Homeಅಂತರಾಷ್ಟ್ರೀಯಭಾರತ-ಚೀನಾ ಗಡಿ ಉದ್ವಿಗ್ನತೆ: ಮತ್ತೆ ಲಡಾಖ್ ಗಡಿ ಅತಿಕ್ರಮಿಸಿದ ಚೀನಾ ಪಡೆಗಳು

ಭಾರತ-ಚೀನಾ ಗಡಿ ಉದ್ವಿಗ್ನತೆ: ಮತ್ತೆ ಲಡಾಖ್ ಗಡಿ ಅತಿಕ್ರಮಿಸಿದ ಚೀನಾ ಪಡೆಗಳು

ಮಾತುಕತೆಗಳ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿರುವ ಅದೇ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ತನ್ನ ಭೂಪ್ರದೇಶವನ್ನು ರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.

- Advertisement -
- Advertisement -

ಭಾರತ-ಚೀನಾ ಮಿಲಿಟರಿ ಮತ್ತು ವಿದೇಶಾಂಗ ಅಧಿಕಾರಿ ಮಟ್ಟದಲ್ಲಿ ನಡುವೆ ನಡೆದ ಮಾತುಕತೆಯ ನಿರ್ಧಾರವನ್ನು ಧಿಕ್ಕರಿಸಿ ಚೀನಾ ಸೈನ್ಯ ಮತ್ತೇ ಪೂರ್ವ ಲಡಾಕ್‌ನಲ್ಲಿ ಪ್ರಚೋದನಕಾರಿ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಭಾರತ ಸರ್ಕಾರ ಇಂದು ಹೇಳಿದೆ.

ಆಗಸ್ಟ್ 29 ಮತ್ತು 30 ರ ರಾತ್ರಿ ಚೀನಾ ಸೈನ್ಯವು ಯಥಾಸ್ಥಿತಿಯನ್ನು ಬದಲಾಯಿಸುವ ಪ್ರಯತ್ನಗಳಲ್ಲಿ ತೊಡಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಭಾರತ-ಚೀನಾ ಸಂಘರ್ಷದ ನಂತರ ಚೀನಾದ ಬೆದರಿಕೆ ಎದುರಿಸಲು ಜಪಾನ್ ಕ್ಷಿಪಣಿಗಳನ್ನು ನಿಯೋಜಿಸಿದೆಯೇ?

ಪ್ಯಾಗೋಂಗ್‌-ತ್ಶೋ ಸರೋವರದ ಉತ್ತರ ತೀರದಲ್ಲಿ ಚೀನಾ ಸೈನ್ಯ ನಡೆಸಿದ ಪ್ರಯತ್ನವನ್ನು ಭಾರತೀಯ ಸೈನ್ಯವು ವಿಫಲಗೊಳಿಸಿದೆ ಮತ್ತು ಚೀನಾ ಸೈನ್ಯದ ಪ್ರಯತ್ನವನ್ನು ತಡೆಯಲು ಭಾರತವು ತಮ್ಮ ಸ್ಥಾನವನ್ನು ಬಲಪಡಿಸಿದೆ ಎಂದು ಭಾರತ ಸರ್ಕಾರ ಹೇಳಿದೆ.

ಮಾತುಕತೆಗಳ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಲು ಬದ್ಧವಾಗಿರುವ ಅದೇ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ತನ್ನ ಭೂಪ್ರದೇಶವನ್ನು ರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರ ತಿಳಿಸಿದೆ.

ಪ್ರಸ್ತುತ ಸಮಸ್ಯೆಯನ್ನು ಬಗೆರಿಸಲು ಗಡಿಯಲ್ಲಿರುವ ಸುಶುಲ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಧ್ವಜ ಸಭೆ ನಡೆಯುತ್ತಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಭಾರತ ಚೀನಾ ಗಡಿ ವಿವಾದ: ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ – ಭಾರತ ಸ್ಪಷ್ಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...