ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡವು 16 ರನ್‌ಗಳ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ. ಆ ಮೂಲಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿಯವರಿಗೆ ಅರ್ಥಪೂರ್ಣ ವಿದಾಯ ಹೇಳಲಾಯ್ತು. ಈ ಐತಿಹಾಸಿಕ ಸಾಧನೆಗೆ ಕಾರಣವಾದ ಪಂದ್ಯವು ಹಲವು ಹೊಸತನಗಳಿಗೆ ಸಾಕ್ಷಿಯಾಯಿತು.
ವಿವಾದಕ್ಕೆ ಕಾರಣವಾದ ಕೊನೆಯ ವಿಕೆಟ್
ಭಾರತ ಮಹಿಳೆಯರ ತಂಡವು ಮೊದಲು ಬ್ಯಾಟ್ ಮಾಡಿ 45.5 ಓವರ್‌ಗಳಲ್ಲಿ 169 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಾಧಾರಣ ರನ್ ಗುರಿ ಪಡೆದ ಇಂಗ್ಲೆಂಡ್ ಮಹಿಳಾ ತಂಡವು ಭಾರತದ ಬೌಲಿಂಗ್ ದಾಳಿಗೆ ಬೆದರಿತು. ಒಂದು ಹಂತದಲ್ಲಿ 67 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಚಾರ್ಲೋಟ್ ಡೀನ್‌ರವರ ತಾಳ್ಮೆಯ ಆಟದಿಂದ ಗೆಲುವಿನ ಸನಿಹಕ್ಕೆ ಬಂದಿತ್ತು. 80 ಎಸೆತಗಳಲ್ಲಿ 47 ರನ್ ಗಳಿಸಿದ್ದ ಡೀನ್ ಗೆಲ್ಲಲು 39 ಎಸೆತಗಳಲ್ಲಿ 17 ರನ್ ಅಗತ್ಯವಿದ್ದಾಗ ಅನಗತ್ಯ ರನ್ ಔಟ್ ಆಗುವ ಮೂಲಕ ಕೊನೆಯ ವಿಕೆಟ್ ಒಪ್ಪಿಸಿ ಸೋಲೊಪ್ಪಿಕೊಂಡರು.
ಆದರೆ ಅವರ ರನ್ ಔಟ್ ಅಥವಾ ಮಕಂಡಿಂಗ್ ಎಂದು ಕರೆಯುವ ಔಟ್ ಕುರಿತು ವಿವಾದವೆದ್ದಿದೆ. ಕೆಲವರು ಅದನ್ನು ಕಾನೂನುಬದ್ಧ ಔಟ್ ಎಂದರೆ ಮತ್ತೆ ಕೆಲವರು ಇದು ನಿಜವಾದ ಕ್ರೀಡಾ ಸ್ಪೂರ್ತಿಯಲ್ಲ ಎಂದು ಕರೆದಿದ್ದಾರೆ.
ನಡೆದುದ್ದೇನು
ಇಂಗ್ಲೆಂಡ್ ತಂಡ 153 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿದ್ದ ಚಾರ್ಲೋಟ್ ಡೀನ್ ಮತ್ತು ಪ್ರೆಯಾ ಡೆವಿಸ್ 35 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ಆಟ ಆಡುತ್ತಿದ್ದರು. ಗೆಲ್ಲಲು 39 ಎಸೆತಗಳಲ್ಲಿ 17 ರನ್ ಅಗತ್ಯವಿತ್ತು. ಭಾರತದ ದೀಪ್ತಿ ಶರ್ಮಾ ಬೌಲಿಂಗ್ ಮಾಡುತ್ತಿದ್ದಾಗ ನಾಲ್ಕನೆ ಎಸೆತ ಎಸೆಯುವ ಮುನ್ನವೇ ನಾನ್ ಸ್ಟ್ರೈಕರ್ ಎಂಡ್‌ನಲ್ಲಿದ್ದ ಚಾರ್ಲೋಟ್ ಡೀನ್ ರನ್ ಗಾಗಿ ಕ್ರೀಸ್ ಬಿಟ್ಟು ಓಡಿದ್ದರು. ಆದರೆ ದೀಪ್ತಿ ಶರ್ಮಾ ಬೌಲ್ ಮಾಡುವ ಬದಲು ನಾನ್ ಸ್ಟ್ರೈಕರ್ ಎಂಡ್‌ನ ಬೆಲ್ಸ್ ಎಗರಿಸಿದರು. ಅಂಪೈರ್ ಡೆಡ್ ಬಾಲ್ ಸೂಚನೆ ಕೊಟ್ಟಿದ್ದರು. ಆದರೆ ಸಮಾಲೋಚಿಸಿ ಮೂರನೇ ಅಂಪೈರ್ ಮೋರೆ ಹೋದಾಗ ಅವರು ಔಟ್ ಎಂದು ಸೂಚಿಸಿದರು. ಇಂಗ್ಲೆಂಡ್ ತಂಡ ಆಲೌಟ್ ಆಯ್ತು. ಭಾರತ 16 ರನ್‌ಗಳ ಜಯ ಸಾಧಿಸಿ ಸರಣಿ ಕ್ಲೀನ್‌ಸ್ವೀಪ್ ಮಾಡಿತು.
Deepti Sharma nailed it today on field 😄 what she did it was heart breaking feeling for England .
Superb #DeeptiSharma .#ENGvsIND #womenscricket#HarmanpreetKaur #JhulanGoswami #ODI pic.twitter.com/hfaVYq0o5f— YUGANDHAR REDDY G (@AlwaysYuvi10) September 25, 2022
ಪರ ವಿರೋಧದ ಚರ್ಚೆ
ಈ ಕೊನೆಯ ಮಂಕಡಿಂಗ್ ಮೂಲಕ ವಿಕೆಟ್ ಪತನಕ್ಕೆ ಇಂಗ್ಲೆಂಡ್‌ನ ಆಟಗಾರರು ಅಸಮ್ಮತಿ ಸೂಚಿಸಿದ್ದಾರೆ. ಇದು ಕ್ರೀಡಾಸ್ಫೂರ್ತಿಯಲ್ಲ ಎಂದಿದ್ದಾರೆ. ಆದರೆ ಅದು ಕ್ರಿಕೆಟ್ ನಿಯಮಗಳಲ್ಲಿದೆ ಮತ್ತು ನಿಯಮಬದ್ದವಾಗಿದೆ ಎಂದು ಭಾರತದ ನಾಯಕಿ ಹರ್ಮನ್ ಪ್ರೀತ್ ಕೌರ್ ಸಮರ್ಥಿಸಿಕೊಂಡಿದ್ದಾರೆ.
Absolutely pathetic way to 'win' a cricket match.
The whole India team should be ashamed of themselves. https://t.co/TrGcU8CwqW— Piers Morgan (@piersmorgan) September 24, 2022
ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನಿಯಮಗಳನ್ನು ಉಲ್ಲೇಖಿಸಿ ಇಂಗ್ಲೆಂಡ್ ಅಭಿಮಾನಿಗಳ ಟೀಕೆಗೆ ಉತ್ತರ ನೀಡಿದ್ದಾರೆ.
Funny to see so many English guys being poor losers. #Runout . pic.twitter.com/OJOibK6iBZ
— Virender Sehwag (@virendersehwag) September 24, 2022
ಇದನ್ನೂ ಓದಿ: ಭಾರತಕ್ಕೆ ಚೀತಾಗಳು ಬಂದಿವೆ ಇನ್ನು ಭಯವಿಲ್ಲ!


