ಜರ್ಮನಿಯ ಡಾರ್ಮ್‌ಸ್ಟಾಡ್ಟ್‌ನಲ್ಲಿರುವ ಪೆನ್ ಕೇಂದ್ರ(PEN Center)ವು ‘ಹರ್ಮನ್ ಕೆಸ್ಟನ್ ಪ್ರಶಸ್ತಿ’ಯ ವಿಜೇತರನ್ನು ಸೋಮವಾರ ಘೋಷಿಸಿದೆ. ಈ ವರ್ಷದ ಪ್ರಶಸ್ತಿಯು ಭಾರತೀಯ ಲೇಖಕಿ ಮತ್ತು ಕವಯಿತ್ರಿ ಮೀನಾ ಕಂದಸಾಮಿ ಅವರಿಗೆ ಸಂದಿದೆ.
ಪ್ರಶಸ್ತಿ ಘೋಷಣೆ ಬಗ್ಗೆ ಸಂತಸ ವ್ಯಕ್ತಪಡಿಸಿದರು ಮೀನಾ ಕಂದಸಾಮಿ ಅವರು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ನನಗೆ ಗೊತ್ತಾಗುತ್ತಿಲ್ಲ. ಈ ಹಿಂದೆ ಈ ಪ್ರಶಸ್ತಿಯನ್ನು ಸ್ವೀಕರಿಸಿದವರಲ್ಲಿ ಗುಂಟರ್ ಗ್ರಾಸ್ ಮತ್ತು ಹೆರಾಲ್ಡ್ ಪಿಂಟರ್ ಇದ್ದಾರೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪ್ರಜಾಪ್ರಭುತ್ವದ ನಿರ್ಭೀತ ಹೋರಾಟಗಾರ್ತಿ
“ಮೀನಾ ಕಂದಸಾಮಿ ಪ್ರಜಾಪ್ರಭುತ್ವದ ಮತ್ತು ಮಾನವ ಹಕ್ಕುಗಳ ನಿರ್ಭೀತ ಹೋರಾಟಗಾರ್ತಿಯಾಗಿದ್ದಾರೆ. ಭಾರತದಲ್ಲಿ ಭೂರಹಿತರು, ಅಲ್ಪಸಂಖ್ಯಾತರು ಮತ್ತು ದಲಿತರ ದಮನದ ವಿರುದ್ಧ ಅವರು ಹೋರಾಡುತ್ತಿದ್ದಾರೆ” ಎಂದು ಜರ್ಮನ್ PEN ಸೆಂಟರ್‌ನ ಉಪಾಧ್ಯಕ್ಷ ಕಾರ್ನೆಲಿಯಾ ಜೆಟ್ಸೆ ಹೇಳಿದ್ದಾರೆ.
“ಪರಾನುಭೂತಿ, ವಿಶ್ಲೇಷಣಾತ್ಮಕ ನಿಖರತೆ ಮತ್ತು ಸಾಹಿತ್ಯಿಕ ಉತ್ಸಾಹದಿಂದ, ಕಂದಸಾಮಿ ಅವರು ಪಿತೃಪ್ರಭುತ್ವ, ಊಳಿಗಮಾನ್ಯ ಸಂರಚನೆ, ಮಹಿಳೆಯರ ವಿರುದ್ಧದ ಹಿಂಸೆ, ಕಡಿವಾಣವಿಲ್ಲದ ಬಂಡವಾಳಶಾಹಿಯ ಪರಿಣಾಮಗಳು ಮತ್ತು ದಕ್ಷಿಣ ಭಾರತದಲ್ಲಿ ರೈತರ ಹತ್ಯಾಕಾಂಡದ ಬಗ್ಗೆ ಮಾತನಾಡುತ್ತಾರೆ. ಅವರ ಭಾಷಣಗಳು ಮತ್ತು ಬರಹಗಳಲ್ಲಿ ಇವುಗಳನ್ನು ಗುರುತಿಸುತ್ತಾರೆ” ಎಂದು ಜೆಟ್ಸೆ ಹೇಳಿದ್ದಾರೆ.
ಪ್ರಶಸ್ತಿಯನ್ನು ಪ್ರಾಯೋಜಿಸುವ ಜರ್ಮನಿಯ ಹೆಸ್ಸೆ ರಾಜ್ಯದ ಕಲೆ ಮತ್ತು ಸಂಸ್ಕೃತಿ ಸಚಿವೆ ಏಂಜೆಲಾ ಡಾರ್ನ್ ಅವರು ಮೀನಾ ಕಂದಸಾಮಿ ಅವರನ್ನು ಶ್ಲಾಘಿಸಿದ್ದು, ‘‘ಅವರು ತಮ್ಮ ಪುಸ್ತಕಗಳಲ್ಲಿ ಅಸಮಾನತೆ ಮತ್ತು ದಮನದ ವಿರುದ್ಧ ಬಂಡಾಯವೆದ್ದಿದ್ದಾರೆ. ಹಿಂಸಾಚಾರದ ಬಲಿಪಶುಗಳಿಗೆ ಧ್ವನಿ ನೀಡುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಶೂದ್ರ’ ಪದಬಳಕೆ: ಪ್ರಗ್ಯಾ ಠಾಕೂರ್‌ಗೆ ತಿರುಗೇಟು ಕೊಟ್ಟ ಮೀನಾ ಕಂದಸಾಮಿ
ಶೋಷಣೆಗೆ ಒಳಗಾದವರ ಪರವಾಗಿ ನಿಲ್ಲುವವರು
ಮೀನಾ ಕಂದಸಾಮಿ ಅವರು 1984 ರಲ್ಲಿ ಚೆನ್ನೈನಲ್ಲಿ ಜನಿಸಿದರು. ಹದಿಹರೆಯದಿಂದಲೂ ಕವನ ಬರೆಯುತ್ತಿದ್ದ ಅವರು, ತನ್ನನ್ನು ತಾನು ‘ಜಾತಿ ವಿರೋಧಿ ಹೋರಾಟಗಾರ್ತಿ, ಕವಿ, ಕಾದಂಬರಿಕಾರ್ತಿ ಮತ್ತು ಅನುವಾದಕಿ’ ಎಂದು ಕರೆದುಕೊಳ್ಳುತ್ತಾಳೆ. ಅವರ ವೆಬ್‌ಸೈಟ್‌ನ ಪ್ರಕಾರ, ಅವರ ಬರವಣಿಗೆಯು ಜಾತಿ, ಲಿಂಗ ಮತ್ತು ಜನಾಂಗೀಯ ದಬ್ಬಾಳಿಕೆಯ ವಿರುದ್ಧ ಉಗ್ರಗಾಮಿ ಪ್ರತಿರೋಧವನ್ನು ಗುರುತಿಸುತ್ತದೆ.
‘ದಿ ಜಿಪ್ಸಿ ಗಾಡೆಸ್’ (2014), ‘ವೆನ್ ಐ ಹಿಟ್ ಯು: ಆರ್ ಎ ಪೋರ್ಟ್ರೇಟ್ ಆಫ್ ದಿ ರೈಟರ್ ಆಸ್ ಎ ಯಂಗ್ ವೈಫ್’ (2017) ಪುಸ್ತಕಗಳು ಮೀನಾ ಕಂದಸಾಮಿ ಅವರ ಪ್ರಮುಖ ಕೃತಿಗಳಾಗಿವೆ. ‘Ms Militancy’ (2010) ಮತ್ತು ‘#ThisPoemWillProvokeYou and Other Poems’ (2015) ಎಂಬ ಕವಿತೆಗಳ ಸಂಕಲನಗಳನ್ನು ಕೂಡಾ ಅವರು ಪ್ರಕಟಿಸಿದ್ದಾರೆ.
Today I was inducted as a Fellow of the Royal Society of Literature @RSLiterature 2022, and had fun signing my name with George Eliot's pen. This is a beautiful moment in my life and I owe thanks to @BernardineEvari @DGALitAgents @AtlanticBooks ❤️💫 https://t.co/k6zZpGdbro pic.twitter.com/AB5TZZklNi
— Dr Meena Kandasamy ¦¦ மீனா கந்தசாமி (@meenakandasamy) July 12, 2022
ಜರ್ಮನಿಯ PEN ಕೇಂದ್ರವು ಈ ವರ್ಷ ನವೆಂಬರ್ 15 ರಂದು ಡಾರ್ಮ್‌ಸ್ಟಾಡ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಮೀನಾ ಕಂದಸಾಮಿ ಅವರಿಗೆ ಪ್ರಶಸ್ತಿಯನ್ನು ನೀಡಲಿದೆ. ವಿಜೇತರಿಗೆ ಬಹುಮಾನದ ಹಣವಾಗಿ 16 ಲಕ್ಷ ರೂ. (20,000 ಯೂರೊ)ಗಳನ್ನು ಮೊತ್ತವನ್ನು ಪಡೆಯುತ್ತಾರೆ. ಈ ವರ್ಷ, PEN ಕೇಂದ್ರವು “ವೀಟರ್ ಸ್ಕ್ರಿಬೆನ್” ಎಂಬ ವೆಬ್‌ಸೈಟ್ ಅನ್ನು ಪ್ರೋತ್ಸಾಹಕ್ಕಾಗಿ ವಿಶೇಷ ಪ್ರಶಸ್ತಿಯೊಂದಿಗೆ ಗೌರವಿಸುತ್ತಿದೆ. ದೇಶಭ್ರಷ್ಟರಾಗಿರುವ ಲೇಖಕರು ಮತ್ತು ಸಂಘರ್ಷ ವಲಯಗಳ ಬರಹಗಾರರಿಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ವೆಬ್‌ಸೈಟ್ ವೇದಿಕೆ ನೀಡುತ್ತಿದೆ.
ಹರ್ಮನ್ ಕೆಸ್ಟನ್ ಪ್ರಶಸ್ತಿಯು ಕಿರುಕುಳಕ್ಕೊಳಗಾದ ಲೇಖಕರು ಮತ್ತು ಪತ್ರಕರ್ತರ ಹಕ್ಕುಗಳಿಗಾಗಿ ನಿಲ್ಲುವ ವ್ಯಕ್ತಿಗಳನ್ನು ಗೌರವಿಸುತ್ತದೆ. ಈ ಹಿಂದೆ ಈ ಪ್ರಶಸ್ತಿ ಪುರಸ್ಕೃತರಲ್ಲಿ ಗುಂಟರ್ ಗ್ರಾಸ್, ಅನ್ನಾ ಪೊಲಿಟ್‌ಕೋವ್ಸ್ಕಯಾ, ಲಿಯು ಕ್ಸಿಯಾಬೊ, ಹೆರಾಲ್ಡ್ ಪಿಂಟರ್ ಮತ್ತು ಕ್ಯಾನ್ ಡುಂಡರ್ ಸೇರಿದ್ದಾರೆ.
ಕಂದಸಾಮಿ ಅವರ ಕಾದಂಬರಿಗಳು ಮಹಿಳಾ ಪ್ರಶಸ್ತಿ, ಅಂತರರಾಷ್ಟ್ರೀಯ ಡೈಲನ್ ಥಾಮಸ್ ಪ್ರಶಸ್ತಿ ಮತ್ತು ಹಿಂದೂ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ವರ್ಷ ಅವರು ಯುನೈಟೆಡ್ ಕಿಂಗ್‌ಡಂನ ರಾಯಲ್ ಸೊಸೈಟಿ ಆಫ್ ಲಿಟರೇಚರ್ (RSL) ನ ಫೆಲೋ ಆಗಿ ಆಯ್ಕೆಯಾದರು. 2021 ರಲ್ಲಿ ‘ದಿ ಆರ್ಡರ್ಸ್ ವರ್ ಟು ರೇಪ್ ಯು: ತಮಿಳು ಟೈಗ್ರೆಸಸ್ ಇನ್ ದಿ ಈಲಂ ಸ್ಟ್ರಗಲ್’ ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಗ್ರಹವನ್ನು ಸಹ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ‘ಶೂದ್ರ’ ಪದಬಳಕೆ: ಪ್ರಗ್ಯಾ ಠಾಕೂರ್‌ಗೆ ತಿರುಗೇಟು ಕೊಟ್ಟ ಮೀನಾ ಕಂದಸಾಮಿ
2018 ರಲ್ಲಿ ಜಾತಿ ಆಧಾರಿತ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟ ತೆಲುಗು ಕ್ರಾಂತಿಕಾರಿ ಕವಿ ವರವರ ರಾವ್ ಸೇರಿದಂತೆ ಭಾರತದಲ್ಲಿ ಲೇಖಕರ ದಮನದ ಬಗ್ಗೆ ಕಂದಸಾಮಿ ಧ್ವನಿಯೆತ್ತಿದ್ದಾರೆ. ಎಡಪಂಥೀಯ ಸಂಘಟನೆಗಳೊಂದಿಗಿನ ಸಂಬಂಧಕ್ಕಾಗಿ ಜೈಲಿನಲ್ಲಿರುವ ಕವಿ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಅವರನ್ನು ಬೆಂಬಲಿಸಿ ಅವರು ಮಾತನಾಡಿದ್ದಾರೆ.



ಮೀನಾ ಕಂದಸ್ವಾಮು ಅವರಿಗೆ ಅಭಿನಂದನೆಗಳು.