ದಿಗ್ಬಂಧನಕ್ಕೊಳಗಾದ ಗಾಜಾ ಪಟ್ಟಿಯಿಂದ ಭೀಕರ ರಾಕೆಟ್ ದಾಳಿ ನಡೆದಿದೆ. ಆ ಬಳಿಕ ಇದು ಯುದ್ಧದ ಸ್ಥಿತಿ ಎಂದು ಇಸ್ರೇಲ್ ಘೋಷಿಸಿದೆ.
ಇಂದು ಬೆಳಿಗ್ಗೆ ಎದ್ದೇಳುತ್ತಲೇ ಇಸ್ರೇಲಿಗಳಿಗೆ ಜೋರಾಗಿ ಸೈರನ್‌ಗಳು ಮತ್ತು ರಾಕೆಟ್ ಫೈರಿಂಗ್ ಸದ್ದು ಕೇಳಿಸಿತು. ಹಮಾಸ್ ಉಗ್ರಗಾಮಿಗಳು ಒಳನುಸುಳಿದ್ದಾರೆ ಎಂದು ದೇಶದ ರಕ್ಷಣಾ ಪಡೆಗಳು ಎಚ್ಚರಿಕೆ ನೀಡಿದರು.
ಹಮಾಸ್‌ನ್ನು ಭಯೋತ್ಪಾದಕ ಗುಂಪು ಎಂದು ಇಸ್ರೇಲ್ ಪರಿಗಣಿಸುತ್ತದೆ.
ಎರಡು ಗಂಟೆಗಳ ಕಾಲ ಗಾಜಾದಿಂದ ಸಾವಿರಾರು ರಾಕೆಟ್‌ಗಳನ್ನು ಹಾರಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಮತ್ತೊಂದು ದೊಡ್ಡ ಯುದ್ಧದ ಮುನ್ಸೂಚನೆ ಎಂದು ಗುರುತಿಸಲಾಗಿದೆ.
ಪವಿತ್ರ ನಗರವಾದ ಜೆರುಸಲೇಮ್ ಮತ್ತು ಇಸ್ರೇಲ್‌ನಾದ್ಯಂತ ಸೈರನ್‌ಗಳು ಮೊಳಗುತ್ತಿವೆ. ದೇಶದಾದ್ಯಂತ ಅನೇಕ ಕಡೆಗಳಲ್ಲಿ ದುರ್ಘಟನೆಗಳು ನಡೆಯುತ್ತಿರುವ ಬಗ್ಗೆ ವರದಿಯಾಗಿವೆ.
ದಾಳಿಯಲ್ಲಿ ಪ್ಯಾರಾಗ್ಲೈಡರ್‌ಗಳನ್ನು ಸಹ ಬಳಸಲಾಗಿದೆ ಎಂದು ಇಸ್ರೇಲ್‌ನ ದೃಶ್ಯಗಳನ್ನು ತೋರಿಸಿದೆ.
”ಗಾಜಾ ಪಟ್ಟಿಯಿಂದ ಹಲವಾರು ಭಯೋತ್ಪಾದಕರು ಇಸ್ರೇಲಿ ಭೂಪ್ರದೇಶಕ್ಕೆ ನುಸುಳಿದ್ದಾರೆ. ಗಾಜಾ ಪಟ್ಟಿಯ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿಯಲು ಕೇಳಿಕೊಂಡಿದ್ದಾರೆ” ಎಂದು ಇಸ್ರೇಲ್ ರಕ್ಷಣಾ ಪಡೆಗಳು ಟ್ವಿಟ್ ಮಾಡಿವೆ.
ಇದನ್ನೂ ಓದಿ: ಭಾರತದಿಂದ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಾಸ್ಸು ಕರೆಸಿಕೊಂಡ ಕೆನಡಾ



World community should try to end the middle East conflict and bring piece there. Otherwise it will lead to world war 3.