ಕಾಳಿ ದೇವಿಯ ವೇಷ ಧರಿಸಿ ಧೂಮಪಾನ ಮಾಡುತ್ತಿರುವ ಸಾಕ್ಷ್ಯ ಚಿತ್ರದ ಪೋಸ್ಟರ್ ಹಾಗೂ ಅನೇಕ ಕ್ರಿಮಿನಲ್ ಕೇಸ್ ಗೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರನ್ನು ಬಂಧನದ ಪ್ರಕ್ರಿಯೆಯಿಂದ ಸುಪ್ರೀಂ ಕೋರ್ಟ್ ಶುಕ್ರವಾರ ರಕ್ಷಿಸಿದೆ.
ಮಣಿಮೇಕಲೈ ಅವರು ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಮಾಡಿದ್ದಲ್ಲ. ದೇವಿಯ ಚಿತ್ರಣವು ಅವಳನ್ನು “ಒಳಗೊಳ್ಳುವ ಅರ್ಥದಲ್ಲಿ” ತೋರಿಸುವುದಾಗಿತ್ತು ಎಂದು ನ್ಯಾಯಾಲಯದಲ್ಲಿ ಮಣಿಮೇಕಲೈ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ಪೋಸ್ಟರ್ ಗೆ ಸಂಬಂಧಿಸಿದಂತೆ ಮಣಿಮೇಕಲೈ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಹಿನ್ನೆಲೆಯಲ್ಲಿ ಬಂಧನ ಸೇರಿದಂತೆ ಯಾವುದೇ ಬಲವಂತದ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ ಎಂದು ನ್ಯಾಯಮೂರ್ತಿ ಪಿಎಸ್ ನರಸಿಮಹ ಅವರನ್ನೊಳಗೊಂಡ ಪೀಠ ಸೂಚಿಸಿದೆ.
ಬಾಕಿ ಉಳಿದಿರುವ ಎಲ್ಲ ಎಫ್‌ಐಆರ್ ಗಳನ್ನು ಒಂದೇ ಸ್ಥಳದಲ್ಲಿ ಸೇರಿಸುವಂತೆ ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ.
“ಫೆಬ್ರವರಿ 20, 2023 ರಂದು ಅರ್ಜಿಯನ್ನು ಪಟ್ಟಿ ಮಾಡಿ. ಈ ಮಧ್ಯೆ ಅರ್ಜಿದಾರರ ವಿರುದ್ಧ ಮೇಲೆ ತಿಳಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಅಥವಾ ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಇತರ ಎಫ್‌ಐಆರ್‌ಗೆ ಅನುಗುಣವಾಗಿ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ” ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.
“ಫೆಬ್ರವರಿ 20, 2023 ರಂದು ಅರ್ಜಿಯನ್ನು ಪಟ್ಟಿ ಮಾಡಿ. ಇದೇ ವಿಚಾರಕ್ಕೆ ಸಂಬಂಧಿಸಿದ ಎಫ್‌ಐಆರ್‌ಗಳ ಆಧಾರದ ಮೇಲೆ ಅಥವಾ ಯಾವುದೇ ಇತರ ಎಫ್‌ಐಆರ್‌ಗೆ ಅನುಗುಣವಾಗಿ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ” ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಿದೆ.
ಮಣಿಮೇಕಲೈ ಅವರು ಕೆನಡಾ ಮೂಲದ ಚಲನಚಿತ್ರ ನಿರ್ಮಾಪಕಿಯಾಗಿರುವುದರಿಂದ ಮಧ್ಯಪ್ರದೇಶ ಪೊಲೀಸರು ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಹೊರಡಿಸಿದ್ದಾರೆ ಎಂದು ಪೀಠವು ಗಮನಿಸಿದೆ. ಎಲ್‌ಒಸಿ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
“ಹಲವು ರಾಜ್ಯಗಳಲ್ಲಿ ಈ ಬಗ್ಗೆ ಬಹಳಷ್ಟು ಎಫ್‌ಐಆರ್‌ಗಳು ದಾಖಲಾಗಿವೆ ಮತ್ತು ಅವು ಪೂರ್ವಾಗ್ರಹ ಪೀಡಿತದಿಂದ ಕೂಡಿವೆ ಹಾಗಾಗಿ ಎಲ್ಲಾ ಎಫ್‌ಐಆರ್‌ಗಳನ್ನು ಒಂದೇ ಸ್ಥಳದಲ್ಲಿ ಕ್ರೋಢೀಕರಿಸಲು ನಾವು ಸೂಚನೆ ನೀಡುತ್ತೇವೆ. ನಂತರ ಅರ್ಜಿದಾರರು ಸೆಕ್ಷನ್ 482 ಸಿಆರ್‌ಪಿಸಿ ಮನವಿಯನ್ನು ಸಲ್ಲಿಸಲು ಸ್ವತಂತ್ರರಾಗಿರುತ್ತಾರೆ ಎಂದು ಆದೇಶದಲ್ಲಿ ಸೇರಿಸಲಾಗಿದೆ.
ಎಫ್‌ಐಆರ್‌ಗಳನ್ನು ರದ್ದುಪಡಿಸಲು ಸಂಬಂಧಿಸಿದಿಂತೆ ಹೈಕೋರ್ಟ್‌ಗೆ ಹೋಗಲು ಸಿಆರ್‌ಪಿಸಿ ಸೆಕ್ಷನ್ 482 ರಲ್ಲಿ ಅವಕಾಶವಿದೆ.
ಚಿತ್ರ ನಿರ್ಮಾಪಕರ ಪರ ವಕೀಲ ಕಾಮಿನಿ ಜೈಸ್ವಾಲ್ ವಾದ ಮಂಡಿಸಿದ್ದು, ಮಧುರೈ ಮೂಲದ ಚಲನಚಿತ್ರ ನಿರ್ಮಾಪಕರು ಜುಲೈ 2022 ರಲ್ಲಿ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್, ಟ್ವಿಟರ್‌ನಲ್ಲಿ ‘ಕಾಳಿ’ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ‘ರಿದಮ್ಸ್ ಆಫ್ ಕೆನಡಾ’ ವಿಭಾಗದ ಭಾಗವಾಗಿದೆ ಎಂದು ಹೇಳಿದರು.
ಈ ಪೊಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಅದು ಕೆಲವರ ಕೋಪಕ್ಕೆ ಕಾರಣವಾಗಿತ್ತು. ಇದು ಪೋಸ್ಟರ್‌ಗಳನ್ನು ತೆಗೆದುಹಾಕಲು ಕೆನಡಾದ ಅಧಿಕಾರಿಗಳನ್ನು ಕೇಳಲು ಟೊರೊಂಟೊದಲ್ಲಿನ ಭಾರತೀಯ ಹೈಕಮಿಷನರನ್ನು ಪ್ರೇರೇಪಿಸಿತು.
ಇದನ್ನೂ ಓದಿ: ಚುನಾವಣಾ ಆಯುಕ್ತರನ್ನು ಭಾರಿ ಆತುರದಲ್ಲಿ ನೇಮಿಸಿದ್ದೇಕೆ?: ಒಕ್ಕೂಟ ಸರ್ಕಾರಕ್ಕೆ ಸುಪ್ರಿಂ ಕೋರ್ಟ್ ಪ್ರಶ್ನೆ
ಟ್ವಿಟರ್ ಈ ಪೋಸ್ಟ್ ಅನ್ನು ತಗೆದುಹಾಕಿದಾಗ, ಆಕೆಯ ವಿರುದ್ಧ ಸೆಕ್ಷನ್ 153A (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು 295A (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು.
ಕಾಳಿ ಎಂಬುದು ಮಣಿಮೇಕಲೈ ಅವರ ದೇಹ ದೇವತೆ ಕಾಳಿ ನಗರದ ಬೀದಿಗಳಲ್ಲಿ ವಾಸಿಸುವ ಮತ್ತು ತಿರುಗಾಡುವ ಕುರಿತಾದ ಚಲನಚಿತ್ರವಾಗಿದೆ. ಒಂದು ದೃಶ್ಯದಲ್ಲಿ, ತನ್ನ ದೇಹದಲ್ಲಿರುವ ದೇವಿಯು ಮನೆಯಿಲ್ಲದ ವ್ಯಕ್ತಿಯೊಂದಿಗೆ ಸಿಗರೇಟನ್ನು ಹಂಚಿಕೊಳ್ಳುತ್ತಾಳೆ.
ಮಣಿಮೇಕಲೈ ಅವರ ಸಾಕ್ಷ್ಯ ಚಿತ್ರದಲ್ಲಿ ಕಾಳಿ ಎಂಬುದು ದೇಹ ದೇವತೆ. ಆ ಕಾಳಿ ನಗರದ ಬೀದಿಗಳಲ್ಲಿ ವಾಸಿಸುವ ಮತ್ತು ತಿರುಗಾಡುವಂತಹ ಚಿತ್ರ ಇದಾಗಿದೆ. ಒಂದು ದೃಶ್ಯದಲ್ಲಿ ದೇವಿಯು ವ್ಯಕ್ತಿಯೊಂದಿಗೆ ಸಿಗರೇಟನ್ನು ಹಂಚಿಕೊಳ್ಳುತ್ತಾಳೆ.
“ನಾನು ತಮಿಳುನಾಡಿನ ಗ್ರಾಮೀಣ ಪ್ರದೇಶದಿಂದ ಬಂದಿದ್ದೇನೆ. ಅಲ್ಲಿ ಕಾಳಿಯನ್ನು ಪೇಗನ್ ದೇವತೆ ಎಂದು ನಂಬಲಾಗಿದೆ. ಅವಳು ಆಡಿನ ರಕ್ತದಲ್ಲಿ ಬೇಯಿಸಿದ ಮಾಂಸವನ್ನು ತಿನ್ನುತ್ತಾಳೆ, ಅರಕ್ ಕುಡಿಯುತ್ತಾಳೆ, ಬೀಡಿ [ಸಿಗರೇಟ್] ಸೇದುತ್ತಾಳೆ ಮತ್ತು ಕಾಡು ಕುಣಿತವನ್ನು ಮಾಡುತ್ತಾಳೆ. ಅದು ನಾನು ಚಿತ್ರಕ್ಕಾಗಿ ಸಿದ್ದಗೊಳಿಸಿಕೊಂಡಿದ್ದ ಕಾಳಿ,” ಎಂದು ಮಣಿಮೇಕಲೈ ಗಾರ್ಡಿಯನ್ ಅವರು ವರ್ಷದ ಕೊನೆಯ ಸಂದರ್ಶನದಲ್ಲಿ ಹೇಳಿದರು.


