Homeಮುಖಪುಟ2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು

2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು

- Advertisement -
- Advertisement -

2010ರಿಂದ ಇಲ್ಲಿಯವರೆಗೆ ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ 1967ರ ಯುಎಪಿಎ ಅಡಿಯಲ್ಲಿ 16 ಪತ್ರಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಈ ರೀತಿ ಕಠೋರ ಕಾನೂನುಗಳ ಅಡಿಯಲ್ಲಿ ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿರುವುದು ಭಾರತದಲ್ಲಿ ವಾಕ್ ಸ್ವಾತಂತ್ರ್ಯದ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ.

ಸಮಾಜದಲ್ಲಿನ ಕೆಲ ನ್ಯೂನ್ಯತೆಗಳ, ಸಮಸ್ಯೆಗಳ ಕುರಿತು ತನಿಖೆ ಮಾಡಲು ಮತ್ತು ವರದಿ ಮಾಡಲು ಬಯಸುವ ಪತ್ರಕರ್ತರ ವಿರುದ್ಧ UAPA ಕಾಯ್ದೆಯನ್ನು ಬಳಸಿದಾಗ, ಅದು ಅವರ ಕಾನೂನುಬದ್ಧ ಕೆಲಸವನ್ನು ಅಪರಾಧೀಕರಿಸಲು ಮತ್ತು ಅವರನ್ನು “ಭಯೋತ್ಪಾದಕರು” ಎಂದು ಕಳಂಕಗೊಳಿಸುವ ಕೆಲಸ ಮಾಡುತ್ತದೆ.  ಇದಲ್ಲದೆ ಅವರ ಘನತೆಗೆ ಚ್ಯುತಿ ತರುವ ಮತ್ತು ಅವರನ್ನು ವಿನಾಃಕಾರಣ ಕಾನೂನು ಪ್ರಕ್ರಿಯೆಗಳ ಹಿಂದೆ ಅಲೆದಾಡಿಸಲು ಪ್ರಯತ್ನಿಸುತ್ತದೆ. ಇದು ಅವರ ವೃತ್ತಿಪರ ಕೆಲಸದ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತದೆ.

ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಯುಎಪಿಎ ಕಾಯ್ದೆ ಜಾರಿಗೆ ತರಲಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಆಪಾದಿತ ದೇಶವಿರೋಧಿ ಚಟುವಟಿಕೆಗಳನ್ನು ಕೂಡ ಯುಎಪಿಎಯಡಿ ಸೇರಿಸಲಾಗಿದೆ. ಭಾರತದಲ್ಲಿ ಉಗ್ರ ಚಟುವಟಿಕೆ ನಿಗ್ರಹಕ್ಕೆ ಸಂಬಂಧಿಸಿದಂತೆ ಟಾಡಾ(TADA) ಮತ್ತು ಪೋಟಾ (POTA) ಕಾಯ್ದೆಗಳು ಅಸ್ತಿತ್ವದಲ್ಲಿದ್ದವು. ಆದರೆ, 1995ರಲ್ಲಿ ಟಾಡಾ ಕಾಯ್ದೆಯನ್ನು ಹಿಂಪಡೆಯಲಾಯಿತು. ಬಳಿಕ 2004ರಲ್ಲಿ ಪೋಟಾ ಕಾಯ್ದೆಯನ್ನು ಕೈ ಬಿಡಲಾಯಿತು. 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದಿದ್ದ ಯುಎಪಿಎ ಕಾಯ್ದೆಯನ್ನು ಬಲಪಡಿಸಲಾಯಿತು. ಇದಕ್ಕಾಗಿ 2004, 2008, 2013 ಮತ್ತು 2019ರಲ್ಲಿ ತಿದ್ದುಪಡಿಗಳನ್ನು ತರುವ ಮೂಲಕ ಮತ್ತಷ್ಟು ಅಧಿಕಾರಗಳನ್ನು ನೀಡಲಾಯಿತು

ಇತ್ತೀಚಿನ ಬೆಳವಣಿಗೆಯಲ್ಲಿ ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರ  ಮೇಲೆ ಯುಎಪಿಎಯಡಿ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಪುರ್ಕಾಯಸ್ಥ ಮತ್ತು ನ್ಯೂಸ್‌ಕ್ಲಿಕ್ ಸುದ್ದಿ ಪೋರ್ಟಲ್‌ನ ಹೆಚ್‌ಆರ್‌ ಅಮಿತ್ ಚಕ್ರವರ್ತಿ ವಿರುದ್ಧದ ಎಫ್‌ಐಆರ್‌ನಲ್ಲಿ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳು), 16 (ಭಯೋತ್ಪಾದನಾ ಕೃತ್ಯ), 17 (ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವುದು), 18 (ಪಿತೂರಿ) ಮತ್ತು ಯುಎಪಿಎ ಜೊತೆಗೆ ಐಪಿಸಿ ಸೆಕ್ಷನ್ 153ಎ (ವಿವಿಧ ಗುಂಪಿನ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 120 ಬಿ (ಅಪರಾಧ ಪಿತೂರಿ) ಆರೋಪವನ್ನು ಹೊರಿಸಲಾಗಿದೆ.

ಇದಲ್ಲದೆ ಮಾಧ್ಯಮದ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯನ್ನು ನೇಹಾ ದೀಕ್ಷಿತ್ ಮತ್ತು ಪರಂಜಾಯ್ ಗುಹಾ ಠಾಕುರ್ತಾ ಸೇರಿದಂತೆ ಹಲವಾರು ಪತ್ರಕರ್ತರ ವಿರುದ್ಧ ಕೂಡ ಬಳಸಲಾಗಿದೆ.

ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು, ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಕಳೆದ ಕೆಲವು ವರ್ಷಗಳಿಂದ ಯುಎಪಿಎಯನ್ನು ನಿರ್ದಾಕ್ಷಿಣ್ಯವಾಗಿ ಬಳಸಿರುವುದು ಕಂಡು ಬಂದಿದೆ. ಇದಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸಾರ್ವಜನಿಕ ಸುರಕ್ಷತಾ ಕಾಯಿದೆ ಮತ್ತು ಛತ್ತೀಸ್‌ಗಢ ಜನ್ ಸುರಕ್ಷಾ ಅಧಿನಿಯಮ್, ರಾಷ್ಟ್ರೀಯ ಭದ್ರತಾ ಕಾಯ್ದೆ ಮತ್ತು ನಿಬಂಧನೆಗಳಂತಹ ಇತರ ಕಠೋರ ನಿಯಮಗಳನ್ನು  ಕೂಡ ಪತ್ರಕರ್ತರ ಮೇಲೆ ವಿಧಿಸಲಾಗಿದೆ.

ಫ್ರೀ ಸ್ಪೀಚ್ ಕಲೆಕ್ಟಿವ್‌ನ ಅಧ್ಯಯನದ ಪ್ರಕಾರ 2010-20ರವರೆಗೆ ಭಾರತದಲ್ಲಿ 154 ಪತ್ರಕರ್ತರನ್ನು ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಲಾಗಿದೆ ಅಥವಾ ಅವರ ವೃತ್ತಿಪರ ಕೆಲಸಕ್ಕಾಗಿ ಅವರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ಇದರಲ್ಲಿ 40 ಪ್ರತಿಶತ 2020ರಲ್ಲಿ ನಡೆದಿದೆ ಎಂದು ತಿಳಿಸಿದೆ. ಇದಲ್ಲದೆ 9 ವಿದೇಶಿ ಪತ್ರಕರ್ತರು ಗಡೀಪಾರು, ಬಂಧನ, ಭಾರತಕ್ಕೆ ಪ್ರವೇಶವನ್ನು ನಿರಾಕರಣೆ ತೊಡಕುಗಳನ್ನು ಎದುರಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರು ಸುದ್ದಿ ಮತ್ತು ಮಾಹಿತಿಯ ಸಂದೇಶವಾಹಕರು. ಅವರನ್ನು ಮೌನಗೊಳಿಸುವುದು ಅವರ ವರದಿಗಾರಿಕೆಯನ್ನು ಮೌನಗೊಳಿಸಿದಂತೆ. ಇದರಿಂದ ಯಾವುದೇ ಭಯವಿಲ್ಲದೆ ಮಾಹಿತಿಯನ್ನು ಪಡೆಯುವ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕಿಗೆ ಧಕ್ಕೆಯಾಗುತ್ತದೆ.

ಭಾರತದಲ್ಲಿ UAPA ಅಡಿಯಲ್ಲಿ ಪತ್ರಕರ್ತರ ಮೇಲೆ ದಾಖಲಾದ ಪ್ರಕರಣಗಳು 

ಪತ್ರಕರ್ತರ ಮೇಲೆ ಪ್ರಸ್ತುತ UAPA ಅಡಿಯಲ್ಲಿ ದಾಖಲಾಗಿರುವ ಪ್ರಕರಣ :16
ಯುಎಪಿಎಯಡಿ ಬಂಧಿತ ಪತ್ರಕರ್ತರು:07
ಯುಎಪಿಎಯಡಿ ಜಾಮೀನಿನ ಮೇಲೆ ಇರುವ ಪತ್ರಕರ್ತರು:08
ಯುಎಪಿಎಯಡಿ ಆರೋಪಿತ ಬಂಧನವಾಗದ ಪತ್ರಕರ್ತರ  ಸಂಖ್ಯೆ:01
ಯುಎಪಿಎಯಡಿ ಖುಲಾಸೆಗೊಂಡ ಪತ್ರಕರ್ತರು:01
ಯುಎಪಿಎಯಿಂದ ಮುಕ್ತಗೊಂಡ ಪತ್ರಕರ್ತರು:01

ಬಂಧಿತ, ಪೊಲೀಸ್ ಕಸ್ಟಡಿಯಲ್ಲಿ ಇರುವವರು
1. ಪ್ರಬೀರ್ ಪುರ್ಕಾಯಸ್ಥ, ಸಂಪಾದಕ, ನ್ಯೂಸ್‌ಕ್ಲಿಕ್ – 03.10.2023, ನವದೆಹಲಿ

ಜೈಲಿನಲ್ಲಿರುವವರು
1. ಆಸಿಫ್ ಸುಲ್ತಾನ್, ವರದಿಗಾರರು ಕಾಶ್ಮೀರ – 27.08.2018ರಿಂದ ಜೈಲಿನಲ್ಲಿದ್ದಾರೆ.
2. ಫಹಾದ್ ಶಾ, ಸಂಪಾದಕರು, ಕಾಶ್ಮೀರವಾಲಾ – 04.02.2022ರಲ್ಲಿ ಬಂಧನವಾಗಿದೆ. ಇವರು  ಪುಲ್ವಾಮಾದವರು. 
3. ಸಜ್ಜದ್ ಗುಲ್, ‘ದಿ ಕಾಶ್ಮೀರ್ ವಾಲಾ’ದ ಟ್ರೈನಿ ವರದಿಗಾರರು 

4. ರೂಪೇಶ್ ಕುಮಾರ್ ಪತ್ರಕರ್ತರು ರಾಮಗಢ ಜಿಲ್ಲೆ, ಜಾರ್ಖಂಡ್
5. ಇರ್ಫಾನ್ ಮೆಹ್ರಾಜ್, ಸಂಪಾದಕ, ವಂದೇ ಮ್ಯಾಗಜೀನ್ ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

ಗೃಹ ಬಂಧನದಲ್ಲಿರುವವರು

1. ಗೌತಮ್ ನವ್ಲಾಖಾ, ಬರಹಗಾರರು, ಸಲಹಾ ಸಂಪಾದಕರು

ಜಾಮೀನಿನ ಮೇಲೆ ಇರುವವರು (ಬಂಧನ ದಿನಾಂಕದ ಆದೇಶದ ಪ್ರಕಾರ)

1. ಸೀಮಾ ಆಜಾದ್: ಇವರು ‘ದಸ್ತಕ್‌’ನ  ಸಂಪಾದಕರು  ಉತ್ತರ ಪ್ರದೇಶದ ಪ್ರಯಾಗ್ರಾಜ್‌ನವರು ಇವರನ್ನು  ಫೆಬ್ರವರಿ 2010ರಲ್ಲಿ ಬಂಧಿಸಲಾಗಿತ್ತು. ಆಗಸ್ಟ್ 2012 ರಲ್ಲಿ ಜಾಮೀನು ನೀಡಲಾಯಿತು.

2. ವಿಶ್ವ ವಿಜಯ್: ದಸ್ತಕ್‌ ಸಂಪಾದಕರು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 2010 ಬಂಧಿಸಲಾಯಿತು ಮತ್ತು ಆಗಸ್ಟ್ 2012ರಲ್ಲಿ ಜಾಮೀನು ನೀಡಲಾಯಿತು.

3. ಕೆ ಕೆ ಶಾಹಿನಾ: ಔಟ್‌ಲುಕ್ ಪತ್ರಕರ್ತೆ, ಡಿಸೆಂಬರ್ 2010 ರಲ್ಲಿ ದಾಖಲಾದ ಪ್ರಕರಣ. ಜುಲೈ 2011 ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು.

4. ಸಿದ್ದಿಕ್ ಕಪ್ಪನ್; ಪತ್ರಕರ್ತ, ದೆಹಲಿಯಲ್ಲಿ 05.10.2020 ರಂದು ಬಂಧಿಸಲಾಯಿತು, 09.09.2023 ರಂದು UAPA ಪ್ರಕರಣದಲ್ಲಿ ಮತ್ತು 23.12.2022 ರಂದು PMLA ಪ್ರಕರಣದಲ್ಲಿ ಜಾಮೀನು ನೀಡಲಾಯಿತು.

5. ಪಾವೊಜೆಲ್ ಚಾವೊಬಾ; ದಿ ಫ್ರಾಂಟಿಯರ್ ಮಣಿಪುರದ ಕಾರ್ಯನಿರ್ವಾಹಕ ಸಂಪಾದಕ, ಇಂಫಾಲ್‌ನಲ್ಲಿ 17.01.2021 ಬಂಧಿಸಲಾಯಿತು, 18.01.2021 ಜಾಮೀನು ಮಂಜೂರು ಮಾಡಲಾಯಿತು.

6. ದಿ ಫ್ರಾಂಟಿಯರ್ ಮಣಿಪುರ ಇಂಫಾಲ್‌ನ ಸಂಪಾದಕರಾದ ಧೀರೇನ್ ಸದೋಕ್‌ಪಂ ಅವರನ್ನು 17.01.2021 ಬಂಧನ ಮಾಡಲಾಗಿತ್ತು. ಮತ್ತು 18.01.2021ರಲ್ಲಿ ಜಾಮೀನು ನೀಡಲಾಗಿತ್ತು.

7. ಶ್ಯಾಮ್ ಮೀರಾ ಸಿಂಗ್:  ಪತ್ರಕರ್ತ, ನವದೆಹಲಿಯಲ್ಲಿ 10.11. 2021ರಲ್ಲಿ ಬಂಧನ  18.11.2021 ರಂದು ನಿರೀಕ್ಷಣಾ ಜಾಮೀನು ಪಡೆದರು.

8. ಮನನ್ ದಾರ್: ಶ್ರೀನಗರದ ಫೋಟೋ ಜರ್ನಲಿಸ್ಟ್,  22.10.2021ರಂದು ಇವರ ಬಂಧನ ನಡೆದಿದ್ದು, 04.01.2023 ರಂದು ಜಾಮೀನಿನ ಮೂಲಕ ಬಿಡುಗಡೆ

 ಯುಎಪಿಯಡಿ ಪ್ರಕರಣ ದಾಖಲಾಗಿ ಬಂಧನವಾಗದೆ ಇರುವವರು

  1. ಶ್ರೀನಗರದ ಫೋಟೋ ಜರ್ನಲಿಸ್ಟ್ ಮಸರತ್ ಜಹ್ರಾ ಅವರ ಮೇಲೆ 18.04.2020 ರಂದು ಪ್ರಕರಣ ದಾಖಲಿಸಲಾಗಿದೆ. ಆದರೆ ಬಂಧನ ನಡೆದಿಲ್ಲ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...