Homeಅಂತರಾಷ್ಟ್ರೀಯಹಿಂದೆ 600 ಕೋಟಿ ಡಾಲರ್ ಬಜೆಟ್‌ ಮಂಡಿಸಿದ್ದ ಅಫ್ಘಾನ್‌ ಸಚಿವ, ಈಗ ಅಮೆರಿಕಾದಲ್ಲಿ ‘ಉಬರ್‌’ ಡ್ರೈವರ್‌‌!

ಹಿಂದೆ 600 ಕೋಟಿ ಡಾಲರ್ ಬಜೆಟ್‌ ಮಂಡಿಸಿದ್ದ ಅಫ್ಘಾನ್‌ ಸಚಿವ, ಈಗ ಅಮೆರಿಕಾದಲ್ಲಿ ‘ಉಬರ್‌’ ಡ್ರೈವರ್‌‌!

- Advertisement -
- Advertisement -

ಈ ಹಿಂದೆ ಅಫ್ಘಾನಿಸ್ತಾನದ ಹಣಕಾಸು ಸಚಿವರಾಗಿ 600 ಕೋಟಿ ಡಾಲರ್ ಬಜೆಟ್‌ ಅನ್ನು ಮಂಡಿಸಿದ್ದ ಖಾಲಿದ್ ಪಯೆಂಡಾ ಅವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಅಮೆರಿಕಾದ ವಾಷಿಂಗ್ಟನ್ ಡಿಸಿಯಲ್ಲಿ ಉಬರ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಾಷಿಂಗ್ಟನ್ ಪೋಸ್ಟ್‌ ಪತ್ರಿಕೆಯೊಂದಿಗೆ ಮಾತನಾಡಿದ ಅವರು ‘‘ಆರು ಗಂಟೆಗಳ ಕೆಲಸ ಮಾಡಿ 150 ಡಾಲರ್‌ಗಳಿಗಿಂತ ಸ್ವಲ್ಪ ಹೆಚ್ಚು ಗಳಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನವು ಪ್ರಸ್ತುತ ಆರ್ಥಿಕ ಮತ್ತು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅಮೆರಿಕಾ ಬೆಂಬಲಿತ ಆಡಳಿತವನ್ನು ಉರುಳಿಸಿದ ತಾಲಿಬಾನ್ ಸರ್ಕಾರವನ್ನು ಗುರುತಿಸಲು ಪ್ರಪಂಚದಾದ್ಯಂತದ ಅನೇಕ ದೇಶಗಳು ಹಿಂಜರಿಯುತ್ತಿವೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ತಾಲಿಬಾನ್‌ಗೆ ಥ್ಯಾಂಕ್ಸ್‌ ಹೇಳಿದ ಈ ಟ್ವಿಟರ್‌ ಅಕೌಂಟ್‌ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್‌ ಅವರದ್ದಲ್ಲ, ಅದು ನಕಲಿ

ದೇಶದ ಈ ಹಿಂದಿನ ಪ್ರಧಾನಿ ಅಶ್ರಫ್ ಘನಿ ಅವರೊಂದಿಗಿನ ಸಂಬಂಧ ಹಳಸಿದ ಕಾರಣ, ತಾಲಿಬಾನ್ ರಾಜಧಾನಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಒಂದು ವಾರದ ಮೊದಲು ಪಯೆಂಡಾ ಅವರು ದೇಶದ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಕಳೆದ ಆಗಸ್ಟ್‌ 10 ರಂದು ಮತ್ತೆ ಟ್ವೀಟ್ ಮಾಡಿದ್ದ ಅವರು, “ಇಂದು ನಾನು ಹಂಗಾಮಿ ಹಣಕಾಸು ಸಚಿವ ಸ್ಥಾನದಿಂದ ಕೆಳಗಿಳಿದಿದ್ದೇನೆ. ಹಣಕಾಸು ಸಚಿವಾಲಯವನ್ನು ಮುನ್ನಡೆಸಿದ್ದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ. ಆದರೆ ವೈಯಕ್ತಿಕ ಕಾರಣಗಳಿಗಾಗಿ ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ” ಎಂದು ಹೇಳಿದ್ದರು.

ತಾಲಿಬಾನ್‌ ಸರ್ಕಾರದಿಂದ ಬಂಧನಕ್ಕೊಳಗಾಗುವ ಭಯದಿಂದ ಅವರು ಅಫ್ಘಾನಿಸ್ತಾನವನ್ನು ತೊರೆದು, ಅಮೆರಿಕಾಕ್ಕೆ ತೆರಳಿ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದರು. ವಾಷಿಂಗ್ಟನ್ ಪೋಸ್ಟ್‌ ಮಾಡಿದ ಸಂದರ್ಶನದಲ್ಲಿ, “ಈ ಪ್ರಯಾಣಕ್ಕೆ ‘ಸಾಕಷ್ಟು ಹೊಂದಾಣಿಕೆ’ ಮಾಡಿಕೊಂಡಿದ್ದೇನೆ. ಆದರೆ ನನ್ನ ಕುಟುಂಬದ ನಿರ್ವಹಣೆಗಾಗಿ ಇದನ್ನು ಖುಷಿಯಿಂದ ಮಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಗೆ ತಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾವನ್ನು ದೂಷಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅಮೆರಿಕಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದ್ದರಿಂದ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ಮತ್ತು ತಾಲಿಬಾನ್‌ಗೆ ಹೆದರಿದ್ದಾಯಿತು, ಮುಂದೆ ಮಾಲ್ಡೀವ್‌?: BJP ಸಂಸದ ಸುಬ್ರಮಣಿಯನ್‌ ಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

“ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ”: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...