Homeಮುಖಪುಟ‘ಜಾಗತಿಕ ಹಸಿವು ಸೂಚ್ಯಂಕ-2022’: 107 ನೇ ಸ್ಥಾನಕ್ಕೆ ಕುಸಿದ ಭಾರತ

‘ಜಾಗತಿಕ ಹಸಿವು ಸೂಚ್ಯಂಕ-2022’: 107 ನೇ ಸ್ಥಾನಕ್ಕೆ ಕುಸಿದ ಭಾರತ

8.5 ವರ್ಷಗಳಲ್ಲಿ ಭಾರತವನ್ನು ಈ ಕತ್ತಲೆಯ ಯುಗಕ್ಕೆ ತಂದಿರುವ ಜವಾಬ್ದಾರಿಯನ್ನು ಬಿಜೆಪಿ ಸರಕಾರವೇ ಹೊರಬೇಕು ಎಂದು ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ ಹೇಳಿದ್ದಾರೆ

- Advertisement -
- Advertisement -

2022 ರಲ್ಲಿ ಭಾರತವು ಜಾಗತಿಕ ಹಸಿವು ಸೂಚ್ಯಂಕ(GHI)ದ 121 ದೇಶಗಳ ಪಟ್ಟಿಯಲ್ಲಿ 107 ನೇ ಸ್ಥಾನಕ್ಕೆ ಕುಸಿದಿದೆ. ದೇಶದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ 19.3% ದಷ್ಟಿದೆ ಎಂದು ವರದಿ ಹೇಳಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ ಎಂದು ತಿಳಿಸಿದೆ. 2021 ರಲ್ಲಿ ದೇಶವು ಈ ಸೂಚ್ಯಂಕದ ಪಟ್ಟಿಯಲ್ಲಿ 101 ನೇ ಸ್ಥಾನದಲ್ಲಿತ್ತು.

ಜಾಗತಿಕ ಹಸಿವು ಸೂಚ್ಯಂಕವು ಜಾಗತಿಕವಾಗಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಮತ್ತು ಟ್ರ್ಯಾಕ್ ಮಾಡುವ ಸಾಧನವಾಗಿದೆ. ಹಸಿವಿನ ಪ್ರಮಾಣದಲ್ಲಿ ಭಾರತಕ್ಕೆ 29.1 ಅಂಕಗಳನ್ನು ನೀಡಲಾಗಿದ್ದು, ದೇಶದ ಹಸಿವಿನ ಮಟ್ಟವು ‘ಗಂಭೀರ’ವಾಗಿದೆ ಎಂದು ವರದಿಯು ಸೂಚಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪಟ್ಟಿಯಲ್ಲಿ 109 ನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನವು ಭಾರತದ ನಂತರದ ಸ್ಥಾನದಲ್ಲಿ ಇರುವ ಏಷ್ಯಾದ ಏಕೈಕ ದೇಶವಾಗಿದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (99), ಬಾಂಗ್ಲಾದೇಶ (84), ನೇಪಾಳ (81) ಮತ್ತು ಶ್ರೀಲಂಕಾ (64) ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ. 2021 ರಲ್ಲಿ ಭಾರತವು 116 ದೇಶಗಳಲ್ಲಿ 101 ನೇ ಸ್ಥಾನದಲ್ಲಿದ್ದರೆ, 2020 ರಲ್ಲಿ 94 ನೇ ಸ್ಥಾನದಲ್ಲಿತ್ತು.

ಇದನ್ನೂ ಓದಿ: ಹಿಂದುತ್ವ ಮತ್ತು ಕಾರ್ಪೋರೇಟ್‌ ಮೈತ್ರಿಯಿಂದಾಗಿ ದೇಶದಲ್ಲಿ ನಿರುದ್ಯೋಗ, ಹಸಿವು, ಬಡತನ ಹೆಚ್ಚುತ್ತಿದೆ: ಸಿಪಿಐ(ಎಂ) ಪಾಲಿಟ್‌‌ಬ್ಯೂರೊ ಸದಸ್ಯ ಪ್ರಕಾಶ್‌ ಕಾರಟ್‌‌

ವಿಶ್ವದ ಅತಿ ಹೆಚ್ಚು ಹಸಿವಿನ ಮಟ್ಟವನ್ನು ಹೊಂದಿರುವ ಪ್ರದೇಶವಾಗಿ ದಕ್ಷಿಣ ಏಷ್ಯಾವು ಹೊರಹೊಮ್ಮಿದೆ. ಇಲ್ಲಿ ಮಕ್ಕಳ ಬೆಳವಣಿಗೆ ಕುಂಠಿತ ಕೂಡಾ ಅತೀ ಹೆಚ್ಚು ಇದ್ದು, ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳ ಕ್ಷೀಣತೆಯ ಪ್ರಮಾಣವನ್ನು ಹೊಂದಿದೆ ಎಂದು ವರದಿ ಹೇಳಿದೆ.

“ಭಾರತದ ಮಕ್ಕಳ ಕ್ಷೀಣಿಸುವಿಕೆಯ ಪ್ರಮಾಣವು ಶೇಕಡಾ 19.3 ರಷ್ಟಿದೆ, ಇದು ವಿಶ್ವದ ಯಾವುದೇ ದೇಶಕ್ಕಿಂತ ಅತ್ಯಧಿಕವಾಗಿದೆ” ಎಂದು ವರದಿ ಹೇಳಿದೆ.

ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣವು 2018-2020 ರಲ್ಲಿ 14.6% ದಿಂದ 2019-2021 ರಲ್ಲಿ 16.3% ಕ್ಕೆ ಏರಿದೆ. ಜಾಗತಿಕವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಒಟ್ಟು 82.8 ಕೋಟಿ ಜನರಲ್ಲಿ 22.43 ಕೋಟಿ ಜನರು ಭಾರತದಲ್ಲಿ ಇದ್ದಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಮಾನವ ಚರಿತ್ರೆಯಲ್ಲಿ ಬಂಡವಾಳವಾದ ಹಸಿವು ಎಂಬ ಜಾತಿಗೆಟ್ಟ ಪ್ರತಿಮೆ

ಸಂಘರ್ಷ, ಹವಾಮಾನ ಬಿಕ್ಕಟ್ಟು ಮತ್ತು ಕೊರೊನಾ ಸಾಂಕ್ರಾಮಿಕದ ಆರ್ಥಿಕ ಪರಿಣಾಮಗಳೊಂದಿಗೆ ಹಸಿವನ್ನು ಕೊನೆಗೊಳಿಸುವ ಜಗತ್ತಿನ ಪ್ರಯತ್ನಕ್ಕೆ ಗಂಭೀರ ಹಿನ್ನಡೆ ಮಾಡುತ್ತಿದೆ ಎಂದು GHI ವರದಿ ಹೇಳಿದೆ. ಜಾಗತಿಕ ಬಿಕ್ಕಟ್ಟುಗಳು ಅತಿಕ್ರಮಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ ಎಂದು ವರದಿ ಎಚ್ಚರಿಸಿದೆ.

ಭಾರತವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕುಸಿದಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷಗಳು, ಆಡಳಿತರೂಢ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. “8.5 ವರ್ಷಗಳಲ್ಲಿ ಭಾರತವನ್ನು ಈ ಕತ್ತಲೆಯ ಯುಗಕ್ಕೆ ತಂದಿರುವ ಈ ಅವಧಿಯ ಜವಾಬ್ದಾರಿಯನ್ನು ಸರಕಾರವೇ ಹೊರಬೇಕು” ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.

“2014 ರಿಂದ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಅಪಾಯಕಾರಿಯಾಗಿ ತೀವ್ರ ಕುಸಿತ ಕಂಡಿದೆ. ಮೋದಿ ಸರ್ಕಾರವು ಭಾರತಕ್ಕೆ ವಿನಾಶಕಾರಿಯಾಗಿದೆ. ಕಡಿಮೆ ಆಹಾರ ದಾಸ್ತಾನುಗಳು, ಕನಿಷ್ಠ ಬಫರ್ ಜೊತೆಗೆ ಏರುತ್ತಿರುವ ಬೆಲೆಗಳು. 8.5 ವರ್ಷಗಳಲ್ಲಿ ಭಾರತವನ್ನು ಕತ್ತಲೆಯ ಯುಗಕ್ಕೆ ತಂದಿರುವ ಈ ಯುಗದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಪ್ರಚಾರ, ತಿರುಚುವಿಕೆ ಮತ್ತು ಸುಳ್ಳುಗಳು ಸಾಕು” ಎಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾ, ನೇಪಾಳಕ್ಕಿಂತ ಹಿಂದೆಯಿರುವ ಭಾರತ

ಕಾಂಗ್ರೆಸ್ ನಾಯಕ ಪಿ ಚಿದಂಬರಂ, “ಗೌರವಾನ್ವಿತ ಪ್ರಧಾನಿಯವರು ಅಪೌಷ್ಟಿಕತೆ, ಹಸಿವು, ಮಕ್ಕಳ ಬೆಳವಣಿಗೆ ಕುಂಠಿತವಾಗುವುದು ಮತ್ತು ಪೌಷ್ಟಿಕಾಂಶದಂತಹ ನೈಜ ಸಮಸ್ಯೆಗಳನ್ನು ಯಾವಾಗ ಪರಿಹರಿಸುತ್ತಾರೆ? ಭಾರತದಲ್ಲಿ 22.4 ಕೋಟಿ ಜನರನ್ನು ಅಪೌಷ್ಟಿಕತೆ ಎಂದು ಪರಿಗಣಿಸಲಾಗಿದೆ” ಎಂದು ಹೇಳಿದ್ದಾರೆ.

“ಮೋದಿ ಸರ್ಕಾರದ 8 ವರ್ಷಗಳಲ್ಲಿ 2014 ರಿಂದ ಹಸಿವಿನ ಸೂಚ್ಯಂಕಗಳು ಹದಗೆಟ್ಟಿದೆ. ಒಟ್ಟು ಭಾರತೀಯರಲ್ಲಿ 16.3% ರಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಅಂದರೆ ಅವರಿಗೆ ಸಾಕಷ್ಟು ಆಹಾರವಿಲ್ಲ” ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...