ಹೈಕೋರ್ಟ್ ಆದೇಶದ ನಂತರ ಶನಿವಾರ ಆ್ಯಪ್ ಆಧಾರಿತ ಅಗ್ರಿಗೇಟರ್ ಉಬರ್ ಬೆಂಗಳೂರಿನಲ್ಲಿ ತನ್ನ ಕನಿಷ್ಠ ಆಟೋ ದರವನ್ನು ರೂ. 35 ಕ್ಕೆ ಇಳಿಸಿದೆ. ಸರ್ಕಾರ ನಿಗದಿಪಡಿಸಿದ ಮೂಲ ದರಗಳು ಮತ್ತು ಅನ್ವಯವಾಗುವ ಜಿಎಸ್‌ಟಿಗಿಂತ 10% ಹೆಚ್ಚು ಶುಲ್ಕ ವಿಧಿಸುವ ಮೂಲಕ ಆಟೋ ರಿಕ್ಷಾಗಳನ್ನು ಚಲಾಯಿಸಲು ಕರ್ನಾಟಕ ಹೈಕೋರ್ಟ್ ಅಗ್ರಿಗೇಟರ್‌ಗಳಿಗೆ ಹೈಕೋರ್ಟ್ ಅನುಮತಿ ನೀಡಿತ್ತು.
“ಆಟೋ ಚಾಲಕರು ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುವ ಹಕ್ಕನ್ನು ಹೊಂದಿದ್ದಾರೆಂದು ಗುರುತಿಸುವ ನ್ಯಾಯಾಲಯದ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಅವರ ವೆಚ್ಚವನ್ನು ಭರಿಸಲು ಮತ್ತು ಅವರ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಲು ಅನುವು ಮಾಡುವ ಉಬರ್‌ನಂತಹ ಪ್ಲಾಟ್‌ಫಾರ್ಮ್‌ಗಳು ಬುಕಿಂಗ್ ಶುಲ್ಕವನ್ನು ವಿಧಿಸಬಹುದು ಎಂಬುದನ್ನು ಕೂಡಾ ಅದು ಹೇಳಿದೆ” ಎಂದು ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿ ಉಬರ್ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬೆಂಗಳೂರಿನಲ್ಲಿ ಓಲಾ-ಉಬರ್‌ಗೆ ಸಾರಿಗೆ ಇಲಾಖೆ ನಿಷೇಧಿಸಿ ಹೊರಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿ ಆದೇಶಿಸಿದೆ. ಸರ್ಕಾರ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಅದು ಹೇಳಿದ್ದು, ಓಲಾ-ಉಬರ್ ಕಂಪೆನಿಗಳು ಕೂಡಾ ಅನುಕೂಲಕರ ದರವನ್ನು ವಿಧಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ಬೆಂಗಳೂರು: ಓಲಾ-ಉಬರ್ ನಿಷೇಧಕ್ಕೆ ಮಧ್ಯಂತರ ತಡೆ; ಸರ್ಕಾರದ ಆದೇಶಕ್ಕೆ ಹಿನ್ನಡೆ
2 ಕಿಲೋಮೀಟರ್‌ಗಿಂತ ಕಡಿಮೆ ದೂರಕ್ಕೂ 100 ರೂ. ಶುಲ್ಕ ವಿಧಿಸುತ್ತಿದೆ ಎಂದು ಆರೋಪಿಸಿ ಸಾರಿಗೆ ಇಲಾಖೆಯು ಓಲಾ, ಉಬರ್ ಮತ್ತು ರಾಪಿಡೋ ಆಟೋ ಸೇವೆಗಳನ್ನು ನಿಲ್ಲಿಸುವಂತೆ ಸೆಪ್ಟೆಂಬರ್ 6 ರಂದು ನೋಟಿಸ್ ಜಾರಿ ಮಾಡಿತ್ತು.
ಪ್ರಸ್ತುತ, ಬೆಂಗಳೂರಿನಲ್ಲಿ ಮೊದಲ 2 ಕಿ.ಮೀಗೆ ಕನಿಷ್ಠ ಆಟೋ ದರವನ್ನು 30 ರೂ.ಗೆ ನಿಗದಿಪಡಿಸಲಾಗಿದೆ. ನಂತರ ಪ್ರತಿ ಕಿಲೋಮೀಟರ್‌ಗೆ 15 ರೂ. ಶುಲ್ಕ ವಿಧಿಸಲಾಗುತ್ತದೆ.
ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ, “ಈ ಕಂಪನಿಗಳು ತಮ್ಮ ಆಟೋ ಸೇವೆಗಳನ್ನು ಆದಷ್ಟು ಬೇಗನೆ ನಿಲ್ಲಿಸಬೇಕು ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು. ಆದೇಶವನ್ನು ಅನುಸರಿಸಲು ವಿಫಲವಾದರೆ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿತ್ತು.
ಇಂದು ನೀಡಿದ ಮಧ್ಯಂತರ ಆದೇಶದಲ್ಲಿ, ಈ ಹಿಂದೆ ನೀಡಿದ್ದ ಪರವಾನಿಗೆ ಕಾಲಾವಕಾಶ ವಿಸ್ತರಿಸುವಂತೆ ಕೇಳಿಕೊಂಡಿದ್ದು, 2021 ರ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರವನ್ನು ಪಾಲಿಸಬೇಕು ಎಂದು ಹೇಳಿದೆ. ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪಾಲನೆ ಮಾಡಬೇಕು ಮತ್ತು ಹೆಚ್ಚುವರಿ ಸರ್ವಿಸ್ ಚಾರ್ಜ್ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ಹಿಂದೆ 600 ಕೋಟಿ ಡಾಲರ್ ಬಜೆಟ್ ಮಂಡಿಸಿದ್ದ ಅಫ್ಘಾನ್ ಸಚಿವ, ಈಗ ಅಮೆರಿಕಾದಲ್ಲಿ ‘ಉಬರ್’ ಡ್ರೈವರ್!
ಪ್ರಕರಣದ ಕುರಿತು 15 ದಿನ ಒಳಗೆ ವರದಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 07 ವಿಚಾರಣೆ ಮುಂದೂಡಿಕೆ. ವಿಚಾರಣೆ ವೇಳೆ ಸರ್ಕಾರ ನಿಗಧಿ ಮಾಡಿದ ಬೆಲೆಗಿಂತ 20% ಮತ್ತು ಜಿಎಸ್‌ಟಿಗೆ ಓಲಾ-ಉಬರ್ ಪರ ವಕೀಲರು ಮನವಿ ಮಾಡಿದ್ದಾರೆ. ಸರ್ಕಾರದ ಆದೇಶಕ್ಕೆ ಆಟೋ ಚಾಲಕರು ಅಕ್ಷೇಪಣೆ ಮಾಡಿದ ಹಿನ್ನೆಲೆಯಲ್ಲಿ, ಮುಂದಿನ ಸಭೆಗೆ ಆಟೋ ಚಾಲಕರು, ಯೂನಿಯನ್‌ಗಳು ಹಾಗೂ ಸಾರ್ವಜನಿಕರನ್ನು ಕರೆಯಬೇಕು ಎಂದು ನ್ಯಾಯಾಲಯ ಹೇಳಿದೆ.


