Homeಮುಖಪುಟಗೌತಮ್ ಅದಾನಿಗೆ ಮತ್ತೆ ಸಂಕಷ್ಟ: ಕೃತಕವಾಗಿ ಶೇರುಗಳ ಬೆಲೆ ಹೆಚ್ಚಿಸಿದ ಅದಾನಿ ಗ್ರೂಪ್- ಒಸಿಸಿಆರ್‌ಪಿ ಆರೋಪ

ಗೌತಮ್ ಅದಾನಿಗೆ ಮತ್ತೆ ಸಂಕಷ್ಟ: ಕೃತಕವಾಗಿ ಶೇರುಗಳ ಬೆಲೆ ಹೆಚ್ಚಿಸಿದ ಅದಾನಿ ಗ್ರೂಪ್- ಒಸಿಸಿಆರ್‌ಪಿ ಆರೋಪ

- Advertisement -
- Advertisement -

ಇತ್ತಿಚೆಗೆ ಉದ್ಯಮಿ ಗೌತಮ್ ಅದಾನಿಯವರು ಹಿಂಡನ್‌ಬರ್ಗ್ ವರದಿಯಿಂದಾಗಿ ಭಾರೀ ಹೊಡೆತ ತಿಂದಿದ್ದರು. ಇದೀಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದಾನಿ ಗ್ರೂಪ್ ಕೃತಕವಾಗಿ ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ (ಒಸಿಸಿಆರ್‌ಪಿ)ಯು ಗುರುವಾರ ಆರೋಪಿಸಿದೆ.

ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಅದಾನಿ ಕುಟುಂಬವು ಅಪಾರದರ್ಶಕ ಮಾರಿಷಸ್ ನಿಧಿಗಳ ಮೂಲಕ ತನ್ನದೇ ಕಂಪನಿಗಳಲ್ಲಿ ಕೋಟ್ಯಂತರ ಡಾಲರ್‌ಗಳನ್ನು ಹೂಡಿಕೆ ಮಾಡಿದೆ ಎಂದು ಒಸಿಸಿಆರ್‌ಪಿ ಆರೋಪ ಮಾಡಿದೆ.

ಅದಾನಿ ಗ್ರೂಪ್ ಕಂಪನಿಗಳಲ್ಲಿ ಮಾರಿಷಸ್ ನಿಧಿಗಳ ಮೂಲಕ ರಹಸ್ಯ ಹೂಡಿಕೆ ಮಾಡಲಾಗಿದೆ. ಇದರಲ್ಲಿ ಗೌತಮ ಅದಾನಿಯವರ ಹಿರಿಯ ಸೋದರ ವಿನೋದ್ ಅದಾನಿ ಅವರ ಪಾತ್ರವೂ ಇದೆ ಎಂದು ಒಸಿಸಿಆರ್‌ಪಿ ವರದಿಯು ಎತ್ತಿ ತೋರಿಸಿದೆ.

ಈ ವರ್ಷದ ಜನವರಿಯಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ಅದಾನಿ ಗ್ರೂಪ್ ವಿರುದ್ಧ ಕೃತಕವಾಗಿ ಶೇರುಗಳ ಬೆಲೆಗಳನ್ನು ಹೆಚ್ಚಿಸಿದ್ದ ಇಂತಹುದೇ ಆರೋಪ ಮಾಡಿತ್ತು.

ಒಸಿಸಿಆರ್‌ಪಿ ಒದಗಿಸಿರುವ ಹೊಸ ದಾಖಲೆಗಳು ಅದಾನಿ ಗ್ರೂಪ್‌ನೊಂದಿಗೆ ನಿಕಟ ನಂಟು ಹೊಂದಿರುವ ಚಾಂಗ್ ಚುಂಗ್-ಲಿಂಗ್ ಮತ್ತು ನಾಸೀರ್ ಅಲಿ ಶಬಾನ್ ಅಹ್ಲಿ ಅವರು ಪ್ರಮುಖ ಹೂಡಿಕೆದಾರರಾಗಿದ್ದಾರೆ ಎಂದು ಬಹಿರಂಗಗೊಳಿಸಿವೆ.

ಕಡಲಾಚೆಯ ಹೂಡಿಕೆಗಳ ಕುರಿತು ಒಸಿಸಿಆರ್‌ಪಿ ವರದಿಯು ಅದಾನಿ ಕಂಪನಿಗಳ ಶೇರುಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಗುರುವಾರ ಬೆಳಿಗ್ಗೆ ಮಾರುಕಟ್ಟೆ ಆರಂಭಗೊಂಡ ಬೆನ್ನಿಗೇ ಎಲ್ಲ ಅದಾನಿ ಗ್ರೂಪ್ ಶೇರುಗಳು ತೀವ್ರವಾಗಿ ಕುಸಿದಿದ್ದವು.

ಮಧ್ಯಾಹ್ನ 2:30ಕ್ಕೆ ಇದ್ದಂತೆ ಅದಾನಿ ಎಂಟರ್‌ಪ್ರೈಸಸ್ ಶೇ.3.15, ಅದಾನಿ ಗ್ರೀನ್ ಶೇ.3.40,ಅದಾನಿ ಪವರ್ ಶೇ.2.10, ಅದಾನಿ ಟೋಟಲ್ ಗ್ಯಾಸ್ ಶೇ.2.63, ಅದಾನಿ ವಿಲ್ಮರ್ ಶೇ.2.22, ಅಂಬುಜಾ ಸಿಮೆಂಟ್ಸ್ ಶೇ.4.10, ಅದಾನಿ ಟ್ರಾನ್ಸ್‌ಮಿಷನ್ 2.70, ಎನ್‌ಡಿಟಿವಿ ಶೇ.1.96, ಎಸಿಸಿ ಶೇ.1.65 ಮತ್ತು ಅದಾನಿ ಪೋರ್ಟ್ಸ್ ಶೇ.3.36ರಷ್ಟು ನಷ್ಟದಲ್ಲಿದ್ದವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...