2015-2017ರ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ 9,934.02 ಎಕರೆ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಿದ್ದಕ್ಕಾಗಿ ಮಾಜಿ ಐಎಎಸ್ ಅಧಿಕಾರಿಗಳಾದ ಮದನ್ ಗೋಪಾಲ್ ಮತ್ತು ಟಿಎಂ ವಿಜಯ ಭಾಸ್ಕರ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಚಾರ್ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEF&CC) ದಕ್ಷಿಣ ವಲಯಕ್ಕೆ ದೂರು ಸಲ್ಲಿಸಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಪ್ರದೇಶಗಳನ್ನು ಡಿ-ನೋಟಿಫೈ ಮಾಡುವ ಮೊದಲು ಒಕ್ಕೂಟ ಸರ್ಕಾರದ ಅನುಮೋದನೆ ಪಡೆಯುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದರೂ, ಈ ಪ್ರಕರಣದಲ್ಲಿ ಆ ರೀತಿ ಆಗಲಿಲ್ಲ ಎಂದು ಶಿವಮೊಗ್ಗ ಮೂಲದ ಹೋರಾಟಗಾರ ಸೆಪ್ಟೆಂಬರ್ 29 ರಂದು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಲ್ಲಾ ಡಿ-ನೋಟಿಫಿಕೇಶನ್ ಆದೇಶಗಳನ್ನು ಹಿಂಪಡೆಯಲು ಮತ್ತು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಗಿರೀಶ್ ಆಚಾರ್ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮೈಸೂರು: ಅಲೆಮಾರಿಗಳನ್ನು ಒಕ್ಕಲೆಬ್ಬಿಸಲು ಹೊರಟಿದೆಯೇ ವ್ಯವಸ್ಥೆ?
ಸೆಪ್ಟೆಂಬರ್ 1 ರಂದು ಗಿರೀಶ್ ಆಚಾರ್ ಅವರು ಕರ್ನಾಟಕ ಲೋಕಾಯುಕ್ತರ ಮುಂದೆ ಈ ವಿಷಯ ಪ್ರಸ್ತಾಪಿಸಿ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಮದನ್ ಗೋಪಾಲ್ ಪ್ರಸ್ತುತ ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿಯ ಅಧ್ಯಕ್ಷರಾಗಿದ್ದರೆ, ವಿಜಯ ಭಾಸ್ಕರ್ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದಾರೆ.
ಮದನ್ ಗೋಪಾಲ್ ಮತ್ತು ಟಿಎಂ ವಿಜಯ ಭಾಸ್ಕರ್ ಅವರು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 28 ರ ಅಡಿಯಲ್ಲಿ 56 ಡಿ-ನೋಟಿಫಿಕೇಶನ್‌ಗಳನ್ನು ಹೊರಡಿಸಿದ್ದಾರೆ ಎಂದು ಗಿರೀಶ್ ಆಚಾರ್ ಪರ ವಕೀಲ ವೀರೇಂದ್ರ ಪಾಟೀಲ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಶಶಿ ತರೂರು v/s ಮಲ್ಲಿಕಾರ್ಜುನ ಖರ್ಗೆ; ದಿಗ್ವಿಜಯ್ ಸಿಂಗ್ ಕಣದಿಂದ ಹೊರಕ್ಕೆ
“ಡಿ-ನೋಟಿಫಿಕೇಶನ್‌ಗಳನ್ನು ನೀಡಲು ಕೇಂದ್ರ ಸರ್ಕಾರದಿಂದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಇಬ್ಬರೂ ವಾದಿಸುತ್ತಾರೆ. ಆದಾಗ್ಯೂ, ಅರಣ್ಯ ಸಂರಕ್ಷಣಾ ಕಾಯಿದೆ, 1980, ಸೆಕ್ಷನ್ 2 ‘ಅರಣ್ಯವನ್ನು ಮೀಸಲಿಡುವ ನಿರ್ಬಂಧ ಅಥವಾ ಅರಣ್ಯೇತರ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸುವುದು’ ಕುರಿತು ಸ್ಪಷ್ಟವಾಗಿ ಹೇಳುತ್ತದೆ. ಒಕ್ಕೂಟ ಸರ್ಕಾರದ ಪೂರ್ವಾನುಮತಿ ಹೊರತುಪಡಿಸಿ ಯಾವುದೇ ರಾಜ್ಯ ಸರ್ಕಾರ ಅಥವಾ ಇತರ ಯಾವುದೆ ಪ್ರಾಧಿಕಾರವು ಯಾವುದೇ ಬದಲಾವಣೆಯನ್ನು ಮಾಡಬಾರದು ಎಂದು ಹೇಳುತ್ತದೆ” ಎಂದು ವೀರೇಂದ್ರ ಪಾಟೀಲ್ ಹೇಳಿದ್ದಾರೆ.
ಶರಾವತಿ ಜಲಾಶಯ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಲ್ಪಿಸಲು ಶಿವಮೊಗ್ಗ ಜಿಲ್ಲೆಯ ಸಾಗರ ಅರಣ್ಯ ವಿಭಾಗದಲ್ಲಿ 14,848.83 ಹೆಕ್ಟೇರ್ ಅರಣ್ಯ ಭೂಮಿಯನ್ನು 1996 ಮೇ 5 ರಂದು ಒಕ್ಕೂಟ ಸರ್ಕಾರವು ಮಂಜೂರು ಮಾಡಿದೆ ಎಂದು ಪಾಟೀಲ್ ವಿವರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ‘ಪೇಸಿಎಂ ಆಕ್ಷನ್ ಕಮಿಟಿ’ ವಾಟ್ಸ್‌ಅಪ್ ಗ್ರೂಪ್: ಪೋಸ್ಟರ್ ಅಭಿಯಾನ ಬಳಿಕ ವಿಡಿಯೊ ಪ್ರಯೋಗ ಮಾಡಿದ ಕಾಂಗ್ರೆಸ್!
“1978 ರ ಮೊದಲು ಮಾಡಿದ ಅತಿಕ್ರಮಣಗಳನ್ನು ಒಕ್ಕೂಟ ಸರ್ಕಾರವು ಸಕ್ರಮಗೊಳಿಸಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯನ್ನು 1980 ರಲ್ಲಿ ಜಾರಿಗೊಳಿಸಲಾಯಿತು ಮತ್ತು ನಂತರ ಅರಣ್ಯ ಭೂಮಿಯನ್ನು ಬೇರೆ ಉದ್ದೇಶಗಳಿಗೆ ಬಳಸಲು ಒಕ್ಕೂಟ ಸರ್ಕಾರದ ಪೂರ್ವಾನುಮತಿ ಅಗತ್ಯ ಎಂದು ಕಡ್ಡಾಯಗೊಳಿಸಲಾಯಿತು. ಹಾಗಾಗಿ 2015-2017ರ ಅವಧಿಯಲ್ಲಿ ಮಾಜಿ ಐಎಎಸ್ ಅಧಿಕಾರಿಗಳು ಮಾಡಿದ ಡಿ-ನೋಟಿಫಿಕೇಶನ್‌ಗಳು ಕಾನೂನುಬಾಹಿರ ಮತ್ತು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತವೆ” ಎಂದು ವೀರೇಂದ್ರ ಪಾಟೀಲ್ ಹೇಳಿದ್ದಾರೆ.


