ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ವಸ್ತಾಡಿ ಪ್ರದೇಶದಲ್ಲಿ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 10 ಜನರು ಕೊಚ್ಚಿಕೊಂಡು ಹೋಗಿದ್ದು, ಹಲವು ವಾಹನಗಳು ನದಿ ಪಾಲಾಗಿದೆ.
ಸೇತುವೆಯ ಹಠಾತ್ ಕುಸಿತದ ನಂತರ, ಕನಿಷ್ಠ 10 ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕೆಲವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸರಕಾರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಕೆಲವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಿಲ್ಲಾಧಿಕಾರಿ ಕೆ.ಸಿ. ಸಂಪತ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಭೋಗಾವೊ ನದಿ ಮೇಲಿನ ಈ ಸೇತುವೆ ರಾಷ್ಟ್ರೀಯ ಹೆದ್ದಾರಿಯ ಚುರಾ ತಾಲೂಕಿಗೆ ಸಂಪರ್ಕ ಕಲ್ಪಿಸುತ್ತದೆ. ಹಳೆಯದಾದ ಈ ಸೇತುವೆಯಲ್ಲಿ ಘನ ವಾಹನಗಳು ಸಂಚರಿಸದಂತೆ ಈ ಮೊದಲೇ ನಿರ್ಬಂಧ ವಿಧಿಸಿತ್ತು ಎಂದು ಹೇಳಿದ್ದಾರೆ.
ಸೇತುವೆಯನ್ನು ರಸ್ತೆ ಮತ್ತು ಕಟ್ಟಡಗಳ ದುರಸ್ಥಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಹೊಸ ಸೇತುವೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಉತ್ತರಪ್ರದೇಶ: ವೈದ್ಯನನ್ನು ಥಳಿಸಿ ಹತ್ಯೆ; ಬಿಜೆಪಿ ನಾಯಕನ ಸಂಬಂಧಿಯಿಂದ ಕೃತ್ಯ



That is model Gujarat