ಡಿಸೆಂಬರ್ 31 ರೊಳಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ (SEC)ಕ್ಕೆ ರಾಜ್ಯ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ. ಈ ಹಿಂದೆ ಹೊರಡಿಸಿದ್ದ ಬಿಬಿಎಂಪಿ ವಾರ್ಡ್ ಓಬಿಸಿ ಮೀಸಲಾತಿ ಪಟ್ಟಿಯನ್ನು ನ್ಯಾಯಾಲಯ ರದ್ದು ಮಾಡಿದೆ.
ನವೆಂಬರ್ 30 ರೊಳಗೆ ಮಹಿಳೆಯರು ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಗಳಿಗೆ ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯನ್ನು ಪುನಃ ಹೊಸದಾಗಿ ಮಾಡುವಂತೆ ಕೂಡಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿವಿಧ ವರ್ಗಗಳ ಅಡಿಯಲ್ಲಿ 243 ವಾರ್ಡ್‌ಗಳಿಗೆ ನಿಗದಿಪಡಿಸಿದ ಮೀಸಲಾತಿಯ ಕರಡು ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಈ ನಿರ್ದೇಶನಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಯಲ್ಲಿ ಮೀಸಲಾತಿಯ ಪಟ್ಟಿಯಲ್ಲಿ ಬಿಜೆಪಿ ಕೈವಾಡ
ಮಹಿಳೆಯರು ಮತ್ತು OBC ಗಳಿಗೆ ಮೀಸಲಾತಿಯನ್ನು “ಯಾದೃಚ್ಛಿಕವಾಗಿ” ಮಾಡಲಾಗಿರುವುದರಿಂದ ಈ ನಿರ್ಧಾರವನ್ನು ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿರುವುದರಿಂದ ಆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನವೆಂಬರ್ 30ರೊಳಗೆ ನಿಗದಿತ ಪ್ರಕ್ರಿಯೆ ಪೂರ್ಣಗೊಳಿಸಿ ಮೀಸಲಾತಿ ಕುರಿತು ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ, “ಡಿಸೆಂಬರ್ 31ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು” ಎಂದು ಆದೇಶಿಸಿದೆ.
OBC ಮೀಸಲಾತಿಗೆ ಸಂಬಂಧಿಸಿದಂತೆ, OBC ಮೀಸಲಾತಿಗಳನ್ನು ಶಿಫಾರಸು ಮಾಡಲು ಸ್ಥಾಪಿಸಲಾದ ಆಯೋಗಕ್ಕೆ ನಿಖರವಾದ OBC ಜನಸಂಖ್ಯೆಯ ಡೇಟಾವನ್ನು ಒದಗಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಿದೆ. ಹೀಗಾಗಿ ಆಯೋಗದಿಂದ ಮಾಹಿತಿಗಳನ್ನು ಸ್ವೀಕರಿಸಿದ ನಂತರ ಸರ್ಕಾರವು ಒಬಿಸಿ ಮೀಸಲಾತಿಗಳನ್ನು ನಿಗದಿಪಡಿಸುತ್ತದೆ.
ಇದನ್ನೂ ಓದಿ: ಕೇಶವಕೃಪಾದಲ್ಲಿ ಸಿದ್ಧವಾಯಿತೇ ಬಿಬಿಎಂಪಿ ವಾರ್ಡ್ ವಿಂಗಡಣೆಯ ವರದಿ?
ಬಿಬಿಎಂಪಿಗೆ ನಡೆಯಲಿರುವ ಚುನಾವಣೆಗೆ ಅಂತಿಮ ಮತದಾರರ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಪಟ್ಟಿಯು 79,19,563 ಮತದಾರರನ್ನು ಒಳಗೊಂಡಿದೆ. ಇದರಲ್ಲಿ 41,14,383 ಪುರುಷರು, 38,03,747 ಮಹಿಳೆಯರು ಮತ್ತು 1,433 ಇತರರು ಇದ್ದಾರೆ.


