ಹಿರಿಯ ಸಂಶೋಧಕ, ಸಾಹಿತಿ ಎಂ.ಎಂ. ಕಲಬುರ್ಗಿ ಹತ್ಯೆಯ ಎರಡನೇ ಸ್ವತಂತ್ರ ಸಾಕ್ಷಿಯು 2015 ರಲ್ಲಿ ಧಾರವಾಡದ ಅವರ ಮನೆಯ ಹೊರಗೆ ಅವರ ಮೇಲೆ ಗುಮಟು ಹಾರಿಸಿದ ವ್ಯಕ್ತಿಯನ್ನು ಗುರುತಿಸಿದ್ದಾರೆ. ಕಲ್ಬುರ್ಗಿ ಅವರ ಮನೆಯ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾಕ್ಷಿಯು, ಹುಬ್ಬಳ್ಳಿಯ ಬಲಪಂಥೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಗಣೇಶ್ ಮಿಸ್ಕಿನ್ (29) ಎಂಬಾತನೆ ಈ ಶೂಟರ್ ಎಂದು ಗುರುತಿಸಿದ್ದಾರೆ.
ಬಲಪಂಥೀಯ ಸನಾತನ ಸಂಸ್ಥೆಯ ಸಂಯೋಜಿತ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕ ಅಮೋಲ್ ಕಾಳೆ (39) ಎಂಬಾತ ಕಲಬುರ್ಗಿ ಅವರ ಮನೆಯ ಸುತ್ತಲೂ ಓಡಾಡುತ್ತಿದ್ದ ಎಂದು ಕೂಡಾ ಸಾಕ್ಷಿ ಹೇಳಿದ್ದಾರೆ. ಕಲಬುರ್ಗಿ ಅವರ ಕೊಲೆಗೆ ಅಮೋಲ್ ಕಾಳೆ ಸಂಚು ರೂಪಿಸಿದ್ದನು ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಧಾರವಾಡದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ನಡೆದ ವಿಚಾರಣೆಯಲ್ಲಿ ಎರಡನೇ ಸ್ವತಂತ್ರ ಸಾಕ್ಷಿ ಇಬ್ಬರನ್ನೂ ಗುರುತಿಸಿದ್ದಾರೆ.
ಕಲ್ಬುರ್ಗಿ ಅವರ ಮನೆಯ ಎದುರು ಅಂಗಡಿಯನ್ನು ಹೊಂದಿದ್ದ ಇನ್ನೊಬ್ಬ ಸ್ವತಂತ್ರ ಸಾಕ್ಷಿ ಆಗಸ್ಟ್ 30, 2015 ರಂದು ಶೂಟರ್ ಅನ್ನು ಕಲಬುರ್ಗಿ ಅವರ ಮನೆಗೆ ಕರೆತಂದ ಬೈಕ್ ಸವಾರನನ್ನು ಗುರುತಿಸಿದ್ದರು. ಈ ಸವಾರನನ್ನು ಬೆಳಗಾವಿಯ ಹಿಂದುತ್ವ ದುಷ್ಕರ್ಮಿ ಪ್ರವೀಣ್ ಚತುರ್ (29) ಎಂದು ಗುರುತಿಸಲಾಗಿದ್ದು, ಈತ ಕಲಬುರ್ಗಿ ಅವರ ಕೊಲೆಯ ನಂತರ ಶೂಟರ್‌ನೊಂದಿಗೆ ತಪ್ಪಿಸಿಕೊಳ್ಳಲು ಹೊರಗೆ ಕಾಯುತ್ತಿದ್ದನು.
ಇದನ್ನೂ ಓದಿ: ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ: ಹಂತಕರನ್ನು ಪತ್ತೆ ಮಾಡಿದ ಪುತ್ರಿ; ಕೋರ್ಟ್‌ನಲ್ಲಿ ಹೇಳಿಕೆ
ಕಲ್ಬುರ್ಗಿ ಅವರ ಹತ್ಯೆಯ ದಿನ ಅವರ ಪುತ್ರಿ ರೂಪದರ್ಶಿ ಕೆ ಮನೆಯಲ್ಲಿ ಇದ್ದರು. ಅವರು ಕೋರ್ಟ್‌ನಲ್ಲಿ ಗಣೇಶ್ ಮಿಸ್ಕಿನ್‌ನನ್ನು ಗುರುತಿಸಿದ್ದರು. ಮನೆಯ ಹೊರಗೆ ಬೈಕ್‌ನಲ್ಲಿ ಕಾಯುತ್ತಿದ್ದ ಚತುರ್‌ನನ್ನು ಕೂಡಾ ಅವರು ಗುರುತಿಸಿದ್ದರು. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕೂಡ ಮಾರ್ಚ್‌ನಲ್ಲಿ ಮಿಸ್ಕಿನ್‌ನನ್ನು ಗುರುತಿಸಿದ್ದರು.
ಮಿಸ್ಕಿನ್, ಚತುರ್ ಮತ್ತು ಕಾಳೆ ಅವರನ್ನು ಗುರುತಿಸಿರುವ ನಾಲ್ವರು ಸಾಕ್ಷಿಗಳು ಈ ಹಿಂದೆ ಪ್ರಕರಣದ ತನಿಖಾ ಹಂತದಲ್ಲಿ ನಡೆಸಿದ ಪರೀಕ್ಷಾ ಗುರುತಿನ ಪರೇಡ್‌ಗಳಲ್ಲಿ ಕೂಡಾ ಅವರನ್ನು ಗುರುತಿಸಿದ್ದರು. ಸಾಕ್ಷಿದಾರರು ಗುರುವಾರ ನ್ಯಾಯಾಲಯದಲ್ಲಿ ನೀಡಿರುವ ಮುಖ್ಯ ಹೇಳಿಕೆಯನ್ನು ಅನುಸರಿಸಿ ಎರಡನೇ ಸ್ವತಂತ್ರ ಸಾಕ್ಷಿಯನ್ನು ಮುಂದಿನ ತಿಂಗಳು ಪ್ರತಿವಾದಿ ವಕೀಲರು ಕ್ರಾಸ್ ಎಗ್ಸಾಮಿನ್ ಮಾಡಲಿದ್ದಾರೆ.
ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಕೂಡಾ ಗಣೇಶ್ ಮಿಸ್ಕಿನ್ ಮತ್ತು ಕಾಳೆ ಆರೋಪಿಯಾಗಿದ್ದಾರೆ.
ಇದನ್ನೂ ಓದಿ: ಕಲ್ಬುರ್ಗಿ ಗೌರಿಯರನ್ನು ಕೊಂದದ್ದು ಒಂದೇ ಬಂದೂಕು!
ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕನಾಗಿರುವ ಕಾಳೆ, ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ, ಶ್ರೀರಾಮ ಸೇನೆ ಮತ್ತು ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದಂತಹ ಹಿಂದುತ್ವ ಸಂಘಟನೆಗಳಿಂದ ಉಗ್ರಗಾಮಿ ಮನಸ್ಥಿತಿ ಹೊಂದಿರುವ ಯುವಕರನ್ನು ಸೇರಿಸಿಕೊಳ್ಳುವ ಮೂಲಕ ಬಲಪಂಥೀಯ ಉಗ್ರಗಾಮಿ ಗುಂಪಿನ ಪ್ರಮುಖ ನಾಯಕರಾಗಿದ್ದಾನೆ.


