Homeಮುಖಪುಟಬಾಂಗ್ಲಾ ಎದುರಿನ ಮೂರನೇ ಏಕದಿನ ಪಂದ್ಯ: ಭರ್ಜರಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್

ಬಾಂಗ್ಲಾ ಎದುರಿನ ಮೂರನೇ ಏಕದಿನ ಪಂದ್ಯ: ಭರ್ಜರಿ ದ್ವಿಶತಕ ಸಿಡಿಸಿದ ಇಶಾನ್ ಕಿಶನ್

- Advertisement -
- Advertisement -

ಇಂದು ಚಿತ್ತಗಾಂಗ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಚೆಂಡನ್ನು ಮೂಲೆ ಮೂಲೆಗೂ ಅಟ್ಟಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಇದು ಅವರ ಏಕದಿನ ಕ್ರಿಕೆಟ್‌ನ ಚೊಚ್ಚಲ ಶತಕವಾಗಿದೆ.

ಕೇವಲ 126 ಎಸೆತಗಳಲ್ಲಿ ಕಿಶನ್ 200 ರನ್ ಗಳಿಸಿ ಈ ಸಾಧನೆಗೈದಿದ್ದಾರೆ. ಅತಿ ವೇಗದ ದ್ವಿಶತಕ ಗಳಿಸಿದ ವಿಶ್ವದಾಖಲೆ ಅವರ ಪಾಲಾಯಿತು. ಈ ಮೊದಲು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದರು.

ಅವರು ಈ ಸೊಗಸಾದ ಆಟದ ನೆರವಿನಿಂದ ಭಾರತವು 38 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 320 ರನ್ ಗಳಿಸಿದೆ.

131 ಎಸೆತ ಎದುರಿಸಿದ ಇಶಾನ್ ಕಿಶನ್ 210 ರನ್ ಗಳಿಸಿ ಟಸ್ಕಿನ್ ಅಹ್ಮದ್ ಬೌಲಿಂಗ್‌ನಲ್ಲಿ ಲಿಟನ್ ದಾಸ್‌ಗೆ ಕ್ಯಾಚಿತ್ತು ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್ ಗಳು ಸೇರಿವೆ.

ಇದುವರೆಗೆ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಏಕದಿನ ಪಂದ್ಯದಲ್ಲಿ ಭಾರತದ ಪರವಾಗಿ ದ್ವಿಶತಕ ಗಳಿಸಿದ ಆಟಗಾರರಾಗಿದ್ದಾರೆ. 4ನೇ ಆಟಗಾರನಾಗಿ ಇಶಾನ್ ಕಿಶನ್ ಸೇರ್ಪಡೆಗೊಂಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲಿಯೇ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಆದರೆ ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ 290 ರನ್‌ಗಳ ಬೃಹತ್ ಜೊತೆಯಾಟವಾಡಿ ಇತಿಹಾಸ ನಿರ್ಮಿಸಿದರು.

ಇನ್ನೊಂದೆಡೆ ವಿರಾಟ್ ಕೊಹ್ಲಿ 85 ಎಸೆತಗಳಲ್ಲಿ 103 ರನ್ ಸಿಡಿಸುವ ಮೂಲಕ ಮೊತ್ತೊಂದು ಶತಕ ಗಳಿಸಿದರು. ತಮ್ಮ ಅಂತರಾಷ್ಟ್ರೀಯ 72ನೇ ಶತಕ ಗಳಿಸಿದ ಅವರು ಸಚಿನ್ ನಂತರ ಎರಡನೇ ಸ್ಥಾನಕ್ಕೇರಿದರು. ಸಚಿನ್ 100 ಅಂತರಾಷ್ಟ್ರೀಯ ಶತಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ: 34ನೇ ಜನ್ಮದಿನ: ಮಾಗಿದ, ಸೌಹಾರ್ದತೆ ಪರ ವಾಲಿದ ವಿರಾಟ್ ಕೊಹ್ಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...