ಸಂಸತ್ತಿನಲ್ಲಿ ಮಣಿಪುರ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಮಾತನಾಡಬೇಕು ಎನ್ನುವ ಉದ್ದೇಶದಿಂದ ವಿರೋಧ ಪಕ್ಷಗಳ INDIA ಒಕ್ಕೂಟವು ಅವಿಶ್ವಾಸ ನಿರ್ಣಯ ತಂದಿತ್ತು. ಹಾಗಾಗಿ ಗುರುವಾಗ ಮಾತ್ರವೇ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಕೆಲವೇ ನಿಮಿಷಗಳ ಕಾಲ ಮಾತನಾಡಿದ್ದಾರೆ. ಅವರ ಇಷ್ಟು ದಿನದ ಮೌನದ ಬಗ್ಗೆ ನಟ ಕಿಶೋರ್ ಕುಮಾರ್ ಅವರು ಕಟುವಾಗಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ವ್ಯವಸ್ಥೆ ವಿರುದ್ಧ ಆಗಾಗ ಪ್ರತಿಕ್ರಿಯಿಸುವ ಸಂವೇದನಾಶೀಲ ನಟ ಕಿಶೋರ್ ಕುಮಾರ್ ಅವರು ಇದೀಗ ಮತ್ತೆ ಪ್ರಧಾನಿ ಮೋದಿಯನ್ನು ಟೀಕಿಸಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ”ಮಣಿಪುರದ ಪ್ರಶ್ನೆಗೆ ಉತ್ತರಿಸಲು ಬಾರದ ಅಯೋಗ್ಯತೆಯನ್ನು, ಧೂರ್ತತೆಯನ್ನು ಮುಚ್ಚಿಟ್ಟಿದ್ದ ಮೌನದ ಮುಸುಕನ್ನು ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯ ಕಳಚಿ ಬಿಸಾಡುತ್ತಿದ್ದಂತೆ ಸಂಸತ್ತಿನಲ್ಲಿ ಬೆತ್ತಲಾದ ಕುಂಭಕರ್ಣ” ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
View this post on Instagram
”ನಮ್ಮದೇ ಜನ ಮಣಿಪುರದಲ್ಲಿ ರಕ್ತದ ಮಡುವಲ್ಲಿ ಸತ್ತು ಬಿದ್ದಿರುವಾಗ, ನಾವು ಹಾಕಿದ ಅನ್ನ ತಿಂದು ನಮ್ಮ ಸಮಸ್ಯೆಯ ಬಗ್ಗೆ ಮಾತಾಡುವುದು ಬಿಟ್ಟು ಮತ್ತವರ ಟೀಕೆ, ತನ್ನದೇ ಹೊಗಳಿಕೆಯಲ್ಲಿ, ಸುಳ್ಳುಗಳ, ಜೈಕಾರಗಳ ಮಳೆಯಲ್ಲಿ ಮಿಂದ ಪ್ರಧಾನ ಸೇವಕ.. ನಿದ್ದೆ ಹೊಡೆದ ಹೊಗಳುಭಟ್ಟರು, ಅದನ್ನೇ ಸಾಧನೆಯೆಂದು ಮೆರೆದ ತಲೆತಿರುಕ ಗೋದೀ ಮಾಧ್ಯಮ” ಎಂದು ಬರೆದು ಕಿಶೋರ್ ಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗಾಗಿ ಕೊನೆಗೂ ಗುರುವಾರ ಸಂಸತ್ತಿಗೆ ಬಂದ ಪ್ರಧಾನಿ ಮೋದಿಯವರು 2 ಗಂಟೆಗಳಿಗಿಂತಲೂ ಹೆಚ್ಚು ಸಮಯ ಮಾತಾಡಿದ್ದಾರೆ. ಇದರಲ್ಲಿ ಮಣಿಪುರದ ಬಗ್ಗೆ ಕೇವಲ 7 ನಿಮಿಷಗಳ ಕಾಲ ಮಾತಾಡಿದ್ದಾರೆ! ಅನ್ಯಾಯಕ್ಕೊಳಗಾಗಿರುವ ಮಣಿಪುರಕ್ಕೆ ಮತ್ತಷ್ಟು ಅನ್ಯಾಯ ಮಾಡಿದ್ದಾರೆ.
ಈ ಬಗ್ಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ’ಬ್ರೇನ್ ಅವರು ಟ್ವೀಟ್ ಮಾಡಿದ್ದು, ”21 ದಿನಗಳ ಕಾಲ ತಲೆಮರೆಸಿಕೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದುಕೊಂಡು ಲೋಕಸಭೆಗೆ ವಿಶ್ವಾಸಮತ ಯಾಚನೆಯೊಂದಿಗೆ ಬರುವಂತೆ ಮಾಡಬೇಕಾಯಿತು.ಮೊದಲ ಒಂದು ಗಂಟೆ ಭಾಷಣದಲ್ಲಿ, ಕಲ್ಲು ಹೃದಯದ ವ್ಯಕ್ತಿ ಮಣಿಪುರದ ಬಗ್ಗೆ ಒಂದು ಮಾತನ್ನು ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪ್ರಧಾನಿ ಮೋದಿಗಿಂತ ಹೆಚ್ಚು ಸಂಸತ್ತಿಗೆ ಅವಮಾನ ಮಾಡಿಲ್ಲ” ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ: ಬೆಂಕಿಗೆ ತುಪ್ಪ ಸುರಿದ ಅಮಿತ್ ಶಾ, 7 ನಿಮಿಷಕ್ಕೆ ಸುಸ್ತಾದ ಮೋದಿಜಿ



Tell that idiot kishor to keep quiet. Or give reasons for his comments . Mr.Kishor don’t bark alongwith dogs