ಮಿಥ್ಯ: ‘ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಪ್ರತಾಪಗಡ ಬೆಟ್ಟದ ಮೇಲಿರುವ ಶಿವನ ವಿಗ್ರಹವನ್ನು ಮುಸ್ಲಿಮ್ ಮತಾಂಧರು ವಿರೂಪಗೊಳಿಸಿದ್ದಾರೆ’ –ಇದು ಕಳೆದ ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ.
ಸತ್ಯ: ಮೇಲೆನ ಸುದ್ದಿಯನ್ನು ಹಿಂದೆಮುಂದೆ ನೋಡದೇ ಪ್ರಸಾರ ಮಾಡುತ್ತಿರುವ ಕಿರಾತಕರು, ‘ಹಿಂದೂ ಧರ್ಮ ಅಪಾಯದಲ್ಲಿದೆ’ ಎಂದೆಲ್ಲ ಅವಲತ್ತುಕೊಳ್ಳುವ ನಾಟಕ ಮಾಡುತ್ತಿವೆ. ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಸೇರಿದಂತೆ ಹಲವು ಪ್ರದೇಶಕ ಭಾಷೆಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ.
This place has a Shiv Temple and a big statue of Shiva which had been build Hindu King 400 years ago
This place also have a Dargah of sufi sant 'Khawaja Usman Gani Haruni' which was build by Muslim ruler later
So for both Hindu and Muslim have special bond to this place but.
2/n pic.twitter.com/kE0ewQlekK— Ā̷̢̅̈͆̉̔̚bhyuday HMP (@craziestlazy) July 26, 2019
ಆದರೆ, ಶಿವನ ವಿಗ್ರಹ ವಿರೂಪಗೊಂಡಿದ್ದು ನಿಜ. ಘಟನೆ ನಡೆದ ಮರುದಿನವೇ, ಅಲ್ಲಿನ ಅಧಿಕಾರಿಗಳು ‘ಹಿಂದಿನ ದಿನ ಆರ್ಭಟಿಸಿದ ಗುಡುಗು ಮಿಂಚಿನ ಪರಿಣಾಮವಾಗಿ ಇದು ಸಂಭವಿಸಿದೆ. ಮಿಂಚಿನ ಪ್ರಖರತೆಯ ಕಾರಣಕ್ಕೆ ಶಿವನ ವಿಗ್ರಹ ವಿರೂಪಗೊಂಡಿದೆ’ ಎಂದು ಕೂಡಲೇ ಸ್ಪಷ್ಟೀಕರಣ ನೀಡಿದ್ದಾರೆ. ಆದರೂ ಅಶಾಂತಿ ಬಯಸುವ ಅತೃಪ್ತ ಮನಸ್ಸುಗಳು ಈ ಸುದ್ದಿಯನ್ನು ಪ್ರಸಾರ ಮಾಡಿ ವಿಕೃತ ಸಂತೋಷ ಪಡುತ್ತಿವೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅಲ್ಲಿನ ಪೊಲೀಸ್ ಇಲಾಖೆ ಕೂಡ ಯಾವುದೇ ವ್ಯಕ್ತಿಗಳಿಂದ ಈ ಹಾನಿ ಸಂಭವಿಸಿಲ್ಲ. ಇದು ಮಿಂಚಿನ ಪರಿಣಾಮದಿಂದ ಸಂಭವಿಸಿದೆ’ ಎಂದೂ ಅಲ್ಟ್ ನ್ಯೂಸ್‍ಗೆ ದೃಢಪಡಿಸಿದ್ದಾರೆ. ದಿ ವೀಕ್ ಸೇರಿದಂತೆ ಹಲವು ಪೋರ್ಟಲ್‍ಗಳು ಇದನ್ನೇ ವರದಿ ಮಾಡಿವೆ.
ಆದರೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಇಂತಹ ಸುಳ್ಳು ಸುದ್ದಿಗಳನ್ನು ಹರಡಿ ಜನರ ಗಮನವನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಇಂಥದ್ದನ್ನೆಲ್ಲ ನಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದು ಈಗ ಒಂಥರಾ ಮನೋವಿಕಲತೆಯೂ ಆಗುತ್ತಿದೆ.
ಆಧಾರ: ಅಲ್ಟ್ ನ್ಯೂಸ್


