Homeಮುಖಪುಟನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಒಂದು ಕಲೆ: ಅದರ ಬಗ್ಗೆ ನಿಮಗೆ ಗೊತ್ತೆ?

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ -10

ಮನಃಶಾಸ್ತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಕಲೆಯನ್ನು ಮಾನವನ ಅರಿವಿನ ಪ್ರಕ್ರಿಯೆ (ಕಾಗ್ನಿಟಿವ್ ಪ್ರೋಸೆಸ್) ಎಂದು ಗುರುತಿಸಲಾಗಿದೆ. ದಿನ ನಿತ್ಯದ ನಿರ್ಧಾರಗಳಲ್ಲಿ ನಾವು ಎದುರಿಸುವುದು ಗ್ರಾಹಕರಾಗಿ ತೆಗೆದುಕೊಳ್ಳಬೇಕಾದ ನಿರ್ಧಾರಗಳು, ವ್ಯಾಪಾರದ ನಿರ್ಧಾರಗಳು ಮತ್ತು ವೈಯುಕ್ತಿಕ ನಿರ್ಧಾರಗಳು. ವ್ಯಾಪಾರದ ನಿರ್ಧಾರ ಈ ಲೇಖನದ ಮುಖ್ಯ ಉದ್ದೇಶವಲ್ಲ, ಹಾಗಾಗಿ ನಾನು ಹೆಚ್ಚಾಗಿ ವೈಯುಕ್ತಿಕ ದೃಷ್ಟಿಕೋನದಿಂದ ನಿರ್ಧಾರ ಪ್ರಕ್ರಿಯ ಬಗ್ಗೆ ತಿಳಿಸಬಯಸುತ್ತೇನೆ. ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂರು ಮಹತ್ವದ ಅಂಶಗಳೆಂದರೆ:

ಅಪಾಯ (ರಿಸ್ಕ್): ಎಲ್ಲಾ ನಿರ್ಧಾರಗಳಲ್ಲಿಯೂ ಒಂದು ಪ್ರಮಾಣದ ಅಪಾಯ ಇದ್ದೇ ಇರುತ್ತದೆ. ಅಪಾಯವನ್ನು ಗುರುತಿಸಿ, ನಮಗೆ ಇರುವ ಉತ್ತಮ ದಾರಿಯನ್ನು ಹಿಡಿದು ಮುಂದೆ ಸಾಗಬೇಕು.

ಪರಿಣಾಮ: ಯಾವುದೇ ನಿರ್ಧಾರದ ಪರಿಣಾಮ ಹೀಗೆಯೇ ಆಗುತ್ತದೆ ಎಂದು 100% ಖಾತರಿಯಿಂದ ಹೇಳಲು ಬರುವುದಿಲ್ಲ. ಎಲ್ಲೋ ಒಂದು ಹೆಚ್ಚು-ಕಡಿಮೆ ಆಗಬಲ್ಲ ಅಂಶ ನಮ್ಮ ಊಹೆಗಿಂತ ಹೆಚ್ಚು ಮೇಲೆ-ಕೆಳಗೆ ಆಗಿರುವ ಸಾಧ್ಯತೆ ಇರುತ್ತದೆ. ಆದಷ್ಟು ಮಟ್ಟಿಗೆ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದರೆ ಅಥವಾ ದುಃಸ್ಥಿತಿಯಿಂದ ಪಾರಾಗಲು ಬೇಕಾದಷ್ಟು ಉಪಾಯಮಾರ್ಗಗಳನ್ನು ಕಂಡುಕೊಂಡಿದ್ದಲ್ಲಿ, ಬಂದ ಪರಿಣಾಮ ಎದುರಿಸಬಹುದು.

ಸಾಧ್ಯತೆ: ನಮ್ಮ ನಿರ್ಧಾರ ವಾಸ್ತವಿಕವೇ ಮತ್ತು ಅದನ್ನು ಜಾರಿಗೊಳಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಿರಬೇಕು. ಬೆಕ್ಕಿನ ಕತ್ತಿಗೆ ಗಂಟೆ ಕಟ್ಟುವ ಕೆಲಸ ಯಾರು ಮಾಡುವುದು ಎಂಬುದನ್ನು ತಿಳಿಯದೇ ನಿರ್ಧಾರ ಕೈಬಿಡುವಂತಾಗಬಾರದು.

ನಿರ್ಧಾರ ತೆಗೆದುಕೊಳ್ಳುವುದು ಅತ್ಯಂತ ಸ್ಪೂರ್ತಿದಾಯಕ ಅಥವಾ ಆತಂಕದ ಕೆಲಸವೂ ಆಗಿರಬಹುದು. ವ್ಯವಸ್ಥಿತ ಪ್ರಕ್ರಿಯೆ ಅನುಸರಿಸಿದಲ್ಲಿ ಈ ಭಾವನಾತ್ಮಕ ತಳಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಾಲೋಚನೆಯಿಂದ ಯಾವ ನಿರ್ಧಾರ ಸರಿಯಾಗುವುದು ಎನ್ನುವುದನ್ನು, ನಿಮ್ಮ ಸಮಯ ತೆಗೆದುಕೊಂಡು, ಅಥವಾ ಸಮಯವಿದ್ದಾಗಲೇ ಮನದಟ್ಟು ಮಾಡಿಕೊಳ್ಳಿ. ಈ ಕೆಲಸವನ್ನು ಮುಂದಕ್ಕೆ ಹಾಕಿ, ನಿಮ್ಮ ನಿರ್ಧಾರವನ್ನು ಕೊನೆಯ ಗಳಿಗೆಗೆ ಬಿಟ್ಟು, ಆತುರದ ನಿರ್ಧಾರ ತಪ್ಪಾಯಿತು ಎಂದು ಪೇಚಾಡಬೇಡಿ.

ಟಾಟಾ ಕಂಪನಿಯ ಮುಖ್ಯಸ್ಥ ಶ್ರೀ ರಟನ್ ಟಾಟಾ ಹೇಳಿಕೆ: “ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಸರಿಯಾದುದನ್ನಾಗಿ ಮಾಡುತ್ತೇನೆ”. ಅಂತಹ ಶಕ್ತಿ ನಿಮ್ಮಲ್ಲಿಯೂ ಇದ್ದರೆ ನೀವೂ ಸಹ ಹಾಗೇ ಮಾಡಬಹುದು. ನೀವು ತೆಗೆದುಕೊಂಡ ನಿರ್ಧಾರವನ್ನು “ಸರಿ” ಆಗುವಂತೆ ಇತರ ಅಂಶಗಳನ್ನು ನಿಯಂತ್ರಿಸುವುದು. ನೀವು ಮನೆಯಿಂದ ಹೊರಗೆ ಹೋಗುವಾಗ ಇಂದು ಮಳೆ ಬರುವುದಿಲ್ಲವೆಂದು ನಿರ್ಧರಿಸಿ, ಕೊಡೆ ತೆಗೆದುಕೊಂಡು ಹೋಗಲಿಲ್ಲ ಮತ್ತು ಮಳೆ ಬಂದಿತು ಎಂದಿಟ್ಟುಕೊಳ್ಳಿ. ಆಗ ಮಳೆಯಲ್ಲಿ ನೆನೆದುಕೊಂಡು ಹೋಗಿ ಅದನ್ನೇ ಹೊಸ ಫ್ಯಾಶನ್ ಎಂದು ಜನರಿಗೆ ತಿಳಿಸಿ. ಶಾರುಖ್ ಖಾನ್ ಅಥವಾ ದೀಪಿಕಾ ಮಾಡಿದರೆ ಜನ ನಂಬಬಹುದು, ನಾವು ನೀವು ಮಾಡಿದರೆ ಪೆದ್ದುತನ ಎನ್ನುತ್ತಾರೆ. ಇರಲಿ ಬಿಡಿ.

ಪ್ರತಿಯೊಬ್ಬರಿಗೂ ತಮ್ಮದೇ ಆದ ನಿರ್ಧಾರ ಕೈಗೊಳ್ಳುವ ರೀತಿ ಇರುತ್ತದೆ, ಉದಾ: ವ್ಯವಸ್ಥಾಪಕ, ವಿಮರ್ಶಾತ್ಮಕ, ಭಾವರೂಪಕ ಮತ್ತು ವರ್ತನೆಯ ಆಧಾರದ ಮೇಲೆ ಅವರು ತಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ರೀತಿಯೂ ಪರ್ಯಾಯ ಮಾರ್ಗಗಳನ್ನು ಹುಡುಕುವ, ಆರಿಸಿಕೊಳ್ಳುವ ವಿಧಾನಗಳು.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಮತ್ತು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಲವಾರು ಸಮಾನತೆಗಳಿದ್ದು, ಎರಡು ಪ್ರಕ್ರಿಯೆಯಲ್ಲೂ ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆಯ ಅವಶ್ಯಕತೆ ಇರುತ್ತದೆ. ಎರಡರಲ್ಲೂ ಒಂದೇ ತರಹದ ವಿಧಾನಗಳ ಬಳಕೆಯೂ ಪ್ರಯೋಜನಕ್ಕೆ ಬರುತ್ತದೆ.

ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥಿತ ವಿಧಾನ:
ಹೆಜ್ಜೆ 1: ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯನ್ನು ಗುರುತಿಸುವುದು: ಈ ಹೆಜ್ಜೆಯಲ್ಲಿ ಸಮಸ್ಯೆಯನ್ನು ಸರಿಯಾಗಿ ವಿಶ್ಲೇಷಿಸುವ ಸಲುವಾಗಿ ಕೆಲವು ಪ್ರಶ್ನೆಗಳನ್ನು ಕೇಳಬಹುದು, ಉದಾ:

ಸಮಸ್ಯೆ ಏನು? ಪರಿಹಾರ ಏಕೆ ಬೇಕಿದೆ? ಯಾರಿಗೆ ತೊಂದರೆ ಆಗಿದೆ? ಪರಿಹಾರ ಯಾವಾಗ ಬೇಕಿದೆ?

ಹೆಜ್ಜೆ 2: ಮಾಹಿತಿ ಕಲೆಹಾಕುವುದು: ಸಮಸ್ಯೆ ಹಲವರನ್ನು ಬಾಧಿಸುತ್ತಿರಬಹುದು ಮತ್ತು ಸಮಸ್ಯೆಗೆ ಹಲವಾರು ಕಾರಣವಿರಬಹುದು. ಆದರಿಂದ ಈ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಬೇಕಾಗುತ್ತದೆ. ಇದಕ್ಕೆ ಒಂದು “ಚೆಕ್-ಲಿಸ್ಟ್” ತಯಾರಿಸಿಕೊಳ್ಳುವುದು ಉತ್ತಮ. ಮಾಹಿತಿ ಸಮರ್ಪಕವಾಗಿದ್ದಷ್ಟೂ ಪರಿಹಾರವೂ ಸಮರ್ಪಕವಾಗಿರುತ್ತದೆ.

ಹೆಜ್ಜೆ 3: ಸಮಸ್ಯೆ ಪರಿಹಾರಕ್ಕೆ ಇರುವ ಉಪಾಯಗಳನ್ನು/ಮಾರ್ಗಗಳ ಅವಲೋಕನ” ಇದಕ್ಕೆ ಒಂದು ನಿರ್ದಿಷ್ಟ ಮಾನದಂಡ ನಿಗದಿ ಪಡಿಸಬೇಕು. ನಿಗದಿ ಪಡಿಸುವಾಗ ನಮಗೆ ಬೇಕಾದ ಪರಿಹಾರ, ಸಾಂಸ್ಕೃತಿಕ ಕಟ್ಟುಪಾಡು, ಮುಂತಾದವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲವನ್ನೂ ಲಾಭ-ನಷ್ಟದ ಕನ್ನಡಕದಿಂದ ನೋಡಲು ಬರುವುದಿಲ್ಲ.

ಹೆಜ್ಜೆ 4: ಹೊಸ ಮಾರ್ಗ/ಉಪಾಯಗಳ ಬಗ್ಗೆ ಚಿಂತನೆ: ತಿಳಿದಿರುವ ಉಪಾಯಗಳನ್ನು ಬಿಟ್ಟು ಇನ್ನೇನು ಮಾಡಬಹುದು ಎಂಬುದನ್ನು ಚಿಂತಿಸಿವುದು ಮತ್ತು ಅದರ ಪರಿಣಾಮ ಏನಾಗಬಹುದು ಎಂದು ಊಹಿಸುವುದು.

ಹೆಜ್ಜೆ 5: ಎಲ್ಲಾ ಉಪಾಯ/ಮಾರ್ಗಗಳ ಶಕ್ತಿ/ದುರ್ಬಲತೆ ತೂಗಿ ನೋಡುವುದು. ಅದರ ಆಧಾರದ ಮೇಲೆ ಬಳಸ ಬಹುದಾದ ಮಾರ್ಗ/ಉಪಾಯವನ್ನು ಅದರ ಉಪಯುಕ್ತತೆಯ ಮೇಲೆ ಒಂದು,ಎರಡು, ಮೂರು ಎಂದು ಪಟ್ಟಿ ಮಾಡುವುದು.

ಹೆಜ್ಜೆ 6: ಅತ್ಯಂತ ಉತ್ತಮವಾದುದನ್ನು ಆಯ್ದುಕೊಳ್ಳುವುದು. ಮೇಲಿನ ಪಟ್ಟಿಯಿಂದ ನಮಗೆ ಇದೇ ಸರಿಯಾದ ಆಯ್ಕೆ ಎನಿಸಿದ್ದನ್ನು ಆಯ್ದುಕೊಂಡು, ಅದಕ್ಕೆ ಬೇಕಾದ ಸಂಸಾಧನಗಳನ್ನು ಹೊಂದಿಸಿಕೊಳ್ಳುವುದು, ಯಾವ ಭಾಗ/ಕೆಲಸಕ್ಕೆ ಯಾರು ಜವಾಬ್ದಾರರು ಎಂಬುದನ್ನು ನಿಗದಿ ಪಡಿಸುವುದು, ಸಮಸ್ಯೆಯಿಂದ ಬಾಧಿತರಾದವರ ಮತ್ತು ಪರಿಹಾರ ನೀಡುವ ತಂಡದ ಜೊತೆ ಪರಿಹಾರ ಪ್ರಕ್ರಿಯೆಯ ಮಾಹಿತಿಯನ್ನು ಹಂಚಿಕೊಳ್ಳುವುದು.

ಹೆಜ್ಜೆ 7: ಯೋಜನೆಯನ್ನು ಜಾರಿಗೆ ತರುವುದು: ಈ ಹಂತದಲ್ಲಿ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗದೆ, ನಿರ್ಧಾರಿತ ಯೋಜನೆಯನ್ನು ನೀವೇ ಚಾಚೂತಪ್ಪದಂತೆ ಜಾರಿಗೊಳಿಸಬೇಕು. ಏನು ಮತ್ತು ಹೇಗೆ ನಡೆಯುತ್ತಿದೆ ಎಂಬ ಮೇಲುಸ್ತುವಾರಿ ಕೆಲಸ ಖಂಡಿತಾ ಮಾಡಬೇಕು.

ಹೆಜ್ಜೆ 8: ಬಂದ ಪರಿಣಾಮವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದು. ಇದರಿಂದ ಏನು ಕಲಿಯಬಹುದು ಅವನ್ನು ಗುರುತು ಹಾಕಿಕೊಂಡು, ಮುಂದಿನ ಬಾರಿಗೆ ಕೈಗೆಟುಕುವಂತೆ ಇಟ್ಟುಕೊಳ್ಳಬೇಕು.

ನಿರ್ಧಾರ ತೆಗೆದುಕೊಳ್ಳುವ ಮುಂಚೆ ಆಗಬಹುದಾದ ಧನಾತ್ಮಕ/ಋಣಾತ್ಮಕ ಅಂಶಗಳನ್ನು ತೂಗಿ ನೋಡಬೇಕು. ಇದರಿಂದ ಆಗಬಹುದಾದ ನಷ್ಟ ಎದುರಿಸಲು ಪೂರ್ವಸಿದ್ಧತೆಗೆ ಸಮಯ ಸಿಗುತ್ತದೆ. ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳದೇ ಇರುವುದೇ ಕ್ಷೇಮ, ಕಾಲಕ್ರಮೇಣ ಎಲ್ಲವೂ ಸರಿಹೋಗಬಹುದು ಎಂದು ಅನಿಸಬಹುದು. ಆದರೆ ಕಷ್ಟಕರ ನಿರ್ಧಾರ ತೆಗೆದುಕೊಂಡು, ಮುಂದೆ ಬಂದುದನ್ನು ಎದುರಿಸುವ ಕಲೆಯೇ ನಾಯಕತ್ವದ ನಿಜವಾದ ಲಕ್ಷಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...