ಕಳೆದ ವಾರ ಉತ್ತರ ಪ್ರದೇಶದ ಮಥುರಾ ರೈಲ್ವೇ ನಿಲ್ದಾಣದಲ್ಲಿ ನಿದ್ದೆ ಮಾಡುತ್ತಿದ್ದ ತಂದೆ-ತಾಯಿಯ ಪಕ್ಕದಿಂದ ಕಳವು ಮಾಡಲಾದ ಏಳು ತಿಂಗಳ ಮಗು ಅಲ್ಲಿಂದ 100 ಕಿ.ಮೀ ದೂರದ ಫಿರೋಜಾಬಾದ್‌ನ ಬಿಜೆಪಿ ಕಾರ್ಪೊರೇಟರ್‌ನ ಮನೆಯಿಂದ ಪತ್ತೆಯಾಗಿದೆ. ಮಕ್ಕಳನ್ನು ಕದ್ದು ಮಾರಾಟ ಮಾಡುವ ದಂಧೆಯನ್ನು ಭೇದಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿಯ ಕಾರ್ಪೋರೇಟರ್ ವಿನಿತಾ ಅಗರ್ವಾಲ್ ಮತ್ತು ಅವರ ಪತಿ ತಮಗೆ ಗಂಡು ಬೇಕೆಂದು ಮಕ್ಕಳ ಕಳ್ಳತನ ಮಾಡುವ ದೊಡ್ಡ ಗ್ಯಾಂಗ್‌ನ ಸದಸ್ಯರಾದ ಇಬ್ಬರು ವೈದ್ಯರಿಂದ 1.8 ಲಕ್ಷ ರೂ.ಗೆ ಮಗುವನ್ನು ಖರೀದಿಸಿದ್ದರು. ದಂಪತಿಗೆ ಈಗಾಗಲೇ ಮಗಳಿದ್ದಾಳೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ಲಾಟ್‌ಫಾರ್ಮ್‌ನಿಂದ ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯಗಳು ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದೀಗ ಪೊಲೀಸರು ಮಗುವನ್ನು ಎತ್ತಿಕೊಂಡು ಹೋದ ವ್ಯಕ್ತಿ ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ.
#Watch | #UP man steals a #child from mother sleeping at a #railwayplatform#uttarpradesh #mathura #mathurarailwaystation #viral #cctv #cctvfootage #mathurapolice #viralvideo pic.twitter.com/fH33Vyr9XQ
— Free Press Journal (@fpjindia) August 28, 2022
ಮಥುರಾದ ರೈಲ್ವೇ ಪೊಲೀಸರು ಮಗುವನ್ನು ಅವರ ತಾಯಿಗೆ ಹಸ್ತಾಂತರಿಸಿದ್ದಾರೆ. ಬಂಧಿತ ವೈದ್ಯರಿಂದ ದುಡ್ಡನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅನುಮಾನದ ರೋಗ: ಹೆಣ್ಣುಮಕ್ಕಳ ಫೋಟೋ ಎಫ್‌ಬಿಯಲ್ಲಿ ಪೋಸ್ಟ್ ಮಾಡಿ ವಿಕೃತಿ
ಈ ಬಗ್ಗೆ ಹೇಳಿಕೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೊಹಮ್ಮದ್ ಮುಷ್ತಾಕ್, ಹಣಕ್ಕಾಗಿ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್ ಮಗುವನ್ನು ಅಪಹರಣ ನಡೆಸಿದೆ ಎಂದು ಹೇಳಿದ್ದಾರೆ.
“ದೀಪ್ ಕುಮಾರ್ ಎಂಬ ವ್ಯಕ್ತಿ ಮಗುವನ್ನು ಕದ್ದೊಯ್ದಿದ್ದಾನೆ ಎಂದು ನಾವು ಕಂಡುಕೊಂಡಿದ್ದೇವೆ. ಅವನು ನೆರೆಯ ಹತ್ರಾಸ್ ಜಿಲ್ಲೆಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿರುವ ಇಬ್ಬರು ವೈದ್ಯರನ್ನು ಒಳಗೊಂಡಿರುವ ಗ್ಯಾಂಗ್‌ವೊಂದರ ಭಾಗವಾಗಿದ್ದಾರೆ. ಇತರ ಕೆಲವು ಆರೋಗ್ಯ ಕಾರ್ಯಕರ್ತರು ಕೂಡಾ ಇದರಲ್ಲಿ ಭಾಗಿಯಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಮಗು ಯಾರ ಮನೆಯಲ್ಲಿದೆ ಎಂದು ನಾವು ವಿಚಾರಣೆ ನಡೆಸಿದಾಗ ಮಗು ಪತ್ತೆಯಾಗಿದೆ. ಆರೋಪಿಗಳಿಗೆ ಒಬ್ಬಳೇ ಮಗಳಿದ್ದು, ಗಂಡು ಮಗುವೊಂದನ್ನು ಬಯಸಿದ್ದರು. ಅದಕ್ಕಾಗಿ ಅವರು ಮಕ್ಕಳ ಕಳ್ಳತನ ಮಾಡುವ ಗ್ಯಾಂಗ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು” ಎಂದು ಮುಷ್ತಾಕ್ ಪತ್ರಕರ್ತರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ₹ 300 ಕಳ್ಳತನ ಆರೋಪ: ದಲಿತ ಬಾಲಕರ ಮೇಲೆ ಹಲ್ಲೆ ಮಾಡಿ 4 ಕಿ.ಮೀ. ನಡೆಸಿದ ದುಷ್ಕರ್ಮಿಗಳು
ಘಟೆನೆಯ ಬಗ್ಗೆ ಬಂಧಿತ ಕಾರ್ಪೊರೇಟರ್ ಹಾಗೂ ಬಿಜೆಪಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಎನ್‌ಡಿಟಿವಿ ವರದಿ ಹೇಳಿದೆ.
ಆಗಸ್ಟ್ 23 ರ ರಾತ್ರಿ ತಾಯಿಯೊಂದಿಗೆ ಮಲಗಿದ್ದ ಮಗುವನ್ನು ವ್ಯಕ್ತಿಯೊಬ್ಬ ಎತ್ತಿಕೊಂಡು ಹೋಗಿದ್ದನು. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.


