Homeಮುಖಪುಟಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ತೊರೆದ ಕಾರ್ಯಕರ್ತರು ಎಂದು ಬೇರೆ ಊರಿನ ಫೋಟೋ ಹಂಚಿಕೊಂಡ ಬಿಜೆಪಿ

ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ತೊರೆದ ಕಾರ್ಯಕರ್ತರು ಎಂದು ಬೇರೆ ಊರಿನ ಫೋಟೋ ಹಂಚಿಕೊಂಡ ಬಿಜೆಪಿ

- Advertisement -
- Advertisement -

ಚಾಮರಾಜನಗರ ತಾಲ್ಲೂಕಿನ ಹುಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡ ಕಾರ್ಯಕ್ರಮದ ಫೋಟೋವನ್ನು, ಸಿದ್ದರಾಮಯ್ಯನವರ ಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಕಾರ್ಯಕ್ರಮ ಎಂದು ಬಿಜೆಪಿ ಪಕ್ಷ ತಪ್ಪಾಗಿ ಟ್ವೀಟ್ ಮಾಡಿದೆ.

ಸಿದ್ದರಾಮನ ಹುಂಡಿಯಲ್ಲಿ ಜನ ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಸಿದ್ದರಾಮಯ್ಯನವರ ತುಷ್ಟೀಕರಣ ಹಾಗೂ ಇಬ್ಬಗೆ ನೀತಿ ವಿರೋಧಿಸಿ ಕಾರ್ಯಕರ್ತರು ಅವರನ್ನು ಕೈಬಿಟ್ಟು ಬಿಜೆಪಿಗೆ ಬೆಂಬಲಿಸುತ್ತಿದ್ದು, ಅಂದು ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾದಂತೆ, ಈ ಬಾರಿ ವರುಣಾದಲ್ಲಿಯೂ ಸೋಲಲಿದ್ದಾರೆ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಆದರೆ ಬಿಜೆಪಿ ಪ್ರಕಟಿಸಿದ ಫೋಟೊ ಚಾಮರಾಜನಗರ ತಾಲ್ಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದ ಕಾರ್ಯಕ್ರಮದ್ದಾಗಿದೆ. ಚಾಮರಾಜನಗರ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರಾದ ಮಹದೇವಸ್ವಾಮಿ ಮತ್ತು ಶರತ್ ಪುಟಬುದ್ಧಿ ಎಂಬುವವರು ಅದೇ ಫೋಟೊಗಳನ್ನು ಹುಣಸೂರಿನಲ್ಲಿ ನಡೆದ ಕಾರ್ಯಕ್ರಮ ಎಂದು ಹಂಚಿಕೊಂಡಿರುವುದನ್ನು ಫೇಸ್‌ಬುಕ್‌ನಲ್ಲಿ ನೋಡಬಹುದು.

ವರುಣಾ ಕ್ಷೇತ್ರದ ಸಿದ್ದರಾಮಯ್ಯನವರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿಯೇ ಅವರ ವಿರೋಧಿ ಅಲೆ ಇದೆ ಎಂಬ ಸಂದೇಶ ಬಿತ್ತುವುದಕ್ಕಾಗಿ ಬಿಜೆಪಿ ಈ ರೀತಿ ತಪ್ಪಾಗಿ ಟ್ವೀಟ್ ಮಾಡಿದೆ ಎಂದು ಹಲವರು ಪ್ರಶ್ನಿಸಿದ್ದಾರೆ.

ಬುಧವಾರ ಬಿಜೆಪಿ ಸೇರಿದ ಹುಣಸೂರಿನ ಕೆಲ ಕಾರ್ಯಕರ್ತರು ನಿನ್ನೆ ಸಿದ್ದರಾಮನಹುಂಡಿಯಲ್ಲಿ ಮತ್ತೆ ಬಿಜೆಪಿ ಸೇರಿದ್ದಾರಾ? ಅನೇಕ ಸ್ಥಳಗಳಿಗೆ ಒಂದೇ ಚಿತ್ರವನ್ನು ಏಕೆ ಬಳಸಬೇಕು ಎಂದು ಪತ್ರಕರ್ತ ಮೊಹಮ್ಮದ್ ಝುಬೇರ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 10 ಕೆ.ಜಿ. ಅಕ್ಕಿ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಬಿಜೆಪಿಯ ನಿದ್ದೆಗೆಡಿಸಿದೆಯೇ ‘ಅನ್ನಭಾಗ್ಯ?’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...