Homeಮುಖಪುಟಅಪಘಾತ ಪ್ರಕರಣದಲ್ಲಿ ಎಎಪಿಯ ಗೋವಾ ಮುಖ್ಯಸ್ಥನ ಬಂಧನ: 'ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ಈ ಕ್ರಮ' ಎಂದ...

ಅಪಘಾತ ಪ್ರಕರಣದಲ್ಲಿ ಎಎಪಿಯ ಗೋವಾ ಮುಖ್ಯಸ್ಥನ ಬಂಧನ: ‘ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ಈ ಕ್ರಮ’ ಎಂದ ಪಾಲೇಕರ್

- Advertisement -
- Advertisement -

ಆಮ್ ಆದ್ಮಿ ಪಕ್ಷದ (ಎಎಪಿ) ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರು ಆಡಳಿತಾರೂಢ ಬಿಜೆಪಿ ಸೇರಲು ನಿರಾಕರಿಸಿದ ನಂತರ ಅವರ ವಿರುದ್ಧ ಅಪಘಾತವೊಂದರ ಪ್ರಕರಣದಲ್ಲಿ ಗುರುವಾರ ಅವರನ್ನು ಬಂಧಿಸಲಾಗಿದೆ.

ಪಾಲೇಕರ್ ಅವರ ವಿರುದ್ಧ ಐಪಿಸಿ ಸೆಕ್ಷನ್ 201 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒದಗಿಸಬಹುದಾದ ಪ್ರಕರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲೇಕರ್, ”ಈ ಬಂಧನವು ಕೊಳಕು ರಾಜಕೀಯವಾಗಿದೆ. ಬಿಜೆಪಿಗೆ ಸೇರದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎರಡು ದಿನಗಳಿಂದ ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಇದು ಸಂಪೂರ್ಣ ಕೊಳಕು ರಾಜಕೀಯ ಮತ್ತೇನೂ ಅಲ್ಲ. ಈ ಅಪರಾಧಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದು ನನ್ನ ವರ್ಚಸ್ಸನ್ನು ಹಾಳುಮಾಡಲು ಮಾತ್ರವೇ ಹೊರತು ಇದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಹೇಳಿದ್ದಾರೆ.

ಪಾಲೇಕರ್ ಅವರ ಆರೋಪದ ಬಗ್ಗೆ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಏನಿದು ಪ್ರಕರಣ?

ಉದ್ಯಮಿ ಪರೇಶ್ ಅಲಿಯಾಸ್ ಶ್ರೀಪಾದ್ ಎ ಸಿನಾಯ್ ಸಾವರ್ಡೇಕರ್ ಅವರನ್ನು ಈ ಹಿಂದೆ ಅಪರಾಧ ನರಹತ್ಯೆಯ ಆರೋಪದ ಮೇಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಭಾನುವಾರ ಪಣಜಿ ಬಳಿ ಸಾವರ್ಡೇಕರ್ ಅವರು ಮದ್ಯದ ಅಮಲಿನಲ್ಲಿ ವೇಗವಾಗಿ ತಮ್ಮ ಮರ್ಸಿಡಿಸ್ ಎಸ್‌ಯುವಿಯಲ್ಲಿ ಬರುತ್ತಿದ್ದರು. ಈ ವೇಳೆ ಅವರ ಜೊತೆ ಸಂಗಾತಿ ಮೇಘನಾ ಕೂಡ ಇದ್ದರು.

ಕಾರು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ. ಸಾವರ್ಡೇಕರ್ ಮತ್ತು ಅವರ ಸಂಗಾತಿ ಮೇಘನಾ ಅವರು ತಮ್ಮ ಮರ್ಸಿಡಿಸ್ ಎಸ್‌ಯುವಿಯಲ್ಲಿ ಪಾರ್ಟಿಯಿಂದ ಹಿಂತಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದಾಗ ಪಾಲೇಕರ್ ಕೂಡ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೇಗದಲ್ಲಿ ಸಾಗುತ್ತಿದ್ದ ಮರ್ಸಿಡಿಸ್ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಮೊದಲು ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ವಾಹನದ ಮಾಲೀಕರಾದ ಮೇಘನಾ ಅವರು ಗೋವಾದ ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಂತ್ರಸ್ತರಿಗೆ 2 ಕೋಟಿ ರೂ. ಪರಿಹಾರ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಗೋವಾ ಪೊಲೀಸ್‌ನ ಅಪರಾಧ ವಿಭಾಗವು ಸಾವರ್ಡೇಕರ್‌ಗೆ ಇನ್ನು ಮುಂದೆ ಅವರ ಕಸ್ಟಡಿ ಅಗತ್ಯವಿಲ್ಲ ಎಂದು ಹೇಳಿದ ನಂತರ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...