Homeಮುಖಪುಟ’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ತೋರಿಸಿಕೊಟ್ಟ ಜೀನ್-ಲ್ಯೂಕ್ ಗೋದಾರ್ದ್

’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ತೋರಿಸಿಕೊಟ್ಟ ಜೀನ್-ಲ್ಯೂಕ್ ಗೋದಾರ್ದ್

- Advertisement -
- Advertisement -

ನನ್ನೊಳಗಿನ ಸಿನೆಮಾ ನಿರ್ದೇಶಕನನ್ನು ಬಡಿದೆಬ್ಬಿಸಿದ್ದು, ನಾನು ಸಿನೆಮಾ ಮಾಡಬಲ್ಲೆ ಎಂಬ ಆತ್ಮವಿಶ್ವಾಸವನ್ನು ನನ್ನಲ್ಲಿ ಹುಟ್ಟುಹಾಕಿದವನು ಜೀನ್-ಲ್ಯೂಕ್ ಗೋದಾರ್ದ್. ಅವನ ಸಾಕಷ್ಟು ಸಿನೆಮಾಗಳನ್ನು ನೋಡಿದ ನಂತರವೇ ನಾನೂ ಸಿನೆಮಾ ನಿರ್ದೇಶಕನಾಗಬಹುದು ಎಂಬ ಆಸೆಯ ಮೊಳಕೆ ನನ್ನೊಳಗೆ ಮೂಡಿದ್ದು; ಇದಕ್ಕೆ ನನ್ನ ’ಮಧ್ಯಾಹ್ನದ ಹಾಡು’ ಮತ್ತು ’ಥ್ರೀ ಮಂತ್ ಆಫ್ ಸಾಲಿಟ್ಯೂಡ್’ ಎಂಬ ಮೊದಲ ಎರಡು ಕಿರುಚಿತ್ರಗಳೇ ಸಾಕ್ಷಿ; ಈ ಚಿತ್ರಗಳಲ್ಲಿ ಗೋದಾರ್ದ್‌ನ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಈ ಚಿತ್ರಗಳ ನಂತರ ನಾನು ಅವನ ಪ್ರಭಾವದಿಂದ ಬಿಡಿಸಿಕೊಂಡು ನನ್ನದೇ ಆದ ನನ್ನ ಪರಿಸರಕ್ಕೆ, ಸ್ವಭಾವಕ್ಕೆ, ಅನುಭವಕ್ಕೆ ಒದಗಿದ ಬೇರೆದಾರಿ ಹಿಡಿದೆ.

’ಎವರಿಥಿಂಗ್ ಈಸ್ ಸಿನೆಮಾ’ ಎಂಬುದನ್ನು ಅಕ್ಷರಶಃ ಇವನ ಕೃತಿಗಳಲ್ಲಿ ಕಾಣಬಹುದು, ಸಿನೆಮಾವನ್ನು ಬರೀ ಕಥೆ, ಕಾದಂಬರಿಯ ರೂಪದಲ್ಲಿ ಮಾತ್ರ ಏಕೆ ನೋಡಬೇಕು, ಪ್ರಬಂಧದ ರೂಪದಲ್ಲಿ, ತತ್ವಜ್ಞಾನಿಯ ರೂಪದಲ್ಲಿ, ಕವಿಯ ಪರಿಭಾಷೆಯಲ್ಲಿ, ನಾಟಕಕಾರನಂತೆ, ಇತಿಹಾಸಕಾರನಂತೆ, ವಿಮರ್ಶಕನಾಗಿ ಹೇಗಾದರೂ ಕಟ್ಟಬಹುದು ಎಂಬುದನ್ನು ತನ್ನ ಕೃತಿಗಳ ಮೂಲಕವೇ ಮಾಡಿ ತೋರಿಸಿದನು. ಸಿನೆಮಾವನ್ನು ಆರಂಭ, ಮಧ್ಯ, ಕ್ಲೈಮ್ಯಾಕ್ಸ್ ಎಂಬ ಕ್ರಮದಲ್ಲೇ ಯಾಕೆ ಕಟ್ಟಬೇಕು? ಎಂದು ಸಿನಿಮಾ ಮಾಧ್ಯಮದ ಸಮಗ್ರ ಸಾಧ್ಯತೆಗಳನ್ನು ಮೂಸೆಗೆ ಹಾಕಿ ಕುದಿಸಿದನು. ಕತೆ ಎಲ್ಲಿಂದಲಾದರೂ ಶುರುವಾಗಬಹುದು ಎಲ್ಲಿಗಾದರೂ ಅಂತ್ಯವಾಗಬಹುದು, ಆದರೆ ಅದಕ್ಕೆ ಅದರದೇ ಆದ ಲಯವಿರುತ್ತದೆ, ಅದನ್ನು ಕಂಡುಕೊಳ್ಳಬೇಕು ಎಂಬುದನ್ನು ತೋರಿಸಿಕೊಟ್ಟನು. ಈ ಯತ್ನದಲ್ಲಿ ಅವನು ಯಶಸ್ಸು ಸಾಧಿಸಿದನು ಎಂದು ಹೇಳುವುದು ಕಷ್ಟ; ಆದರೆ ಸಾಧ್ಯತೆ ವಿಫಲತೆಗಿಂತಲೂ ತನ್ನನ್ನು ತಾನು ಹೊಸಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುವುದು ಅವನಿಗೆ ಮುಖ್ಯವಾಗಿತ್ತು. ಅದಕ್ಕೆ ಅಂತಾ ಕಾಣತ್ತೆ 2009ರಲ್ಲಿ ರಿಚರ್ಡ್ ಬ್ರೂಡಿ ಬರೆದ ಗೋದಾರ್ದ್‌ನ ಜೀವನಚರಿತ್ರೆಯ ಪುಸ್ತಕಕ್ಕೆ ’ಎವರಿಥಿಂಗ್ ಈಸ್ ಸಿನೆಮಾ’ ಎಂದು ಹೆಸರಿಟ್ಟಿದ್ದಾನೆ.

ಸಿನೆಮಾದ ವೈಜ್ಞಾನಿಕತೆ, ತಾಂತ್ರಿಕತೆಯ ಮೂಲಕ ಕಥೆಯನ್ನು ಹೇಳುವ ಕಲೆಯನ್ನು ಸೃಷ್ಟಿಸಲು ಸಾಧ್ಯ ಎಂದು ಮೊದಲಿಗೆ ಗುರುತಿಸಿದವನು ಡಿ.ಡಬ್ಲ್ಯೂ. ಗ್ರಿಫಿತ್. ಇವನ ಸಂಕಲನದ ತಂತ್ರಗಾರಿಕೆಯಿಂದ ಸಿನೆಮಾ ಮಾಧ್ಯಮದ ಕ್ರಮಬದ್ಧವಾದ ಕಥನಾಕ್ರಮದ ವ್ಯಾಕರಣ ಚಾಲ್ತಿಗೆ ಬಂತು. ಇದೆಲ್ಲದರ ಯಶಸ್ಸಿನ ಜೊತೆಜೊತೆಗೆ ಸಿನೆಮಾ ಒಂದು ಉದ್ಯಮವಾಗಿಯೂ ರೂಪುಗೊಂಡಿತು. ಇವನ ಈ ಸಂಕಲನದ ತಂತ್ರಗಾರಿಕೆಯಿಂದ ಪ್ರಭಾವಿತನಾಗಿ ಚಾರ್ಲಿ ಚಾಪ್ಲಿನ್ ತನ್ನದೇ ಆದ ವಿಡಂಬನಾ ಶೈಲಿಯನ್ನು ಕಂಡುಕೊಂಡು ಜಗತ್‌ಪ್ರಸಿದ್ಧಿ ಗಳಿಸಿದ್ದು ಈಗ ಇತಿಹಾಸ.

ಇದರ ಮುಂದುವರಿದ ಭಾಗವಾಗಿ ರಷ್ಯಾದ ಪ್ರಮುಖ ಚಿತ್ರನಿರ್ದೇಶಕ ಐಸೆನ್‌ಸ್ಟೇನ್ ಸಿನೆಮಾ ಸಂಕಲನದಲ್ಲಿ ಮೋಂತಾಜ್ ಎಂಬ ಹೊಸ ತಂತ್ರಗಾರಿಕೆಯನ್ನು ಹುಟ್ಟುಹಾಕಿದ. ಈ ತಂತ್ರಗಾರಿಕೆಯಲ್ಲಿ ಕಥೆಯನ್ನು ಎಷ್ಟು ಪರಿಣಾಮಕಾರಿಯಾಗಿ ಕಟ್ಟಬಹುದು ಎಂಬುದನ್ನು ಒಂದೇ ದೃಶ್ಯವನ್ನು ಬೇರೆಬೇರೆ ಆಯಾಮಗಳಲ್ಲಿ ಬಿಡಿಬಿಡಿ ಚಿತ್ರಿಕೆಗಳನ್ನು ಸೆರೆಹಿಡಿದು ಅವುಗಳ ಕ್ರಮಬದ್ಧ ಜೋಡಣೆಯಿಂದ ಸೃಷ್ಟಿಯಾಗುವ ಭಾವತೀವ್ರತೆಯನ್ನು ಸಾಧ್ಯ ಮಾಡುವ ಕ್ರಮ; ಕಥನಕ್ಕೆ ಪೂರಕವಾಗಿ ಮತ್ತು ನೋಡುಗರಲ್ಲಿ ಅನುಭವಕ್ಕೆ ದಕ್ಕುವ ರೀತಿಯಲ್ಲಿ ಈ ತಂತ್ರಗಾರಿಕೆ ಮಹತ್ತರವಾದ ಪಾತ್ರ ವಹಿಸಿತು. ಮುಂದೆ ಸಾಕಷ್ಟು ಜನ ನಿರ್ದೇಶಕರು ಈ ತಂತ್ರವನ್ನು ಅನುಸರಿಸಿ ಅದನ್ನೂ ಮೀರಲು ಪ್ರಯತ್ನಿಸಿದರು.

Jean Luc Godard a 7/7 en 1983 PARIS . 1983 (Sipa via AP Images)

ಹಾಗೆ ಅದನ್ನು ಮೀರಿದ ಪ್ರಮುಖರಲ್ಲಿ ಜೀನ್-ಲ್ಯೂಕ್ ಗೋದಾರ್ದ್ ಬಹು ಮುಖ್ಯ ಚಲನಚಿತ್ರ ನಿರ್ದೇಶಕ.
ಗೋದಾರ್ದ್ ಬರೀ ಕಥನಕ್ರಮದಲ್ಲಿ ಮಾತ್ರ ಬದಲಾ ವಣೆಯನ್ನು ಮಾಡಿಕೊಳ್ಳಲಿಲ್ಲ ಅದನ್ನು ನಿರೂಪಿಸುವ ಕ್ರಮದಲ್ಲಿ, ಕಥಾಹಂದರವನ್ನು ಮುರಿದುಕಟ್ಟುವ, ಸಾಕ್ಷ್ಯಚಿತ್ರದಂತಹ ಕ್ಯಾಮರದ ಚಲನೆ, ವಿಲಕ್ಷಣ ಶಬ್ದಗಳ ಬಳಕೆ, ಸಂಭಾಷಣೆಗಳ ಜೋಡಣೆಗಳ ಜೊತೆಗೆ ನೆಗೆತದ ಕತ್ತರಿ (ಜಂಪ್‌ಕಟ್ಸ್) ಪ್ರಯೋಗಗಳನ್ನು ಇವನಷ್ಟು ಪರಿಣಾಮಕಾರಿಯಾಗಿ ಯಾರೂ ಮಾಡಿಲ್ಲವೆಂದು ಕಾಣುತ್ತದೆ. ಈ ಎಲ್ಲಾ ಪ್ರಯೋಗಗಳಿಂದ ಆತ ತನ್ನದೇ ಆದ ಒಂದು ದೃಶ್ಯಭಾಷೆಯೊಂದನ್ನು ಕಟ್ಟಿಕೊಂಡನು. ಆ ದೃಶ್ಯಬಾಷೆ ಹಾಗೇ ಧುತ್ ಎಂದು ಹುಟ್ಟಿದ್ದಲ್ಲ, ಅದಕ್ಕೆ ತಾತ್ವಿಕವಾದ, ಸೈದ್ಧಾಂತಿಕವಾದ, ರಾಜಕೀಯವಾದ, ಸಾಂಸ್ಕೃತಿಕವಾದ ಹಿನ್ನೆಲೆಯಿದೆ. ಅದು ಗೋದಾರ್ದ್‌ನ ಅಧ್ಯಯನದಲ್ಲಿ ಬಹು ಮುಖ್ಯವಾಗುತ್ತದೆ. ಮಾರ್ಕ್ಸ್‌ವಾದ ಮತ್ತು ಬ್ರೆಕ್ಟ್‌ನ ’ಎಪಿಕ್ ಥಿಯೇಟರ್’ ಪರಿಕಲ್ಪನೆಯನ್ನು ತನ್ನ ಚಿತ್ರ ಸೃಷ್ಟಿಯಲ್ಲಿ ಅಳವಡಿಸಿಕೊಂಡನು. ನೋಡುಗನು ಭಾವೋನ್ಮಾದದಲ್ಲಿ ತೇಲಿ ಹೋಗಬಾರದು, ಅದರ ಹಿಂದಿನ ರಾಜಕೀಯವನ್ನು ಸಮಗ್ರವಾಗಿ ಗ್ರಹಿಸಬೇಕು ಎನ್ನುವುದು ಈ ಒಂದು ಫಾರ್ಮ್‌ನ ಮುಖ್ಯ ಉದ್ದೇಶವಾಗಿತ್ತು. ನಮ್ಮಲ್ಲಿನ ಯಕ್ಷಗಾನ, ಬಯಲಾಟ ಇದಕ್ಕೆ ಒಳ್ಳೆಯ ಉದಾಹರಣೆಗಳು.

ಗೋದಾರ್ದ್ ಸಿನೆಮಾದೊಂದಿಗೆ ಸಂಬಂಧವನ್ನು ಆರಂಭಿಸಿದ್ದು ’ಕ್ಯಹೀರ್ಸ್‌ದು ಸಿನೆಮಾ’ ಎಂಬ ಪ್ರಸಿದ್ಧ ಪತ್ರಿಕೆಗೆ ಸಿನೆಮಾ ವಿಮರ್ಶೆ ಬರೆಯುವುದರ ಮೂಲಕ. ಅವನ ಸಮಕಾಲೀನ ಸಿನೆಮಾ ನಿರ್ದೇಶಕ ಟ್ರುಫೋ ಕೂಡ ಇದೇ ಪತ್ರಿಕೆಗೆ ವಿಮರ್ಶೆ ಬರೆಯುವುದರ ಮೂಲಕವೇ ಚಿತ್ರರಂಗವನ್ನು ಪ್ರವೇಶಿಸಿದ್ದು. ಮುಂದೆ ಈ ಇಬ್ಬರೂ ಫ್ರೆಂಚ್ ಹೊಸ ಅಲೆಯ ಚಿತ್ರಗಳ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

’ಬ್ರೆಥ್‌ಲೆಸ್’ ಗೋದಾರ್ದ್‌ನ ಮೊದಲ ಚಿತ್ರ. ತನ್ನ ಮೊದಲ ಚಿತ್ರದಲ್ಲೇ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸಿದ್ಧ ಮಾದರಿಗಳನ್ನೆಲ್ಲಾ ಮುರಿದು ಹೊಸ ದೃಶ್ಯಭಾಷೆಗೆ ನಾಂದಿ ಹಾಡಿದ. ಅವನಿಗೆ ಯಾವುದೇ ಪೂರ್ವಗ್ರಹಗಳಿರಲಿಲ್ಲ ಮತ್ತು ತನ್ನ ಚಿತ್ರಕ್ಕೆ ಸಾಹಿತ್ಯ, ನಾಟಕ, ಚಿತ್ರಕಲೆ, ಸಂಗೀತದ ಭಿನ್ನ ಪ್ರಕಾರಗಳಿಂದ, ಎಲ್ಲಿಂದ ಏನನ್ನಾದರೂ ನಿರ್ಭಿಡೆಯಿಂದ ಎತ್ತಿಕೊಂಡು ತನ್ನ ಚಿತ್ರಕ್ಕನುಗುಣವಾಗಿ ಬಗ್ಗಿಸಿಕೊಳ್ಳುತ್ತಿದ್ದ. ಪಿಕೋಸೊನ, ಮತೀಸನ, ಪಾಲ್‌ಕ್ಲೀ, ರೆನ್ವಾನ ಚಿತ್ರ, ಮೊಜ಼ಾರ್ಟ್‌ನ ಸಂಗೀತ, ಶೇಕ್ಸ್‌ಪಿಯರ್, ಬರ್ಗ್‌ಮನ್, ಫ್ರಿಟ್ಸ್‌ಲ್ಯಾಂಗ್‌ನ ಉಕ್ತಿಗಳನ್ನು ಎಲ್ಲಿ ಸೂಕ್ತವೆನಿಸುತ್ತೋ ಅಲ್ಲಲ್ಲಿ ಬಳಸುವುದರ ಜೊತೆಗೆ ಶಬ್ದಗಳೊಂದಿಗಿನ ಟೆಸ್ಟ್‌ಗೂ ಪ್ರಾಮುಖ್ಯತೆ ಕೊಟ್ಟನು.

ಗೋದಾರ್ದ್ ಸಿನಿ ರಸಿಕರು ಎಂದು ಅನ್ನಿಸಿಕೊಂಡವರನ್ನು ಗೇಲಿ ಮಾಡಿದನು; ಸಂದರ್ಶನಗಳಲ್ಲಿ ಪ್ರಶ್ನೆ ಕೇಳುವವರಿಗೇ ಮರುಪ್ರಶ್ನೆಗಳನ್ನೆಸೆದು ಅವಾಕ್ಕಾಗಿಸಿದನು; ಸೋಗಲಾಡಿಗಳನ್ನು ಅಪಹಾಸ್ಯ ಮಾಡಿದನು; ಅವನ ಈ ವಿಲಕ್ಷಣ ನಡವಳಿಕೆಗಳು ಬರೀ ಸಿನೆಮಾಗೆ ಮಾತ್ರ ಸೀಮಿತವಾಗಿರಲಿಲ್ಲ, ತನ್ನ ನಿಜಜೀವನದಲ್ಲೂ ಅದನ್ನು ಎಗ್ಗಿಲ್ಲದೇ ರೂಢಿಸಿಕೊಂಡಿದ್ದನು. ಅದಕ್ಕೆ ಅವನ ’ಕಿಂಗ್ ಲಿಯರ್’ ಚಿತ್ರ ಒಂದು ಉತ್ತಮ ಉದಾಹರಣೆ. 1985ರಲ್ಲಿ ಗೋದಾರ್ದ್ ಕಾನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ; ಭೋಜನ ಔತಣಕೂಟವೊಂದಲ್ಲಿ ಕೆನಾನ್ ಗ್ರೂಪ್ ಎಂಬ ಕಂಪನಿಯ ಪಾಲುದಾರರಾಗಿದ್ದ, ಜನಪ್ರಿಯ ಚಲನಚಿತ್ರಗಳ ನಿರ್ಮಾಪಕ ವ್ಯಾಪಾರಿಗಳಾದ ಗೊಲಾನ್ ಅಂಡ್ ಗ್ಲೊಬಸ್‌ರೊಂದಿಗೆ ಚಿತ್ರನಿರ್ಮಾಣವೊಂದಕ್ಕೆ ಒಂದು ಮಿಲಿಯನ್ ಯುಎಸ್ ಡಾಲರ್ಸ್ ಬಂಡವಾಳದ ಒಪ್ಪಂದ ಮಾಡಿಕೊಳ್ಳುತ್ತಾನೆ. ಅದೂ ಕೂಡ ಕೈ ಒರೆಸುವ ಕಾಗದದ ಮೇಲೆ! ಇದಾದ ಒಂದೂವರೆ ವರ್ಷದ ನಂತರ ಆ ಕಂಪನಿಯವರು ಗೋದಾರ್ದ್‌ಗೆ ಫೋನ್ ಮಾಡಿ, ’ನಮಗೆ ಈ ಪ್ರ್ರಾಜೆಕ್ಟ್ ಮಾಡಲು ಸಾಧ್ಯವಿಲ್ಲವೆನ್ನಿಸಿದೆ, ನಾವು ನಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದೇವೆ, ಜೊತೆಗೆ ನಮ್ಮ ಹೆಸರನ್ನೂ’ ಎಂದು ಇತಿಶ್ರೀ ಹಾಡುತ್ತಾರೆ. ಗೋದಾರ್ದ್ ಆ ಫೋನ್ ಸಂಭಾಷಣೆಯನ್ನೇ ರೆಕಾರ್ಡ್ ಮಾಡಿ ಅವನ ’ಕಿಂಗ್ ಲಿಯರ್’ ಚಿತ್ರದ ಆರಂಭದ ಶಾಟ್‌ನಲ್ಲೇ ಸೇರಿಸಿಕೊಂಡ. ಇದು ಗೋದಾರ್ದ್‌ನ ಸೃಜನಶೀಲತೆಯ ಒಂದು ಝಲಕ್. ಕಿಂಗ್ ಲಿಯರ್ ನಾಟಕದ ಮುಖ್ಯ ದ್ರವ್ಯವೇ ಭಾಷೆಯ ಸೋಲು; ಕಿಂಗ್ ಲಿಯರ್ ತನ್ನ ಮೂರು ಜನ ಹೆಣ್ಣುಮಕ್ಕಳನ್ನು ಕೇಳುತ್ತಾನೆ, ’ನಿಮ್ಮಲ್ಲಿ ಯಾರು ಹೆಚ್ಚು ಪ್ರೀತಿಸುವವರು?’ ಮೊದಲ ಇಬ್ಬರು ಉತ್ಪ್ರೇಕ್ಷೆಯಿಂದ ಹೊಗಳಿದರೆ ಮೂರನೆಯ ಮಗಳು ಕಾರ್ಡೀಲಿಯ ತನ್ನ ಇಬ್ಬರು ಅಕ್ಕಂದಿರಿಗಿಂತ ಹೆಚ್ಚಾಗಿ ಅಪ್ಪನನ್ನು ಪ್ರೀತಿಸುತ್ತಿದ್ದರೂ ಅದನ್ನ ಭಾಷೆಯ ಮೂಲಕ ತೋರ್ಗಣಿಸುವುದಿಲ್ಲ. ’ನಿನ್ನ ಅಕ್ಕಂದಿರಿಗಿಂತಲೂ ಹೆಚ್ಚಿನದೇನು ನಿನಗೆ ಬೇಕು ಕೇಳಿಕೋ’ ಅಂದರೆ, ಕಾರ್ಡೀಲಿಯ ’ಏನೂ ಇಲ್ಲ’ವೆನ್ನುತ್ತಾಳೆ. ಈ ನೊ-ಥಿಂಗ್ ಎಂಬ ಪದವನ್ನೇ ಬೇರೆಬೇರೆ ಪದರಗಳಲ್ಲಿ, ವಿಭಿನ್ನ ಸನ್ನಿವೇಶಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸುತ್ತಾ ಹೋಗುತ್ತಾನೆ ಗೋದಾರ್ದ್. ಕಥೆಯ ಹಂಗಿಲ್ಲದೇ ಕಥನ ಕಟ್ಟುವುದನ್ನು ಗೋದಾರ್ದ್‌ನಿಂದ ಕಲಿಯಬೇಕು. ಸಿನೆಮಾ ಮಾಧ್ಯಮದ ಗರಿಷ್ಠ ಸಾಧ್ಯತೆಗಳನ್ನು ಪರದೆಯ ಮೇಲೆ ಸಾಧ್ಯವಾಗಿಸಿದ ಕೀರ್ತಿ ಗೋದಾರ್ದ್‌ಗೆ ಸಲ್ಲುತ್ತದೆ. ಈ ಜಗತ್ತು ಇರುವವರೆಗೂ ಸಿನೆಮಾ ಇತಿಹಾಸದಲ್ಲಿ ಸದಾಕಾಲ ಉಳಿಯುವ ದಂತಕಥೆ ಗೋದಾರ್ದ್.

(ಜೀನ್-ಲ್ಯೂಕ್ ಗೋದಾರ್ದ್ 13 ಸೆಪ್ಟಂಬರ್ 2022ರಂದು ಕೊನೆಯುಸಿರೆಳೆದರು.)

ಎಂ.ಎಸ್. ಪ್ರಕಾಶ್ ಬಾಬು

ಎಂ.ಎಸ್. ಪ್ರಕಾಶ್ ಬಾಬು
ಕಲಾವಿದ ಪ್ರಕಾಶ್ ಬಾಬು ಹಲವು ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದು, ಸದ್ಯಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಿನಿಮಾ ಶಿಕ್ಷಣದ ತರಬೇತಿ ನೀಡುತ್ತಿದ್ದಾರೆ. ಅವರು ನಿರ್ದೇಶಿಸಿದ ’ಅತ್ತಿಹಣ್ಣು ಮತ್ತು ಕಣಜ’ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.


ಇದನ್ನೂ ಓದಿ: ನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...