Homeಮುಖಪುಟಸಿಬಿಐ ನೋಟಿಸ್ ಬೆನ್ನಲ್ಲೇ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಬೆಂಬಲಿಸಿದ ಅರವಿಂದ್ ಕೇಜ್ರಿವಾಲ್

ಸಿಬಿಐ ನೋಟಿಸ್ ಬೆನ್ನಲ್ಲೇ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಬೆಂಬಲಿಸಿದ ಅರವಿಂದ್ ಕೇಜ್ರಿವಾಲ್

- Advertisement -
- Advertisement -

ಪುಲ್ವಾಮ ದಾಳಿ ಮತ್ತು ಭ್ರಷ್ಟಾಚಾರದ ಕುರಿತು ಮೋದಿಯವರಿಗೆ ಹೆಚ್ಚೇನೂ ತೊಂದರೆಯಿಲ್ಲ ಎಂಬ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್‌ರವರಿಗೆ ಸಿಬಿಐ ನೋಟಿಸ್ ನೀಡಿದ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದಾರೆ.

ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ವಿಚಾರಣೆಗೆ ಕರೆದಿದೆ. ಈ ಕುರಿತು ಟ್ವೀಟ್ ಮಾಡಿರುವ ಕೇಜ್ರಿವಾಲ್, “ಆತ ಹೇಡಿ, ಅನಕ್ಷರಸ್ಥ ಸಿಬಿಐ ಹಿಂದೆ ಅಡಗಿದ್ದಾನೆ. ಆದರೆ ಇಡೀ ದೇಶವೇ ನಿಮ್ಮೊಂದಿಗಿದೆ. ನೀವು ಮುನ್ನುಗ್ಗಿ ಸರ್” ಎಂದು ಹೇಳಿದ್ದಾರೆ.

“ಇಡೀ ದೇಶವೇ ನಿಮ್ಮೊಂದಿಗಿದೆ. ಇಂತಹ ಭಯದ ವಾತಾವರಣದಲ್ಲಿಯೂ ನೀವು ತುಂಬಾ ಧೈರ್ಯ ತೋರಿಸಿದ್ದೀರಿ ಸರ್. ಆತ ಹೇಡಿ, ಸಿಬಿಐ ಹಿಂದೆ ಅಡಗಿದ್ದಾನೆ. ಈ ಮಹಾನ್ ದೇಶದಲ್ಲಿ ಬಿಕ್ಕಟ್ಟು ಬಂದಾಗಲೆಲ್ಲಾ ನಿಮ್ಮಂತಹವರು ಧೈರ್ಯದಿಂದ ಎದುರಿಸಿದ್ದಾರೆ. ಅವನು ಅನಕ್ಷರಸ್ಥ, ಭ್ರಷ್ಟ, ದೇಶದ್ರೋಹಿ. ಅವನು ನಿಮ್ಮೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ನೀವು ಮುನ್ನುಗ್ಗಿ ಸರ್” ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಅರವಿಂದ್ ಕೇಜ್ರಿವಾಲ್ ತಮ್ಮ ಟ್ವೀಟ್‌ನಲ್ಲಿ ಯಾರನ್ನೂ ಉಲ್ಲೇಖಿಸದೆ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪುಲ್ವಾಮ ದಾಳಿ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಗೌವರ್ನರ್ ಸತ್ಯಪಾಲ್ ಮಲಿಕ್‌ಗೆ ಸಿಬಿಐ ನೋಟಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರ ತರದಂತೆ ಸೂಚಿಸಿದ ಶಾಲೆ: ಆರೋಪ

0
ಜೈಪುರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಮಕ್ಕಳಿಗೆ ಟಿಫಿನ್ ಬಾಕ್ಸ್‌ಗಳಲ್ಲಿ ಮಾಂಸಾಹಾರವನ್ನು ತರದಂತೆ ನಿಷೇಧಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಗೆಗಿನ ಆರೋಪವನ್ನು ಶಾಲೆಯ ಮುಖ್ಯೋಪಾಧ್ಯಾಯರು ನಿರಾಕರಿಸಿದ್ದಾರೆ. ಕಥೆಗಾರ ಮತ್ತು ಚಿತ್ರಕಥೆಗಾರ, ದರಾಬ್...