ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಕಾರ್ಖಾನೆ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿದ್ದು 28 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದೆ. ಬೆಳ್ಳಿ ದೀಪಗಳನ್ನು ಮತದಾರರಿಗೆ ಲಂಚವಾಗಿ ವಿತರಿಸಲು ಉದ್ದೇಶಿಸಲಾಗಿತ್ತು ಎಂದು ಚುನಾವಣಾ ಆಯೋಗ ಹೇಳಿದೆ.
ತಮ್ಮ ಮೇಲಿನ ಆರೋಪವನ್ನು ಸಚಿವ ಮುರುಗೇಶ್ ನಿರಾಣಿಯವರು ನಿರಾಕರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಯ ವಸತಿ ಗೃಹಗಳಲ್ಲಿ ಸಂಗ್ರಹಿಟ್ಟಿದ್ದ ₹21.45 ಲಕ್ಷ ಮೌಲ್ಯದ ಬೆಳ್ಳಿ ದೀಪಗಳನ್ನು ಶುಕ್ರವಾರ ರಾತ್ರಿ ಫ್ಲೈಯಿಂಗ್ ಸ್ಕ್ವಾಡ್ ತಂಡ ವಶಪಡಿಸಿಕೊಂಡಿದೆ.
EC raids at @BJP4Karnataka Minister Murugesh Nirani's factory yield 28 kgs of silver.
Silver lamps meant to be distributed to voters as 'bribe' says ECI. Minister refutes the charge.
Watch: https://t.co/s7lnl5hKPl pic.twitter.com/py1XO33gq1— South First (@TheSouthfirst) April 22, 2023
‘ಸಿ ವಿಜಿಲ್’ ಆ್ಯಪ್ ಮೂಲಕ ದೂರು ಬಂದಿತ್ತು. ಅಲ್ಲಿ ಮದ್ಯ ಹಂಚಲಾಗುತ್ತಿದೆ ಎಂಬ ಮಾಹಿತಿ ರವಾನೆಯಾಗಿತ್ತು. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಪ್ರಸನ್ನ ಮಾನೆ ಹಾಗೂ ಅಧಿಕಾರಿಗಳು ದಾಳಿ ನಡೆಸಿದಾಗ ಹತ್ತು ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ದೀಪಗಳು ಪತ್ತೆಯಾಗಿವೆ.
ಬಾಕ್ಸ್‌ಗಳ ಮೇಲೆ ಬಸವಣ್ಣ, ಕನಕದಾಸರ ಭಾವಚಿತ್ರಗಳು, ದೀಪದ ಮೇಲೆ ಮುರುಗೇಶ ನಿರಾಣಿ ಅವರ ಭಾವಚಿತ್ರವಿದೆ. ಬೀಳಗಿ ಕ್ಷೇತ್ರದಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ಸಂಗ್ರಹಿಸಿಡಲಾಗಿದೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿ: ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ತೊರೆದ ಕಾರ್ಯಕರ್ತರು ಎಂದು ಬೇರೆ ಊರಿನ ಫೋಟೋ ಹಂಚಿಕೊಂಡ ಬಿಜೆಪಿ


