ತಮಿಳುನಾಡು ರಾಜ್ಯಾದ್ಯಂತ ಆರ್‌ಎಸ್‌ಎಸ್ ನಾಳೆ ಹಮ್ಮಿಕೊಳ್ಳಲು ಹೊರಟಿದ್ದ ರಸ್ತೆ ಮೆರವಣಿಗೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಮೈದಾನ ಅಥವಾ ಕ್ರೀಡಾಂಗಣದಂತಹ ಕಾಂಪೌಂಡ್ ಆವರಣದಲ್ಲಿ ಮಾತ್ರ ಮೆರವಣಿಗೆ ನಡೆಸಲು ಕೋರ್ಟ್ ಸೂಚಿಸಿದ್ದು, ರಸ್ತೆ ಮೆರವಣಿಗೆಯನ್ನು ನಡೆಸುವುದಿಲ್ಲ ಎಂದು ಆರ್‌ಎಸ್‌ಎಸ್ ಹೇಳಿದೆ.
ತನ್ನ ಹೇಳಿಕೆಯಲ್ಲಿ ಹಿಂದುತ್ವವಾದಿ ಸಂಘಟನೆ “ಈ ಆದೇಶವು ಸ್ವೀಕಾರಾರ್ಹವಲ್ಲ, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು” ಎಂದಿದೆ.
ತಮಿಳುನಾಡಿನಾದ್ಯಂತ ನವೆಂಬರ್ 6ರ ಭಾನುವಾರದಂದು 44 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಮದ್ರಾಸ್ ಹೈಕೋರ್ಟ್ ಆರ್‌ಎಸ್‌ಎಸ್‌ಗೆ ಷರತ್ತುಬದ್ಧ ಅನುಮತಿ ನೀಡಿದೆ. ಬಲಪಂಥೀಯ ಸಂಘಟನೆಯು ಕೋರಿದ್ದ 50 ಸ್ಥಳಗಳ ಪೈಕಿ ಮೂರರಲ್ಲಿ ಮಾತ್ರ ರಾಜ್ಯ ಸರ್ಕಾರವು ಈ ಹಿಂದೆ ಮೆರವಣಿಗೆಗೆ ಅನುಮತಿ ನೀಡಿತ್ತು. ಆರ್‌ಎಸ್‌ಎಸ್, ಮೆರವಣಿಗೆಯನ್ನು ಶಾಂತಿಯುತವಾಗಿ ನಡೆಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕು ಎಂದು ಕೋರ್ಟ್ ಎಚ್ಚರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ ಮತ್ತು ಇತರ ಸ್ಥಳಗಳಲ್ಲಿ ರಸ್ತೆ ಮೆರವಣಿಗೆಗಳು ನಡೆಯುತ್ತವೆ. ನಾವು ನವೆಂಬರ್ 6 ರಂದು ನಮ್ಮ ತಮಿಳುನಾಡಿನಲ್ಲಿ ರಸ್ತೆ ಮೆರವಣಿಗೆಗಳನ್ನು ನಡೆಸುತ್ತಿಲ್ಲ. ನಾವು ಮನವಿ ಮಾಡುತ್ತೇವೆ” ಎಂದು ಆರ್‌ಎಸ್‌ಎಸ್ ಹೇಳಿಕೆ ತಿಳಿಸಿದೆ.
ಗುಪ್ತಚರ ಮಾಹಿತಿಯ ಮೇರೆಗೆ ಕೊಯಮತ್ತೂರು, ಪೊಲ್ಲಾಚಿ ಮತ್ತು ನಾಗರ್‌ಕೋಯಿಲ್ ಸೇರಿದಂತೆ ಆರು ಕೋಮು ಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆಗೆ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು.
ಎರಡು ತಿಂಗಳ ನಂತರ ಇತರ ಆರು ಸ್ಥಳಗಳಲ್ಲಿ ಮೆರವಣಿಗೆಗೆ ಅನುಮತಿ ಪಡೆಯಲು ಆರ್‌ಎಸ್‌ಎಸ್‌ಗೆ ಕೋರ್ಟ್ ಅನುಮತಿ ನೀಡಿದೆ.
ಕೊಯಮತ್ತೂರಿನಲ್ಲಿ ಇತ್ತೀಚೆಗೆ ದೀಪಾವಳಿಯ ಒಂದು ದಿನದ ಮೊದಲು ಕಾರ್ ಸ್ಫೋಟ ನಡೆದಿತ್ತು. ಇದರಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ಅಕ್ಟೋಬರ್ 2ರಂದು ನ್ಯಾಯಾಲಯವು ಅನುಮತಿ ನೀಡಿದ್ದರೂ ತಮಿಳುನಾಡು ಸರ್ಕಾರವು ಈ ಹಿಂದೆ ಅನುಮತಿ ನಿರಾಕರಿಸಿತ್ತು. ಆರ್‌ಎಸ್‌ಎಸ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲು ಮುಂದಾಯಿತು.
ಇದನ್ನೂ ಓದಿರಿ: ಗುಜರಾತ್ ಚುನಾವಣೆ: ಬಿಜೆಪಿ ತೊರೆದ ಹಿರಿಯ ಮುಖಂಡ ಜಯ್ ನಾರಾಯಣ್ ವ್ಯಾಸ್
ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಮತ್ತು ಪೊಲೀಸ್ ಕಮಿಷನರ್‌ಗಳಿಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸುತ್ತೋಲೆಯನ್ನು ಹೊರಡಿಸಿದ್ದು, ಸ್ಥಳೀಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗಳಿಗೆ ಒಳಪಟ್ಟು ಅನುಮತಿ ನೀಡುವಂತೆ ತಿಳಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲಿನ ನಿಷೇಧದ ನಂತರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರವನ್ನು ಸರ್ಕಾರ ಪ್ರಸ್ತಾಪಿಸುತ್ತಿದೆ.
ಆಡಳಿತಾರೂಢ ಡಿಎಂಕೆಯ ಮಿತ್ರಪಕ್ಷವಾದ ವಿದುತಲೈ ಚಿರುತೈಗಲ್ ಕೂಡ ಅದೇ ದಿನ ಶಾಂತಿಗಾಗಿ ಮಾನವ ಸರಪಳಿ ನಿರ್ಮಿಸಲು ಅನುಮತಿ ಕೋರಿದ್ದರು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯಲ್ಲಿ, ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ ಪಾತ್ರ ಮತ್ತು ಗಾಂಧಿಯವರ ಮರಣವನ್ನು ಹೇಗೆ ಸಂಭ್ರಮಿಸಲಾಗಿದೆ ಎಂಬುದನ್ನು ಪಕ್ಷವು ಉಲ್ಲೇಖಿಸಿದೆ. ಈ ಕಾರ್ಯಕ್ರಮಕ್ಕೆ ಗಾಂಧಿ ಜಯಂತಿಯನ್ನು ಆಯ್ಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಪಕ್ಷವು ಹೇಳಿತ್ತು.



Naanu ghori