”ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು” ಎಂದು ಸಾಮಾಜಿಕ ಹೋರಾಟಗಾರ, ನಟ ಚೇತನ್ ಅಹಿಂಸಾ ಅವರು ಆಗ್ರಹಿಸಿದ್ದಾರೆ.
”ಪ್ಯಾಲೆಸ್ತೀನ್‌ನ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದ್ದರಿಂದ ಇಸ್ರೇಲ್- ಪ್ಯಾಲೆಸ್ತೀನ್‌ನಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ. ಈಗ ಪ್ರಧಾನಿ ಮೋದಿ ಇಸ್ರೇಲ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ, ಇಸ್ರೇಲ್ ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೊನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೆಸ್ತೀನ್ ನ್ಯಾಯದ ಪರವಾಗಿ ನಿಲ್ಲಬೇಕು” ಎಂದು ಚೇತನ್ ಹೇಳಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) October 7, 2023
”ಪ್ಯಾಲೆಸ್ತೀನ್‌ರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ. ಆದರೆ, ಪ್ಯಾಲೆಸ್ತೀನ್‌ನ ಹಮಾಸ್ ಸಶಸ್ತ್ರ ಗುಂಪು ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಮತ್ತು ಇದು ಖಂಡನೀಯ. ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅವಮಾನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ” ಎಂದು ನಟ ಚೇತನ್ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಹಮಾಸ್ ಎಂದರೆ ಯಾರು? ಪ್ಯಾಲೆಸ್ತೀನ್‌ನ ಸಶಸ್ತ್ರ ಗುಂಪಿನ ಬಗ್ಗೆ ಇಲ್ಲಿದೆ ಮಾಹಿತಿ



Yes you are telling correct., but now this PM not to support any islamic countries and religion. He against Muslim and he support always opposition of Muslims. We are do not expect PM support to any Muslim countries, he is already coming from RSS background.