ರಾಜ್ಯದಲ್ಲಿ ಹಿಜಾಬ್ ನಿಷೇಧದ ಬಗ್ಗೆ ತಪ್ಪಾಗಿ ಪ್ರಸಾರ ಮಾಡಿದ್ದಕ್ಕಾಗಿ ಸಿಎನ್‌ಎನ್ ನ್ಯೂಸ್ 18 ಗೆ ವಾರ್ತಾ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (NBDSA) ಬುಧವಾರ 50 ಸಾವಿರ ದಂಡ ವಿಧಿಸಿದೆ.
ನಿರೂಪಕ ಅಮನ್ ಚೋಪ್ರಾ ಅವರು ತಮ್ಮ ಕಾರ್ಯಕ್ರಮಕ್ಕೆ ಕೋಮು ಬಣ್ಣವನ್ನು ನೀಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಹಿಜಾಬ್ ಅನ್ನು ಬೆಂಬಲಿಸುವ ಪ್ಯಾನೆಲಿಸ್ಟ್‌ಗಳನ್ನು ಅಲ್-ಖೈದಾಗೆ ಲಿಂಕ್ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭವಿಷ್ಯದಲ್ಲಿ ಇಂತಹ ಉಲ್ಲಂಘನೆಗಳು ಪುನರಾವರ್ತಿತವಾದರೆ, ಸಂಸ್ಥೆಯ ಮುಂದೆ ನಿರೂಪಕ ಅಮನ್ ಚೋಪ್ರಾ ಅವರ ವೈಯಕ್ತಿಕ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕಾಗಬಹುದು ಎಂದು NBDSA ನ್ಯೂಸ್ 18ಗೆ ಎಚ್ಚರಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
News Broadcasting and Digital Standards Authority imposes ₹50,000 fine on News18 for its coverage of Karnataka hijab matter. Says anchor violated Code of Ethics by giving communal colour and linking panelists supporting hijab to Al-Qaeda. pic.twitter.com/LTJfpCe6Pi
— Bar & Bench (@barandbench) October 26, 2022
ಇದನ್ನೂ ಓದಿ: ಕೊರೊನಾ ಹೆಸರಲ್ಲಿ ತಬ್ಲೀಘಿಗಳ ಅವಹೇಳನ: ಇಂದು ರಾತ್ರಿ ಕ್ಷಮೆ ಕೇಳಲಿರುವ ನ್ಯೂಸ್ 18 ಕನ್ನಡ!
ವೆಬ್‌ಸೈಟ್ ಸೇರಿದಂತೆ ತಮ್ಮ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಆಕ್ಷೇಪಾರ್ಹ ಕಾರ್ಯಕ್ರಮದ ವೀಡಿಯೊವನ್ನು 7 ದಿನಗಳಲ್ಲಿ ತೆಗೆದುಹಾಕುವಂತೆ ಸಂಸ್ಥೆಯು ನ್ಯೂಸ್ 18 ಗೆ ನಿರ್ದೇಶಿಸಿದೆ.
“ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದರ ಪರವಾಗಿದ್ದ ಪ್ಯಾನೆಲಿಸ್ಟ್‌ಗಳನ್ನು ‘ಜವಾಹಿರಿ ಗ್ಯಾಂಗ್ ಸದಸ್ಯ’, ‘ಜವಾಹಿರಿಯ ರಾಯಭಾರಿ’, ‘ಜವಾಹಿರಿ ನಿಮ್ಮ ದೇವರಾಗಿದ್ದು, ನೀವು ಅವರ ಅಭಿಮಾನಿ’ ಎಂದು ಅವರನ್ನು ಜವಾಹಿರಿಗೆ ಲಿಂಕ್ ಮಾಡುವ ನಿರೂಪಕನ ಪ್ರವೃತ್ತಿಯನ್ನು NBDSA ಬಲವಾಗಿ ನಿರಾಕರಿಸಿದೆ” ಎಂದು NBDSA ತನ್ನ ಆದೇಶದಲ್ಲಿ ಹೇಳಿದೆ.
“ ‘ಅಲ್‌ಕಾಯಿದಾ ಎಕ್ಸ್‌ಪೋಸ್‌ಡ್, ‘ಅಲ್‌ಕಾಯಿದಾ ಗ್ಯಾಂಗ್ ಎಕ್ಸ್‌ಪೋಸ್‌ಡ್’, ‘ಹಿಜಾಬ್ ಕ ಫಟಾ ಪೋಸ್ಟರ್’, ‘ನಿಕ್ಲಾ ಅಲ್‌ಕಾಯಿದಾ’, ‘ಹಿಜಾಬ್ ಹಿಂದೆ ಅಲ್ ಜವಾಹಿರಿ ಕಂಡು ಬಂದಿದ್ದಾನೆ’, ‘ಹಿಜಾಬ್ ವಿವಾದವನ್ನು ಅಲ್ ಕಾಯಿದಾ ಯೋಜಿಸಿದೆ’ ಎಂಬ ವಾಕ್ಯಗಳನ್ನು ಪ್ರಸಾರ ಮಾಡುವ ಮೂಲಕ ಅಲ್ ಖೈದಾದೊಂದಿಗೆ ಹಿಜಾಬ್ ಅನ್ನು ಬೆಂಬಲಿಸುವ ಪ್ಯಾನೆಲಿಸ್ಟ್‌ಗಳು ಮತ್ತು ವ್ಯಕ್ತಿಗಳನ್ನು ಲಿಂಕ್ ಮಾಡುವ ವಿಚಾರದಲ್ಲಿ ಯಾವುದೆ ಸತ್ಯವಿಲ್ಲ” ಎಂದು NBDSA ಹೇಳಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೊವನ್ನು ನಿಜ ಘಟನೆ ಎಂದು ಬಿಂಬಿಸಿ ‘ಸುಳ್ಳು ಸುದ್ದಿ’ ಪ್ರಕಟಿಸಿದ ನ್ಯೂಸ್18 ಕನ್ನಡ!
ನಿರೂಪಕ ಅಮನ್ ಚೋಪ್ರಾ ಅವರು ಲೈವ್ ನ್ಯೂಸ್ ಚರ್ಚೆಯನ್ನು ಇಟ್ಟು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಿಂದಿಸುತ್ತಿದ್ದಾರೆ. ಈ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಬಹಿರಂಗವಾಗಿ ದ್ವೇಷ ಪ್ರಚಾರ ಮಾಡುತ್ತಿದ್ದಾರೆ ಎಂದು ಮಾಧ್ಯಮ ವಿಮರ್ಶಕರು ಮತ್ತು ಮುಸ್ಲಿಂ ಹೋರಾಟಗಾರರು ಟೀಕಿಸಿದ್ದರು.
2022 ರಲ್ಲಿ ಉತ್ತರ ಪ್ರದೇಶ ಚುನಾವಣೆಯ ಸಮಯದಲ್ಲಿ, ಚೋಪ್ರಾ ಅವರು ತಮ್ಮ ಪ್ರೈಮ್‌ಟೈಮ್ ಶೋ “ದೇಶ್ ನಹಿ ಜುಕ್ನೆ ದೇಂಗೆ” ಯಲ್ಲಿ ಸುಮಾರು 36 ಮುಸ್ಲಿಂ ವಿರೋಧಿ ಚರ್ಚೆಗಳನ್ನು ನಡೆಸಿದ್ದಾರೆ ಎಂದು ‘ಮಕ್ತೂಬ್ ಸುದ್ದಿ ಮಾಧ್ಯಮ’ ವರದಿ ಮಾಡಿದೆ.


