಂದಲ್ಲ. ಆ ಸಂಸ್ಥೆ, ಸಂಘಟನೆಗಳು ಅದೊಂದು ಸತ್ಯವನ್ನು ಗುರುತಿಸಿ, ಒಪ್ಪಿಕೊಳ್ಳಲು ತಯಾರಿಲ್ಲ. ಇದು ಶುದ್ಧ ಆಷಾಢಭೂತಿತನ ಎಂದು ಹೇಳದೇ ವಿಧಿಯಿಲ್ಲ. ಇಂಥ ಅಪ್ರಾಮಾಣಿಕತೆಯಿಂದಾಗಿ ಈ ದೇಶದ ಮುಸಲ್ಮಾನ ಸಮುದಾಯವು ಇನ್ನಷ್ಟು ದುರ್ಬಲಗೊಳ್ಳುತ್ತದೆ, ಉಳಿದ ಸಮುದಾಯಗಳಿಂದ ಇನ್ನಷ್ಟು ದೂರವಾಗುತ್ತದೆ, ಅಷ್ಟೇ.

ಇದನ್ನೂ ಓದಿ: ಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

ಮುಸಲ್ಮಾನರನ್ನು ಪ್ರತಿನಿಧಿಸುವ ಸಂಘಟನೆಗಳಿಗೆ ಮಾನವ ಹಕ್ಕುಗಳ ನೆನಪಾಗುವುದು ತಮ್ಮವರ ಮೇಲೆ ದಾಳಿಯಾದಾಗ ಮಾತ್ರವೇ ಹೊರತು ತಮ್ಮ ಮತಧರ್ಮದಿಂದ ಭಿನ್ನವಾದ ಬೇರೆಯವರಿಗೂ (ಅವರು ಮುಸಲ್ಮಾನರಿರಲಿ, ಇಲ್ಲದಿರಲಿ) ಆ ಹಕ್ಕು ಮತ್ತು ಆ ಘನತೆಗಳೆರಡೂ ಇರುತ್ತವೆ, ಇರಬೇಕು ಎಂದು ಅವುಗಳು ಗುರುತಿಸುವುದಿಲ್ಲ. ಇದು ದುಬಾರಿ ನಡೆಯಾಗಿದ್ದು ಸರ್ವಥಾ ಸಲ್ಲದು.

ಇಂಥ ಅಪ್ಪಟ ಅಪ್ರಾಮಾಣಿಕತೆಯಿಂದ ಮುಸಲ್ಮಾನರ ಏಳಿಗೆಯಂತೂ ಆಗುವುದಿಲ್ಲ. ಮುಸಲ್ಮಾನರು, ತಾವು ಅಲ್ಪಸಂಖ್ಯಾತರ ಒಂದು ಸಮುದಾಯವಾಗಿ, ಮುಕ್ತವಾದ ಅಭಿವ್ಯಕ್ತಿ ಮತ್ತು ಭಿನ್ನಮತ ಮಂಡನೆ ಹಾಗೂ ಆಚರಣೆಗೆ ಅವಕಾಶವಿರಬೇಕಾದ್ದು ಮುಖ್ಯವೆಂದು ಹೇಳಬೇಕು, ಮತ್ತು ಅವುಗಳಿಗೆ ಅಭಯ ನೀಡುವ ಮಾನವ ಹಕ್ಕುಗಳನ್ನು ಎತ್ತಿಹಿಡಿಯಬೇಕು ತಾನೆ? ಆದರೆ ಅವರ ಸಂಸ್ಥೆ ಮತ್ತು ಸಂಘಟನೆಗಳು ತಾವು ಎಪ್ಪತ್ತೈದು ವರ್ಷಗಳಿಂದ ಪ್ರಜಾಸತ್ತೆಯುಳ್ಳ ದೇಶದೊಂದು ಭಾಗವಾಗಿದ್ದೂ ದೈವಮತಧರ್ಮದ ಟೀಕೆಯ ನಿಷೇಧಕ್ಕಾಗಿ ರಾಷ್ಟ್ರೀಯ ಕಾನೂನೊಂದು ಬೇಕು ಎಂದು ಒತ್ತಾಯಿಸುತ್ತಿರುವುದು ದುರದೃಷ್ಟಕರವಾದ ವಿಷಯ. ಇಸ್ಲಾಂ ಮತಧರ್ಮ ಮತ್ತು ಮಾನವ ಹಕ್ಕುಗಳು ಪರಸ್ಪರ ವ್ಯತಿರಿಕ್ತವಾದುವು, ಅವುಗಳ ನಡುವೆ ಹೊಂದಾಣಿಕ ಸಾಧ್ಯವಿಲ್ಲ ಎಂದು ಹೇಳಲು ಹಿಂದೂ ಬಲಪಂಥೀಯರೇ ಬೇಕು ಎಂದಿಲ್ಲ. ಸ್ವತಃ ಮುಸಲ್ಮಾನರೇ ಬಹಳ ದಿವಸಗಳಿಂದ ಆ ನಿಲುವನ್ನು ಮೆರೆಸುತ್ತಿದ್ದಾರೆ.

ಸೆಟಾನಿಕ್ ವರ್ಸಸ್ ಮುಸಲ್ಮಾನರ ಯೂರೋಪು ವಲಸೆಯ ಇತ್ಯೋಪರಿಯನ್ನು ಪರಿಶೀಲಿಸಿದ ಮೊದಮೊದಲ ಕಾದಂಬರಿಗಳಲ್ಲೊಂದು. ತಥ್ಯ ಹೀಗಿರುವಾಗ, ಮುಸಲ್ಮಾನರು ತಮ್ಮ ಪ್ರತ್ಯೇಕತೆ ಮತ್ತು ವಿಶೇಷತೆಯನ್ನು ಮೆರೆಯಲು ಅದನ್ನು ಸುಟ್ಟರು ಅನ್ನುವುದೊಂದು ವಿಕಟವ್ಯಂಗ್ಯ. ಮುಕ್ತವಾಗಿ ಮಾತಾಡಲು, ಬರೆಯಲು, ಓದಲು ಮತ್ತು ಭಿನ್ನಮತವನ್ನು ತಾಳಲು ಸಾಧ್ಯವಾಗದಿದ್ದರೆ ನಮ್ಮ ಸಂವಿಧಾನದಲ್ಲಿ ನೆಲೆಸಿರುವ ಸ್ವಾತಂತ್ರ್ಯದ ತತ್ತ್ವಗಳನ್ನು ನಾವು ಎತ್ತಿಹಿಡಿಯಲಾಗುವುದಿಲ್ಲ ಎನ್ನುವುದು IMSD ಸಂಘಟನೆಯ ದೃಢವಾದ ನಿಲುವು. ನಾವು ನಮ್ಮ ಗಣರಾಜ್ಯದ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗುವುದು ಸ್ವಾತಂತ್ರ್ಯದ ಆ ತತ್ತ್ವಗಳನ್ನು ಕಾಪಾಡಿದಾಗ ಮಾತ್ರವೇ ಎಂದು ನಂಬಿದ್ದೇವೆ. ದೊಡ್ಡ ಬಿಕ್ಕಟ್ಟಿನ ಈ ಗಳಿಗೆಯಲ್ಲಿ ನಾವು ಸಲ್ಮಾನ್ ರಶ್ದಿ ಅವರ ಜೊತೆ ದೃಢವಾಗಿ ನಿಂತಿದ್ದೇವೆ, ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದೇವೆ.

ಇದನ್ನೂ ಓದಿ: ಕಾರ್ಯಕ್ರಮದ ವೇಳೆ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಚಾಕುವಿನಿಂದ ಇರಿತ

ದೈವಮತಧರ್ಮದ ಟೀಕೆಯ ವಿಷಯದಲ್ಲಿ ತಾವು ತಳೆಯುತ್ತ ಬಂದಿರುವ ನಿಲುವನ್ನು ಮುಸಲ್ಮಾನರ ಎಲ್ಲ ಸಂಘಟನೆಗಳೂ ಮರುನಿರುಕಿಸಿ, ವಿವೇಚಿಸಿಕೊಳ್ಳಲಿ. ಆ ವಿಷಯದಲ್ಲಿನ ಅವರ ರಾಜಕಾರಣದಿಂದ ಮುಸಲ್ಮಾನರಿಗೆ ಒಳಿತಾಗಿರುವುದಕ್ಕಿಂತ ಹೆಚ್ಚಾಗಿ ಕೆಡುಕೇ ಆಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Javed Anand, National Convener: +919870402556

Feroze Mithiborwala, National Co-Convener: +919029277751

Arshad Alam, National Committee: +919968200945

ಬೆಂಬಲ ನೀಡುತ್ತಿರುವವರು:

1. Prof. Ram Puniyani, Author, Mumbai

2. Medha Patkar, NAPM, Mumbai

3. Sultan Shahin, Editor, New Age Islam, Delhi

4. Prof. Zeenat Shaukat Ali, Islamic Scholar, IMSD, Mumbai

5. Yogendra Yadav, Swaraj Abhiyaan, Delhi

6. Anand Patwardhan, Documentary Filmmaker

7. Dr. Sunilam, Farmer’s Leader, Indore

8. Prof. Shamshul Islam, Delhi

9. Zakia Soman, BMMA, Ahmedabad

10. Irfan Engineer, CSSS, Mumbai

11. Anjum Rajabali, IMSD, Film Scriptwriter, Mumbai

12. Sandeep Pandey, Magsaysay Award, Lucknow

13. Justice Kolse Patil (Retd), Pune

14. Ghulam Rasool Dehlvi, Classical Islamic Scholar, IMSD, Delhi

15. Adv. A J Jawwad, IMSD, Chennai

16. Amir Rizvi, Designer, IMSD, Mumbai

17. Faisal Khan, Khudai Khidmatgar, Delhi

18. Bilal Khan, IMSD, Mumbai

19. Shabana Dean, IMSD, Mumbai

20. Ali Bhojani, IMSD, Mumbai

21. Sheeba Aslam Ferhi, Researcher, Delhi

22. Aziz Lokhandwala, IMSD, Mumbai

23. Salim Sabuwala, IMSD, Mumbai

24. Saleem Yusuf, IMSD, Mumbai

25. Askari Zaidi, IMSD, Mumbai

26. Masooma Ranalvi, IMSD, Mumbai

27. Muniza Khan, IMSD, Mumbai

28. Hasina Khan, Bebaak Collective, Mumbai

29. Taizoon Khorakiwala, IMSD, Mumbai

30. Akbar Sheikh, IMSD, Sangli

31. Muhammad Imran, USA

32. Sadique Basha, IMSD, Mumbai

33. Mansoor Sardar, Bhiwandi

34. Nuruddin Naik, IMSD, Mumbai

35. Kasim Saif, Chennai

36. Prof. Qamarjahan

37. Lata P. M., Researcher, Bahujan Feminist, Mumbai

38. Prof. Rooprekha Verma, Lucknow

39. Prof. Rakesh Rafique, Moradabad

40. Prof. Rajiv, Lucknow

41. Jagriti Rahi, Gandhian, Varanasi

42. Prof. Ajit Jha, Swaraj Abhiyan, Delhi

43. Geeta Sheshu, Journalist, Free Speech Collective, Mumbai

44. Thomas Matthew, Delhi

45. Adv. Arun Maji, Dalit Human Rights Defender, Kolkatta

46. Shekhar Sonalkar, Writer, Sholapur

47. Adv. Lara Jesani, IMSD, Mumbai

48. Putul, Sarvodaya, Varanasi

49. Varsha Vidya Vilas, Social Activist, Mumbai

50. Guddi S L, Social Activist, Mumbai

51. Jyoti Badekar, Social Activist, Mumbai

52. Ravi Bhilane, Ex-Editor, Journalist, Mumbai

53. Vishal Hiwale, Save Constitution Movement, Mumbai

54. Prof. Om Damani, Mumbai

55. Prof. Vasantha Raman

56. Prof. Dipak Malik

57. Prof. Cyrus Gonda

58. Yashodhan Paranjpe, IMSD, Mumbai

59. Shalini Dhawan, Designer, Mumbai

60. Neelima Sharma

61. S. Raghunandana, Kannada poet, playwright, stage-director

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read