Homeಮುಖಪುಟಟಾಯ್ಲೆಟ್‌ ಕ್ಲೀನ್‌ ಮಾಡಿದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದ ರಾಯಭಾರಿ ಕಚೇರಿ: ಆರೋಪ

ಟಾಯ್ಲೆಟ್‌ ಕ್ಲೀನ್‌ ಮಾಡಿದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತೇವೆ ಎಂದ ರಾಯಭಾರಿ ಕಚೇರಿ: ಆರೋಪ

- Advertisement -
- Advertisement -

ಭಾರತೀಯ ರಾಯಭಾರಿ ಕಚೇರಿಯು ವಿದ್ಯಾರ್ಥಿಗಳಿಗೆ ವಿಮಾನ ಹತ್ತುವ ಮೊದಲು ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಹೇಳಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿರುವ ವಿಡಿಯೊ ವೈರಲ್‌ ಆಗಿದೆ.

ಈ ವಿಡಿಯೊವನ್ನು ಕಾಂಗ್ರೆಸ್‌ನ ಸೇವಾದಳ ಟ್ವಿಟರ್‌ ಖಾತೆಯ ಮೂಲಕ ಹಂಚಿಕೊಳ್ಳಲಾಗಿದೆ. “ಟಾಯ್ಲೆಟ್ ಕ್ಲೀನ್ ಮಾಡಲು ಹೇಳಿರುವುದು ಹಾಸ್ಯಾಸ್ಪದ ಮತ್ತು ಅತ್ಯಂತ ಅಸೂಕ್ಷ್ಮ ಹೇಳಿಕೆಯಾಗಿದೆ. ಮೋದಿ ಸರಕಾರ ನಾಚಿಕೆಯಿಂದ ತಲೆ ತಗ್ಗಿಸಬೇಕು” ಎಂದು ಸೇವಾದಳ ಟೀಕಿಸಿದೆ.

ವಿಡಿಯೊದಲ್ಲಿ ಮಾತನಾಡಿರುವ ವಿದ್ಯಾರ್ಥಿನಿಯು, “ಒಂದು ಶೆಲ್ಟರ್‌ನಲ್ಲಿ ಸಾವಿರ ವಿದ್ಯಾರ್ಥಿಗಳು ಇದ್ದೆವು. ಯಾರು ಮೊದಲು ಬಾತ್‌ರೂಮ್‌ ಕ್ಲೀನ್ ಮಾಡುತ್ತೀರೋ ಅವರನ್ನು ಮೊದಲು ಕರೆದುಕೊಂಡು ಹೋಗುತ್ತೇವೆ ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿತು. ನಾವು ಅಷ್ಟು ಕಷ್ಟಪಡುತ್ತಿದ್ದಾಗ ಬಾತ್‌ರೂಮ್‌ ಕ್ಲೀನ್‌ ಮಾಡಿ ಅಂದರು” ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.

“ಮಂತ್ರಿಗಳು, ಅಧಿಕಾರಿಗಳು ಇರಲಿಲ್ಲವೇ?” ಎಂದು ಕೇಳಿದಾಗ, “ಅಲ್ಲಿಂದ ಹೊರಗೆ ಬರುವುದು ನಮಗೆ ಮುಖ್ಯವಾಗಿತ್ತು” ಎಂದು ವಿದ್ಯಾರ್ಥಿನಿ ಹೇಳುತ್ತಾರೆ. ಈ ವಿಡಿಯೊವನ್ನು ಕಾಂಗ್ರೆಸ್ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ವಿಚಾರದಲ್ಲಿ ಭಾರತ ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಆರೋಪಗಳು ಹೆಚ್ಚಾಗುತ್ತಿವೆ. ಯುದ್ಧದ ನೆಲದಲ್ಲಿ ಸಿಲುಕಿರುವ ಹಾಗೂ ಅಲ್ಲಿಂದ ವಾಪಸ್‌ ಬರುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ನಿಷ್ಕ್ರಿಯತೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ.

ಬಿಹಾರ ಮೋತಿಹಾರಿ ಮೂಲದ ದಿವ್ಯಾಂಶು ಸಿಂಗ್ ಎಂಬ ವಿದ್ಯಾರ್ಥಿ ಉಕ್ರೇನ್‌ನಿಂದ ಹಂಗೇರಿ ಮೂಲಕ ಗುರುವಾರ ಮಧ್ಯಾಹ್ನ ದೆಹಲಿಗೆ ಬಂದಿಳಿದಿದ್ದು ಅವರನ್ನು ಗುಲಾಬಿಯೊಂದಿಗೆ ಸ್ವಾಗತಿಸಲಾಗಿತ್ತು. “ಒಕ್ಕೂಟ ಸರ್ಕಾರವು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುತ್ತಿಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು “ಉಕ್ರೇನ್‌ನಿಂದ ನಾಗರಿಕರನ್ನು ರಕ್ಷಿಸಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳದೆ ಹೂವುಗಳನ್ನು ವಿತರಿಸುವುದು ಅರ್ಥಹೀನ” ಎಂದು ಹೇಳಿದ್ದರು.

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ನಿಮಗೆ ಸಹಾಯ ಸಿಕ್ಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ನಾವು ಹಂಗೇರಿಗೆ ಗಡಿ ದಾಟಿದ ನಂತರವೇ ನಮಗೆ ಸಹಾಯ ಸಿಕ್ಕಿತು. ಅದಕ್ಕೂ ಮೊದಲು ಯಾವುದೇ ಸಹಾಯ ಮಾಡಲಿಲ್ಲ. ನಾವಾಗಿಯೆ ಬಂದಿದ್ದು, ನಮ್ಮ ಹತ್ತು ಮಂದಿಯ ಗುಂಪು ರೈಲಿನಲ್ಲಿ ಹತ್ತಿ ಬಂದಿದ್ದೇವೆ. ಆ ರೈಲು ತುಂಬಿ ತುಳುಕುತ್ತಿತ್ತು” ಎಂದು ಹೇಳಿದ್ದಾರೆ.

ಅನೇಕ ವಿದ್ಯಾರ್ಥಿಗಳು ಸರ್ಕಾರದ ನಿಷ್ಕ್ರಿಯತೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.


ಇದನ್ನೂ ಓದಿರಿ: ‘ಈ ಗುಲಾಬಿಯಿಂದ ಏನು ಮಾಡುವುದು?’: ಕೇಂದ್ರ ಸರ್ಕಾರದ ವಿರುದ್ಧ ಉಕ್ರೇನ್‌ನಿಂದ ಹಿಂತಿರುಗಿದ ವಿದ್ಯಾರ್ಥಿ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ವಿದ್ಯಾರ್ಥಿಗಳಿಗೆ ಶೌಚಾಲಯ ತೊಳೆಯುವಂತೆ ಹೇಳಿದ್ದು ಅಮಾನವೀಯ. ಈ ರೀತಿಯಲ್ಲಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವ ಭಾರತದ ರಾಯಬಾರ ಕಚೇರಿಯ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಅರವಿಂದ್ ಕೇಜ್ರಿವಾಲ್ ನಿವಾಸದ ಹೊಸ ವೀಡಿಯೊ ವೈರಲ್

0
ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಮನೆಯೊಳಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಅವರು,...