‘ಆಸ್ತಿಯನ್ನು ಕನ್ವರ್ಸನ್ ಮಾಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದು, ಸರ್ಕಾರಿ ಕಚೇರಿಗೆ ಅಳೆದು ಸುಸ್ತಾಗಿದೆ. ಹೀಗಾಗಿ ನಾವು ವಿಷ ಕುಡಿಯುತ್ತೇವೆ, ಸರ್ಕಾರವೇ ನಮಗೆ ಮರಣದಂಡನೆ ನೀಡಲಿ’ ಎಂದು ಶಿವಮೊಗ್ಗ ಜಿಲ್ಲೆಯ ಕುಗ್ವೆಯ ದಂಪತಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಕುಗ್ವೆ ನಿವಾಸಿಗಳಾದ ಶ್ರೀಕಾಂತ್ ನಾಯ್ಕ್ ಮತ್ತು ಸುಜಾತಾ ನಾಯ್ಕ್ ಅವರು ತಮ್ಮ ಆಸ್ತಿಯನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದರು. ಆದರೆ ಸ್ಥಳೀಯ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದೆ, ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ದಂಪತಿಗಳು ವಿಷ ಸೇವಿಸಲು ದಯಾಮರಣಕ್ಕೆ ಅನುಮತಿ ನೀಡುವಂತೆ ಕೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ ಮಾತನಾಡಿರುವ ಸುಜಾತಾ ನಾಯ್ಕ್, “ಕೆಲಸ ಮಾಡಿಕೊಡುತ್ತೇನೆ, ಫೋನ್ ಮಾಡುತ್ತೇನೆ ಎಂದು ಹೇಳುತ್ತಾರೆ. ಅಳೆದು ಅಳೆದು ನಮಗೆ ಸುಸ್ತಾಯಿತು. ಇದೀಗ ಇಲ್ಲಿ ಏಸಿ ಆಫಿಸಿ ದಯಾಮರಣ ಅರ್ಜಿ ಹಾಕಲು ಬಂದಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಹ: ಅಭಿವೃದ್ಧಿಯ ಭ್ರಷ್ಟಾಚಾರ ಮತ್ತು ಅಸಂಬದ್ಧತೆಗಳಿಂದ ಬೆಂಗಳೂರನ್ನು ಕಾಪಾಡಿ!
ನಂತರ ವಿಡಿಯೊದಲ್ಲಿ ಮಾತನಾಡಿರುವ ಶ್ರೀಕಾಂತ್ ನಾಯ್ಕ್, “ರಾತ್ರಿ ಹಗಲು ಧರಣಿ ಮಾಡಿದ್ದೇವೆ, ಪುಷ್ಪಾ ಕಂಬಾರ್ ಎಂಬ ಅಧಿಕಾರಿಗೆ ನಾವು ಹೋದರೆ ಪುರುಸೊತ್ತು ಇಲ್ಲ ಎನ್ನುತ್ತಾರೆ. ಆದರೆ ಬೇರೆಯವರ ಜೊತೆಗೆ ಸಂಜೆ ಏಳು ಗಂಟೆಯ ನಂತರ ಲೈಟ್ ಆಫ್ ಮಾಡಿಕೊಂಡು ಗಂಟೆಗಟ್ಟಲೆ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ.
Fed up of giving #bribes. A couple in #Shivamogga #Karnataka has written to @rashtrapatibhvn seeking permission for #mercykilling. Srikanth Naik & Sujata Naik 4m Kugve village allege local officials are not allowing them 2 develop their property & are demanding bribes #Karnataka pic.twitter.com/e9jMvf80GA
— Imran Khan (@KeypadGuerilla) November 11, 2022
ಇದನ್ನೂ ಓದಿ: ‘ಶಿಕ್ಷಣ ಇಲಾಖೆ ಭಾರಿ ಭ್ರಷ್ಟಾಚಾರ ನಡೆಸುತ್ತಿದೆ’: ಪ್ರಧಾನಿಗೆ ಪತ್ರ ಬರೆದ ರಾಜ್ಯದ 13 ಸಾವಿರ ಶಾಲೆಗಳು
“ಅಧಿಕಾರಿಯು ನಮ್ಮ ಜೊತೆಗೆ ಮಾತನಾಡುತ್ತಿಲ್ಲ. ನಮ್ಮನ್ನು ಬಿಕಾರಿಗಳ ಹಾಗೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಗೆಟೌಟ್ ಎನ್ನುತಾರೆ. ನಾವು ಬಡಕುಟುಂಬದಿಂದ ಬಂದಿದ್ದು, ವಿದ್ಯಾವಂತರು ಕೂಡಾ ಅಲ್ಲ. ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ಕಂಬಳಿ ಹಾಕಿಕೊಂಡು ಕೂತು ಕಾದರೂ ಅವರು ನಮ್ಮನ್ನು ಮಾತನಾಡಿಸುವುದಿಲ್ಲ. ನಾವು ವಿಷ ಕುಡಿಯುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ನಮಗೆ ಸರ್ಕಾರದ ಕಡೆಯಿಂದ ಮರಣದಂಡನೆ ಕೊಡಿ” ಎಂದು ಅವರು ಕೇಳಿಕೊಂಡಿದ್ದಾರೆ.



ಸರ್ಕಾರದ ಉತ್ತರ ಏನು ಇದಕ್ಕೆ