Homeಮುಖಪುಟರಾಹುಲ್ ಗಾಂಧಿ ತಮಿಳು ಹುಡುಗಿಯನ್ನು ಮದುವೆಯಾಗುತ್ತಾರೆ: ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯ ಅಭಿಲಾಷೆ

ರಾಹುಲ್ ಗಾಂಧಿ ತಮಿಳು ಹುಡುಗಿಯನ್ನು ಮದುವೆಯಾಗುತ್ತಾರೆ: ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯ ಅಭಿಲಾಷೆ

- Advertisement -
- Advertisement -

ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ದೇಶದ ಬಹುದೊಡ್ಡ ಪಾದಾಯಾತ್ರೆ ಆರಂಭಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಖಂಡಿಸಿ, ಐಕ್ಯ ಭಾರತದ ಉದ್ದೇಶದೊಂದಿಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದವರೆಗೆ ಬರೋಬ್ಬರಿ 3,570 ಕಿ.ಮೀ ಹೆಜ್ಜೆಹಾಕುವ ಭಾರತ್ ಜೋಡೋ ಯಾತ್ರೆಯನ್ನು (ಭಾರತ ಐಕ್ಯತಾ ಯಾತ್ರೆ) ಸೆಪ್ಟಂಬರ್ 07ರಿಂದ ಶುರು ಮಾಡಿದ್ದಾರೆ. ಈ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತಿದ್ದು ಕಾಂಗ್ರೆಸ್ ಮಾತ್ರವಲ್ಲದೆ ಇತರ ಪಕ್ಷಗಳ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರ ಸಹ ಬೆಂಬಲ ಘೋಷಿಸಿದ್ದಾರೆ. ತಮಿಳುನಾಡಿನಲ್ಲಿ ಪಾದಯಾತ್ರೆ ನಡೆಯುವ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ತಮಿಳು ಹುಡುಗಿಯನ್ನು ಮದುವೆಯಾಗಲಿದ್ದಾರೆ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನಲ್ಲಿ ರಾಹುಲ್ ಗಾಂಧಿಯವರು ಯಾತ್ರೆಯ ಭಾಗವಾಗಿ ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ನಡೆದ ಈ ತಮಾಷೆಯ ಘಟನೆಯನ್ನು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್‌ರವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಸಂವಾದದ ಸಂದರ್ಭದಲ್ಲಿ ಮಹಿಳೆಯೊಬ್ಬರು, “ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಾರೆ. ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ದರಿದ್ದಾರೆ” ಎಂದು ಹೇಳುವ ಮೂಲಕ ಎಲ್ಲರ ಮುಖದಲ್ಲಿ ನಗು ತಂದಿದ್ದಾರೆ.

ಭಾರತ್ ಜೋಡೋ ಯಾತ್ರೆಯ 3ನೇ ದಿನ ಒಂದು ಉಲ್ಲಾಸದ ಕ್ಷಣ ದಾಖಲಾಗಿದೆ. ಇಂದು ಮಧ್ಯಾಹ್ನ ಮಾರ್ತಾಂಡಮ್‌ನಲ್ಲಿ ಮಹಿಳಾ ನರೇಗಾ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸುವ ಸಂದರ್ಭದಲ್ಲಿ, ಒಬ್ಬ ಮಹಿಳೆ, ‘ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಿದ್ದಾರೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ’ ಎಂದು ಹೇಳಿದರು. ರಾಹುಲ್ ಗಾಂಧಿ ವರ್ಣರಂಜಿತವಾಗಿ ಕಾಣುತ್ತಿದ್ದಾರೆ, ಫೋಟೊ ಅದನ್ನು ತೋರಿಸುತ್ತಿದೆ ಎಂದು ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.

5 ತಿಂಗಳುಗಳ ಕಾಲ ನಡೆಯುವ ಸುಧೀರ್ಘ ಪಾದಯಾತ್ರೆಯಲ್ಲಿ ಪ್ರತಿ ದಿನ 25 ಕಿ.ಮೀ ನಡೆಯುವ ಗುರಿ ಹೊಂದಲಾಗಿದ್ದು, 12 ರಾಜ್ಯಗಳು ಮತ್ತು 02 ಕೇಂದ್ರಾಡಳಿತ ಪ್ರದೇಶಗಳನ್ನು ಯಾತ್ರೆ ತಲುಪಲಿದೆ. ಕರ್ನಾಟಕದಲ್ಲಿ 21 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸ್ವಾಗತಿಸಿ ರಾಯಚೂರು ಜಿಲ್ಲೆ ನಂತರ ತೆಲಂಗಾಣಕ್ಕೆ ಕಳಿಸಿಕೊಡಲಾಗುತ್ತದೆ ಎನ್ನಲಾಗಿದೆ.

“ಈ ಯಾತ್ರೆ ನನಗೆ ತಪಸ್ಸು ಇದ್ದಂತೆ. ಭಾರತವನ್ನು ಒಟ್ಟುಗೂಡಿಸುವುದು ಧೀರ್ಘಾವಧಿ ಹೋರಾಟ ಎಂಬುದು ನನಗೆ ತಿಳಿದಿದೆ ಮತ್ತು ಅದಕ್ಕೆ ನಾನು ತಯಾರಾಗಿದ್ದೇನೆ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...