ಭಾರತ ಚಂದ್ರನ ಅಂಗಳದಲ್ಲಿ ಇಳಿದಿದೆ ಎಂದು ಇಸ್ರೋದ ಸಾಧನೆಯನ್ನು ಅತಿಯಾಗಿ ಬಿಂಬಿಸಲಾಗಿದೆ ಎಂದು ಚೀನಾದ ಚಂದ್ರನ ಪರಿಶೋಧನಾ ಯೋಜನೆಯ ಪಿತಾಮಹ ಎಂದು ಕರೆಯಲ್ಪಡುವ ಚೀನಾದ ವಿಜ್ಞಾನಿ ಓಯಾಂಗ್ ಜಿಯುವಾನ್ ಹೇಳಿದ್ದಾರೆ.
ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ-3 ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯಿತು. 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿರುವ ಲ್ಯಾಂಡಿಂಗ್ ಸೈಟ್ ದಕ್ಷಿಣ ಧ್ರುವದ ಬಳಿ ಇಲ್ಲ ಎಂದು ವಿಜ್ಞಾನಿ ಹೇಳಿರುವುದಾಗಿ ಚೀನೀ ಭಾಷೆಯ ಪತ್ರಿಕೆ ಸೈನ್ಸ್ ಟೈಮ್ಸ್ ವರದಿ ಮಾಡಿದೆ.
ಬ್ಲೂಮ್‌ಬರ್ಗ್‌ನಲ್ಲಿನ ವರದಿಯ ಪ್ರಕಾರ, ಭೂಮಿಯ ಮೇಲೆ 69 ಡಿಗ್ರಿ ದಕ್ಷಿಣವು ಅಂಟಾರ್ಕ್ಟಿಕ್ ವೃತ್ತದೊಳಗೆ ಇರುತ್ತದೆ, ಆದರೆ ಚಂದ್ರನ ಮೇಲ್ಮೈಯಲ್ಲಿರುವ ವೃತ್ತವು ಧ್ರುವಕ್ಕೆ ಹೆಚ್ಚು ಹತ್ತಿರದಲ್ಲಿದೆ ಎಂದು ಹೇಳಲಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ -3ರ ಲ್ಯಾಂಡಿಂಗ್ ಸೈಟ್ ಇಲ್ಲ, ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸಮೀಪದಲ್ಲಿಲ್ಲ ಎಂದು ಜಿಯುವಾನ್ ಹೇಳಿದ್ದಾರೆ.
”ಚಂದ್ರಯಾನ-3 ಲ್ಯಾಂಡಿಂಗ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದೆ ಎನ್ನುವುದು ‘ತಪ್ಪು’, ಧ್ರುವ ಪ್ರದೇಶದಿಂದ 619 ಕಿಮೀ ದೂರದಲ್ಲಿದೆ” ಎಂದು ಅವರು ಹೇಳಿದರು.
ಚಂದ್ರಯಾನ-3ರ ಸಾಧನೆಗಳನ್ನು ಪ್ರಶ್ನಿಸಿದ್ದು, ಚೀನಾದ ವಿಜ್ಞಾನಿ ಜಿಯುವಾನ್ ಮೊದಲೇನಲ್ಲ.. ಈ ಹಿಂದೆ ಬೀಜಿಂಗ್ ಮೂಲದ ಬಾಹ್ಯಾಕಾಶ ತಜ್ಞ ಪಾಂಗ್ ಝಿಹಾವೊ ಅವರು ಗ್ಲೋಬಲ್ ಟೈಮ್ಸ್‌ಗೆ ಚೀನಾ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಮುಂದುವರಿದಿದೆ ಎಂದು ಹೇಳಿದ್ದರು.
2010ರಲ್ಲಿ ಚಾಂಗ್ಇ-2 ಅನ್ನು ಉಡಾವಣೆ ಮಾಡಿದ ನಂತರ ಚೀನಾವು ನೇರವಾಗಿ ಆರ್ಬಿಟರ್‌ಗಳು ಮತ್ತು ಲ್ಯಾಂಡರ್‌ಗಳನ್ನು ಭೂಮಿ-ಚಂದ್ರ ವರ್ಗಾವಣೆ ಕಕ್ಷೆಗೆ ಕಳುಹಿಸಬಹುದು. ಭಾರತ ತನ್ನ ಉಡಾವಣಾ ವಾಹನಗಳ ಸೀಮಿತ ಸಾಮರ್ಥ್ಯವನ್ನು ಪರಿಗಣಿಸಿ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಚೀನಾ ಬಳಸುವ ಎಂಜಿನ್ ಕೂಡ ಬಹಳ ಮುಂದುವರಿದಿದೆ. ಅದರ ಲೂನಾರ್ ರೋವರ್ ತುಂಬಾ ದೊಡ್ಡದಾಗಿದೆ ಎಂದು ಪಾಂಗ್ ಹೇಳಿದ್ದರು.
ಇದನ್ನೂ ಓದಿ: ವೇತನ ಸಿಗದೆ ಇಡ್ಲಿ ಮಾರಾಟಕ್ಕಿಳಿದ ಚಂದ್ರಯಾನ-3ರ ಲಾಂಚ್‌ಪ್ಯಾಡ್ ನಿರ್ಮಿಸಲು ಸಹಕರಿಸಿದ್ದ ಇಂಜಿನಿಯರ್



Chandrayan is a massive success of ISRO. Without much going into details Chaina has commented on that.
It’s a trajedy that one of the engineer of chandrayan team is selling idlies on roadside. It shows our failure to achieving disired goals.