Homeಕರ್ನಾಟಕಜನಕ್ಕೆ ಬದುಕಿನ ಚಿಂತೆಯಾದರೆ ಬಿಜೆಪಿಗೆ ಸಿದ್ದರಾಮಯ್ಯನವರದ್ದೇ ಚಿಂತೆ

ಜನಕ್ಕೆ ಬದುಕಿನ ಚಿಂತೆಯಾದರೆ ಬಿಜೆಪಿಗೆ ಸಿದ್ದರಾಮಯ್ಯನವರದ್ದೇ ಚಿಂತೆ

- Advertisement -
- Advertisement -

’ನಿಂತ್ರೆ ಕುಂತ್ರೆ ನಿಂದೆ ಧ್ಯಾನ, ಜೀವಕ್ಕಿಲ್ಲ ಸಮಾಧಾನ’ ಎಂಬ ಸಿನಿಮಾ ಹಾಡಿನಂತೆ ರಾಜ್ಯದ ಬಿಜೆಪಿ ಮುಖಂಡರಿಗೆ ಮೂರು ಹೊತ್ತೂ ವಿಪಕ್ಷ ನಾಯಕ ಸಿದ್ದರಾಮಯ್ಯನವರದೇ ಧ್ಯಾನ; ಇಲ್ಲದಿದ್ದರೆ ಅವರ ಜೀವಕ್ಕೆ ಸಮಾಧಾನ ಎಂಬುದೇ ಇಲ್ಲವಾಗಿದೆ. ಸಿದ್ದರಾಮಯ್ಯನವರು ಏನು ತಿನ್ನುತ್ತಾರೆ, ಸಿದ್ದರಾಮಯ್ಯನವರ ರ್‍ಯಾಲಿಗೆ ಎಷ್ಟು ಜನ ಸೇರುತ್ತಾರೆ? ಸಿದ್ದರಾಮಯ್ಯನವರು ಎಲ್ಲಿ ಚುನಾವಣೆಗೆ ನಿಲ್ಲುತ್ತಾರೆ, ಸಿದ್ದರಾಮಯ್ಯನವರ ನಿಜ ಕನಸುಗಳೇನು? ಹೀಗೆ ಪದೇಪದೇ ಅವರ ಸುತ್ತಲೇ ಚರ್ಚೆ ನಡೆಸುತ್ತಾ ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಬೆನ್ನುತಿರುಗಿಸುತ್ತಿದ್ದಾರೆ.

ಆಡಳಿತ ಪಕ್ಷವಾದ ಬಿಜೆಪಿಯು ಈ ಮೂರೂವರೆ ವರ್ಷದಲ್ಲಿ ತಾನು ಮಾಡಿದ ಅಭಿವೃದ್ದಿ ಕೆಲಸಗಳು, ಸಾಧನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸಬೇಕಾದ್ದು ನ್ಯಾಯಯುತ ಮಾರ್ಗ. ಆದರೆ ಅದನ್ನು ಬಿಟ್ಟು ಸಿದ್ದರಾಮಯ್ಯರವರ ಹಿಂದೆ ಬಿದ್ದಿರುವುದನ್ನು ನೋಡಿದರೆ ಒಂದೋ ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲದಿರುವುದೇ ಅವರ ಸಾಧನೆ ಎಂದರ್ಥ! ಇಲ್ಲವೇ ಸಿದ್ದರಾಮಯ್ಯನವರು ರಾಜ್ಯದ ಪ್ರಭಾವಿ ಮಾಸ್ ಲೀಡರ್ ಆಗಿದ್ದು, ಮುಂದಿನ ಚುನಾವಣೆಯಲ್ಲಿ ತಾವು ಗೆಲ್ಲುವುದಲ್ಲದೆ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರುತ್ತಾರೆ ಎಂಬ ಭಯ ಕಾಡುತ್ತಿರುವ ಸಾಧ್ಯತೆಯೂ ಇದೆ. ಇವೆರೆಡೂ ಅಲ್ಲದಿದ್ದರೆ ದಿನವಿಡೀ ಸಿದ್ದರಾಮಯ್ಯನವರ ಭಜನೆ ಮಾಡುವುದಾದರೂ ಏತಕ್ಕೆ?

2013ರಲ್ಲಿ ಸಿದ್ದರಾಮಯ್ಯನವರು ಸರ್ಕಾರ ರಚಿಸಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರ ಕಾರಿನ ಮೇಲೆ ಕಾಗೆ ಕೂತಿದೆ, ಅದುದರಿಂದ ಅಧಿಕಾರ ಕಳೆದುಕೊಳ್ಳುತ್ತಾರೆ, ನಿದ್ದೆರಾಮಯ್ಯ ಇತ್ಯಾದಿಯಾಗಿ ಅವರನ್ನು ಇಲ್ಲಸಲ್ಲದ ರೀತಿಯಲ್ಲಿ ಮಾಧ್ಯಮಗಳ ಮೂಲಕ ಟೀಕಿಸಲಾಯಿತು. ಆಗ ಆರಂಭವಾದ ಅವರ ಮೇಲಿನ ಚರ್ಚೆ, ಟೀಕೆ, ಆರೋಪ, ನಿಂದನೆ 2018ರಲ್ಲಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೂ ನಿಂತಿಲ್ಲ. ಅವರು ಸಿಎಂ ಆಗಿ ಪೂರ್ಣಾವಧಿ ಅಧಿಕಾರ ಪೂರೈಸಿದ ನಂತರ ಮೂವರು ವ್ಯಕ್ತಿಗಳು ರಾಜ್ಯಕ್ಕೆ ಸಿಎಂ ಆಗಿದ್ದಾರೆ. ಆದರೂ ಇಂದಿಗೆ ಅತಿ ಹೆಚ್ಚು ಚರ್ಚೆಯಲ್ಲಿರುವುದು, ಮಾಧ್ಯಮಗಳ ಮತ್ತು ಬಿಜೆಪಿಯವರ ಬಾಯಿಗೆ ಆಹಾರವಾಗುತ್ತಿರುವುದು ಮಾತ್ರ ಸಿದ್ದರಾಮಯ್ಯನವರು. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗಿಂತಲೂ ಹೆಚ್ಚಾಗಿ ಮಾಧ್ಯಮಗಳು ಸಿದ್ದರಾಮಯ್ಯನವರ ಕುರಿತೇ ಮಾತನಾಡುತ್ತಿವೆ. ಇದು ಅರೋಗ್ಯಕರ ಮತ್ತು ಸಮಾಜಮುಖಿ ಟೀಕೆಯಾಗಿದ್ದರೆ ಒಳ್ಳೆಯದಾಗಿತ್ತು. ಆದರೆ ಅದು ಬಹುತೇಕ ನಿಂದನೆಯ ಮತ್ತು ಸುಳ್ಳು ಆರೋಪಗಳ ದನಿಯನ್ನೇ ಹೊಂದಿರುವುದು ಪದೇಪದೇ ಸಾಬೀತಾಗಿದೆ.

2017ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ ಎಂದು ವಿವಾದ ಮಾಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು, ’ಬರೀ ಮೀನಲ್ಲ, ಕೋಳಿ ಸಹ ತಿಂದು ಹೋಗಿದ್ದೆ ಏನಿವಾಗ’ ಎಂದು ದಿಟ್ಟವಾಗಿ ಉತ್ತರಿಸಿದ್ದರು. ಅಲ್ಲಿಂದ ಆರಂಭವಾಗಿ ತೀರಾ ಇತ್ತೀಚಿನವರೆಗೂ ಅವರು ಏನು ತಿನ್ನುತ್ತಾರೆ ಎಂಬುದು ಚರ್ಚೆ ಆಗುತ್ತಲೇ ಇದೆ. ಇತ್ತೀಚೆಗೆ ಪತ್ರಕರ್ತನೊಬ್ಬ, ’ಸರ್ ಕೊಡಗಿನಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದರೆಂದು ಬಿಜೆಪಿಯವರು ಆರೋಪಿಸುತ್ತಾರೆ’ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದರು. ’ತಿನ್ನುವುದು ನನ್ನಿಷ್ಟ, ನೀನ್ಯಾವನಯ್ಯ ಕೇಳಕ್ಕೆ’ ಎಂದು ಗುಡುಗಿದ್ದರು. ’ನೀನ್ಯಾವನಯ್ಯ ಕೇಳಕ್ಕೆ’ ಎಂಬ ಮಾತು ಸ್ವಲ್ಪ ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿತ್ತು.

ಇನ್ನು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಸಂಬಂಧ ಚೆನ್ನಾಗಿಲ್ಲ; ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಎಂಬ ನಿರೂಪಣೆಯನ್ನು ಬಿಜೆಪಿ ಮತ್ತು ಮಾಧ್ಯಮಗಳು ಮತ್ತೆಮತ್ತೆ ತೇಲಿಬಿಡುತ್ತಿರುತ್ತವೆ. ತಿಂಗಳುಗಟ್ಟಲೆ ಆ ವಿಚಾರ ಚರ್ಚಿಸುತ್ತಿದ್ದವು. ಕಾಂಗ್ರೆಸ್ ಪಕ್ಷದ ಉಸಾಬರಿ ಬಿಜೆಪಿಗ್ಯಾಕೆ? ಅವರ ಪಕ್ಷದಲ್ಲಿ ಹುಳುಕುಗಳಿಲ್ಲವೇ? ಬಸನಗೌಡ ಯತ್ನಾಳ್ ಪ್ರತಿದಿನ ಬಿಜೆಪಿಗೆ ಬೈಯ್ಯುವುದು ಯಾಕೆ? ಎಂದು ಹಲವರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದು ಉಂಟು.

ಇದನ್ನೂ ಓದಿ: ಕೋಲಾರ ಕ್ಷೇತ್ರವೆ ಏಕೆ?: ಕಾರಣ ವಿವರಿಸಿದ ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ, ಹಾಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ ಎಂದು ಬಿಜೆಪಿ ಪ್ರಚಾರ ನಡೆಸಿತು. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಕಡಿಮೆ ಅಂತರದಲ್ಲಿ ಸಿದ್ದರಾಮಯ್ಯನವರು ಗೆದ್ದಿದ್ದು, ಅಲ್ಲಿ ಈ ಬಾರಿ ಅವರನ್ನು ಜನ ಸೋಲಿಸುತ್ತಾರೆ; ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲಿಸುತ್ತಾರೆ ಎಂಬ ಕಥನ ಕಟ್ಟಿತು. ಆಡಳಿತರೂಢ ಬಿಜೆಪಿಗೆ ಸಿದ್ದರಾಮಯ್ಯನವರ ಗೆಲುವು ಕಟ್ಟಿಕೊಂಡು ಏನಾಗಬೇಕು ಅಲ್ಲವೇ? ಕೊನೆಗೆ ಸಿದ್ದರಾಮಯ್ಯನವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯನವರಿಗೆ ನಿಲ್ಲಲೊಂದು ಕ್ಷೇತ್ರವಿಲ್ಲ, ಕ್ಷೇತ್ರಕ್ಕಾಗಿ ಅಲೆದಾಟ ಎಂಬ ಬಿಜೆಪಿ ಮೂದಲಿಕೆಗೆ ಬ್ರೇಕ್ ಬಿದ್ದಿದೆ. ಹಾಗೆ ನೋಡಿದರೆ ಸದರಿ ಮುಖ್ಯಮಂತ್ರಿ ಬೊಮ್ಮಾಯಿಯವರೂ ಸೇರಿದಂತೆ ಹಲವು ಬಿಜೆಪಿ ಶಾಸಕರು ತಮ್ಮ ಮೂಲವಲ್ಲದ ವಲಸೆ ಕ್ಷೇತ್ರಗಳಿಂದ ಗೆದ್ದುಬರುತ್ತಿದ್ದಾರೆ! ಹಲವರು ಸೋಲುವ ಭೀತಿಯಲ್ಲಿಯೂ ಇದ್ದಾರೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದ್ದಾಗ ಅದನ್ನು ಗೇಲಿ ಮಾಡುವ, ಸೋಲುಗಳನ್ನು ಆಡಿಕೊಳ್ಳುವ ಪರಿಪಾಠ ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ!

ಸಿದ್ದರಾಮಯ್ಯನವರು ಮುಸ್ಲಿಮರ ತುಷ್ಟೀಕರಣ ಮಾಡುತ್ತಾರೆ, ಟಿಪ್ಪು ಜಯಂತಿ ಆರಂಭಿಸಿದ್ದಾರೆ, ಸಿದ್ರಾಮುಲ್ಲಾಖಾನ್ ಎಂದೆಲ್ಲಾ ನೀಚಮಟ್ಟದ ಅಪಪ್ರಚಾರ ಮಾಡಲಾಯಿತು. ಅಷ್ಟಕ್ಕೆ ಸುಮ್ಮನಿರಲಾರದೆ ಈಗ ’ಸಿದ್ದು ನಿಜಕನಸುಗಳು’ ಎಂಬ ಪುಸ್ತಕ ಬರೆಯುವಲ್ಲಿಗೆ ಬಂದು ನಿಂತಿದೆ ಬಿಜೆಪಿ. ಆದರೆ ಈ ಹುಚ್ಚಾಟಕ್ಕೆ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ವಿರುದ್ಧ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವುದು ಬಿಜೆಪಿಯ ಗುರಿಯಾಗಿದೆ. ಬಹುಪಾಲು ಮಾಧ್ಯಮಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರನ್ನು ಬಿಜೆಪಿ ಈ ಪರಿ ಗುರಿ ಮಾಡುತ್ತಿರುವುದು ಯಾಕಾಗಿ?

“ಏಕೆಂದರೆ ಸಿದ್ದರಾಮಯ್ಯನವರು ಇಂದಿಗೂ ರಾಜ್ಯದ ಹಲವಾರು ಸಮಯದಾಯಗಳು ಹೊತ್ತು ಮೆರೆಸುವ ನಿಜವಾದ ಮಾಸ್ ಲೀಡರ್ ಆಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಸಹ ಮಾಸ್ ಲೀಡರ್‌ಗಳೇ. ಆದರೆ ಅವರ ಬೆನ್ನಿಗೆ ಒಂದು ಪ್ರಬಲ ಜಾತಿಯಿತ್ತು. ಆದರೆ ಸಿದ್ದರಾಮಯ್ಯನವರು ಕುರುಬ ಸಮುದಾಯಕ್ಕೆ ಸೇರಿದವರಾದರೂ ಕೇವಲ ಕುರುಬರು ಮಾತ್ರವಲ್ಲದೆ, ದಲಿತರು, ಮುಸ್ಲಿಮರು ಮತ್ತು ಇತರೆ ಹಿಂದುಳಿದ ವರ್ಗದ ಸಮುದಾಯಗಳು ಅವರನ್ನು ತಮ್ಮ ನಾಯಕರೆಂದು ಒಪ್ಪಿಕೊಂಡಿದ್ದಾರೆ. 2018ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಲಾರದೆ ಹೋದರೂ ಹಿಂದಿನ ಚುನಾವಣೆಗಿಂತ 1.4% ಹೆಚ್ಚಿನ ಮತಗಳನ್ನು ಪಡೆದಿದ್ದು ಮತ್ತು ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಸೇರಿದ್ದ ಲಕ್ಷಾಂತರ ಜನ ಅವರ ಜನಪ್ರಿಯತೆಗೆ ಸಾಕ್ಷಿ ನುಡಿಯುತ್ತವೆ. 2018ರ ಚುನಾವಣೆಯಲ್ಲಿ ಬಿಜೆಪಿ 36.35% ಮತಗಳನ್ನು ಪಡೆದರೆ ಕಾಂಗ್ರೆಸ್ 38.14% ಮತಗಳನ್ನು ಪಡೆದಿತ್ತು. ಸಿದ್ದರಾಮೋತ್ಸವದಲ್ಲಿ 8 ಲಕ್ಷದವರೆಗೂ ಜನ ಸೇರಿದ್ದರು ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಕರ್ನಾಟಕದ ಕೆಲವೇ ಪ್ರದೇಶಗಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನರನ್ನು ಪ್ರಭಾವಿಸುವ ಶಕ್ತಿ ಹೊಂದಿದ್ದಾರೆ. ಹಾಗಾಗಿಯೇ ಸಿದ್ದರಾಮಯ್ಯನವರನ್ನು ಮಣಿಸದೆ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಮತ್ತು ಅಧಿಕಾರ ಪಡೆಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದ್ದು, ಅದಕ್ಕಾಗಿ ಇಷ್ಟೆಲ್ಲ ಕಸರತ್ತುಗಳನ್ನು ನಡೆಸುತ್ತಿದೆ.

“ಕರ್ನಾಟಕ ದಲ್ಲಿ ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟ ಎಂಬುದರ ಬದಲಿಗೆ, ಬಿಜೆಪಿ ವರ್ಸಸ್ ಸಿದ್ದರಾಮಯ್ಯ ಹೋರಾಟ ಎಂಬಂತಾಗಿಬಿಟ್ಟಿದೆ. ಏಕೆಂದರೆ ಸಿದ್ದರಾಮಯ್ಯನವರು ಇಲ್ಲ ಅಂದರೆ ಕಾಂಗ್ರೆಸ್ ಅನ್ನು ಸುಲಭವಾಗಿ ಎದುರಿಸಬಹುದು ಎಂಬುದು ಬಿಜೆಪಿಯವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರೊಬ್ಬರನ್ನು ಸ್ವಲ್ಪವಾದರೂ ವೀಕ್ ಮಾಡಿದರೆ ಸಾಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೆ ಅದರಲ್ಲಿ ಅವರು ಸಫಲವಾಗುತ್ತಿಲ್ಲ ಎನ್ನುತ್ತಾರೆ” ಅಜೀಂ ಪ್ರೇಮ್‌ಜಿ ವಿವಿ ಪ್ರಾಧ್ಯಾಫಕರು ಮತ್ತು ರಾಜಕೀಯ ವಿಶ್ಲೇಷಕರಾದ ಎ.ನಾರಾಯಣರವರು.

“ಸೈಕಲಾಜಿಕಲಿ ಸಿದ್ದರಾಮಯ್ಯನವರ ಸ್ಥಾನಮಾನ ಸ್ವಲ್ಪ ಕುಗ್ಗುವ ಹಾಗೆ ನೋಡಿಕೊಂಡರೆ ಮತ್ತು ಜನರಿಗೆ ಮಾನಸಿಕವಾಗಿ ಅವರ ವಿರುದ್ಧ ಒಂದು ಸಂದೇಶ ಹೋಗುವ ಹಾಗೆ ಮಾಡಿದರೆ ಅಷ್ಟರಮಟ್ಟಿಗೆ ಕಾಂಗ್ರೆಸ್‌ಅನ್ನು ಮಣಿಸುವುದು ಸುಲಭ ಎಂದು ಬಿಜೆಪಿ ನಂಬಿದೆ. ಈಗಷ್ಟೇ ಅಲ್ಲ, ಹಿಂದಿನಿಂದಲೂ ಅದನ್ನೇ ಅವರು ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಇದೇ ಗೇಮ್ ನಡೆಸಲಾಯಿತು. ಎಲ್ಲಾ ಸಮುದಾಯಗಳನ್ನು ಸಿದ್ದರಾಮಯ್ಯನವರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದರು. ಅದನ್ನು ಈ ಬಾರಿಯೂ ಮಾಡಲು ಯತ್ನಿಸುತ್ತಿದ್ದಾರೆ” ಎಂದರು.

ಈ ಕುರಿತು ‘ನ್ಯಾಯಪಥ’ದೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್‌ರವರು, “ಸಿದ್ದರಾಮಯ್ಯನವರು ನಮ್ಮ ರಾಜ್ಯದ ಮಾಸ್ ಲೀಡರ್ ಆಗಿದ್ದಾರೆ. ಅವರ ವೈಯಕ್ತಿಕ ವರ್ಚಸ್ಸಿನ ಮೇಲೆ 224 ಕ್ಷೇತ್ರಗಳಲ್ಲಿಯೂ ಅಭಿಮಾನಿಗಳು, ಅನುಯಾಯಿಗಳಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ಅವರು ಹೇಳಿದವರಿಗೆ ಮತ ಚಲಾಯಿಸುವ ಕನಿಷ್ಟ 15 ಸಾವಿರದಷ್ಟು ಮತದಾರರಿದ್ದಾರೆ. 2013-17ರವರೆಗೂ ಅವರು ಕೊಟ್ಟಂತ ಕಾರ್ಯಕ್ರಮಗಳ ಮಹತ್ವ 2018ರ ಚುನಾವಣೆಯಲ್ಲಿ ಜನರಿಗೆ ಅಷ್ಟಾಗಿ ಗೊತ್ತಾಗಲಿಲ್ಲ. ಆದರೆ ಇತ್ತೀಚಿಗಿನ ಬಿಜೆಪಿ ಸರ್ಕಾರದ ದುರಾಡಳಿತ ನೋಡಿದ ಜನರಿಗೆ ಸಿದ್ದರಾಮಯ್ಯನವರ ಜನಪರ ಆಡಳಿತ ಮನದಟ್ಟಾಗಿದೆ. ಹಾಗಾಗಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಬೇಕೆಂದು ಜನ ಬಯಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡಲು, ಖಳನಾಯಕನನ್ನಾಗಿ ಬಿಂಬಿಸಲು ಬಿಜೆಪಿ ಮುಂದಾಗಿದೆ” ಎಂದರು.

“ಪ್ರತಿ ವಿಧಾನಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ನೋಡಿದಾಗ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 60ಕ್ಕಿಂತ ಹೆಚ್ಚು ಸೀಟು ಗೆಲ್ಲುವುದು ಕಷ್ಟ ಎಂಬ ಅರಿವಾಗಿದೆ. ಕಾಂಗ್ರೆಸ್ ಬಹುಮತ ಪಡೆಯುವ ಅವಕಾಶ ಇರುವುದರಿಂದ ಅದು ಬಿಜೆಪಿಗೆ ತಲೆನೋವಾಗಿದೆ. ಸಿದ್ದರಾಮಯ್ಯನವರನ್ನು ಹಣದಿಂದ ಕೊಳ್ಳುವುದಕ್ಕಾಗಲಿ, ಐಟಿ, ಇಡಿ ಗುಮ್ಮ ತೋರಿಸಿ ಬೆದರಿಸುವುದಕ್ಕಾಗಲಿ ಬಿಜೆಪಿಗೆ ಸಾಧ್ಯವಿಲ್ಲವಾದ್ದರಿಂದ ಅವರ ಚಾರಿತ್ರ್ಯ ಹರಣಕ್ಕೆ ಮುಂದಾಗಿದೆ. ಆ ಮೂಲಕ, ಯಾರಿಗೆ ಮತ ಹಾಕಬೇಕೆಂದು ಇನ್ನೂ ನಿರ್ಧರಿಸದೆ ಬೇಲಿ ಮೇಲೆ ಕುಳಿತಿರುವ ಜನರನ್ನು ಒಲಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಇದೇ ರೀತಿ ದೇಶಮಟ್ಟದಲ್ಲಿ ರಾಹುಲ್ ಗಾಂಧಿ ಮೇಲೆ ಅವಹೇಳನ ಮಾಡಲಾಗುತ್ತಿದೆ. ಈ ಮುಂಚೆ ಅವರಿಗೆ ಏನೂ ಗೊತ್ತಿಲ್ಲ, ಪಪ್ಪು ಎಂದು ಕರೆಯುತ್ತಿದ್ದರು. ಆದರೆ ಭಾರತ್ ಜೋಡೊ ಯಾತ್ರೆ ರಾಹುಲ್ ಗಾಂಧಿಯವರ ವರ್ಚಸ್ಸನ್ನು ಜನರೆದರು ಅನಾವರಣ ಮಾಡಿತು. ಜನರ ಭಾವನೆ ಸಂಪೂರ್ಣ ಬದಲಾಗಿದೆ” ಎಂದರು.

ಬಿಜೆಪಿ ಟಿಪ್ಪು ಸುಲ್ತಾನನ ಕುರಿತಾಗಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ. ನೆಹರೂರವರ, ಗಾಂಧೀಜಿಯವರ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದೆ. ಆ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಮಣಿಸಿ ಪಾರಮ್ಯ ಮೆರೆಯುವ ಕೆಲಸ ಮಾಡುತ್ತಿದೆ. ಇದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಕೂಡ ಸಾಧಿಸಿದೆ ಎನ್ನಬಹುದು. ಆದರೆ ಅದಕ್ಕೆ ಅದೇ ಮಟ್ಟದ ವಿರೋಧವನ್ನೂ ಎದರಿಸುತ್ತಿದೆ. ಈಗ ಸಿದ್ದರಾಮಯ್ಯನವರನ್ನು ಅದೇ ಮಾದರಿಯಲ್ಲಿ ತೇಜೋವಧೆ ಮಾಡಲು ಮುಂದಾಗಿದೆ. ಆದರೆ ಸಿದ್ದರಾಮಯ್ಯನವರ ರಾಜಕೀಯ ಇನ್ನೂ ಜೀವಂತವಾಗಿದ್ದು ಗಟ್ಟಿದನಿಯಲ್ಲಿ ತಮ್ಮ ಟೀಕಾಕಾರನ್ನು ಎದರಿಸುತ್ತಿದ್ದಾರೆ. ಈ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎಂದು ತಿಳಿದ ಕೋಟ್ಯಂತರ ಜನ ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ತಮ್ಮ ಅಪಪ್ರಚಾರದ ನರೆಟಿವ್‌ನಲ್ಲಿ ಇನ್ನೂ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿಲ್ಲ. ಕರ್ನಾಟಕದ ಮಹತ್ವದ ಚುನಾವಣೆಗೆ ಇನ್ನು 3-4 ತಿಂಗಳು ಮಾತ್ರ ಉಳಿದಿರುವುದರಿಂದ ಈ ಪ್ರಹಸನ ಮತ್ತಷ್ಟು ಜೋರಾಗಲಿದೆ. ಇದರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾಲವೇ ನಿರ್ಣಯಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಸತ್ತಿನ ಚಳಿಗಾಲದ ಅಧಿವೇಶನ : ಎಸ್‌ಐಆರ್ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್

ಸೋಮವಾರ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ, ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ತುರ್ತು ಚರ್ಚೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ...

ತಮಿಳುನಾಡಿನಲ್ಲಿ ಎರಡು ಬಸ್ಸುಗಳು ಡಿಕ್ಕಿ:10ಕ್ಕೂ ಹೆಚ್ಚು ಜನರ ಸಾವು, 20 ಜನರಿಗೆ ಗಂಭೀರ ಗಾಯಗಳಾಗಿವೆ

ಚೆನ್ನೈ: ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಭಾನುವಾರ ಸಂಜೆ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು...

ನಾಳೆಯಿಂದ ಸಂಸತ್ ಚಳಿಗಾಲದ ಅಧಿವೇಶನ | ಸುಗಮ ಕಲಾಪಕ್ಕೆ ಸಹಕಾರ ಕೋರಿದ ಆಡಳಿತ : ಎಸ್‌ಐಆರ್ ಚರ್ಚೆ ಮುಂದಿಟ್ಟ ಪ್ರತಿಪಕ್ಷಗಳು

ನಾಳೆಯಿಂದ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭಗೊಳ್ಳಲಿದೆ. ಅದಕ್ಕೂ ಮುನ್ನ ಇಂದು (ನವೆಂಬರ್ 30) ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದೆ. ಸಭೆಯಲ್ಲಿ ಸುಗಮ...

ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕನ್ನಡ ಭಾಷೆ ರಾಜ್ಯದ ಅಸ್ಮಿತೆಯ ತಳಹದಿಯಾಗಿದ್ದರೆ, ಅರೆಭಾಷೆಯಂತಹ ಪ್ರಾದೇಶಿಕ ಭಾಷೆಗಳು ಕನ್ನಡವನ್ನು ಶ್ರೀಮಂತಗೊಳಿಸಿವೆ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.  ನವೆಂಬರ್ 30ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು...

ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಯುವಕ: ಮನನೊಂದು 22 ವರ್ಷದ ಯುವತಿ ಆತ್ಮಹತ್ಯೆ 

ಮದುವೆಯಾಗುವುದಾಗಿ ನಂಬಿಸಿದ್ದ ಯುವಕ, ಯುವತಿಗೆ ಮಾನಸಿಕ-ದೈಹಿಕ ಹಲ್ಲೆ ನಡೆಸಿದ್ದು, ಆತನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂಜಿನಿಯರಿಂಗ್ ಪದವೀಧರೆ...

ಮಹಾರಾಷ್ಟ್ರ : ಪ್ರಮುಖ ನಾಯಕ ಅನಂತ್ ಸೇರಿದಂತೆ 10 ಮಂದಿ ಮಾವೋವಾದಿಗಳು ಶರಣಾಗತಿ

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಶುಕ್ರವಾರ (ನ.28) ಪ್ರಮುಖ ಮಾವೋವಾದಿ ನಾಯಕ ವಿಕಾಸ್ ನಾಗಪುರೆ ಅಲಿಯಾಸ್ ನವಜ್ಯೋತ್ ಅಲಿಯಾಸ್ ಅನಂತ್ ಮತ್ತು ಇತರ 10 ಮಂದಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅನಂತ್ ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ...

ಎಸ್‌ಐಆರ್ : 12 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಗಡುವು ವಿಸ್ತರಿಸಿದ ಚು. ಆಯೋಗ

ಒಂಬತ್ತು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌)ಯಲ್ಲಿ ಮತದಾರರು ಎಣಿಕೆ ನಮೂನೆಗಳನ್ನು ಸಲ್ಲಿಸುವ ಗಡುವನ್ನು ಡಿಸೆಂಬರ್ 4 ರಿಂದ 11ಕ್ಕೆ ಚುನಾವಣಾ ಆಯೋಗ...

ಗೆಳತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹ: 18ವರ್ಷದ ಪದವಿಪೂರ್ವ ವಿದ್ಯಾರ್ಥಿ ಆತ್ಮಹತ್ಯೆ

ತನ್ನ ಗೆಳತಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ಕಾರಣ ನವೆಂಬರ್ 29, ಶನಿವಾರ ಹೈದರಾಬಾದ್‌ನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸುರರಾಮ್ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು 18 ವರ್ಷದ ಅಭಿಲಾಷ್ ಎಂದು...

ಅರ್ಫಾಝ್‌ನ ಮನೆ ಕೆಡವಿದ ಆಡಳಿತ : ತನ್ನ ಜಾಗ ಉಡುಗೊರೆಯಾಗಿ ಕೊಟ್ಟ ಕುಲ್ದೀಪ್ ಶರ್ಮಾ

ಅರ್ಫಾಝ್ ಎಂಬ ಪತ್ರಕರ್ತನ ಮನೆಯನ್ನು ಆಡಳಿತ ಕೆಡವಿದಾಗ, ತನ್ನ ಜಾಗವನ್ನು ಉಡುಗೊರೆಯಾಗಿ ಕೊಟ್ಟ ಜಮ್ಮು ಕಾಶ್ಮೀರದ ಸಾಮಾಜಿಕ ಹೋರಾಟಗಾರ ಕುಲ್ದೀಪ್ ಶರ್ಮಾ ನಡೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಮ್ಮುವಿನ ಜ್ಯುವೆಲ್ ಪ್ರದೇಶದ ನಿವಾಸಿ...

ತೆಲಂಗಾಣದಲ್ಲಿ ಭೀಕರ ಅಗ್ನಿ ಅವಘಡ, ಕೊಂಡಗಟ್ಟು ಪ್ರದೇಶದಲ್ಲಿ 20ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಹೈದರಾಬಾದ್: ತೆಲಂಗಾಣದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕೊಂಡಗಟ್ಟು ಪ್ರದೇಶದಲ್ಲಿ ಇಪ್ಪತ್ತಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಕೊಂಡಗಟ್ಟು ಬೆಟ್ಟಗಳ ತಪ್ಪಲಿನಲ್ಲಿರುವ ಅಂಗಡಿಗಳ ಸಾಲಿಗೆ ಬೆಂಕಿ ವ್ಯಾಪಿಸಿದ್ದು, ತೀವ್ರ...