Homeಕರ್ನಾಟಕಬಿಜೆಪಿಯಲ್ಲಿ ಸ್ಥಾನ ಪಡೆಯಲು ರೌಡಿಗಳ ಕ್ರೈಮ್‌ ಸ್ಕೋರ್‌ ಹೆಚ್ಚಳ: ಕಾಂಗ್ರೆಸ್ ಆರೋಪ

ಬಿಜೆಪಿಯಲ್ಲಿ ಸ್ಥಾನ ಪಡೆಯಲು ರೌಡಿಗಳ ಕ್ರೈಮ್‌ ಸ್ಕೋರ್‌ ಹೆಚ್ಚಳ: ಕಾಂಗ್ರೆಸ್ ಆರೋಪ

- Advertisement -
- Advertisement -

“ಬಿಜೆಪಿಯಲ್ಲಿ ಸ್ಥಾನ ಪಡೆದುಕೊಳ್ಳಲು ರೌಡಿಗಳು ತಮ್ಮ ಕ್ರೈಮ್ ಸ್ಕೋರ್‌ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಬಿಜೆಪಿಯ ರೌಡಿ ಮೋರ್ಚಾಗೆ ಕ್ರೈಮ್ ಸ್ಕೋರ್‌‌ ಮುಖ್ಯ ಅಲ್ಲವೇ” ಎಂದು ಕಾಂಗ್ರೆಸ್ ಆರೋಪಿಸಿದೆ.

ಬಿಜೆಪಿಗೆ ರೌಡಿಗಳು ಸೇರ್ಪಡೆಯಾಗುತ್ತಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ದಾಳಿಯನ್ನು ಮುಂದುವರಿಸಿದ್ದು, ಟ್ವೀಟ್‌ಗಳ ಮೂಲಕ ಸಮರ ಸಾರಿದೆ.

“ಬಿಜೆಪಿ ರೌಡಿಗಳಿಗೆ ಮಣೆ ಹಾಕುತ್ತಿರುವುದರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದೆ. ಇದಕ್ಕೆ ಬೆಂಗಳೂರಿನ ಶೂಟೌಟ್ ಘಟನೆಯೇ ಸಾಕ್ಷಿ” ಎಂದು ಕಾಂಗ್ರೆಸ್ ದೂರಿದೆ.

“ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ ಶೂಟೌಟ್, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ರೌಡಿಗಳಿಗೂ ಬಿಜೆಪಿಗೂ ಇರುವ ಬಾಂಧವ್ಯದ ಪರಿಣಾಮ ರೌಡಿಗಳ ಪುಂಡಾಟ ಹೆಚ್ಚಿದೆ. ಸ್ವತಃ ಮುಖ್ಯಮಂತ್ರಿಯವರೇ ಕ್ರಿಮಿನಲ್‌ಗಳ ಸಮರ್ಥನೆಗೆ ಇಳಿದರೆ ಇನ್ನೇನಾದೀತು” ಎಂದು ವ್ಯಂಗ್ಯವಾಡಿದೆ.

“ಮುಂಬರುವ ಚುನಾವಣೆಗೆ ಕ್ರಿಮಿನಲ್ ಕೇಸ್‌‌ಗಳನ್ನು ಹೊಂದಿರುವ ರೌಡಿಗಳನ್ನು ಬಿಜೆಪಿ ಅಭ್ಯರ್ಥಿಗಳನ್ನಾಗಿ ಆಯ್ಕೆಮಾಡಿಕೊಂಡಿದೆ. ಇದು ರಾಜಕೀಯವಾಗಿ ಉತ್ತಮ ಬೆಳವಣಿಗೆ ಅಲ್ಲ. ಸಮಾಜದ ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ರೌಡಿಗಳಿಗೂ ಬಿಜೆಪಿಗೂ ಎನು ಸಂಬಂಧ? ಇಂತಹ ಬೆಳವಣಿಗೆಯನ್ನು ಮುಖ್ಯಮಂತ್ರಿಗಳೇ ಸಮರ್ಥಿಸಿದರೆ ಇನ್ನೇನಾದಿತು?” ಎಂದು ಪ್ರಶ್ನಿಸಿದೆ.

ರಾಜ್ಯದ ಕಾನೂನು ಸುವ್ಯವಸ್ಥೆ ಎಂಬುದು ತೋಳಗಳಿಗೆ ಕುರಿಗಳ ಕಾವಲು ಕೊಟ್ಟಂತಾಗಿದೆ. ರೌಡಿಗಳಿಗೆ ಬಿಜೆಪಿ ರಾಜಮರ್ಯಾದೆ ಕೊಡುತ್ತಿರುವಾಗ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಬಿಲ್ಡರ್ ಮೇಲೆ ಗುಂಡಿನ ದಾಳಿಯಾಗಿದೆ. ಸರ್ಕಾರದ ಬೆಂಬಲವಿದೆ ಎಂದು ತಿಳಿದಿದ್ದೇ ತಡ ಭೂಗತ ಲೋಕ ಮತ್ತೆ ಆಕ್ಟಿವ್ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.

“ಭೂಗತಲೋಕಕ್ಕೆ ಧೈರ್ಯ ಬಂದಿದ್ದು ನಿಮ್ಮಿಂದಲೇ ಅಲ್ಲವೇ? ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿಯಲ್ಲವೇ?” ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮೇಲೆ ಕಾಂಗ್ರೆಸ್‌ ಕಿಡಿಕಾರಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...