Homeಮುಖಪುಟನನ್ನ ಮೇಲೆ ದೈಹಿಕ ಹಲ್ಲೆಗೆ ಪ್ರಚೋದಿಸಲಾಗಿದೆ: ಸಂಸದ ಡ್ಯಾನಿಶ್ ಅಲಿ

ನನ್ನ ಮೇಲೆ ದೈಹಿಕ ಹಲ್ಲೆಗೆ ಪ್ರಚೋದಿಸಲಾಗಿದೆ: ಸಂಸದ ಡ್ಯಾನಿಶ್ ಅಲಿ

- Advertisement -
- Advertisement -

ಲೋಕಸಭೆಯಲ್ಲಿ ಬಿಜೆಪಿಯ ಸಂಸದ ರಮೇಶ್ ಬಿಧುರಿ ಅವರ ಕೋಮುವಾದಿ ಹೇಳಿಕೆ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೊಟ್ಟ ಹೇಳಿಕೆ ಮತ್ತು ಲೋಕಸಭೆ ಸ್ಪೀಕರ್‌ಗೆ ಬರೆದ ಪತ್ರದ ಬಗ್ಗೆ ಬಹುಜನ ಸಮಾಜ ಪಕ್ಷದ ಸಂಸದ ಡ್ಯಾನಿಶ್ ಅಲಿ ಪ್ರತಿಕ್ರಿಯಿಸಿ ಆರೋಪ ಆಧಾರರಹಿತ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರ ಹೇಳಿಕೆಯ ಹಿಂದೆ ನನ್ನ ಮೇಲೆ ದೈಹಿಕ ಹಲ್ಲೆಗೆ ಪ್ರಚೋದಿಸುವ ಗುರಿಯಿದೆ, ಯಾಕೆಂದರೆ ಈಗಾಗಲೇ ಮೌಖಿಕವಾಗಿ ನನ್ನ ಮೇಲೆ ಹಲ್ಲೆ ಆಗಿದೆ ಎಂದು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ನನ್ನ ಮೇಲೆ ಮಾತಿನ ದಾಳಿ ಈಗಾಗಲೇ ಆಗಿರುವುದರಿಂದ ದೈಹಿಕ ದಾಳಿ ನಡೆಸುವ ಪ್ರೇರಣೆ ನೀಡುವ ಉದ್ದೇಶದಿಂದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನನ್ನ ವಿರುದ್ಧ ಪತ್ರ ಬರೆದಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಚರ್ಚೆಯ ಸಂದರ್ಭದಲ್ಲಿ, ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿಯನ್ನು ಭಯೋತ್ಪಾದಕ, ಮುಲ್ಲಾ ಎಂದು ಕರೆದು ಜನಾಂಗೀಯ ನಿಂದನೆಯನ್ನು ಮಾಡಿದ್ದರು.

ದುಬೆ ತಮ್ಮ ಪಕ್ಷದ ಸಹೋದ್ಯೋಗಿಯ ಹೇಳಿಕೆಯನ್ನು ಖಂಡನೆ ಮಾಡುವ ಉದ್ದೇಶದಿಂದ ಮಾಡಿದ ಟ್ವೀಟ್ನಲ್ಲಿ ಡ್ಯಾನಿಶ್ ಅಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಜಾತಿವಾದದ ನಿಂದನೆಯನ್ನು ಮಾಡಿದ್ದಾರೆ. ಇದು ಬಿಧುರಿಯನ್ನು ಡ್ಯಾನಿಶ್ ಅಲಿ ಮೇಲೆ ವಾಗ್ಧಾಳಿಗೆ ಪ್ರಚೋದಿಸಿದೆ ಎಂದು ಹೇಳಿದ್ದಾರೆ.

ರಮೇಶ್ ಬಿಧೂರಿ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆಯನ್ನು ಯಾವುದೇ ಸುಸಂಸ್ಕೃತ ಸಮಾಜವು ಸರಿ ಎಂದು ಒಪ್ಪಿಕೊಳ್ಳುವುದಿಲ್ಲ. ಆದರೆ ಡ್ಯಾನಿಶ್ ಅಲಿ ಅವರ ಅಸಭ್ಯ ಮಾತುಗಳು ಮತ್ತು ನಡವಳಿಕೆಯನ್ನು ಲೋಕಸಭೆ ಸ್ಪೀಕರ್ ತನಿಖೆ ಮಾಡಬೇಕು ಎಂದು ದುಬೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಲೋಕಸಭೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಪ್ರಕಾರ, ನಿಗದಿತ ಸಮಯದಲ್ಲಿ ಸಂಸದರಿಗೆ ಅಡ್ಡಿಪಡಿಸುವುದು, ಕುಳಿತು ಮಾತನಾಡುವುದು ಕೂಡಾ ಶಿಕ್ಷೆಯ ವ್ಯಾಪ್ತಿಗೆ ಬರುತ್ತದೆ. ನಾನು ಕಳೆದ 15 ವರ್ಷಗಳಿಂದ ಸಂಸದನಾಗಿ ಸದನದಲ್ಲಿಯೇ ಇದ್ದೇನೆ. ನಾನು ಇಂತಹ ದಿನವನ್ನು ನೋಡುವೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ ಎಂದು ದುಬೆ ಟ್ವೀಟ್ ಮಾಡಿದ್ದರು.

ಇದನ್ನು ಓದಿ: ಉತ್ತರಪ್ರದೇಶ: ವೈದ್ಯನನ್ನು ಥಳಿಸಿ ಹತ್ಯೆ; ಬಿಜೆಪಿ ನಾಯಕನ ಸಂಬಂಧಿಯಿಂದ ಕೃತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...