Homeಕರ್ನಾಟಕಎಬಿವಿಪಿ ಪಾಪಿಗಳ ಅತ್ಯಾಚಾರ

ಎಬಿವಿಪಿ ಪಾಪಿಗಳ ಅತ್ಯಾಚಾರ

- Advertisement -
- Advertisement -

| ನಹುಷ |

ಅಲ್ಲೊಂದು ಅತ್ಯಾಚಾರವಾಗಿದೆ! ವಿಪರ್ಯಾಸೆವೆಂದರೆ ಈ ಅತ್ಯಾಚಾರ ಪ್ರಕರಣದಲ್ಲಿ ಹುಡುಗಿಯ ಶೀಲಹರಣ ಮಾಡಿ, ಅದನ್ನು ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡವರು ಅಮಾಯಕರು!! ಅತ್ಯಾಚಾರಕ್ಕೆ ತುತ್ತಾದ ಸಂತ್ರಸ್ತೆಯೇ ತಪ್ಪಿತಸ್ಥಳು!!! ಹೀನ ಚರಿತ್ರೆಯವಳು!!!! ಇಂಥಾ ಅಸಹ್ಯದ ವಾದ ತೇಲಿಬರಲು ಕಾರಣ, ಅತ್ಯಾಚಾರ ಮಾಡಿದವರೆಲ್ಲ ಕೇಸರಿ ಕಾಲೇಜುಪಡೆ ಎಬಿವಿಪಿಯ ಕಾಲಾಳುಗಳು!!!!! ಬಿಜೆಪಿ ಶಾಸಕರ ಕೃಪಾಕಟಾಕ್ಷವಿರುವ (ಹೆಗಲುಮೇಲೆ ಕೈಹಾಕಿಕೊಂಡು ತೆಗೆಸಿರುವ ಫೋಟೊಗಳೇ ಸಾಕ್ಷಿ) ರಾಷ್ಟ್ರಪ್ರೇಮಿಗಳು!!!!!!

`ಏನ್ರಯ್ಯಾ ಇದೆಲ್ಲ, ಒಬ್ಬ ಅಸಹಾಯಕ ಹೆಣ್ಣುಮಗಳನ್ನು ನಾಲ್ಕೈದು ಜನ ಒಟ್ಟೊಟ್ಟಿಗೆ ಹರಿದು ಮುಕ್ಕೋ ಸಂಸ್ಕೃತಿಯನ್ನಾ ನೀವು ಯುವಕರಿಗೆ ಕಲಿಸ್ತಾ ಇರೋದು? ಇದೇನಾ ನೀವು ಪಠಿಸೋ ಸಂಸ್ಕಾರ?’ ಅಂತ ಕೇಳಿದರೆ `ನೋ, ಇದ್ರಲ್ಲಿ ಹಸಿರು, ಕೇಸರಿ ಎಳೆದು ತರಬೇಡಿ’ ಅನ್ನೋ ಫರ್ಮಾನು ಹೊರಬರುತ್ತೆ. ಇಂಥಾ ಫರ್ಮಾನು ಹೊರಡಿಸೋರು ಯಾರು ಗೊತ್ತಾ? ಉಜಿರೆಯ ಸೌಜನ್ಯಾ ಕಾಮುಕರಿಗೆ ಬಲಿಯಾಗಿ ಕಾಡು ಹೆಣವಾದಾಗ `ಧರ್ಮಾತ್ಮ’ರ ವಿರೋಧ ಕಟ್ಟಿಕೊಳ್ಳಲು ಇಷ್ಟವಿಲ್ಲದೆ ತೆಪ್ಪಗಿದ್ದು; ತೀರ್ಥಹಳ್ಳಿ ಹುಡುಗಿ ತಾನೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಾಗ `ಸಾಬರ ಹುಡುಗರೇ ಕಿಡ್ನಾಪ್ ಮಾಡಿ, ರೇಪ್ ಮಾಡಿ ವಿಷ ಕುಡಿಸಿದ್ದಾರೆ’ ಅಂತ ಅರಚಾಡಿ ಇಡೀ ಕರ್ನಾಟಕಕ್ಕೇ ಬೆಂಕಿ ಹಚ್ಚೋ ಪರಾಕ್ರಮ ತೋರಿದ ಅದೇ ಕೇಸರಿ ವೀರರು!

ಉನ್ನಾವೊ, ಕಥುವಾಗಳನ್ನು ನಮ್ಮ ಹೆಮ್ಮೆ ಎಂದು ಭಾವಿಸುವ; ಒಬ್ಬೊಬ್ಬ ಮುಸ್ಲಿಂ ಹೆಂಗಸನ್ನೂ ಹತ್ತತ್ತು ಮಂದಿ ಹಿಂದೂ ಗಂಡಸರು ನಡುರಸ್ತೆಯಲ್ಲೆ ರೇಪ್ ಮಾಡಬೇಕು ಎಂದು ಒಬ್ಬ ಹೆಂಗಸಿನಿಂದಲೇ ಹೇಳಿಸುವಷ್ಟು ವಿಷ ಪರಂಪರೆಯವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ.

ಇದೆಲ್ಲವನ್ನೂ ಬದಿಗೊತ್ತಿ, ಒಂದು ಕ್ರೈಮ್ ಆಗಿ ಪುತ್ತೂರು ಪ್ರಕರಣವನ್ನು ಅಗೆಯಲು ಮುಂದಾದರೂ ಹಲವಾರು ಅಚ್ಚರಿಗಳು, ಅಸಹ್ಯಕರ ಹುನ್ನಾರಗಳು, ಆಘಾತಕಾರಿ ಭವಿಷ್ಯದ ಮುನ್ನುಡಿಗಳು ತೆರೆದುಕೊಳ್ಳುತ್ತವೆ.

ಕಲ್ಲಡ್ಕ ಭಟ್ಟರ ಕಾಲೇಜೆ ನಿಗೂಢ

   ಎಲ್ಲವೂ ಶುರುವಾಗುವುದು ಇಡೀ ಘಟನೆಯ ಕೇಂದ್ರಬಿಂಧುವಾದ ಪುತ್ತೂರಿನ ವಿವೇಕಾನಂದ ಕಾಲೇಜಿನಿಂದ. ಅದು ಮತೋನ್ಮತ್ತ ಕೋಮುವಾದದ ಬ್ರೈನ್ ವಾಶಿಂಗ್ ಸೆಂಟರ್; ಕೇಸರಿ ಕತ್ತಿವರಸೆಯ ತರಬೇತಿಗೆ ಗರಡಿಮನೆ! ಚೆಡ್ಡಿ ಚಮತ್ಕಾರದ ಎಬಿವಿಪಿ ಸಂಘಟನೆ ಬಿಟ್ಟರೆ ಉಳಿದ್ಯಾವ ವಿದ್ಯಾರ್ಥಿ ಒಕ್ಕೂಟಕ್ಕೂ ಈ ಕಾಲೇಜಿನಲ್ಲಿ ಅವಕಾಶ ಸಿಗಲಾರದು. ಯಾಕೆಂದರೆ ಅದರ ದೇಖಾರೇಖಿ ನೋಡಿಕೊಳ್ಳುತ್ತಿರೋದು ಕರಾವಳಿಯ ಸಂಘಿ ಅಂಗಪಡೆಗಳ ತೆರೆಮರೆಯ ರಿಂಗ್‍ಮಾಸ್ಟರ್ ಕಲ್ಲಡ್ಕ ಪ್ರಭಾಕರ ಭಟ್!

ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಆರೋಪಗಳನ್ನು ಪರಿಗಣಿಸುವುದಾದರೆ ಇಡೀ ಕಾಲೇಜಿನ ಚಟುವಟಿಕೆಗಳೇ ನಿಗೂಢವೆನಿಸುತ್ತವೆ. ಯಾಕೆಂದರೆ ಕಳೆದ ಮುರ್ನಾಲ್ಕು ವರ್ಷಗಳಿಂದ ಎಬಿವಿಪಿ ಸಂಘಟನೆಯ ಜೊತೆಗೆ ಒಡನಾಟವಿದ್ದ ಏನಿಲ್ಲವೆಂದರು ನಾಲ್ಕೈದು ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಆ ಸಾವುಗಳ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಶಕುಂತಲಾ ಒತ್ತಾಯಿಸುತ್ತಿದ್ದಾರೆ.

ಅಂದರೆ ಕೇಸರಿ ಕರಾಮತ್ತೇ ತೇಲಾಡುವ ಕಲ್ಲಡ್ಕ ಪ್ರಭಾಕರ ಭಟ್ಟರ ಕಾಲೇಜಿನಲ್ಲಿ ಹುಡುಗಿಯರಿಗೆ ಏನಾಗುತ್ತಿದೆ? ಬಿಜೆಪಿ ಪೊಲಿಟಿಕಲ್ ಪ್ರಭಾವ ಇದೆ ಎಂದು ಆ ಕಾಲೇಜಿನ ಹುಡುಗರು ಪುಂಡರಾಗುತ್ತಿದ್ದಾರಾ? ಈ ಪ್ರಶ್ನೆಗಳಿಗೆಲ್ಲ ಪ್ರಸ್ತುತ ರೇಪ್ ಕೇಸು ಉತ್ತರವಾಗುವ ಸಾಧ್ಯತೆ ಇದೆ.

ರೇಪಿಸ್ಟ್ ಹುಡುಗರೆಲ್ಲರೂ ಎಬಿವಿಪಿಯಲ್ಲಿ ಪಳಗಿದವರು; ಸಂತ್ರಸ್ತೆಯೂ ಇದೇ ಕೇಸರಿ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವಳೇ. ಸ್ನೇಹ-ಸಲಿಗೆಯಲ್ಲಿ ಒಡನಾಡುತ್ತಿದ್ದವರು. ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಹುಡುಗಿಯ ತಾಯಿ ಬಿಜೆಪಿಯ ಗ್ರಾಪಂ ಸದಸ್ಯೆ, ಅಪ್ಪ ಬಿಜೆಪಿ ಕಾರ್ಯಕರ್ತ! ಗುರುನಂದನ್ ರಾಧಾಕೃಷ್ಣ, ಪ್ರಜ್ವಲ್ ನಾಯ್ಕ್, ಸುನಿಲ್ ಗೌಡ, ಪ್ರಖ್ಯಾತ್ ಶೆಟ್ಟಿ ಮತ್ತು ಕಿಶನ್ ಹುಡುಗಿಯ ಮುಗ್ಧತೆ, ಬಡತನ ಬಳಸಿಕೊಂಡು ತೀಟೆ ತೀರಿಸಿಕೊಳ್ಳಲು ಹವಣಿಸುತ್ತಿದ್ದುದು ಇಡೀ ಕಾಲೇಜಿಗೇ ಗೊತ್ತಿತ್ತು.

ಕಳೆದ ಏಪ್ರಿಲ್ 3ರಂದು ಸಹಪಾಠಿ ಹುಡುಗಿಯ ಹರಿದು ಮುಕ್ಕಲು ಈ ಪಂಚ ಪಾತಕಿಗಳು ಮುಹೂರ್ತವಿಟ್ಟಿದ್ದಾರೆ. ಅಂದು ಆಕೆ ಮಧ್ಯಾಹ್ನ 3:30ರ ಹೊತ್ತಿಗೆ ಕ್ಲಾಸು ಮುಗಿಸಿ ಮನೆಗೆ ಹೋಗುವ ಬಸ್ ಹಿಡಿಯಲು ಸ್ಟ್ಯಾಂಡಿಗೆ ಹೋಗಿದ್ದಾಳೆ. ಅದೇಹೊತ್ತಿಗೆ ಸ್ಥಿತಿವಂತ ಬ್ರಾಹ್ಮಣ ಕುಟುಂಬದ ಗುರುನಂದನ್ ತನ್ನ ಸ್ಕೋಡಾ ಕಾರಲ್ಲಿ ಪೋಲಿ ಗ್ಯಾಂಗಿನೊಂದಿಗೆ ಬಂದಿದ್ದಾನೆ. ಸುನಿಲ್ ಗೌಡ ಹುಡುಗಿ ಹತ್ತಿರ ಹೋಗಿ ನಿನ್ನೊಂದಿಗೆ ಗೆಳೆಯರಿಗೆ ಮಾತಾಡಲಿಕ್ಕಿದೆ ಎಂದು ಕಾರು ಹತ್ತಿಸಿದ್ದಾನೆ. ಗುರುನಂದನ್ ಕಾರು ಚಲಾಯಿಸಿದರೆ ಬಂಟ್ವಾಳದ ಪ್ರಖ್ಯಾತ, ಪ್ರಜ್ವಲ್ ಮತ್ತು ಕಿಶನ್ ಮೊದಲೇ ಕಾರಲ್ಲಿದ್ದರು. ಕಾರು ಊರು ಬಿಟ್ಟು ಪುತ್ತೂರು-ಉಪ್ಪಿನಂಗಡಿ ನಡುವಿನ ಕಡಾರ ಎಂಬ ಹಳ್ಳಿಯ ಗುಡ್ಡ-ಪೊದೆ-ಮರಗಳಿಂದ ಆವೃತವಾದ ನಿರ್ಜನ ಪ್ರದೇಶದತ್ತ ಹೊರಳಿದಾಗ ಹುಡುಗಿ ಕಂಗಾಲಾಗಿದ್ದಾಳೆ. ಕೂಗುತ್ತ ಕೊಸರಾಡಿದ್ದಾಳೆ. ಆಗ ಪುಂಡರು ಆಕೆಯ ಬಾಯಿ ಬಿಗಿಯಾಗಿ ಹಿಡಿದು ಸದ್ದು ಮಾಡದಂತೆ ತಡೆದಿದ್ದಾರೆ.

ಗುಡ್ಡದ ಮರೆಗೆ ಹುಡುಗಿಯನ್ನು ಕರೆದೊಯ್ದು ತಮ್ಮ ವಿಕೃತ ಕೆಲಸಕ್ಕೆ ಮುಂದಾಗಿದ್ದರು. ಹುಡುಗಿಗೆ ಮೊದಲೇ ಮತ್ತಿನ ಔಷಧಿ ಕೊಟ್ಟಿದ್ದರು ಹಾಗಾಗಿ ಆಕೆ ಪ್ರತಿರೋಧ ತೋರಿಲ್ಲ ಎಂದು ಕೆಲವರು ವಾದಿಸಿದರೆ, ಹುಡುಗಿಯ ಮೇಲೇ ಅಪವಾದ ಹೊರಿಸುತ್ತಿರುವ ಸಂಘಿಗಳು `ಆಕೆಗದು ಸಮ್ಮತಿಯಿತ್ತು. ಹಾಗಾಗಿಯೇ ಪ್ರತಿರೋಧ ತೋರದೆ ಸುಮ್ಮನಿದ್ದಾಳೆ’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಹುಡುಗಿಯನ್ನು ಹತ್ತಿರದಿಂದ ಬಲ್ಲವರು ಕೇಳಿತಿಳಿದುಕೊಂಡು ಹೇಳುವ ಪ್ರಕಾರ ಇವೆರಡೂ ಸುಳ್ಳು! ತಮ್ಮ ಅತ್ಯಾಚಾರಕ್ಕೆ ಬಳಸಿಕೊಳ್ಳುವ ಮುನ್ನವೇ ಆಕೆಯ ಮೇಲೆ ದೈಹಿಕವಾಗಿ ಹೊಡೆದು ಹಲ್ಲೆ ಮಾಡಿದ್ದರು. ಐವರು ಹುಡುಗರ ಹಿಂಸೆಗೆ ಆಕೆ ನಿತ್ರಾಣಳಾಗಿ ಹೋಗಿದ್ದ ಹುಡುಗಿ ಪ್ರತಿರೋಧ ತೋರುವುದಕ್ಕೂ ಶಕ್ತಿಯಿಲ್ಲದೆ ಬಿದ್ದುಕೊಂಡಿರೋದು ಇಂಥಾ ಊಹಾಪೋಹಗಳು ಹುಟ್ಟಲು ಕಾರಣ ಎನ್ನಲಾಗುತ್ತಿದೆ.

ಈ ಕಡುಕೆಟ್ಟ ಮದನ ಮಸ್ತಿಯನ್ನು ಕಲಾತ್ಮಕವಾಗಿ ಶೂಟ್ ಮಾಡಿದ್ದು ಸುನಿಲ್ ಗೌಡ! ಗೆಳೆಯರ ಮತ್ತು ಅಸಹಾಯಕ ಹುಡುಗಿಯ ಮುಖ, ದೇಹ ಸ್ಪಷ್ಟವಾಗಿ ಗೋಚರಿಸುವ ಹಾಗೆ ವಿಡಿಯೋ ಮಾಡಿದ್ದಾನೆ. ಬಲಾತ್ಕಾರದಿಂದ ಬಳಲಿದ ಹುಡುಗಿ ಪ್ರತಿಭಟಿಸಲಿಕ್ಕೂ ಆಗದಷ್ಟು ಪ್ರಜ್ಞೆತಪ್ಪಿ ಬಿದ್ದುಕೊಂಡಿದ್ದಾಳೆ.

ಈ ಪಂಚ ಪಾಪಿಗಳು ಪಕ್ಕಾ ಕ್ರಿಮಿನಲ್ ಐಡಿಯಾದವರು. ಆಕೆ ತಮ್ಮ “ಸಾಹಸ”ದ ಬಗ್ಗೆ ಎಲ್ಲಿಯೂ ಸೊಲ್ಲೆತ್ತದಂತೆ ಮಾಡಲು ಮತ್ತು ಮುಂದೆ ಬ್ಲಾಕ್ ಮೇಲ್ ಮಾಡಿ ಬಳಸಿಕೊಳ್ಳಲು ದುರುದ್ದೇಶದಿಂದಲೇ ಅತ್ಯಾಚಾರದ ಶೂಟ್ ಮಾಡಿದ್ದಾರೆ. ಘಟನೆ ಬಗ್ಗೆ ಬಾಯಿಬಿಟ್ಟರೆ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹಾಕಿ ನಿನ್ನ ಮಾನ ಹರಜು ಹಾಕುತ್ತೇವೆಂದು ಆಕೆಗೆ ಹೆದರಿಸಿದ್ದಾರೆ.

ಯಾವ ಅಳುಕು-ನಾಚಿಕೆ-ನೈತಿಕ ಪ್ರಜ್ಞೆಯಿಲ್ಲದೆ ಹಾಡುಹಗಲೇ ರೇಪ್ ಮಾಡಿರುವ ಬಂಟ್ವಾಳ ಮೂಲದ ರೇಪಿಸ್ಟ್‍ಗಳು ಅಲ್ಲಿಯ ಬಿಜೆಪಿ ಶಾಸಕ ರಾಜೇಶ್ ನಾಯ್ಕ್‍ಗೆ ಅತ್ಯಾಪ್ತರು. ಕೇಸರಿ ಶಾಲು ಹಾಕಿಕೊಂಡು ಶಾಸಕ ರಾಜೇಶ್ ಜತೆ ತಾನಿರುವ ಫೋಟೋ ಪ್ರಜ್ವಲ್ ಫೇಸ್ಬುಕ್ಕಿಗು ಹಾಕಿಕೊಂಡಿದ್ದಾನೆ. ಈ ಕೇಸರಿ ಇಮೇಜೇ ಹುಡುಗಿ ಹೆತ್ತವರಿಗೆ ಪೊಲೀಸ್ ಕಂಪ್ಲೇಟು ಕೊಡದಂತೆ ತಡೆದಿದೆ! ರಾಜಕೀಯ ಬಲ, ಧನ ಬಲದ ಆರೋಪಿಗಳ ತಂಟೆಗೆ ಹೋದರೆ ಕೇಸ್ ಉಲ್ಟಾ ಆಗುವ ಭಯದಲ್ಲಿ, ಮುಖ್ಯವಾಗಿ ಹುಡುಗಿಯ ಭವಿಷ್ಯದ ಹಿತದೃಷ್ಟಿಯಿಂದ ಹೆತ್ತವರು ಹಿಂಜರಿದಿದ್ದಾರೆ.

ಪುತ್ತೂರು ಅತ್ಯಾಚಾರ ಪ್ರಕರಣದಲ್ಲಿ ಗಮನಿಸಬೇಕಾದ ಮುಖ್ಯಸಂಗತಿ ಒಂದಿದೆ. ಅದೆಂದರೆ, ಸಂಘಪರಿವಾರದ ಶ್ರೀರಕ್ಷೆ, ಆರೆಸೆಸ್‍ನ ದೊಡ್ಡವರ ಆಶೀರ್ವಾದ, ಶಾಸಕರಂಥವರ ಸಖ್ಯದಿಂದ ಏನು ಬೇಕಿದ್ದರೂ ಮಾಡಿ ದಕ್ಕಿಸಿಕೊಳ್ಳಬಲ್ಲೆವೆಂಬ ದಾಷ್ಟ್ರ್ಯ ಕರಾವಳಿ ಯುವಕರನ್ನು ಅಡ್ಡದಾರಿ ಹಿಡಿಸುತ್ತಿದೆ. ಕೇಸರಿ ಶಾಲು ಹಾಕಿಕೊಂಡು, ಹಣೆತುಂಬ ಉದ್ದ ಕುಂಕುಮದ ನಾಮ ಹಾಕಿಕೊಂಡರೆ ಬಾರ್ ಖೂನ್ ಮಾಫ್ ಎಂಬಂಥ ಪರಿಸ್ಥಿತಿ ಕರಾವಳಿಯಲ್ಲಿದೆ! ಹಾಗಾಗಿ ಪುತ್ತೂರು ರೇಪ್ ಹೊರಗೆ ಬರಲೇ ಇಲ್ಲ, ಘಟನೆ ನಡೆದು ಬರೋಬ್ಬರಿ ನಾಲ್ಕು ತಿಂಗಳು ಕಳೆದರೂ! ಆದರೆ ಕಳೆದ ಬುಧವಾರ (3-7-2019) ನಸುಕು ಹರಿಯುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಆ ಅತ್ಯಾಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಆಸ್ಫೋಟಿಸಿಬಿಟ್ಟಿತ್ತು! ದೇಶ ರಕ್ಷಣ-ಧರ್ಮ ರಕ್ಷಣೆಯ ಗುತ್ತಿಗೆ ಹಿಡಿದವರ ಎಬಿವಿಪಿಯ ವಿದ್ಯಾರ್ಥಿಗಳು ಮಾಡಿದ ಹೇಯ-ಬರ್ಬರ-ಅಮಾನುಷ “ಆಟ” ಕಂಡ ಪುತ್ತೂರಿನ ಮಂದಿಯಷ್ಟೇ ಅಲ್ಲ, ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತು!

ಹೊರಬಂದದ್ದು ಎಬಿವಿಪಿಯೊಳಗಿನ ದಾಯಾದಿ ಮತ್ಸರದಿಂದ

ಎಬಿವಿಪಿ ವಿದ್ಯಾರ್ಥಿಗಳ ಲೈಂಗಿಕ ಹಿಂಸಾವಿನೋದ ಹಠಾತ್ ಸಮಾಧಿಯಿಂದ ಎದ್ದು ಕುಣಿದದ್ದು ಕುತೂಹಲಕಾರವಾಗಿದೆ. ಬಂಟ್ವಾಳದ ಪ್ರಖ್ಯಾತ ಶೆಟ್ಟಿ ತಾನು ಹಾಗೂ ತನ್ನ ವಿಕೃತ ಕಾಮಿ ಮಿತ್ರರು ಮಾರ್ಚ್‍ನಲ್ಲಿ ಮಾಡಿದ್ದ ಸರ್ಕಸ್ ವಿಡಿಯೋ ಮೊಬೈಲ್‍ನ ಆ್ಯಪ್‍ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಇದನ್ನು ಮೋಹಿತ್ ಎಂಬ ವಿದ್ಯಾರ್ಥಿ ತನ್ನ ಮೊಬೈಲ್‍ಗೆ ಡೌನ್‍ಲೋಡ್ ಮಾಡಿಕೊಂಡಿದ್ದ. ಈಚೆಗೆ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಯೂನಿಯನ್ ಇಲೆಕ್ಷನ್ ನಡೆದಾಗ ಎಬಿವಿಪಿ ಎರಡು ಗ್ಯಾಂಗಾಗಿ ಒಡೆದು ಹೋಗಿತ್ತು. ಒಂದು ಗ್ಯಾಂಗಿನಲ್ಲಿ ರೇಪಿಸ್ಟ್ ಬಾಯ್‍ಗಳಿದ್ದರು. ಇವರ ಬಣ್ಣ ಬಯಲಾಗಿಸಿ ಸೋಲಿಸಲು ಎದುರಾಳಿಗಳು ವಿಡಿಯೋ ಅಸ್ತ್ರ ಪ್ರಯೋಗಿಸಿದ್ದಾರೆ. ಶ್ರೇಯಾನ್ಸ್ ಎಂಬ ಹುಡುಗ ಸೇಡಿನ ಭರದಲ್ಲಿ ಹಿಂದೆ ಮುಂದೆ ನೋಡದೆ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ! ಇದು ನೋಡುನೋಡುತ್ತಿದ್ದಂತೆಯೇ ದಶದಿಕ್ಕಿಗೆ ಹಬ್ಬಿತು. ಪೊಲೀಸರಿಗೆ ತಲೆ ಬಿಸಿಯಾಯಿತು. ಹುಡುಗಿಯ ಮಾನದ ಪ್ರಶ್ನೆ ಎದುರಾಯಿತು. ಆಕೆ ಅನಿವಾರ್ಯವಾಗಿ ಕಂಪ್ಲೇಂಟು ಕೊಡಬೇಕಾಗಿ ಬಂತು.

ಎಬಿವಿಪಿ ಪುಂಡರ ಪಟಾಲಮ್ಮಿನ ಚರ್ಬಿ ಸಿನಿಮಾ ಎಲ್ಲೆಡೆ ಪ್ರಸಾರವಾದರೂ ರೇಪಿಸ್ಟ್‍ಗಳು ಮಾತ್ರ ಏನೂ ಆಗಿಲ್ಲ ಎಂಬಂತೆ ನಿರಾತಂಕವಾಗಿದ್ದರು. ತಮ್ಮ ಬೆನ್ನಿಗೆ ಎರಡೆರಡು ಎಮ್ಮೆಲ್ಲೆಗಳಿದ್ದಾರೆಂಬ ಸೊಕ್ಕಿನಲ್ಲಿ ಆರಾಮಾಗಿದ್ದರು. ಆದರೆ ನೇರ ಕಾಲೇಜಿಗೆ ಬಂದ ಎಸ್ಪಿ ತಂಡ ಕೇಸರಿ ಕಾಮುಕರೈವರನ್ನು ಎತ್ಹಾಕಿಕೊಂಡು ಹೋಯಿತು. ಗಡಿಬಿಡಿಗೆ ಬಿದ್ದ ಸಂಘಿ ಮ್ಯಾನೇಜ್‍ಮೆಂಟ್ ಆ ಹುಡುಗರನ್ನು ಕಾಲೇಜಿಂದ ಡಿಬಾರ್ ಮಾಡಿ ತಲೆತಪ್ಪಿಸಿಕೊಳ್ಳಲು ಹವಣಿಸಿತು. ಅತ್ಯಾಚಾರಿಗಳು ಎಬಿವಿಪಿ ಮತ್ತು ಕೌಬಾಯ್ ಪಡೆಯ ಪ್ರಚಂಡರೆಂಬ ಸತ್ಯ ಸಾಕ್ಷಾತ್ಕಾರ ಆಗುತ್ತಲೇ ಸಂಘಪರಿವಾರದ ಬೈಠಕ್‍ನಲ್ಲೂ ಚಡಪಡಿಕೆ ಶುರುವಾಗಿದೆ.

ಎಬಿವಿಪಿ ತಕ್ಷಣ ಹೇಳಿಕೆ ಒಗಾಯಿಸಿ ಕೈ ತೊಳೆದುಕೊಳ್ಳಲು ತಿಣುಕಾಡಿದೆ. ಅತ್ಯಾಚಾರಿಗಳು ಎಬಿವಿಪಿಯವರಲ್ಲ; ಕೇಸರಿ ಶಾಲು ಹಾಕಿದಾಕ್ಷಣ ಸಂಘಿ ಆಗಲು ಸಾಧ್ಯವಿಲ್ಲ ಎಂದಿರುವ ಸಂಘಿ ಸರದಾರರು ಮಡಿವಂತಿಕೆ ಪ್ರಹಸನ ನಡೆಸಿದ್ದಾರೆ. ಆರೆಸ್ಸೆಸ್‍ನವರು ಎಷ್ಟೇ ತಿಪ್ಪರಲಾಗ ಹಾಕಿದರೂ ರೇಪಿಸ್ಟ್‍ಗಳು ಅವರದೇ “ಸಂಸ್ಕøತಿ”ಯಲ್ಲಿ ತರಬೇತಾದವರು, ಕೋಮುವಾದದ ಅಡ್ಡೆಯಂತಿರುವ ಕಾಲೇಜಲ್ಲಿ ಕಲಿಯುತ್ತಿರುವವರೆಂಬುದು ಮಾತ್ರ ಮರೆಮಾಚಲು ಸಾಧ್ಯವಾಗುತ್ತಿಲ್ಲ.
ಸಾಮೂಹಿಕ ಅತ್ಯಾಚಾರ ಮಾಡಿದವರು ಆರೆಸೆಸ್ ಶಾಖೆಗಳಲ್ಲಿ ದೀಕ್ಷೆ ಪಡೆದವವರು, ಸ್ವಯಂಘೋಷಿತ ಗೋರಕ್ಷಕರು-ಹಿಂದೂ ಹೆಣ್ಣಿನ ಮಾನ ಕಾಪಾಡುವವರು ಮತ್ತು ಬಿಜೆಪಿ ಶಾಸಕರ ಸಹಚರರೆಂಬ ವಾಸ್ತವ ಬಿಜೆಪಿ ಪರಿವಾರದ ಅಂಡನ್ನೀಗ ಸುಡತೊಡಗಿದೆ. ಸಿಕ್ಕಿಬಿದ್ದಾಗ ಉದಾತ್ತತೆ, ನಾಗರಿಕ-ಶಿಷ್ಟಾಚಾರ, ಮನುಷ್ಯತ್ವ, ಧರ್ಮಾತೀತತೆ, ಜಾತ್ಯತೀತತೆ ಪ್ರವಚನ ಬಿಗಿಯುವ ತಂತ್ರಗಾರಿಕೆ ಸಂಘಪರಿವಾರ ಶಾಸ್ತ್ರೋಕ್ತವಾಗಿ ಮಾಡುತ್ತಲೇ ಬಂದಿದೆ. ಈಗ ಮತ್ತದೇ ವರಸೆಗೆ ಇಳಿದಿದೆ.

ಪುತ್ತೂರು ರೇಪ್ ವಿಷಯದಲ್ಲಿ ಜಾತಿ ತರಬೇಡಿ, ಧರ್ಮ ತರಬೇಡಿ, ಕೇಸರಿ ತರಬೇಡಿ, ಹಸಿರು ತರಬೇಡಿ ಎಂದೆಲ್ಲ ವೇದಾಂತ ಸಂಘಿ ಸಿಂಪಥೈಸರ್‍ಗಳು ಅಲವತ್ತುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುಳಿತು ಗೊಳೋ ಎಂದು ಅಳುತ್ತಿದ್ದಾರೆ. ಆದರೆ ಈ ಮಂದಿಯೆಲ್ಲ ದಕ್ಷಿಣ ಕನ್ನಡದ ಸಣ್ಣಪುಟ್ಟ ಜಗಳದಲ್ಲಿ ಹಸಿರು ಎಳೆದು ತಂದವರು; ಕೇಸರಿ ಕಿಡಿ ಹೊತ್ತಿಸಿದವರು. ಶೂದ್ರ ಕಾಲಾಳುಗಳನ್ನು ಹಿಂದೂತ್ವ ಯುದ್ಧಕ್ಕೆ ಛೂಬಿಟ್ಟು ಚಂದ ನೋಡಿದವರು. ಸಮಾಜಕ್ಕೆ ಧರ್ಮದ ಬೆಂಕಿಹಾಕಿ ಮೈ ಕಾಯಿಸಿಕೊಂಡವರು!

ಪುತ್ತೂರಿನ ಪ್ರಕರಣಕ್ಕೆ ಅನ್ವಯಿಸುತ್ತಿರುವ ನೀತಿ ಸಂಘಪರಿವಾರದ ಪರಾಕ್ರಮಿಗಳ ಹಿಂದೆಲ್ಲ ಕರಾವಳಿಯಲ್ಲಿ ನಡೆದ ಅನೈತಿಕ ಪೊಲೀಸ್‍ಗಿರಿ ಘಟನೆ ಹೊತ್ತಲ್ಲಿ ನೆನಪಾಗಲಿಲ್ಲವೇ? ಇದೇ ಆದರ್ಶದ ಮಾನಸಿಕತೆ ಕರಾವಳಿಯ ಪ್ರತಿಯೊಂದು ಘಟನೆಯಲ್ಲೂ ಇದ್ದಿದ್ದರೆ ಪುತ್ತೂರಿನ ರೇಪ್ ರಾದ್ದಾಂತ ಆಗುತ್ತಲೇ ಇರಲಿಲ್ಲ. ಇವತ್ತು ಪುತ್ತೂರಿನ ರೇಪಿಸ್ಟ್‍ಗಳಿಗೆ ಅಮಾಯಕ ಹುಡುಗಿಯೊಬ್ಬಳ ಅತ್ಯಾಚಾರ ನಡೆಸಿ ಅದನ್ನು ವಿಡಿಯೋ ಮಾಡಿಟ್ಟುಕೊಳ್ಳುವಂಥ ರಾಕ್ಷಸ ಪ್ರವೃತ್ತಿ ಕ್ರಿಮಿನಲ್ ಬುದ್ದಿಬಂದಿರುವುದೇ ಹುಚ್ಚು ಕೇಸರೀಕರಣದಿಂದಲ್ಲವಾ? ಅಕಸ್ಮಾತ್ ಎಬಿವಿಪಿ ಹುಡುಗರಿರುವ ಜಾಗೆಯಲ್ಲಿ ಸಾಬರ ಹುಡುಗರಿದ್ದಿದ್ದರೆ ಇಷ್ಟೇ ಉದಾರತೆಯಿಂದ ಸಂಘಿಗಳು ನೋಡುತ್ತಿದ್ದರಾ? ಹಿಂದೂ ಹುಡುಗರೇ ರೇಪ್ ಮಾಡುವಾಗ ಆಕೆ ಸತ್ತೇಹೋಗಿದ್ದರೆ ಅನಾಥ ಹೆಣಕ್ಕೆ ಸಾಬರೇ ಕಾರಣ ಎಂಬ ಸುದ್ದಿ ಹಬ್ಬಿಸಿ ದೊಂಬಿ ಎಬ್ಬಿಸುತ್ತಿರಲಿಲ್ಲವಾ? ಅದರಲ್ಲೂ ಆಕೆ ಕೇಸರಿ ಪರಿವಾರ ಎಬಿವಿಪಿ ಹುಡುಗಿ; ಸೌಮ್ಯಭಟ್ ಪ್ರಕರಣದಂಥ ಹಲವು ಕೋಮು ಕಿಚ್ಚಲ್ಲಿ ಸುಟ್ಟು ಬೂದಿಯಾಗಿದ್ದ ಪುತ್ತೂರು ಇವತ್ತಿಗೂ ಕೋಮು ಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿ ಹಚ್ಚಿಕೊಂಡೇ ಇದೆ. ಪುತ್ತೂರಿನಲ್ಲಿ ಏನಾಗುತ್ತಿತ್ತೆಂದು ಊಹಿಸುವುದಕ್ಕೂ ಸಾಧ್ಯವಿಲ್ಲ!!

ರೇಪ್ ಯಾವ ಧರ್ಮದ ದುರಾತ್ಮ ಮಾಡಿದರೇನು? ಅದು ಅಕ್ಷಮ್ಯ, ಹೇಯ, ಬರ್ಬರ, ಅಮಾನುಷ ತಾನೇ? ಬಿಜೆಪಿ ಬಳಗವೇಕೆ ಬಾಯಿ ಬಿಡುತ್ತಿಲ್ಲ? ರೇಪಾದಲ್ಲಿ, ಕೊಲೆಯಾದಲ್ಲಿ ಪ್ರತ್ಯಕ್ಷವಾಗಿ ಹಿಂದೂತ್ವ ರಣಕಹಳೆಯೂದುತ್ತಿದ್ದ ಶೋಭಕ್ಕ ಎಲ್ಲಿದ್ದಾರೆ? ಹಿಂದೂತ್ವದ ಹುಸಿ ನಾಟಕದ ನಟಸಾರ್ವಭೌಮ ನಳಿನ್ ಕಟೀಲು ಮಾತಾಡುತ್ತಿಲ್ಲ ಏಕೆ? ಇದೇ ಪುತ್ತೂರು ದೋಚಿ ಸೈನೈಡ್ ಕೊಟ್ಟುಕೊಂದ ಸರಣಿ ಹಂತಕ ಸೈನೈಡ್ ಮೋಹನ್‍ನನ್ನೇ “ಹಿಂದೂ” ಎಂಬ ಏಕೈಕ ಕಾರಣಕ್ಕೆ ಸಹಿಸಿಕೊಂಡ ಸಂಘಪರಿವಾರ ಪುತ್ತೂರಿನ ಎಬಿವಿಪಿ ಅತ್ಯಾಚಾರಿಗಳಿಗೆ ರಿಯಾಯತಿ ತೋರಿಸದೇ ಇರುತ್ತದಾ?!

ಕಾಮುಕ ಹುಡುಗರ ಬಗ್ಗೆ ಅನುಕಂಪದ ಹುನ್ನಾರ

ಸಾಮೂಹಿಕ ಅತ್ಯಾಚಾರ ಮಾಡಿದ ಪುತ್ತೂರಿನ ಫಟಿಂಗ ಕೇಸರಿ ಹುಡುಗರ ತಾರೀಪು ಮಾಡುವ ನಿರ್ಲಜ್ಜ ಬಳಗವೊಂದು ಹುಟ್ಟಿಕೊಂಡಿರುವುದು ವಿಚಿತ್ರವಾದರೂ ಸತ್ಯ. `ಅದೊಂದು ಅತ್ಯಾಚಾರವೇ ಅಲ್ಲ; ಹುಡುಗಿಯ ಸಮ್ಮತಿಯಿಂದ ನಡೆದದ್ದು; ಗ್ರೂಪ್ ಸೆಕ್ಸ್. ಪ್ರಕರಣ ಬಯಲಾದಾಗ ಹುಡುಗಿ ಬಣ್ಣ ಬದಲಿಸಿದ್ದಾಳೆ. ಹುಡುಗರ ಮೇಲೆ ಅಪವಾದ ಹಾಕಿದ್ದಾಳೆ. ಆಕೆ ಹಿಂದೆಯೂ ಹೀಗೆ ಮಾಡಿದ್ದಾಳೆ. ಆ ವಿಡಿಯೋಗಳು ಇದೆ. ಇಲ್ಲಾಂದ್ರೆ ಆಕೆ ಯಾಕೆ ಪೊಲೀಸರಿಗೆ ತಕ್ಷಣ ಕಂಪ್ಲೇಂಟ್ ಕೊಡಲಿಲ್ಲ?’ ಎಂಬ ಮನುವಾದಿ ವಾದ ಮಂಡಿಸುತ್ತ ಭಂಡ ಹುಡುಗರ ಸಮರ್ಥಿಸುವ ಕುಕೃತ್ಯ ಪುತ್ತೂರು ಭಾಗದಲ್ಲಿ ಮಡೆಯುತ್ತಿದೆ. ವಿಕೃತಿ ಇಲ್ಲಿಗೆ ನಿಂತಿಲ್ಲ. ಬದಲಿಗೆ ಆ ಹುಡುಗಿ ಒಂಟಿಯಾಗಿ ಏಕೆ ಐದು ಹುಡುಗರ ಸಂಗಡ ನಿರ್ಜನ ಗುಡ್ಡಕ್ಕೆ ಹೋಗಬೇಕಿತ್ತು. ವಿಡಿಯೋ ನೋಡಿದರೆ ಇದೆಲ್ಲ ಆಕೆಗೂ ಬೇಕಿತ್ತು ಎನ್ನುವಷ್ಟು ಕೀಳುಮಟ್ಟಕ್ಕೆ ಈ ಗಲೀಜು ತರ್ಕ ನಡೆದಿದೆ.

ರೇಪಿಸ್ಟ್‍ಗಳ ಬಗ್ಗೆ ಅನುಕಂಪ ಇರುವವರ ಅಳಲೇನೆಂದರೆ ಹುಡುಗರ ತಪ್ಪೇ ಇಲ್ಲ. ಅಪರಾಧವೆಲ್ಲವೂ ಹುಡುಗಿಯದೇ. ಹೀಗಿರುವಾಗ ಹುಡುಗರ ಫೋಟೋ ಪತ್ರಿಕೆ, ಟಿವಿ, ಸೋಷಿಯಲ್ ಮಿಡಿಯಾದಲ್ಲಿ ಬಿತ್ತರಿಸೋದು ತಪ್ಪು. ಆ ವಿಡಿಯೋ, ಫೋಟೋಗಳು ಹೆತ್ತವರು, ಸಂಬಂಧಿಕರು ಕಂಡರೆ ಅವರಿಗೆ ಹೇಗಾಗಬೇಡ; ಸಮಾಜ ಹೆತ್ತವರನ್ನು ಯಾವ ದೃಷ್ಟಿಯಿಂದ ನೋಡಬಹುದು? ಎಂಬ ಅಭಿಪ್ರಾಯ ಕ್ರೂಢೀಕರಣ ಆಗುತ್ತಿದೆ.

ಆದರೆ ಈ ವಿಡಿಯೋ ಮಾಡಿರುವುದು ಮೂರನೇ ವ್ಯಕ್ತಿಯಲ್ಲ. ಐವರು ರೇಪಿಸ್ಟ್‍ಗಳಲ್ಲೇ ಒಬ್ಬ. ಎಲ್ಲರ ಸಮ್ಮತಿಯಿಂದ ಮಾಡಿದ್ದಾನೆ. ಶೂಟಿಂಗ್ ಆಗಿರೋದು ಎಲ್ಲರಿಗೂ ಗೊತ್ತಿದೆ. ಈಗ ವಿಡಿಯೋ ಬಹಿರಂಗ ಆಗಿರುವುದೂ ಇದೇ ರೇಪಿಸ್ಟ್‍ಗಳಲ್ಲಿ ಒಬ್ಬನಿಂದ. ಹುಡುಗಿಯಂತೂ ಈ ಬಗ್ಗೆ ಎಲ್ಲೂ ಬಾಯಿ ಬಿಟ್ಟಿಲ್ಲ. ಆ ವಿಡಿಯೋದಲ್ಲಿ ತಮ್ಮ ಪರಿಚಯ ಸ್ಪಷ್ಟವಾಗಿ ಕಾಣುವಂತೆ ಶೂಟ್ ಮಾಡಿಕೊಂಡವರೂ ರೇಪಿಸ್ಟ್‍ಗಳೇ. ಈ ವಿಡಿಯೋ ಮಾಡಿಕೊಳ್ಳುವಾಗ; ಕಾಲೇಜು ರಾಜಕೀಯದ ಮುಯ್ಯಿಗಾಗಿ ವಿಡಿಯೋ ಬಹಿರಂಗ ಪಡಿಸುವಾಗ ಮುಂದಾಗಬಹುದಾಗಿದ್ದ ಅನಾಹುತದ ಕನಿಷ್ಟ ಪ್ರಜ್ಞೆಯೂ ಹುಡುಗರಿಗೆ ಇರಲಿಲ್ಲವಾ? ತಮ್ಮ ಬಂಡವಾಳ ಎಲ್ಲರಿಗೂ ಗೊತ್ತಾಗುತ್ತದೆ, ಹೆತ್ತವರಿಗೂ-ಕುಟುಂಬದವರಿಗೂ ಸಿಗುತ್ತದೆಂಬ, ಆಗ ಹೆತ್ತವರ ಪರಿಸ್ಥಿತಿ ಏನಾಗಬಹುದೆಂಬ ತಿಳುವಳಿಕೆ ಇಲ್ಲದ ಪ್ರಾಣಿಗಳಾ ಇವು? ಅವರಿಗೇ ಇಲ್ಲದ ಎಚ್ಚರಿಕೆ, ಬೇಸರ, ನಾಚಿಕೆ ಸಿಂಪಥೈಸರ್‍ಗಳು ತೋರಿಸುತ್ತಿರುವುದು ಅಸಹ್ಯವಾಗಿದೆ. ಅವರಿಗೇ ಇಲ್ಲದ ಭವಿಷ್ಯದ ಚಿಂತೆ, ಹೆತ್ತವರ ಚಿಂತೆ ಸಹಾನುಭೂತಿದಾರರಿಗೆ ಏಕೋ ಆರ್ಥವಾಗದು. ದುರಂತವೆಂದರೆ ರೇಪಿಸ್ಟುಗಳ ಬಗ್ಗೆ ಹೀಗೆಲ್ಲ ಸಹಾನುಭೂತಿ ತೋರಿಸುವ ಮಂದಿ ಹುಡುಗಿಯ ಚರಿತ್ರೆಯನ್ನು ಯಾವ ರಿಯಾಯಿತಿಯೂ ಕೊಡದೆ ಹರಾಜು ಹಾಕುತ್ತಿರೋದು ಸೋಜಿಗ ಎನಿಸುತ್ತಿದೆ.

ಅಷ್ಟಕ್ಕೂ ಇದೊಂದು ಸಮ್ಮತಿಯಿಂದ ಆಗಿರುವ ಗ್ರೂಪ್ ಸೆಕ್ಸ್ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ವಿಡಿಯೋ ಮಾಡಿದ್ದೇಕೆ? ಹುಡುಗಿಗೆ ಚಾರಿತ್ರ್ಯ ಹರಣ ಮಾಡಲು ಇಲ್ಲವೇ ಬ್ಲಾಕ್‍ಮೇಲ್ ಮಾಡಿ ಆಕೆಯನ್ನು ಮತ್ತಮತ್ತೆ ಬಳಸಲು ಈ ಹುಡುಗರು ಶೂಟ್ ಮಾಡಿದ್ದಾರಲ್ಲವಾ? ನಾಳೆ ರೇಪ್ ಕೇಸ್ ಸಿದ್ದ ಮಾಡಲಾಗದೇ ಬಿದ್ದುಹೋದರೂ ಹುಡುಗಿಯ ಅರಿವಿಗೆ ಬಾರದಂತೆ ಅಥವಾ ಆಕೆಯ ಸಮ್ಮತಿಯಿಲ್ಲದೆ ವಿಡಿಯೋ ಮಾಡಿದ್ದು ಕಾನೂನಿನಂತೆ ದೊಡ್ಡ ಅಕ್ಷಮ್ಯ ಅಪರಾಧವೇ! ಹುಡುಗಿ ಚಾಲೂ, ಹುಡುಗರ ಸಂಭಾವಿತರೆನ್ನುವ ಘಾತುಕರಿಗೆ ಇವೆಲ್ಲ ತಿಳಿಯದಾ? ಇದೊಂದು ಹುಡುಗಿ ಸಮ್ಮತಿಯಿಂದಾದ ಪ್ರಕರಣ ಎಂದಾದರೂ ವಿಡಿಯೋ ಹಗರಣದಲ್ಲಿ ಹುಡುಗಿಯ ತಪ್ಪೇನೂ ಇಲ್ಲ. ಹುಡುಗರೇ ದುರುಳರು ಘಟನೆ ನಡೆದು ನಾಲ್ಕು ತಿಂಗಳಾದರೂ ಹುಡುಗಿ ಅದನ್ನು ತನ್ನ ಅನುಕೂಲಕ್ಕೆ ಯಾವ ರೀತಿಯಲ್ಲೂ ಬಳಸಿಕೊಂಡಿಲ್ಲ. ಹುಡುಗರನ್ನು ಬ್ಲಾಕ್‍ಮೇಲ್ ಮಾಡಿಲ್ಲ.

ಹುಡುಗರು ತಮ್ಮ ದ್ವೇಷಾಸೂಯೆಗೆ, ಕಾಲೇಜು ರಾಜಕಾರಣದ ದ್ವೇಷಕ್ಕೆ ವೀಡಿಯೋ ಬಹಿರಂಗ ಮಾಡಿದರು. ತಮ್ಮ ಬಗ್ಗೆ, ಹುಡುಗಿ ಬಗ್ಗೆ, ಪರಿವಾರದ ಬಗ್ಗೆ ಸ್ವಲ್ಪವೂ ಯೋಚಿಸದೆ ವಿಡಿಯೋ ವೈರಲ್ ಮಾಡಿದರು! ಈ ಪಂಚ-ಪಾತಕಿಗಳ ಅಪರಾಧಕ್ಕೆ ನಿಷ್ಪಾಪಿ ಹುಡುಗಿಯನ್ನು ದೂಷಿಸುವುದು ಎಷ್ಟು ಸರಿ? ವಿನಾಕಾರಣ ಹುಡುಗಿಯ ಮಾನ ಹರಾಜು ಹಾಕಿದ ನಂತರ, ಆಕೆಯ ಖಾಸಗಿತನದ ಮೇಲೆ ಅತ್ಯಾಚಾರ ಮಾಡಿ ಅದನ್ನು ಉಲ್ಲಂಘಿಸಿದ ನಂತರವೇ ಆಕೆ ಅನಿವಾರ್ಯವಾಗಿ ಕಾನೂನಿನ ಮೊರೆಹೋಗಬೇಕಾಗಿ ಬಂತು. ಇದಕ್ಕೆ ಹುಡುಗರ ಹರಾಮಿತನವೇ ಕಾರಣ. ಐಟಿ ಕಾನೂನಿನಂತೆ ದುರುದ್ದೇಶದಿಂದ ಅಶ್ಲೀಲ ವಿಡಿಯೋ ಮಾಡಿದ್ದು, ಅದನ್ನು ಪಬ್ಲಿಕ್ ಮಾಡಿದ್ದು, ಹುಡುಗಿಯ ಖಾಸಗಿತನದ ಉಲ್ಲಂಘನೆ ಮುಂತಾದ ಕಾರಣಕ್ಕೆ ಅತ್ಯಾಚಾರಿಗಳೆಲ್ಲರೂ ಶಿಕ್ಷಾರ್ಹರೇ! ಈ ನಂಬಿಕೆಗೆ ಯೋಗ್ಯರಲ್ಲದವರು ಸಮಾಜದಲ್ಲಿದ್ದರೆ ಕಂಟಕಕಾರಿಗಳೇ. ಖಾಯಮ್ಮಾಗಿ ಜೈಲಲ್ಲಿರಬೇಕಾದವರು. ಏನಂತಾರೆ ಸಿಂಪಥೈಸರ್ಸ್?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...