Homeಕರ್ನಾಟಕದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಸಂಘಪರಿವಾರದ ಮೂವರು ಕಾರ್ಯಕರ್ತರ ಬಂಧನ

ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಸಂಘಪರಿವಾರದ ಮೂವರು ಕಾರ್ಯಕರ್ತರ ಬಂಧನ

- Advertisement -
- Advertisement -

ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಮೂಡುಬಿದರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28) ಎಂದು ಪೊಲೀಸರು ಹೇಳಿದ್ದಾರೆ..

ಆರೋಪಿಗಳಾದ ಅಕ್ಷಯ್ ಬೆರಿಪದವಿನಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡು ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದರೆ, ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ನಡೆಸಿಕೊಂಡಿದ್ದರು. ಬಂಧಿತ ಆರೋಪಿಗಳೆಲ್ಲ ಸಂಘಪರಿವಾರದ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.

2019ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು ಸಂಬಂಧಿಕರ ಮನೆಯಲ್ಲಿ ಜಯಪ್ರಕಾಶ್‌ ಎಂಬಾತ ಅತ್ಯಾಚಾರ ನಡೆಸಿದ್ದಾನೆ.‌ ಕಳೆದ ಜನವರಿಯಲ್ಲಿ ಅಚ್ಚು ಯಾನೆ ಅಕ್ಷಯ್‌ ಎಂಬಾತ ಬೆರಿಪದವು ಶಾಲೆಯ ಬಳಿಗೆ ಬಂದು ಬೇರೆ ಬೇರೆ ದಿನಗಳಲ್ಲಿ 3 ಬಾರಿ ಅತ್ಯಾಚಾರ ನಡೆಸಿದ್ದಾನೆ.

ಕಳೆದ ಮೇ ತಿಂಗಳಿನಲ್ಲಿ ಬೆರಿಪದವು ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಮಾತನಾಡಿಕೊಂಡಿದ್ದು, ಬೆರಿಪದವು ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗಕ್ಕೆ ಬರಲು ಹೇಳಿ, ಬಾಲಕಿಯನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿರುತ್ತಾನೆ.

ಕಳೆದ ಜೂನ್‌ ತಿಂಗಳಿನ ಮೊದಲ ವಾರದಲ್ಲಿ ಅಚ್ಚು ಯಾನೆ ಅಕ್ಷಯ್‌ ಎಂಬಾತನ ಮುಖಾಂತರ ಸುಕುಮಾರ ಪರಿಚಯಿಸಿಕೊಂಡು ಮುದುವೆಯಾಗುತ್ತೇನೆಂದು ಬೆರಿಪದವು ಎಂಬಲ್ಲಿಗೆ ಬರಲು ಹೇಳಿ ಅಲ್ಲಿನ ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗದಲ್ಲಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿರುತ್ತಾನೆ. ಅಲ್ಲದೆ ದಿನಾಂಕ 28.07.2023 ರಂದು ರಾತ್ರಿ ವೇಳೆ ಕಮಾಲಾಕ್ಷ ಬೆಳ್ಚಡನು ಮದುವೆಯಾಗುತ್ತೇನೆಂದು ಭರವಸೆ ನೀಡಿ, ಆತನ ಮನೆಯಾದ ಬಾಯಾರು ಗ್ರಾಮದಲ್ಲಿರುವ ಅವರ ಸಂಬಂಧಿಯವರ ಖಾಲಿ ಮನೆಗೆ ಬರಲು ಹೇಳಿ ಬಾಲಕಿಯು ಹೋದಾಗ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿರುತ್ತಾನೆ. ಈ ಎಲ್ಲ ಘಟನೆಗಳನ್ನು ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪೊಕ್ಸೋ ಹಾಗೂ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಬಾಲಕಿ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿರುದ್ಧ ಪೋಸ್ಕೋ, ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ: ಐದು ವರ್ಷದ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಬಿಜೆಪಿ ಸರ್ಕಾರದ ಯೋಜನೆಯಲ್ಲಿ 1,140 ಕೋಟಿ ರೂ.ನಷ್ಟ: ತಮ್ಮದೇ ಸರಕಾರದ ವಿರುದ್ಧ ಆರೋಪಿಸಿದ...

0
ರಾಜಸ್ಥಾನದ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಮುಖ್ಯಮಂತ್ರಿಯ ಅಧೀನದ ಇಲಾಖೆಯಲ್ಲಿನ ವಸತಿ ಯೋಜನೆಯಲ್ಲಿನ ಲೋಪದೋಷವನ್ನು ಕ್ಯಾಬಿನೆಟ್ ಸಚಿವರೋರ್ವರು ಬಹಿರಂಗಪಡಿಸಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ 1,146 ಕೋಟಿ ರೂ. ನಷ್ಟವಾಗಿದೆ...