‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರೊಪಗಂಡಾ ಪ್ರೇರಿತ, ಅಶ್ಲೀಲ ಸಿನಿಮಾವಾಗಿದೆ ಎಂದು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲ್ ಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಹೇಳಿಕೆಯನ್ನು ಚಲನಚಿತ್ರೋತ್ಸವದ ಸಹ ತೀರ್ಪುಗಾರರು ಬೆಂಬಲಿಸಿದ್ದಾರೆ.
ಸುದಿಪ್ತೊ ಸೆನ್ ಹೊರತುಪಡಿಸಿ ಉಳಿದ ಮೂವರು ಜೂರಿಗಳಾದ ಪಾಸ್ಕೇಲ್ ಚವಾನ್ಸ್, ಜೇವಿಯರ್ ಅಂಗುಲೋ ಬಾರ್ಟುರೆನ್ ಸಹ ನಾದವ್ ಮತ್ತು ಜಿಂಕೊ ಗೊಟೆಹ್ ಲ್ಯಾಪಿಡ್ ಪರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
IFFIಯ ಐವರು ತೀರ್ಪುಗಾರರಲ್ಲಿ ಒಬ್ಬರಾದ BAFTA ವಿಜೇತೆ ಜಿಂಕೊ ಗೊಟೆಹ್ ಟ್ವೀಟ್ ಮಾಡಿ, “53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ “ಈ ಚಿತ್ರೋತ್ಸವದ ಪ್ರಶಸ್ತಿ ಪಟ್ಟಿಗೆ 15ನೇ ಚಿತ್ರವಾಗಿ ಕಾಶ್ಮೀರ್ ಫೈಲ್ಸ್ ಬಂದಿದ್ದನ್ನು ನೋಡಿ ನಮಗೆ ಆಘಾತವಾಗಿದೆ. ಇದರಿಂದ ನಾವು ವಿಚಲಿತಗೊಂಡಿದ್ದೇವೆ. ಆ ಚಿತ್ರವು ಪ್ರೊಪಗಂಡ ಪ್ರೇರಿತ, ಅಶ್ಲೀಲ ಚಿತ್ರವಾಗಿದೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಅದು ಸೂಕ್ತವಲ್ಲ ಎಂದು ಅನಿಸಿತು ಎಂದು ಬಹಿರಂಗವಾಗಿ ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ” ಎಂದು ತೀರ್ಪುಗಾರರ ಅಧ್ಯಕ್ಷ ನಾದವ್ ಲ್ಯಾಪಿಡ್ ಹೇಳಿದ್ದರು. “ನಾವು ಅವರ ಹೇಳಿಕೆಗೆ ಬದ್ಧರಾಗಿದ್ದೇವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ಸ್ಪಷ್ಟಪಡಿಸಲು, ನಾವು ಚಿತ್ರದ ಕಥಾವಸ್ತುವಿನ ಬಗ್ಗೆ ರಾಜಕೀಯ ನಿಲುವು ತಳೆಯುತ್ತಿಲ್ಲ. ಬದಲಿಗೆ ನಾವು ಕಲಾತ್ಮಕ ಹೇಳಿಕೆಯನ್ನು ನೀಡುತ್ತಿದ್ದೇವೆ. ಆದರೆ ಚಿತ್ರೋತ್ಸವವನ್ನು ರಾಜಕೀಯಕ್ಕಾಗಿ ಬಳಸುತ್ತಿರುವುದನ್ನು ಮತ್ತು ನಾದವ್ ಲ್ಯಾಪಿಡ್ ಮೇಲಿನ ವೈಯಕ್ತಿಕ ದಾಳಿಯನ್ನು ನೋಡುವುದು ನಮಗೆ ತುಂಬಾ ದುಃಖವಾಗಿದೆ. ಅದು ಎಂದಿಗೂ ತೀರ್ಪುಗಾರರ ಉದ್ದೇಶವಾಗಿರಲಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆ ಹೇಳಿಯ ಕೊನೆಯಲ್ಲಿ, 53 ನೇ IFFI ತೀರ್ಪುಗಾರರು: ಜಿಂಕೊ ಗೊಟೊಹ್, ಪಾಸ್ಕೇಲ್ ಚಾವಾನ್ಸ್ ಮತ್ತು ಜೇವಿಯರ್ ಅಂಗುಲೋ ಬಾರ್ಟುರೆನ್ ರವರ ಹೆಸರುಗಳನ್ನು ಬರೆಯಲಾಗಿದೆ.
#IFFI #IFFI53Goa #IFFI2022 #KashmirFiles @IndiaToday @TimesNow @TOIIndiaNews @ndtv @News18India @IndianExpress @htTweets pic.twitter.com/TIAjTyEgdb
— Jinko Gotoh (@JinkoGotoh) December 2, 2022
ಆಡಳಿತರೂಢ ಬಿಜೆಪಿ ಪಕ್ಷದಿಂದ ಭಾರೀ ಪ್ರಶಂಶೆಗೊಳಗಾಗಿದ್ದ, ಹಲವಾರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಕೆ ಮುಕ್ತ ಪ್ರದರ್ಶನ ಕಂಡಿದ್ದ ಈ ಸಿನಿಮಾವನ್ನು ಆಸ್ಕರ್‌ಗೆ ನಾಮೀನೇಟ್ ಮಾಡಬೇಕೆಂಬ ಮಾತುಗಳು ಸಹ ಕೇಳಿಬಂದಿದ್ದವು. ಆದರೆ IFFI ತೀರ್ಪುಗಾರರ ಮುಖ್ಯಸ್ಥರೆ ಇದೊಂದು ಕೆಟ್ಟ ಸಿನಿಮಾ ಎಂದು ಹೇಳಿಕೆ ನೀಡಿದ್ದರು. ಇದೀಗ ಇತರ ಮೂವರು ಜ್ಯೂರಿಗಳು ಸಹ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಉಳಿದ ಜ್ಯೂರಿ ಸದಸ್ಯ ಸುದಿಪ್ತೊ ಸೇನ್ ಮಾತ್ರ ನಾದವ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. “ತೀರ್ಪುಗಾರರಾಗಿ ಚಿತ್ರದ ತಾಂತ್ರಿಕ, ಸೌಂದರ್ಯದ ಗುಣಮಟ್ಟ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಸ್ತುತತೆಯನ್ನು ನಿರ್ಣಯಿಸಲು ನಮಗೆ ನಿಯೋಜಿಸಲಾಗಿದೆ. ನಾವು ಯಾವುದೇ ಚಿತ್ರದ ರಾಜಕೀಯದ ಕುರಿತು ಮಾತನಾಡುವುದಿಲ್ಲ. ಆ ಕುರಿತು ಮಾತನಾಡಿದರೆ ಅದು ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ” ಎಂದು ಜ್ಯೂರಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’


