Homeಅಂಕಣಗಳುಅಪ್ಪನ ವಿದಾಯ ಮತ್ತು ವೈಚಾರಿಕತೆ

ಅಪ್ಪನ ವಿದಾಯ ಮತ್ತು ವೈಚಾರಿಕತೆ

- Advertisement -
- Advertisement -

| ಗೌರಿ ಲಂಕೇಶ್ |
ಜುಲೈ 29, 2009 (ಸಂಪಾದಕೀಯದಿಂದ)

ಅವತ್ತು ದೆಹಲಿಯಿಂದ ಬಂದು ಅಪ್ಪನನ್ನು ನೋಡಿದಾಗ ಅವರು ಟಾಟಾ ಹೇಳುತ್ತಿರುವಂತೆ ಒಂದು ಕೈ ಮೇಲಕ್ಕೆ ಚಾಚಿತ್ತು. ಅವರು ತಮ್ಮ ಫೇವರೇಟ್ ಆದ ನೀಲಿ ಬಣ್ಣದ ಸ್ವೆಟರ್ ಧರಿಸಿದ್ದರು. ಕಣ್ಣೀರು ತುಂಬಿದ್ದ ನನ್ನ ಕಣ್ಣುಗಳಿಗೆ ಏನೋ ಸರಿ ಇಲ್ಲ ಅನಿಸುತ್ತಿತ್ತು. ಮರುಕ್ಷಣವೇ ಅದೇನೆಂದು ಗೊತ್ತಾಯಿತು. ಅದೇ ಕ್ಷಣ ನನ್ನ ತಂಗಿ ಬೇಬಿ ಕೂಡ “ವಿಭೂತಿಯನ್ನು ಅಳಿಸು ಗೌರು” ಅಂದಳು. ಅವತ್ತು ನಮ್ಮ ಮನೆಗೆ ಬಂದಿದ್ದ ಅದ್ಯಾರೋ ಅಪ್ಪನ ಹಣೆಗೆ ವಿಭೂತಿ ಬಳಿದಿದ್ದರು. ತಣ್ಣಗಾಗಿದ್ದ ಅಪ್ಪನನ್ನು ಮುಟ್ಟಲಾಗದೇ ಬೇಬಿ ನನಗಾಗಿ ಕಾದಿದ್ದು ನಾನು ಬಂದಕೂಡಲೇ ಹಾಗೆ ಹೇಳಿದ್ದಳು. ದುಃಖದ ಜೊತೆಗೆ ಕೋಪವೂ ಬಂತು. ನನ್ನಪ್ಪ ಎಂದೂ ವಿಭೂತಿ(ಚಿಕ್ಕವರಿದ್ದಾಗ ಹೊರತುಪಡಿಸಿ) ಧರಿಸಿದವರಲ್ಲ, ಪೂಜೆ ಮಾಡಿದವರಲ್ಲ, ಲಿಂಗ ಕಟ್ಟಕೊಂಡವರಲ್ಲ, ಅಂತಹ ನನ್ನ ಅಪ್ಪ ಅಸಹಾಯಕರಾಗಿದ್ದಾಗ, ಪ್ರತಿಭಟಿಸದಂತಾಗಿದ್ದಾಗ ಅವರ ಹಣೆಗೆ ವಿಭೂತಿ ಹಚ್ಚಿದರು. ಅದನ್ನು ಕೂಡಲೇ ಒರೆಸಿದ ನಾನು “ನನ್ನಪ್ಪನನ್ನು ಯಾರೂ ಮುಟ್ಟಬೇಡಿ, ಇಂತಹದ್ದನ್ನೆಲ್ಲ ಮಾಡಬೇಡಿ” ಎಂದು ಆರ್ಭಟಿಸಿದ್ದೆ.

ಆದರೂ ಅದೆಲ್ಲ ಅಲ್ಲಿಗೇ ನಿಲ್ಲಲಿಲ್ಲ. ಮರುದಿನ ಆಗಮಿಸಿದ ಅಪ್ಪನ ಅಣ್ಣ ಶಿವರುದ್ರಪ್ಪ ಮತ್ತು ಇತರೆ ಸಂಬಂಧಿಗಳು ಅಪ್ಪನಿಗೆ ಅವಮಾನ ಮಾಡದಂತೆ ತಡೆಯುವುದೇ ಒಂದು ಕೆಲಸವಾಗಿ ಹೋಯಿತು. ಅವರ್ಯಾರೂ ಅಪ್ಪನಿಗೆ ಪೂಜೆ ಮಾಡದಂತೆ, ಕುಂಕುಮ ವಿಭೂತಿ ಹಚ್ಚದಂತೆ ನಾವೆಲ್ಲರೂ ಕಟ್ಟೆಚ್ಚರ ವಹಿಸಿದೆವು. ಅಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋದಾಗ ನೋಡುತ್ತೇವೆ, ಅಲ್ಲಿ ಯಾರೋ ಆಗಲೇ ಚಟ್ಟವನ್ನು ಕಟ್ಟಿದ್ದರು. ವಾಹನದಿಂದ ಅಪ್ಪನನ್ನು ಇಳಿಸಿ ಆ ಚಟ್ಟದಲ್ಲಿ ಎತ್ತಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು. ಕೂಡಲೇ ಆ ಚಟ್ಟವನ್ನು ನನ್ನ ಅಪ್ಪನ ಹತ್ತಿರ ತರಕೂಡದು ಎಂದು ನಾನು ಮತ್ತು ಬೇಬಿ ಹೇಳಿದೆವು.

ಆದರೆ ನಾನು ಹೇಳಿದಷ್ಟು ಅವತ್ತಿನ ಪರಿಸ್ಥಿತಿ ಸರಳವಾಗಿರಲಿಲ್ಲ. ನನ್ನ ದೊಡ್ಡಪ್ಪ ಮತ್ತು ಅವರ ಮಗ ನಾಗರಾಜು “ ಇದೇನಿದು, ಲಿಂಗಾಯತರು ತೋಡುವಂತೆ ಗುಂಡಿಯನ್ನು ತೋಡಿಲ್ಲ” ಎಂದು ತಕರಾರು ಎತ್ತಿದರು. ಅದೆಲ್ಲ ಬೇಡ ಅಂದರೆ ಅವರು ಸಿದ್ಧರಾಗಿರಲಿಲ್ಲ. ಅದರಲ್ಲೂ ದೊಡ್ಡಪ್ಪ ಇದ್ದವರು ಇನ್ನೊಂದು ವಿಚಾರ ಕೈಗೆತ್ತಿಕೊಂಡರು. “ ಹೀಗೆ ಅಂಗಾತ ಮಲಗಿಸುವುದು ಸರಿಯಲ್ಲ ಕಾಲುಗಳನ್ನು ಮಡಚಿ ನಮ್ಮ ಸಂಪ್ರದಾಯದಂತೆ ಕೂರಿಸಿರಬೇಕು” ಎಂದರು. ಅಷ್ಟೊತ್ತಿಗಾಗಲೇ ಅಪ್ಪ ಹೋಗಿ 36 ಗಂಟೆಗಳಾಗಿದ್ದವು. ಆದ್ದರಿಂದ ಏನು? ಅಪ್ಪನ ಕೈಕಾಲು ಮುರಿತೀರಾ? ಅಂತ ನಾನು ಕೇಳಿದರೆ ದೊಡ್ಡಪ್ಪ ಏನಂದಿದ್ದರು ಗೊತ್ತಾ “ಮುರುದ್ರೆ ನೋವಾಗಲ್ಲ”. ಅದನ್ನು ಕೇಳಿ ನನಗೆ ಅಳಬೇಕೋ, ಕೋಪಗೊಳ್ಳಬೇಕೋ, ಗೊತ್ತಾಗಲಿಲ್ಲ. ‘ಅದೆಲ್ಲ ಗೊತ್ತಿಲ್ಲ. ಅಪ್ಪನ ನಂಬಿಕೆಗೆ ವಿದುದ್ಧವಾಗಿ ಯಾರೂ ಏನನ್ನು ಮಾಡುವಂತಿಲ್ಲ. ಆ ಜಾಗಕ್ಕೆ ನೀವೆಲ್ಲ ಪೂಜೆ ಮಾಡಿಸಲು ಬಿಟ್ಟಿದೇ ಹೆಚ್ಚು” ಎಂದು ಹೇಳಿ ಕೊನೆಗೂ ಅವರ ಬಾಯಿ ಮುಚ್ಚಿಸಿದ್ದೆ.

ಇನ್ನೇನು ಎಲ್ಲ ಮುಗಿಯಿತು. ಗುಂಡಿಗೆ ಮಣ್ಣು ಹಾಕಬೇಕು. ಆಗ ಗುಂಡಿಯಲ್ಲಿ ಅಪ್ಪನ ಪಕ್ಕ ನಿಂತಿದ್ದ ಒಬ್ಬ ಅದೆಲ್ಲಿಂದಲೋ ಲಿಂಗವೊಂದನ್ನು ಅಪ್ಪನ ಕತ್ತಿಗೆ ಕಟ್ಟಿದ. ಅದನ್ನು ನೋಡಿ ನನಗೆ ರೇಗಿತು. “ಅದನ್ನು ಬಿಚ್ಟು ಈಗಲೇ ಬಿಚ್ಚು’ ಎಂದು ಅರಚಿದೆ. ಅದೇ ಹೊತ್ತಿಗೆ ದೊಡ್ಡಪ್ಪ ಕರೆದುಕೊಂಡು ಬಂದಿದ್ದ ತಮಟೆಯವರು ಜೋರಾಗಿ ಬಾರಿಸಲಾರಂಭಿಸಿದರು. ಸುತ್ತಮುತ್ತಲಿದ್ದವರೆಲ್ಲಾ ಜೋರಾಗಿ ಅಳುತ್ತಿದ್ದರು. ಆ ಗದ್ದಲದಲ್ಲಿ ನನ್ನ ಮಾತು ಕೇಳಿಸುವಂತಿರಲಿಲ್ಲ ಬೇಬಿಗೆ ರೇಗಿ ಹೋಯಿತು. “ತಮಟೆಯವರಿಗೆ ನಿಲ್ಲಿಸಲು ಹೇಳಿ” ಎಂದು ಚೀರಿದಳು. ಅವಳೊಂದಿಗೆ ಪ್ರಕಾಶ್ ರೈ ಕೂಡ ದನಿಗೂಡಿಸಿದ್ದರಿಂದ ತಕ್ಷಣವೇ ಅವರು ತಮ್ಮ ಅಬ್ಬರವನ್ನು ನಿಲ್ಲಿಸಿದರು. ಗುಂಡಿಯಲ್ಲಿದ್ದವ ಅಪ್ಪನಿಗೆ ತೊಡಿಸಿದ್ದ ಲಿಂಗವನ್ನು ತೆಗೆಯಲು ಮತ್ತೆ ಹೇಳಿದಾಗ ಆತನಿಗೆ ಕೇಳಿಸಿತು. ಬೇರೆ ದಾರಿ ಇಲ್ಲದೆ ಅದನ್ನವನು ಬಿಚ್ಚಿದ. ಜಾತಿ ಸಂಪ್ರದಾಯದ ಮಾತು ಬದಿಗಿರಲಿ, ಅಪ್ಪನ ಸಂಪ್ರದಾಯವನ್ನಂತು ನಾವು ಪಾಲಿಸಿದೆವು. ಅದು ಹೇಗೆಂದರೆ ಅಪ್ಪನ ಸಂಪ್ರದಾಯದಲ್ಲಿ ಅತ್ಯಗತ್ಯವಾಗಿದ್ದ ಪೇಪರ್ ಮತ್ತು ಪೆನ್, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ , ಒಂದು ಬ್ಲಾಕ್ ಲೇಬಲ್ ವಿಸ್ಕಿ ಬಾಟಲ್ ,ಕುದುರೆ ರೇಸ್ ಪುಸ್ತಕ, ಇಸ್ಪೀಟು ಕಾರ್ಡ್‍ಗಳು, ಕಾದಂಬರಿ ಇತ್ಯಾದಿಗಳನ್ನೆಲ್ಲ ಅವರೊಂದಿಗೆ ಬೀಳ್ಕೊಟ್ಟೆವು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....