ಹರಿಯಾಣದಲ್ಲಿ ನಡೆದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ಟ್ವೀಟ್ ಮಾಡಿದ್ದಕ್ಕಾಗಿ ಸುದರ್ಶನ್ ನ್ಯೂಸ್‌ನ ಎಡಿಟರ್ ಮುಖೇಶ್ ಕುಮಾರ್ ಅವರನ್ನು ಶುಕ್ರವಾರ ಗುರುಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜುಲೈ 31ರಂದು ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆಗಳು ಆರಂಭವಾದವು. ಆ ಬಳಿಕ ತ್ವರಿತವಾಗಿ ನುಹ್‌ನ ಆಚೆಗೆ ಗಲಾಟೆಗಳು ಶುರುವಾದವು.
ಈ ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕರು ಮತ್ತು ಒಬ್ಬ ಬಜರಂಗದಳದ ಸದಸ್ಯ ಸೇರಿದಂತೆ ಐದು ಜನರನ್ನು ಸಾವಿಗೀಡಾದರು. ಆ ಬಳಿಕ ತ್ವರಿತವಾಗಿ ನುಹ್‌ನ ಆಚೆಗೂ ಹಿಂಸಾಚಾರ ಹರಡಿತು.ಗುರುಗ್ರಾಮ್‌ನಲ್ಲಿ ಹಿಂದುತ್ವವಾದಿ ಗುಂಪುಗಳು ಅತಿರೇಕಕ್ಕೆ ಹೋದವು. ಸೆಕ್ಟರ್ 57ರಲ್ಲಿ ಮಸೀದಿಯನ್ನು ಸುಟ್ಟುಹಾಕಿದರು, ಅದರ ಉಪ ಇಮಾಮ್ ಅನ್ನು ಕೊಂದರು ಮತ್ತು ಮರುದಿನ ಸೆಕ್ಟರ್ 70ರಲ್ಲಿ ಮುಸ್ಲಿಂ ವಲಸೆ ಕಾರ್ಮಿಕರ ಅಂಗಡಿಗಳು ಮತ್ತು ಗುಡಿಸಲುಗಳಿಗೆ ಬೆಂಕಿ ಹಚ್ಚಿದರು.
ಇದನ್ನೂ ಓದಿ: ನುಹ್ ಹಿಂಸಾಚಾರ: ಮುಸ್ಲಿಮರ ಆರ್ಥಿಕ ಬಹಿಷ್ಕಾರ ಸ್ವೀಕಾರಾರ್ಹವಲ್ಲ ಎಂದ ಸುಪ್ರೀಂ
ಸುದರ್ಶನ್ ನ್ಯೂಸ್‌ನ ಎಡಿಟರ್ ಮುಖೇಶ್ ಕುಮಾರ್ ಅವರು ಟ್ವೀಟ್ ಮಾಡಿ, ”ಆಗಸ್ಟ್ 8 ರಂದು ಕತಾರ್‌ನ ಮಾಧ್ಯಮ ಸಂಸ್ಥೆ ಅಲ್ ಜಜೀರಾನ ಪತ್ರಕರ್ತರೊಬ್ಬರು ಗುರುಗ್ರಾಮ್ ಪೊಲೀಸ್ ಕಮಿಷನರ್‌ಗೆ ಕರೆ ಮಾಡಿ ಹಿಂಸಾಚಾರ ವಿಚಾರದಲ್ಲಿ ಹಿಂದೂಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದ್ದರು.
”ಅದರಂತೆ ಪೊಲೀಸ್ ಕಮಿಷನರ್ ಹಿಂದೂ ಕಾರ್ಯಕರ್ತರನ್ನು ಎಲ್ಲೆಂದರಲ್ಲಿ ಬಂಧನ ಮಾಡಿಸಿದ್ದಾರೆ” ಎಂದು ಟ್ವೀಟ್ ಮಾಡಿದ ಕುಮಾರ್ ಅವರು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಗೆ ಟ್ಯಾಗ್ ಮಾಡಿದ್ದರು.
Sequence of events:
1. Sudarshan News' resident editor Mukesh Kumar @mukeshkrd claimed that Gurugram police acted against 'Hindu activists' due to pressure from Al Jazeera news channel.
2. @gurgaonpolice Filed an FIR against him for falsely claiming that they were under… pic.twitter.com/sViinwWtFO
— Mohammed Zubair (@zoo_bear) August 11, 2023
ಗುರುಗ್ರಾಮ್‌ದ ಪೊಲೀಸರು ಕುಮಾರ್ ಅವರ ಟ್ವೀಟ್ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಮುಖೇಶ್ ಕುಮಾರ್ ಅವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಸಿ ಹಾಗೂ ಸೆಕ್ಷನ್ 153 ಬಿ (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ, ಸಮರ್ಥನೆಗಳು), 469 (ಪ್ರತಿಷ್ಠೆಗೆ ಹಾನಿ ಮಾಡುವ ಉದ್ದೇಶದಿಂದ ನಕಲಿ), 501 (ಮುದ್ರಣ ಅಥವಾ ಕೆತ್ತನೆ) ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ 505 (1)(ಸಿ) (ಪ್ರಚೋದಿಸುವ ಉದ್ದೇಶದಿಂದ ಹೇಳಿಕೆಗಳು) ಮಾನಹಾನಿಕರ ಪ್ರಕರಣಗಳನ್ನು ದಾಖಲಿಸಲಾಗಿದೆ.


