Homeಮುಖಪುಟವಿಡಿಯೊ➤ ಅಮಿತ್‌ ಶಾ ‘ಚಪ್ಪಲಿ’ ಹೊತ್ತ ಬಿಜೆಪಿ ರಾಜ್ಯಾಧ್ಯಕ್ಷ!

ವಿಡಿಯೊ➤ ಅಮಿತ್‌ ಶಾ ‘ಚಪ್ಪಲಿ’ ಹೊತ್ತ ಬಿಜೆಪಿ ರಾಜ್ಯಾಧ್ಯಕ್ಷ!

- Advertisement -
- Advertisement -

ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್‌ ಶಾ ಅವರು ತೆಲಂಗಾಣದ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಹೊರಗೆ ಬರುತ್ತಿದ್ದಂತೆ ಅವರ ಚಪ್ಪಲಿಯನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರು ಕೈಯಿಂದ ಎತ್ತಿ ಕೊಟ್ಟಿರುವ ಘಟನೆ ನಡೆದಿದೆ. ಈ ಬಗ್ಗೆ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದು, ಈ ಘಟನೆಯು ಬಿಜೆಪಿಯೊಳಗೆ ಅಸ್ತಿತ್ವದಲ್ಲಿರುವ ಶ್ರೇಣಿಕೃತ ವ್ಯವಸ್ಥೆಯ ಬಗ್ಗೆ ತಿಳಿಸುತ್ತದೆ ಎಂದು ಹೇಳಿವೆ.

ಗೃಹ ಸಚಿವ ಅಮಿತ್ ಶಾ ಅವರು ತಮ್ಮ ರಾಜ್ಯ ಪ್ರವಾಸದ ಭಾಗವಾಗಿ ಹೈದರಾಬಾದ್‌ನ ಉಜ್ಜೆಯಿನಿ ಮಹಾಕಾಳಿ ದೇವಸ್ಥಾನಕ್ಕೆ ಭಾನುವಾರ ಇತರ ರಾಜ್ಯ ನಾಯಕರೊಂದಿಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಅಮಿತ್ ಶಾ ಮತ್ತು ಸಂಜಯ್ ಕುಮಾರ್‌ ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಂಜಯ್ ಕುಮಾರ್‌ ಅವರು ತರಾತುರಿಯಲ್ಲಿ ಮುಂದೆ ಸಾಗಿ ಅಮಿತ್ ಶಾ ಅವರ ಚಪ್ಪಲಿಯನ್ನು ಕೈಯಿಂದ ತಂದು ಅವರ ಪಾದದ ಬಳಿ ಇಡುತ್ತಿರುವ ವೈಡಿಯೊ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿ ರಾಜ್ಯಾಧ್ಯಕ್ಷರ ಈ ನಡೆಯು, ಬಿಜೆಪಿ ನಾಯಕರು ಉನ್ನತ ಅಧಿಕಾರಕ್ಕಾಗಿ ಗುಲಾಮಗಿರಿಯ ಮನಸ್ಥಿತಿಯನ್ನು ಹೊಂದಿರಬೇಕು ಎಂಬುವುದನ್ನು ಸೂಚಿಸುತ್ತದೆ ಎಂದು ರಾಜಕೀಯ ವಲಯದಿಂದ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಮೊಟ್ಟೆ ಎಸೆದವ ಕಾಂಗ್ರೆಸ್ ಆಗಿದ್ದರೆ ಜೈಲಿಗೆ ಕಳಿಸಿ’: ಬಿಜೆಪಿ ಶಾಸಕನೊಂದಿಗಿನ ಆರೋಪಿಯ ಚಿತ್ರ ಬಿಡುಗಡೆ ಮಾಡಿದ ಸಿದ್ದರಾಮಯ್ಯ

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಟಿಆರ್‌ಎಸ್ ಕಾರ್ಯಾಧ್ಯಕ್ಷ ಮತ್ತು ತೆಲಂಗಾಣ ಸಚಿವ ಕೆಟಿ ರಾಮರಾವ್, “ದೆಹಲಿಯ ಚಪ್ಪಲಿ ಹೊತ್ತ ಗುಜರಾತಿ ಗುಲಾಮರ ಕೃತ್ಯಗಳನ್ನು ತೆಲಂಗಾಣದ ಜನರು ಗಮನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ; ಪ್ರೀತಂ ಸಿಂಗ್‌ ಲೋಧಿ ಬಿಜೆಪಿಯಿಂದ ಉಚ್ಚಾಟನೆ

“ತೆಲಂಗಾಣದ ಸ್ವಾಭಿಮಾನವನ್ನು ಅವಹೇಳನ ಮಾಡುವ ಪ್ರಯತ್ನವನ್ನು ಹಿಂದಕ್ಕೆ ತಳ್ಳಲು ಮತ್ತು ರಾಜ್ಯದ ಹೆಮ್ಮೆಯನ್ನು ಎತ್ತಿ ಹಿಡಿಯಲು ತೆಲಂಗಾಣದ ಜನಸಮುದಾಯ ಸಿದ್ಧರಾಗಿದ್ದಾರೆ. ಜೈ ತೆಲಂಗಾಣ” ಎಂದು ಕೆಟಿಆರ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಕಾಂಗ್ರೆಸ್ ಮತ್ತು ಇತರ ರಾಜಕೀಯ ನಾಯಕರಯ ಇದು ಬಿಜೆಪಿಯ ‘ಗುಲಾಮಗಿರಿ ಮನಸ್ಥಿತಿ’ಯನ್ನು ಸೂಚಿಸುತ್ತದೆ ಮತ್ತು ಇದರಿಂದ ತೆಲಂಗಾಣದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.

ಬಂಡಿ ಸಂಜಯ್ ಕುಮಾರ್‌ ಅವರು ತೆಲಂಗಾಣದ ಸ್ವಾಭಿಮಾನವನ್ನು ಈ ಹಿಂದಿನ ‘ತಡಿಪಾರ್’ನ ಪಾದದಲ್ಲಿ ಇರಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಹೇಳಿದೆ.

“ಬಿಜೆಪಿ ತೆಲಂಗಾಣ ನಾಯಕರ ನಡುವಳಿಕೆ ಗುಲಾಮಗಿರಿಯ ಪರಮಾವಧಿ! ಬಿಜೆಪಿಯಲ್ಲಿ ನಿಮ್ಮ ಬದುಕು ಎಷ್ಟೊಂದು ಹೀನಾಯವಾಗಿದೆ! ತೆಲಂಗಾಣ ಬಿಜೆಪಿ ಅಧ್ಯಕ್ಷರೇ ಚಪ್ಪಲಿಯನ್ನು ಹೊತ್ತರೆ, ಉಳಿದವರು ಏನು ಮಾಡಬೇಕು?” ಎಂದು ಕಾಂಗ್ರೆಸ್ ಕೇಳಿದೆ.

ಇದನ್ನೂ ಓದಿ: ಯುಪಿ: ಮಹಿಳೆಯ ಮೇಲೆ ಹಲ್ಲೆ ಮಾಡಿದ್ದ ಬಿಜೆಪಿ ನಾಯಕನ ಪರ ಬೃಹತ್‌ ಪ್ರತಿಭಟನೆ

ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಮಿತ್‌ ಶಾ ತೆಲಂಗಾಣಕ್ಕೆ ಭೇಟಿ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...