ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬನಿಗೆ ಐದು ಬಾರಿ ‘ಬಸ್ಕಿ’ ಹೊಡೆಯುವ ಶಿಕ್ಷೆ ನೀಡಿರುವ ಘಟನೆ ಬಿಹಾರದ ನವಾಡ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು, ಭಾರಿ ಆಕ್ರೋಶ ಹುಟ್ಟುಹಾಕಿದೆ.
ಘಟನೆಯ ವಿಡಿಯೊ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಜನಸಮೂಹದ ಮುಂದೆ ಬಸ್ಕಿ ಹೊಡೆಯುವುದು ದಾಖಲಾಗಿದೆ. ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಕ್ಕಾಗಿ ಐದು ಬಸ್ಕಿ ಹೊಡೆಯುವ ಶಿಕ್ಷೆಯನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿಯು ಚಾಕೊಲೇಟ್ ಕೊಡಿಸುವುದಾಗಿ ಹೇಳಿ ಮಗುವನ್ನು ತನ್ನ ಕೋಳಿ ಫಾರಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ದುಷ್ಕರ್ಮಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತಿ ಮುಂದೆ ಹಾಜರುಪಡಿಸಿದಾಗ, ಊರಿನ ಹಿರಿಯರು ತಮ್ಮದೇ ಆದ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ‘ಬಿಹಾರದಲ್ಲಿ ಅಧಿಕಾರ ಹೋದ ನಂತರ, ಅಮಿತ್ ಶಾ ಬಿಲ್ಕುಲ್ ಹುಚ್ಚರಾಗಿದ್ದಾರೆ’: ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್
ಆರೋಪಿ ಅತ್ಯಾಚಾರ ಮಾಡಿಲ್ಲ ಎಂದು ತೀರ್ಮಾನಿಸಿದ ಊರಿನ ಹಿರಿಯರು, ಮಗುವನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಕ್ಕಾಗಿ ಐದು ಬಸ್ಕಿ ಹೊಡೆಯುವಂತೆ ಹೇಳಿ ಶಿಕ್ಷೆ ಘೋಷಿಸಿದ್ದಾರೆ.
‘ಶಿಕ್ಷೆ’ಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಅನೇಕ ಜನರು ಇದನ್ನು ಗ್ರಾಮೀಣ ಭಾರತದ ಪಿತೃಪ್ರಭುತ್ವಕ್ಕೊಂದು ಪುರಾವೆ ಎಂದು ಹೇಳಿದ್ದಾರೆ.
In Bihar's Nawada Arun Pandit rapes a 6 year old minor. Girl. He is given a Strict punishment of doing 5 Sit-ups by the Panchayat (village court). pic.twitter.com/8uVRpKsxdE
— Ahmed Khabeer احمد خبیر (@AhmedKhabeer_) November 24, 2022
ಹಲವಾರು ಜನರು ವೀಡಿಯೊವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ಟ್ಯಾಗ್ ಮಾಡಿದ್ದು, ರಾಜ್ಯ ಸರ್ಕಾರವು ಆರೋಪಿಯನ್ನು ಶಿಕ್ಷಿಸಲಿದೆಯೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಹಾರ ರಾಜಕೀಯ: ನಿತೀಶ್ ಹೊಸ ಪಟ್ಟು; ದೆಹಲಿ ರಾಜಕೀಯದಲ್ಲಿ ಬೀಸುವುದೇ ಹೊಸ ಗಾಳಿ?
ಘಟನೆಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳಾ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳಿದೆ. ಘಟನೆಯನ್ನು ಇಲ್ಲವಾಗಲಿಸಲು ಯತ್ನಿಸಿದವರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.


