Homeದಲಿತ್ ಫೈಲ್ಸ್ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

ದೇಶದ ಯಾವುದೇ ಮುಖ್ಯವಾಹಿನಿ ಮಾಧ್ಯಮದಲ್ಲಿ ದಲಿತ, ಆದಿವಾಸಿ, ಒಬಿಸಿ ಮುಖ್ಯಸ್ಥರಿಲ್ಲ: ವರದಿ

- Advertisement -
- Advertisement -

ಭಾರತೀಯ ಮಾಧ್ಯಮಗಳಲ್ಲಿ ಸುಮಾರು 90 ಪ್ರತಿಶತದಷ್ಟು ನಾಯಕತ್ವದ ಸ್ಥಾನಗಳನ್ನು ಮೇಲ್ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ. ಒಬ್ಬನೇ ಒಬ್ಬ ದಲಿತ ಅಥವಾ ಆದಿವಾಸಿಯು ಭಾರತೀಯ ಮುಖ್ಯವಾಹಿನಿ ಮಾಧ್ಯಮವನ್ನು ಮುನ್ನಡೆಸುತ್ತಿಲ್ಲ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ.

“ನಮ್ಮ ಕಥೆಗಳನ್ನು ಯಾರು ಹೇಳುತ್ತಾರೆ ಎಂಬುದು ಮುಖ್ಯ: ಭಾರತೀಯ ಮಾಧ್ಯಮದಲ್ಲಿ ಅಂಚಿನಲ್ಲಿರುವ ಜಾತಿ ಗುಂಪುಗಳ ಪ್ರಾತಿನಿಧ್ಯ” ಎಂಬ ವಿಷಯದ ಕುರಿತು ಎರಡನೇ ಆವೃತ್ತಿಯ ವರದಿಯನ್ನು ‘ಆಕ್ಸ್‌ಫ್ಯಾಮ್ ಇಂಡಿಯಾ-ನ್ಯೂಸ್‌ಲಾಂಡ್ರಿ’ ಬಿಡುಗಡೆ ಮಾಡಿದ್ದು ಆತಂಕಕಾರಿ ಸಂಗತಿಗಳು ಹೊರಬಿದ್ದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವರದಿಯ ಎರಡನೇ ಆವೃತ್ತಿ ಹಲವಾರು ಕಟು ಸತ್ಯಗಳನ್ನು ಹೊರಗೆಳೆದಿದೆ. ಮುಖ್ಯವಾಹಿನಿ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುಮಾರು 90 ಪ್ರತಿಶತ ನಾಯಕತ್ವ ಸ್ಥಾನಗಳನ್ನು ಪರಿಶಿಷ್ಟ ಜಾತಿಯಿಲ್ಲದ ಸಾಮಾನ್ಯ ಜಾತಿ ಗುಂಪುಗಳು ಆಕ್ರಮಿಸಿಕೊಂಡಿವೆ ಎಂದು ವರದಿಯು ಬಹಿರಂಗಪಡಿಸಿದೆ.

ದಕ್ಷಿಣ ಏಷ್ಯಾದ ಅತಿದೊಡ್ಡ ಸುದ್ದಿ ಮಾಧ್ಯಮ ವೇದಿಕೆಯಾದ ‘ದಿ ಮೀಡಿಯಾ ರಂಬಲ್‌’ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, “ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ 5 ಲೇಖನಗಳಲ್ಲಿ 3 ಲೇಖನಗಳನ್ನು ಸಾಮಾನ್ಯ ಜಾತಿ ಲೇಖಕರು ಬರೆದರೆ, ಕಟ್ಟಕಡೆಯ ಜಾತಿಗಳು (SC, ST ಅಥವಾ OBC) ಕೇವಲ 1 ಲೇಖನವನ್ನಷ್ಟೇ ಬರೆಯುತ್ತಿವೆ.”

ಪತ್ರಿಕೆಗಳು, ಟಿವಿ ಸುದ್ದಿ ವಾಹಿನಿಗಳು, ಸುದ್ದಿ ವೆಬ್‌ಸೈಟ್‌ಗಳು, ನಿಯತಕಾಲಿಕೆಗಳು ಸೇರಿದಂತೆ 121 ಸುದ್ದಿಮನೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವುಗಳ ನಾಯಕತ್ವ ಸ್ಥಾನಗಳಲ್ಲಿ (ಸಂಪಾದಕ-ಮುಖ್ಯ, ವ್ಯವಸ್ಥಾಪಕ ಸಂಪಾದಕ, ಕಾರ್ಯನಿರ್ವಾಹಕ ಸಂಪಾದಕ, ಬ್ಯೂರೋ ಮುಖ್ಯಸ್ಥ, ಇನ್‌ಪುಟ್/ಔಟ್‌ಪುಟ್ ಸಂಪಾದಕ) 106 ಸಂಸ್ಥೆಗಳು ಬಲಾಢ್ಯ ಜಾತಿಗಳಿಂದ ಆಕ್ರಮಿಸಿಕೊಂಡಿವೆ.

ಐದು ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳು, ಆರರಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಇವೆ. ನಾಲ್ಕು ಸಂಸ್ಥೆಗಳ ಸ್ಥಿತಿ ಗುರುತಿಸಲಾಗಿಲ್ಲ. ಡಿಬೇಟ್‌ ನಡೆಸುವವರ ಪೈಕಿ ಪ್ರತಿ ನಾಲ್ಕು ಆಂಕರ್‌ಗಳಲ್ಲಿ ಮೂವರು ಮೇಲ್ಜಾತಿಯವರು. ಹಿಂದಿ ಚಾನೆಲ್‌ಗಳ ಒಟ್ಟು 40 ಮತ್ತು ಇಂಗ್ಲಿಷ್ ಚಾನೆಲ್‌ಗಳ 47 ಆಂಕರ್‌ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಅವರಲ್ಲಿ ಒಬ್ಬರೂ ದಲಿತ, ಆದಿವಾಸಿ ಅಥವಾ ಒಬಿಸಿ ಇಲ್ಲ.

“ಸುದ್ದಿ ವಾಹಿನಿಗಳು ತಮ್ಮ ಪ್ರೈಮ್‌ಟೈಮ್ ಚರ್ಚಾ ಕಾರ್ಯಕ್ರಮಗಳಲ್ಲಿ ಶೇಕಡಾ 70ರಷ್ಟು ಮೇಲ್ಜಾತಿಗಳ ಪ್ಯಾನೆಲಿಸ್ಟ್‌ಗಳನ್ನು ಹೊಂದಿರುತ್ತವೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗುವ ಒಟ್ಟು ಲೇಖನಗಳಲ್ಲಿ ದಲಿತರು ಮತ್ತು ಆದಿವಾಸಿಗಳು ಶೇಕಡಾ 5ಕ್ಕಿಂತ ಹೆಚ್ಚು ಬರೆಯುವುದಿಲ್ಲ. ಹಿಂದಿ ಪತ್ರಿಕೆಗಳು ಸ್ವಲ್ಪ ಉತ್ತಮವಾಗಿವೆ. ಸುಮಾರು 10 ಪ್ರತಿಶತದಷ್ಟು ದಲಿತ ಲೇಖಕರು ಬರೆಯುತ್ತಾರೆ” ಎಂಬುದನ್ನು ವರದಿ ಉಲ್ಲೇಖಿಸಿದೆ.

ಸುದ್ದಿ ವೆಬ್‌ಸೈಟ್‌ಗಳಲ್ಲಿ 72 ಪ್ರತಿಶತ ಲೇಖನಗಳನ್ನು ಮೇಲ್ಜಾತಿ ಜನರು ಬರೆದಿದ್ದಾರೆ. ಅಧ್ಯಯನಕ್ಕೆ ಒಳಪಡಿಸಲಾದ 12 ನಿಯತಕಾಲಿಕೆಗಳ ಕವರ್ ಪೇಜ್‌ನಲ್ಲಿ ಬಂದ 972 ಲೇಖನಗಳಲ್ಲಿ 10 ಮಾತ್ರ ಜಾತಿಗೆ ಸಂಬಂಧಿಸಿದ ವಿಷಯಗಳಾಗಿದ್ದವು.

ಆಕ್ಸ್‌ಫ್ಯಾಮ್ ಇಂಡಿಯಾದ ಸಿಇಒ ಅಮಿತಾಭ್ ಬೆಹರ್, “ಮೂರು ವರ್ಷಗಳಲ್ಲಿ ನಮ್ಮ ಎರಡನೇ ವರದಿಯನ್ನು ಬಿಡುಗಡೆ ಮಾಡಿದ್ದೇವೆ. ಭಾರತದಲ್ಲಿನ ಸುದ್ದಿಮನೆಗಳು ಕಟ್ಟಕಡೆಯ ಸಮುದಾಯಗಳನ್ನು ಒಳಗೊಳ್ಳುತ್ತಿಲ್ಲ ಎಂಬುದನ್ನು ವರದಿ ತೋರಿಸುತ್ತಲೇ ಇದೆ. ಈ ಎಲ್ಲಾ ವೇದಿಕೆಗಳಲ್ಲಿ ದಲಿತರು, ಆದಿವಾಸಿಗಳು ಮತ್ತು ಬಹುಜನರಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವಲ್ಲಿ ಮಾಧ್ಯಮ ಸಂಸ್ಥೆಗಳ ನಾಯಕರು ವಿಫಲರಾಗುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.

ದೇಶದ ಮಾಧ್ಯಮಗಳು ಕೇವಲ ತನ್ನ ಸುದ್ದಿ ಪ್ರಸಾರವಷ್ಟೇ ಅಲ್ಲದೇ ನೇಮಕಾತಿ ಪದ್ಧತಿಯಲ್ಲೂ ಸಮಾನತೆಯ ಸಾಂವಿಧಾನಿಕ ತತ್ವವನ್ನು ಎತ್ತಿಹಿಡಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ರಾಜ್ಯ ರಾಜಕಾರಣದಲ್ಲಿ ದಲಿತರನ್ನು ಒಡೆದು ಆಳುವುದು ಸುಲಭವೇ?

“ಮಾಧ್ಯಮ ಸಂಸ್ಥೆಗಳು ತಕ್ಷಣವೇ ನೇಮಕಾತಿ ರೀತಿಯಲ್ಲಿ ಗಮನಾರ್ಹವಾದ ಕೂಲಂಕಷ ಪರೀಕ್ಷೆಯನ್ನು ನಡೆಸಿಕೊಳ್ಳಬೇಕಿದೆ. ದೇಶಾದ್ಯಂತ ಸುದ್ದಿಮನೆಗಳು ಹೆಚ್ಚು ವೈವಿಧ್ಯಮಯವಾಗಿ, ಎಲ್ಲರನ್ನೂ ಒಳಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ತಾರತಮ್ಯ ಮತ್ತು ಅನ್ಯಾಯವಿಲ್ಲದೆ ಭಾರತವನ್ನು ಕಟ್ಟಲು ಇದು ಅಗತ್ಯವಾಗಿದೆ” ಎಂದಿದ್ದಾರೆ ಬೆಹರ್‌.

ವರದಿಯು ಸುಮಾರು 43 ಭಾರತೀಯ ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳನ್ನು, ಅವುಗಳ ಕವರೇಜ್, ನಾಯಕತ್ವದ ಸಾಮಾಜಿಕ ಸ್ಥಾನಮಾನವನ್ನು, ಸಂಸ್ಥೆಗಳಿಂದ ನೇಮಕಗೊಂಡ ಪತ್ರಕರ್ತರ ಜಾತಿ ಹಿನ್ನೆಲೆಯನ್ನು ಅಧ್ಯಯನ ಮಾಡಿದೆ.

ಏಪ್ರಿಲ್ 2021 ಮತ್ತು ಮಾರ್ಚ್ 2022ರ ನಡುವೆ ನಡೆಸಲಾದ ಸಂಶೋಧನೆಯು ನಿಯತಕಾಲಿಕೆ ಮತ್ತು ದಿನಪತ್ರಿಕೆಗಳಲ್ಲಿ ಪ್ರಕಟವಾದ 20,000ಕ್ಕೂ ಹೆಚ್ಚು ಲೇಖನಗಳನ್ನು, 76 ಆಂಕರ್‌ಗಳು ಮತ್ತು 3,318 ಪ್ಯಾನೆಲಿಸ್ಟ್‌ಗಳ 2,075 ಪ್ರೈಮ್-ಟೈಮ್ ಚರ್ಚೆಗಳನ್ನು, 12 ತಿಂಗಳ ಆನ್‌ಲೈನ್ ಸುದ್ದಿ ವರದಿಗಳನ್ನು ವಿಶ್ಲೇಷಣೆ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಂಬೇಡ್ಕರ್ ಅನುಯಾಯಿಗಳು ಅದವರು ಧರ್ಮ ದಲ್ಲಿ ಯು ಭಗವಾನ್ ಬುದ್ಧ ಧರ್ಮದಲ್ಲಿ ದಲಿತ ಸಂಘಟನೆಗಳು ಮತ್ತು ಆದಿವಾಸಿಗಳು ಅನುಸರಿಸುತ್ತಾ ದ್ಯಾನ ಓದು ಕೆಲಸ ಉದ್ಯೋಗ ಇತ್ಯಾದಿ ಯಲ್ಲಿ ಒಂದೇ ಮನಸ್ಸು ಒಂದೆ ಅಭಿಪ್ರಾಯ ಇರುತ್ತಿತ್ತು ಪರಿಶಿಷ್ಟ ಜಾತಿ ಅಭಿವೃದ್ಧಿ ಆಗುತ್ತಿತ್ತು ಒಗ್ಗಟ್ಟು ಬೇರುರಿ ಬೆಳೆದು ಫಲ ಕೋಡುತ್ತಿತ್ತು , ಮನುಸ್ಮೃತಿ ವಿರುದ್ಧ ಇರುವ ದಲಿತ ಸಂಘಟನೆಗಳು ಮತ್ತು ಪರಿಶಿಷ್ಟ ಜನಾಂಗದವರು ಮನೆಯಲ್ಲಿ ಹೆಂಗಸರು ಮಕ್ಕಳು ಮನುಸ್ಮೃತಿ ಸಂಸ್ಕೃತಿ ಒಪ್ಪಿಕೊಂಡು ಅದೆ ದೇವರೆಂದು ಅಸತ್ಯದ ದಾರಿಯಲ್ಲಿ ನೆಡೆಯುವಗ ಜಾತಿ ಅಭಿವೃದ್ಧಿ ಯ ಬದಲಿಗೆ ಗುಲಾಮರಾಗಿ ಇದ್ದಾರೆ ಅಂಬೇಡ್ಕರ್ ಇದೆಲ್ಲ ವಿರುದ್ಧ ಇದ್ದಾರು ಆದಿವಾಸಿ ದಲಿತರಿಗೆ ಸರಿಯಾದ ಸಂಘಟನೆಯ ಲಿಡರ್ ಮತ್ತು ಮಾರ್ಗದರ್ಶನ ದ ಕೋರತೆ ಇವತ್ತಿನ ಅವನತಿಗೆ ಕಾರಣ ಸರ್ಕಾರ ಎಷ್ಟೊಸಾಲ ಕೋಡುತ್ತಿದೆ ತೇಗೆದುಕೊಂಡ ದಲಿತ ಆದಿವಾಸಿಗಳ ಅಭಿವೃದ್ಧಿಗೆ ಬಳಸಲು ವಿಪಲ ಅದವರು ಒಬ್ಬರಿಗೊಬ್ಬರು ಏಕ ಮನಸ್ಸು ಇಲ್ಲಾ ಯಾರು ಚೈತನ್ಯ ದಲ್ಲಿ ಬೆಳೆಯಲಿಲ್ಲಾ ಬೆಳೆದವರು ಜಾತಿಯ ಅಭಿವೃದ್ಧಿ ಕಾಳಜಿ ವಯಿಸಲಿಲ್ಲಾ ಆದಿವಾಸಿ ದಲಿತರು ಅದಿವಾಸಿದಲಿತರನ್ನೆ ತುಳಿಯಲು ದಲಿತ ಜಾತಿಯನ್ನು ಬಳಸಿಕೊಂಡು ಅಟ್ಟಹಾಸ ದಿಂದ ಇದೆ ಮನುಸ್ಮೃತಿ ಸಂಸ್ಕೃತಿ ಜಾತಿ ಇದನ್ನು ಅಭಿವೃದ್ಧಿ ಪಡಿಸುತ್ತಿರುವುದು ಆದಿವಾಸಿ ದಲಿತ ಜಾತಿಗಳಿಗೆ ಇದೆ ಅಙ್ನಾನ ಇದನ್ನು ಗುರುತ್ತಿಸುವುದರಲ್ಲಿ ಸಂಘಟನೆಯ ಕಾರ್ಯಕರ್ತರು ವಿಫಲವೆ ಕಾರಣ ಸಂಘಟನೆಯ ಆರ್ಥಿಕ ಅಭಿವೃದ್ಧಿ ಮಾರ್ಗ ತಿಳಿಯದೆ ಇರುವ ಅಙ್ನಾನವೆ ಕಾರಣ.ನಾವು ಮಾಂಸಾಹಾರಿಗಳು ಅಗಿರುವುದರಿಂದ ಮಾಂಸಾಹಾರಿಗಳ ಧರ್ಮ ಮಾರ್ಗದಲ್ಲಿ ನೆಡೆದರೆ ಮಾತ್ರ ಅಭಿವೃದ್ಧಿ ಭಗವಾನ್ ಬುದ್ಧ, ಅಮ್ಮ ಭಗವಾನ್, ಕ್ರೈಸ್ತ ಮುಸ್ಲಿಂ ಇಂತವುಗಳ ಅನುಸರಿಸಿ ನೆಡೆದರೆ ಮಾತ್ರ ಅಭಿವೃದ್ಧಿ ಮತ್ತು ಎಕತ್ವ.ಜೀವ ಇರುವ ದೇವ,ನ್ನು ಆರಾಧಿಸಿ (ಮನುಸ್ಮೃತಿಯ ಸಂಸ್ಕೃತಿ ಬಿಡಿ ತುಳಿಯುತ್ತಾರೆ ಜಾತಿ ಧರ್ಮ ಹೆಸರಲ್ಲಿ ಗುಲಾಮರಾಗಿ ಬೇಡಿ)

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...